ಉದಯರಶ್ಮಿ ದಿನಪತ್ರಿಕೆ
ಯಡ್ರಾಮಿ: ಕರ್ನಾಟಕ ರಕ್ಷಣಾ ವೇದಿಕೆಯ (ಟಿ.ಎ.ನಾರಾಯಣ ಗೌಡರ ಬಣ) ಯಡ್ರಾಮಿ ತಾಲೂಕು ಅಧ್ಯಕ್ಷ ದೇವಿಂದ್ರಪ್ಪ ಗೌಡ ನಿಂಗನಗೌಡ ಪೊಲೀಸ್ ಪಾಟೀಲ್ ಇವರ ನೇತೃತ್ವದಲ್ಲಿ ಸೋಮವಾರ ಯಡ್ರಾಮಿ ತಾಲೂಕಿಗೆ 12ನೇ ತರಗತಿಯ ವಾರ್ಷಿಕ ಪರೀಕ್ಷೆ ಕೇಂದ್ರವನ್ನು ಮುಂದೆ ಬರುವ ಮಾರ್ಚ್ ತಿಂಗಳ ಒಳಗಾಗಿ ಪರೀಕ್ಷಾ ಕೇಂದ್ರವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೊಡಬೇಕೆಂದು ತಾಲೂಕು ದಂಡಾಧಿಕಾರಿಗಳ ಮುಖಾಂತರ ಜಿಲ್ಲಾ ಅಧಿಕಾರಿಗಳಿಗೂ ಮತ್ತು ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೂ ಮನವಿ ಪತ್ರ ಸಲ್ಲಿಸಲಾಯಿತು. ಇದಕ್ಕೂ ಮುನ್ನ, ಸರ್ದಾರ್ ಶರಣಗೌಡ ಸರ್ಕಲ್ ದಿಂದ ನೂರಾರು ಕಾರ್ಯಕರ್ತರು ಸಾಮೂಹಿಕ ಬೈಕ್ ಸವಾರಿಯೊಂದಿಗೆ ಬಂದು ದಂಡಾಧಿಕಾರಿಗಳಿಗೆ ಮನವಿ ಪುತ್ರ ಸಲ್ಲಿಸಲಾಯಿತು.
ಈ ವೇಳೆ ದೇವಿಂದ್ರಪ್ಪಗೌಡ ಮಾತನಾಡಿ, ಯಡ್ರಾಮಿ ತಾಲೂಕು ಕೇಂದ್ರವಾಗಿದೆ. ಸರ್ಕಾರಿ, ಖಾಸಗಿ ಸೇರಿದಂತೆ ಮೂರು ಪಿಯು ಕಾಲೇಜುಗಳಿವೆ. ಈಗಿರುವ ಪರೀಕ್ಷಾ ಕೇಂದ್ರ ಜೇವರ್ಗಿಗೆ ವಿದ್ಯಾರ್ಥಿಗಳು ಹೋಗಿ ಬರಲು ಅನಾನುಕೂಲ ಆಗುತ್ತಿದೆ . ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸಮಸ್ಯೆ ಕುರಿತು ಗಮನ ಹರಿಸಿ ಪಿಯು ಪರೀಕ್ಷಾ ಕೇಂದ್ರ 2024-25 ನೇ ಸಾಲಿಗೆ ಪ್ರಾರಂಭಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಭಾ ಸಂಘಟಕ ಶಬ್ಬೀರ್ ಸಾಬ್ ಸಂಬಡ್ ಮತ್ತು ಸಾಮಾಜಿಕರಾದ ಉಸ್ಮಾನ್ ಬಡಿಗೇರ್, ತಾಲೂಕ ಪ್ರಧಾನ ಕಾರ್ಯದರ್ಶಿ ಗಿರಿಮಲ್ಲನಗೌಡ ಪಾಟೀಲ್, ತಾಲೂಕು ಉಪಾಧ್ಯಕ್ಷ ನಿಂಗಣ್ಣ ಮಳ್ಳಿ ಮತ್ತು ಭೀಮನಗೌಡ ದ್ಯಾಮ, ನಗರ ಘಟಕ ಅಧ್ಯಕ್ಷ ಚಂದ್ರಗೌಡ ಖಾನ್ ಗೌಡ, ರೇವಣಸಿದ್ಧ ಸುಂಬಡ, ಶಂಕರಗೌಡ ಕನ್ನೊಳ್ಳಿ ,ಇಬ್ರಾಮ್ ಸಾಬ್ ಬೀಳವಾರ್, ಮಲ್ಲಣ್ಣ ಸೈಬಣ್ಣ ತಳವಾರ್, ಚಂದ್ರಶೇಖರ್ ಅರಳಗುಂಡಗಿ, ನಿಂಗಣ್ಣ, ಮಡಿವಾಳಪ್ಪ ಗೌಡ ಪಾಟೀಲ್
ಯಲ್ಲಾಲಿಂಗ ಕಡಕೋಳ, ಮಾಂತಗೌಡ ಪಾಟೀಲ್, ಪ್ರಭು ಹಾದಿಮನಿ, ದಯಾನಂದ್ ಕಣಮೇಶ್ವರ, ಭೀಮಾಶಂಕರ್ ಕಣಮೇಶ್ವರ, ಮಹೇಶ್ ನಂದಳ್ಳಿ, ರಾಜು ಮಂಗಳೂರು, ಮಲ್ಲಿಕಾರ್ಜುನ್ ಅಣಜಗಿ, ವೀರೇಶ್ ಕವಲ್ದಾರ್, ಮಡಿವಾಳಪ್ಪ ಗೌಡ ಬಿರಾದಾರ್, ದೇವೇಂದ್ರ ಕಡಕೋಳ, ಭೀಮಾಶಂಕರ್ ಜಮಾದಾರ್, ಸೋಮರಾಯ ಪೂಜಾರಿ, ತಿಪ್ಪಣ್ಣ ಜಾಲಹಳ್ಳಿ, ಮಡಿವಾಳಪ್ಪ ಗೌಡ ಶಾಕಾಪುರ್, ಶಾಂತಪ್ಪ ಕುದುರಿಕಾರ್, ವಸೀಮ್ ನಾಯ್ಕೋಡಿ, ಶರಣು ಜಂಬೆರಾಳ, ಸಿದ್ದಾರ್ಥ ನಿಂಗಣ್ಣ ನಾವಿ, ಸಂಗಣ್ಣ ಗೌಡ ಅಣಜಿಗಿ, ಇಸ್ಮಾಯಿಲ್ ಹಂಗರಗಾ, ರಾಜು ಡಿ ನಾಯಕ್, ಹಂಗರಗಾಕೆ ಗ್ರಾಮದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯಕರ್ತರು, ಇತರರು ಪಾಲ್ಗೊಂಡಿದ್ದರು.

