Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಬಡಾವಣೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಇಲ್ಲಿನ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟಿಮನಿ ಮತ್ತು ಕಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಭೇಟಿ ನೀಡಿ ಪರಿಶೀಲಿಸಿದರು.ವಸತಿ ನಿಲಯದ ಆಡಳಿತದ ಬಗ್ಗೆ ವಿದ್ಯಾರ್ಥಿನಿಯರಿಗೆ ವಿಚಾರಿಸಿದ ಉಭಯ ನ್ಯಾಯಾಧೀಶರು ಯಾವತ್ತೂ ಕೋಣೆಗಳನ್ನು ಸ್ವಚ್ಛವಾಟ್ಟುಕೊಳ್ಳುವಂತೆ, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಕಾಳಜಿ ಮತ್ತು ಸಮಯ ಕಳೆಯುವಂತೆ ಸಲಹೆ ನೀಡಿದರು. ಅಡುಗೆ ಕೋಣೆ ಸೇರಿದಂತೆ ಹಲವು ಕೋಣೆಗಳಲ್ಲಿ ಖುದ್ದು ತಿರುಗಾಡಿ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು. ಕುಡಿಯುವ ನೀರಿನ ಶುದ್ಧತೆ ಅಡುಗೆ ಶುಚಿತ್ವ ಕುರಿತ ಮಾಹಿತಿ ಪಡೆದು ವಿದ್ಯಾರ್ಥಿಗಳಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳನ್ನು ಸರಿಯಾಗಿ ತಲುಪಿಸುವಂತೆ ವಾರ್ಡನ್ ಗೆ ಸೂಚಿಸಿದರು.ಈ ವೇಳೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಣಿ ಬಿ.ಜಿ.ಮಠ, ವಾರ್ಡನ್ ಎಸ್.ಆರ್.ಬಿರಾದಾರ, ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಎಂ.ಎ.ಬಾಗೇವಾಡಿ, ತಾಲೂಕು ಪಂಚಾಯತ ನ ನಿರ್ಮಲಾ ತೋಟದ, ನ್ಯಾಯವಾದಿಗಳ ಸಂಘದ ಪ್ರ.ಕಾರ್ಯದರ್ಶಿ ಪಿ.ಬಿ.ಗೌಡರ, ನ್ಯಾಯಾಲಯದ ಸಿಬ್ಬಂದಿಗಳಾದ ಅರವಿಂದ ಕುಂಬಾರ, ಮಹಾಂತೇಶ…

Read More

ವಿಭಾಗ, ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿ ಸಕಲ ರೀತಿಯಿಂದ ಸಜ್ಜು ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಬೆಳಗಾವಿ ವಿಭಾಗ ಮತ್ತು ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ಆಲಮಟ್ಟಿಡ್ಯಾಂಸೈಟ್ ನ ಶಾಲಾ ಮೈದಾನ ಸಜ್ಜಾಗಿದ್ದು, ನ.೧೨ ರಂದು ವಿಭಾಗ ಮಟ್ಟ ಹಾಗೂ ನ.೧೪ ರಂದು ರಾಜ್ಯ ಮಟ್ಟದ ಸ್ಥರ್ಧೆಗಳು ನಡೆಯಲಿವೆ.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ೧೪ ವಯೋಮಾನ (ಪ್ರಾಥಮಿಕ ಶಾಲೆ)ದ ಬೆಳಗಾವಿ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ನ.೧೧ ರಂದು ೯ ಜಿಲ್ಲೆಗಳ ಕ್ರೀಡಾಪಟುಗಳು ಬರಲಿದ್ದು, ನ.೧೨ ರ ಬೆಳಿಗ್ಗೆ ೭.೩೦ ರಿಂದಲೇ ಸ್ಪರ್ಧೆಗಳು ಜರುಗಲಿವೆ. ಅದೇ ದಿನ ವಿಭಾಗ ಮಟ್ಟದ ಸ್ಪರ್ಧೆಗಳು ಪೂರ್ಣಗೊಳ್ಳಲಿವೆ.ರಾಜ್ಯ ಮಟ್ಟದ ಉದ್ಘಾಟನೆ:ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗೆ ರಾಜ್ಯದ ನಾನಾ ಭಾಗಗಳಿಂದ ನ,.೧೩ ರಂದು ಕ್ರೀಡಾಪಟುಗಳು ಆಗಮಿಸಲಿದ್ದು, ಆ ದಿನ ನೋಂದಣಿ ನಡೆಯಲಿದೆ. ೧೪ ವಯೋಮಾನದೊಳಗಿನ (ಪ್ರಾಥಮಿಕ ಶಾಲಾ ಹಂತ) ಹಾಗೂ ೧೭ ವಯೋಮಾನದೊಳಗಿನ (ಪ್ರೌಢಶಾಲಾ ಹಂತ) ಬಾಲಕ/ಬಾಲಕಿಯರ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನ.೧೩ ರಂದು ಸಂಜೆ…

Read More

ಜಿಲ್ಲಾಧಿಕಾರಿಗಳ ಅನಿರೀಕ್ಷಿತ ಭೇಟಿ: ಮತದಾರರ ಪಟ್ಟಿ ಖುದ್ದು ಪರಿಶೀಲನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿ, ವರ್ಗಾವಣೆ, ಹೆಸರು ತೆಗೆದು ಹಾಕುವ ಕುರಿತ ನವೆಂಬರ್ ೯, ೧೦, ಹಾಗೂ ೨೩ ಮತ್ತು ೨೪ರಂದು ಜಿಲ್ಲೆಯಲ್ಲಿ ನಾಲ್ಕು ದಿನಗಳ ಕಾಲ ವಿಶೇಷ ಅಭಿಯಾನ ಪ್ರಕ್ರಿಯೆ ನಡೆದಿದ್ದು ಈ ವಿಶೇಷ ಅಭಿಯಾನ ದಿನಗಳಂದು ಎಲ್ಲ ಬಿಎಲ್ ಒಗಳು ತಮ್ಮ ಮತಗಟ್ಟೆಗಳಲ್ಲಿ ಉಪಸ್ಥಿತರಿರುವರು. ಪಟ್ಟಿಯಲ್ಲಿ ತಮ್ಮ ಹೆಸರು ಸೇರ್ಪಡೆಯೂ ಸೇರಿದಂತೆ ಅಗತ್ಯ ಮಾಹಿತಿ ಅವಲೋಕಿಸಿಕೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ನಿಮಿತ್ಯ ನಗರದ ಟ್ರೇಜರಿ ಕಾಲೋನಿಯ ಮತಗಟ್ಟೆ ಸಂಖ್ಯೆ ೪೦ ರಿಂದ ೪೨ಕ್ಕೆ, ತಿಕೋಟ ತಾಲೂಕಿನ ತೊರವಿಯ ಮತಗಟ್ಟೆ ಸಂಖ್ಯೆ ೯೨ ರಿಂದ ೯೭ ಹಾಗೂ ತಾಜಪೂರ ಗ್ರಾಮದಲ್ಲಿ ಬರುವ ಮತಗಟ್ಟೆ ಸಂಖ್ಯೆ ೧೦೯ ರಿಂದ ೧೧೨ಕ್ಕೆ ಅನಿರೀಕ್ಷಿತ ಭೇಟಿ…

Read More

– ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿ – ಗದಗ ಉದಯರಶ್ಮಿ ದಿನಪತ್ರಿಕೆ ಅಯ್ಯೋ! ಈ ಮೊಬೈಲ್ ಕೈಯಲ್ಲಿ ಹಿಡ್ಕೊಂಡಿದ್ದೇ ಆಯ್ತು ಸಮಯ ಹೋದದ್ದೇ ಗೊತ್ತಾಗ್ಲಿಲ್ಲ.. ಇನ್ನೇನು ಗಂಡ ಮಕ್ಕಳು ಮನೆಗೆ ಬರುವ ಸಮಯ ಅಡುಗೆ ಆಗಿಲ್ಲ, ಹಾಳಾದ್ದು ಇನ್ಮೇಲೆ ಈ ಮೊಬೈಲ್ ಸಹವಾಸವೇ ಬೇಡ ಎಂದು ಗೊಣಗುತ್ತಾ ಅಡುಗೆಮನೆಗೆ ಓಡಿದಳು ಆ ಗೃಹಿಣಿ.ಇವತ್ತು ನಾನು ಮೊಬೈಲ್ ಮುಟ್ಟಲ್ಲಪ್ಪ.. ನಾಳೆನೇ ಪರೀಕ್ಷೆ ಇದೆ. ಆದ್ರೂ ಒಂದು ಸಾರಿ ಎಲ್ಲಾ ನೋಟಿಫಿಕೇಶನ್ ಕಡೆ ಕಣ್ಣಾಡಿಸಿ ಓದೋಕೆ ಕೂತ್ಕೊಂಡ್ ಬಿಡ್ತೀನಿ ಎಂದು ಹೇಳಿದ ಕಾಲೇಜ್ ವಿದ್ಯಾರ್ಥಿ ಸರಿ ಸುಮಾರು 2 ಗಂಟೆಗಳ ಕಾಲ ಮೊಬೈಲ್ ನಲ್ಲಿ ಮುಳುಗಿ ಅಲ್ಲೇ ತೂಕಡಿಸಿದ್ದನು.ನಾಳೆ ಬೆಳಿಗ್ಗೆ ಕಸ್ಟಮರ್ ಜೊತೆ ತುಂಬಾ ಇಂಪಾರ್ಟೆಂಟ್ ಮೀಟಿಂಗ್ ಇದೆ.. ಎಲ್ಲ ಕೆಲಸನೂ ಬಾಸ್ ನನಗೆ ವಹಿಸಿದ್ದಾರೆ. ಬೇಗ ಎದ್ದು ರೆಡಿಯಾಗಿ ಪ್ರೆಸೆಂಟೇಶನ್ಗೆ ತಯಾರಾಗಬೇಕು ಎಂದು ತನಗೆ ತಾನೇ ಹೇಳಿಕೊಂಡ ಐ.ಟಿ.ನೌಕರ ಇಂದು ನೆಟ್ ಫ್ಲಿಕ್ಸಲ್ಲಿ ರಿಲೀಸ್ ಆಗಿರೋ ಹೊಸ ಮೂವಿ ನೋಡೋದಕ್ಕೆ ಕುಳಿತುಕೊಂಡು ರಾತ್ರಿ ಲೇಟಾಗಿ…

Read More

– ವೀಣಾ ಹೇಮಂತಗೌಡ ಪಾಟೀಲ್ಮುಂಡರಗಿ – ಗದಗ ಉದಯರಶ್ಮಿ ದಿನಪತ್ರಿಕೆ ಅಯ್ಯೋ! ಈ ಮೊಬೈಲ್ ಕೈಯಲ್ಲಿ ಹಿಡ್ಕೊಂಡಿದ್ದೇ ಆಯ್ತು ಸಮಯ ಹೋದದ್ದೇ ಗೊತ್ತಾಗ್ಲಿಲ್ಲ.. ಇನ್ನೇನು ಗಂಡ ಮಕ್ಕಳು ಮನೆಗೆ ಬರುವ ಸಮಯ ಅಡುಗೆ ಆಗಿಲ್ಲ, ಹಾಳಾದ್ದು ಇನ್ಮೇಲೆ ಈ ಮೊಬೈಲ್ ಸಹವಾಸವೇ ಬೇಡ ಎಂದು ಗೊಣಗುತ್ತಾ ಅಡುಗೆಮನೆಗೆ ಓಡಿದಳು ಆ ಗೃಹಿಣಿ.ಇವತ್ತು ನಾನು ಮೊಬೈಲ್ ಮುಟ್ಟಲ್ಲಪ್ಪ.. ನಾಳೆನೇ ಪರೀಕ್ಷೆ ಇದೆ. ಆದ್ರೂ ಒಂದು ಸಾರಿ ಎಲ್ಲಾ ನೋಟಿಫಿಕೇಶನ್ ಕಡೆ ಕಣ್ಣಾಡಿಸಿ ಓದೋಕೆ ಕೂತ್ಕೊಂಡ್ ಬಿಡ್ತೀನಿ ಎಂದು ಹೇಳಿದ ಕಾಲೇಜ್ ವಿದ್ಯಾರ್ಥಿ ಸರಿ ಸುಮಾರು 2 ಗಂಟೆಗಳ ಕಾಲ ಮೊಬೈಲ್ ನಲ್ಲಿ ಮುಳುಗಿ ಅಲ್ಲೇ ತೂಕಡಿಸಿದ್ದನು.ನಾಳೆ ಬೆಳಿಗ್ಗೆ ಕಸ್ಟಮರ್ ಜೊತೆ ತುಂಬಾ ಇಂಪಾರ್ಟೆಂಟ್ ಮೀಟಿಂಗ್ ಇದೆ.. ಎಲ್ಲ ಕೆಲಸನೂ ಬಾಸ್ ನನಗೆ ವಹಿಸಿದ್ದಾರೆ. ಬೇಗ ಎದ್ದು ರೆಡಿಯಾಗಿ ಪ್ರೆಸೆಂಟೇಶನ್ಗೆ ತಯಾರಾಗಬೇಕು ಎಂದು ತನಗೆ ತಾನೇ ಹೇಳಿಕೊಂಡ ಐ.ಟಿ.ನೌಕರ ಇಂದು ನೆಟ್ ಫ್ಲಿಕ್ಸಲ್ಲಿ ರಿಲೀಸ್ ಆಗಿರೋ ಹೊಸ ಮೂವಿ ನೋಡೋದಕ್ಕೆ ಕುಳಿತುಕೊಂಡು ರಾತ್ರಿ ಲೇಟಾಗಿ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ದೇಶ ಕಂಡ ಅಪ್ರತಿಮ ವೀರ ಸೇನಾನಿ, ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಶಫೀಕ್ ದಫೇದಾರ್ ಹೇಳಿದರು.ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗ ವತಿಯಿಂದ ಶನಿವಾರ ಹಜರತ್ ಟಿಪ್ಪು ಸುಲ್ತಾನ ರವರ 275ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಕ್ಷಿಣ ಭಾರತದ ಮೊದಲ ಮುಸಲ್ಮಾನ ದೊರೆ ಎಂದವರು, ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಟಿಪ್ಪು ಪರಧರ್ಮ ಸಹಿಷ್ಣುತೆ ಮತ್ತು ಸೌಹಾರ್ದತೆಯ ಮೇರು ವ್ಯಕ್ತಿತ್ವದ ವೀರ ಪರಾಕ್ರಮಿ ಎಂದರು. ಮುಖ್ಯ ಅತಿಥಿ ಶಹಪೂರಿನ ಯುವ ಮುಖಂಡ ನಯುಮ್ ಅಫಗಾನ ಮಾತನಾಡಿ ದೇಶದ ನೆಲ,ಜಲ,ನಾಡು, ನುಡಿ ರಕ್ಷಣೆಗಾಗಿ ತನ್ನ ಹೆತ್ತ ಮಕ್ಕಳನ್ನೇ ಒತ್ತೆಯಿಟ್ಟು ಶೌರ್ಯ ಪರಾಕ್ರಮವನ್ನು ಮೆಚ್ಚುವಂತದ್ದು ಇಂದಿನ ಯುವ ಪೀಳಿಗೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಮಾಜಿ ಜಿಲ್ಲಾ ಪಂಚಾಯಿತ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಮಹಿಪಾಲ್ ರೆಡ್ಡಿ ಡಿಗ್ಗಾವಿ ಟಿಪ್ಪು…

Read More

ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅಭಿಮತ ಉದಯರಶ್ಮಿ ದಿನಪತ್ರಿಕೆ ಧಾರವಾಡ: ಮಗು ಇದ್ದ ಮನೆಯಲ್ಲಿ ಸದಾ ನಗು ಇರುತ್ತದೆ. ಸಶಕ್ತವಾದ ಭಾರತ ದೇಶ ನಿರ್ಮಿಸಲು ಪರಿಪೂರ್ಣ ವ್ಯಕ್ತಿತ್ವದ ಮಕ್ಕಳನ್ನು ರೂಪಿಸುವ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಬಾಲ ವಿಕಾಸ ಅಕಾಡಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು ಹೇಳಿದರು.ಶುಕ್ರವಾರ ಸಂಜೆ ನಗರದ ಬಾಲಭವನ ಆವರಣದಲ್ಲಿ ಕರ್ನಾಟಕ ರಾಜ್ಯ ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಬಾಲಭವನದ ಸಂಯುಕ್ತ ಆಶ್ರಯದಲ್ಲಿ, ಮಕ್ಕಳ ದಿನಾಚರಣೆ ಕಾರ್ಯಕ್ರಮ ಅಂಗವಾಗಿ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಬಾಲ್ಯಾವಸ್ಥೆಯು ಜೀವನದ ಮುಖ್ಯ ಘಟ್ಟವಾದ್ದರಿಂದ ಮಕ್ಕಳು ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ತುಂಬಾ ಮುಖ್ಯ ಹಾಗೂ ಯಾವ ಮನೆಯಲ್ಲಿ ಮಗು ಇರುತ್ತದೋ ಆ ಮನೆಯಲ್ಲಿ ಸದಾ ನಗು ಇರುತ್ತದೆ ಎಂದು ಅವರು ಹೇಳಿದರು.ಜೀವನದಲ್ಲಿ ಮುಂದೆ ಬರಬೇಕಾದರೆ ಆತ್ಮವಿಶ್ವಾಸ ಹಾಗೂ ಧೈರ್ಯದಿಂದ ಮುಂದೆ ಸಾಗಬೇಕು. ನಮ್ಮ ಜೊತೆಯಲ್ಲಿರುವವರೆಲ್ಲರೂ ಚೆನ್ನಾಗಿರಬೇಕೆಂದು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಹಿರಿಯ ಜೀವಿ, ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಠದ ಸಂಸ್ಥಾಪಕ ನಿರ್ದೇಶಕರು, ಭೂದಾನಿಗಳು ಹಾಗೂ ದೈಹಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ರೇವಣಸಿದ್ದಪದಪ ಬೂದಿಹಾಳ ನಂ.೦೯ರಂದು ದೈವಾದೀನರಾದ ಪ್ರಯುಕ್ತ ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಮೃತರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ವಿಶ್ವನಾಥ ನಂದಿಕೋಲ, ಶಿವಾನಂದ ರೋಡಗಿ, ಪ್ರಾಚಾರ್ಯರಾದ ಎಮ್.ಎಸ್.ಹೈಯಾಳಕರ, ಭೀಮನಗೌಡ ಸಿಂಗನಳ್ಳಿ, ಎಸ್.ಎಮ್.ಪೂಜಾರಿ, ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದ್ದಿಗಳು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು.

Read More

ರಾಜ್ಯದ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ಸಿಎಂ | ಬಿಜೆಪಿ ಗಂಭೀರ ಆರೋಪ ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ರಾಜ್ಯ ಸರ್ಕಾರ ಎಫ್‌ಐಆರ್ ದಾಖಲಿಸುವ ಮೂಲಕ ರೈತರ ಪರ ಧ್ವನಿಯನ್ನು ಅಡಗಿಸಲು ಬಯಸುತ್ತಿದೆ ಎಂದು ಬಿಜೆಪಿ ಶನಿವಾರ ಆರೋಪ ಮಾಡಿದೆ.ರಾಜ್ಯದ ಭೂಮಿಯನ್ನು ವಕ್ಫ್ ಆಸ್ತಿಯನ್ನಾಗಿ ಪರಿವರ್ತಿಸುವ ಗುರಿ ಹೊಂದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ, ರೈತರ ಪರ ಧ್ವನಿ ಎತ್ತುವವರನ್ನು ಗುರಿಯಾಗಿಸಿ ಸುಳ್ಳು ದೂರು ದಾಖಲಿಸಿ ಬೆದರಿಕೆ ಹಾಕುತ್ತಿದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಶನಿವಾರ ಆರೋಪಿಸಿದರು.ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ವಿರುದ್ಧ ಎಫ್ ಐಆರ್ ದಾಖಲಿಸುವುದು ಪ್ರಜಾಪ್ರಭುತ್ವ ವಿರೋಧಿ ಮತ್ತು ರೈತರನ್ನು ಭಯ ಪಡಿಸುವ ಕ್ರಮವಾಗಿದೆ. ಈ ಘಟನೆಯನ್ನು ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡಲು ಬಳಸಿಕೊಂಡಿದೆ ಎಂದು ಅವರು ವಾಗ್ದಾಳಿ ನಡೆಸಿದರು.ಕರ್ನಾಟಕದಲ್ಲಿ ಬಿಜೆಪಿ ಯಾವುದೇ ಸಂದರ್ಭದಲ್ಲೂ ಸುಳ್ಳು ದೂರುಗಳು ಮತ್ತು ಬೆದರಿಕೆ ತಂತ್ರಗಳಿಗೆ ಬಗ್ಗುವುದಿಲ್ಲ, ಈಗಾಗಲೇ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದ ಹಿರಿಯ ಜೀವಿ, ಶ್ರೀಪದ್ಮರಾಜ ವಿದ್ಯಾವರ್ಧಕ ಸಂಸ್ಥೆ ಸಾರಂಗಮಢದ ಸಂಸ್ಥಾಪಕ ನಿರ್ದೇಶಕರು, ಭೂದಾನಿಗಳು ಹಾಗೂ ದೈಹಿಕ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ರೇವಣಸಿದ್ದಪದಪ ಬೂದಿಹಾಳ ನಂ.೦೯ರಂದು ದೈವಾದೀನರಾದ ಪ್ರಯುಕ್ತ ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಮೃತರ ಆತ್ಮಕ್ಕೆ ಶಾಂತಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಲಾಯಿತು.ಈ ವೇಳೆ ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ, ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಸಂಸ್ಥೆಯ ಆಡಳಿತಾಧಿಕಾರಿ ಡಾ.ಬಿ.ಜಿ.ಮಠ, ವಿಶ್ವನಾಥ ನಂದಿಕೋಲ, ಶಿವಾನಂದ ರೋಡಗಿ, ಪ್ರಾಚಾರ್ಯರಾದ ಎಮ್.ಎಸ್.ಹೈಯಾಳಕರ, ಭೀಮನಗೌಡ ಸಿಂಗನಳ್ಳಿ, ಎಸ್.ಎಮ್.ಪೂಜಾರಿ, ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದ್ದಿಗಳು ಹಾಗೂ ವಿದ್ಯಾರ್ಥಿಗಳು ಸಂತಾಪ ಸೂಚಿಸಿದರು.

Read More