ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ದೇಶ ಕಂಡ ಅಪ್ರತಿಮ ವೀರ ಸೇನಾನಿ, ದೇಶಪ್ರೇಮಿ, ಸ್ವಾತಂತ್ರ್ಯ ಹೋರಾಟಗಾರ, ಮೈಸೂರು ಹುಲಿ ಟಿಪ್ಪು ಸುಲ್ತಾನ್ ಎಂದು ಟಿಪ್ಪು ಸುಲ್ತಾನ ಸಂಘದ ಅಧ್ಯಕ್ಷ ಶಫೀಕ್ ದಫೇದಾರ್ ಹೇಳಿದರು.
ಪಟ್ಟಣದ ಟಿಪ್ಪು ಸುಲ್ತಾನ ವೃತ್ತದಲ್ಲಿ ಟಿಪ್ಪುಸುಲ್ತಾನ್ ಸಂಯುಕ್ತ ರಂಗ ವತಿಯಿಂದ ಶನಿವಾರ ಹಜರತ್ ಟಿಪ್ಪು ಸುಲ್ತಾನ ರವರ 275ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದಕ್ಷಿಣ ಭಾರತದ ಮೊದಲ ಮುಸಲ್ಮಾನ ದೊರೆ ಎಂದವರು, ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಸೇನಾನಿ ಟಿಪ್ಪು ಪರಧರ್ಮ ಸಹಿಷ್ಣುತೆ ಮತ್ತು ಸೌಹಾರ್ದತೆಯ ಮೇರು ವ್ಯಕ್ತಿತ್ವದ ವೀರ ಪರಾಕ್ರಮಿ ಎಂದರು. ಮುಖ್ಯ ಅತಿಥಿ ಶಹಪೂರಿನ ಯುವ ಮುಖಂಡ ನಯುಮ್ ಅಫಗಾನ ಮಾತನಾಡಿ ದೇಶದ ನೆಲ,ಜಲ,ನಾಡು, ನುಡಿ ರಕ್ಷಣೆಗಾಗಿ ತನ್ನ ಹೆತ್ತ ಮಕ್ಕಳನ್ನೇ ಒತ್ತೆಯಿಟ್ಟು ಶೌರ್ಯ ಪರಾಕ್ರಮವನ್ನು ಮೆಚ್ಚುವಂತದ್ದು ಇಂದಿನ ಯುವ ಪೀಳಿಗೆಗೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಮಾಜಿ ಜಿಲ್ಲಾ ಪಂಚಾಯಿತ ಅಧ್ಯಕ್ಷ ಸಿದ್ದನಗೌಡ ಪೊಲೀಸ್ ಪಾಟೀಲ ಧ್ವಜಾರೋಹಣ ನೆರವೇರಿಸಿದರು. ಮಹಿಪಾಲ್ ರೆಡ್ಡಿ ಡಿಗ್ಗಾವಿ ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ, ಕಾಜಾ ಪಟೇಲ್ ಕಾಚೂರು, ಸಂಜೀವರಾವ್ ಕುಲಕರ್ಣಿ, ಕೆ.ಡಿ.ನಾಸಿ, ಮೈಬೂಬಸಾಬ್ ದಪೇದರ್, ಸೈಯದ್ ಹುಸೇನ್ ಮೌಲಾನ, ಗಾಲಿಬ್ ಖಾನ್ ಇನಾಮ್ದಾರ್, ರಫೀಕ್ ವಡಿಕೇರಿ ಬಿ.ಜೆಡ್, ನಾಲ್ತಾವಾಡ, ರಫೀಕ್ ಖಾಜಿ. ಆದಮ ನಾಸೀ, ರಾಜಾಕ ಸಾಸನೂರ, ಬಿ.ಕೆ.ನಾಶಿ, ಅಲ್ಲಾಬಕ್ಷ್ ಹುಳಬುತ್ತಿ, ನಯುಮ ಖಾಜಿ, ಹನೀಫ್ ಸಾಸನೂರ್, ಎಸ್.ಕೆ.ಮಹ್ಮದ ಖಾಜಿ, ಜಿಲಾನಿ ನಾಶಿ, ಬಾಬಾ ತಾಳಿಕೋಟಿ, ಇತರರು ಉಪಸ್ಥಿತರಿದ್ದರು

