Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಪ್ರಾಚೀನ ದೇವಾಲಯಗಳು, ಸ್ಮಾರಕಗಳು, ನಮ್ಮ ಸಂಸ್ಕೃತೀಯ ಕುರುಹಗಳು ಅವುಗಳನ್ನು ರಕ್ಷಿಸುತ್ತಾ ಮುಂದಿನ ಪೀಳಿಗೆಗೆ ಪರಿಚಯಿಸಬೇಕಾದ್ದದ್ದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದು ಚನ್ನಬಸವ ಶಿವಾಚಾರ್ಯರು ಹೇಳಿದರು.ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಹಮ್ಮಿಕೊಂಡಿದ್ದ ಐತಿಹಾಸಿಕ ಪರಂಪರೆ ಉಳಿಸಿ ಸಪ್ತಾಹ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಇತಿಹಾಸಕ್ಕೆ ಆಧಾರಗಳಾಗಿರುವ ಶಾಸನಗಳು, ಶಿಲ್ಪಗಳು , ನಾಣ್ಯಗಳು, ಕೋಟೆ ಕೊತ್ತಲಗಳು, ನಾಡಿನ ಗತವೈಭವ ಸಾರಿ ಸಾರಿ ಹೇಳುತ್ತಿವೆ ಇವುಗಳನ್ನು ರಕ್ಷಿಸಲು ಯುವಜನತೆ ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.ಪ್ರಾಸ್ತಾವಿಕ ಮಾತನಾಡಿದ ಸಂಶೋಧಕರು ಹಾಗೂ ಕರ್ನಾಟಕ ಇತಿಹಾಸ ಅಕಾಡೆಮಿ ರಾಜ್ಯ ಸಮಿತಿ ಸದಸ್ಯ ನಿಂಗನಗೌಡ ದೇಸಾಯಿ ಪರಸನಹಳ್ಳಿಯವರು, ಐತಿಹಾಸಿಕ ಸ್ಥಳಗಳ ಹಿನ್ನೆಲೆ ಹಾಗೂ ಅವುಗಳ ನಿರ್ವಹಣೆಗೆ ಸರ್ಕಾರಗಳು, ಸಾರ್ವಜನಿಕರು ಕೈಜೋಡಿಸಿದಾಗ ಇತಿಹಾಸ ಉಳಿಸಿ ಬೆಳೆಸಲು ಸಾಧ್ಯ ಎಂದರು.ಅಕ್ಷರ ದಾಸೋಹ ನಿವೃತ್ತ ಸಹಾಯಕ ನಿರ್ದೇಶಕ ಜಿ ಎನ್ ರೂಡಲಬಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪನ್ಯಾಸಕರಾದ ಡಾ.ಯಂಕನಗೌಡ ಪಾಟೀಲ, ಶರಣಪ್ಪ ನಡಕೂರ, ಬಸವರಾಜ ಪಾಟೀಲ ಕೂಡ್ಲಿಗಿ, ಜಗದೀಶ್ ಎಂ ಹಂದಿಗನೂರು, ಸೇರಿದಂತೆ…

Read More

ರೂ.55.60 ಕೋಟಿ ಕಾಮಗಾರಿಗೆ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ | ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಮಾಹಿತಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ಜಿಲ್ಲಾ ಕಚೇರಿಗಳ ಸಂಕೀರ್ಣ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಯ ರೂ. 55.60 ಕೋ. ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ಕಲಬುರಗಿಯಲ್ಲಿ ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪೂಟ ಸಭೆಯಲ್ಲಿ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ವಿಜಯಪುರ ನಗರದ ಕನಕದಾಸ ಬಡಾವಣೆಯ ಬಾಲಭವನದ ಪಕ್ಕದಲ್ಲಿ ಆರು ಎಕರೆ ಸರಕಾರಿ ಜಾಗೆಯಲ್ಲಿ 10,510 ಚದರ ಮೀಟರ್ (1,13,000 ಚದರ ಅಡಿ) ಪ್ರದೇಶದಲ್ಲಿ ಜಿಲ್ಲಾ ಕಚೇರಿಗಳ ನೂತನ ಸಂಕೀರ್ಣ ನಿರ್ಮಾಣವಾಗಲಿದೆ. ನೆಲಮಹಡಿ ಸೇರಿದಂತೆ ಒಟ್ಟು ನಾಲ್ಕು ಮಹಡಿಗಳನ್ನು ಈ ಕಟ್ಟಡ ಒಳಗೊಂಡಿದ್ದು, ಸುಮಾರು 20 ನಾನಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀ ವೀರಭದ್ರೇಶ್ವರ ಸೌಹಾರ್ದ ಕ್ರೆಡಿಟ್ ಸರಕಾರಿ ಸಂಘ ನಿ. ೨೮ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಬುಧವಾರ ನಗರದ ಶುಭಶ್ರೀ ಹೋಟೆಲದಲ್ಲಿ ಜರುಗಿತು.ಈ ಸಂದರ್ಭದಲ್ಲಿ ಶರಣು ಸಬರದ ಮಾತನಾಡಿ, ಸೌಹಾರ್ದ ಬ್ಯಾಂಕುಗಳು ಸೌಹಾರ್ದತೆಯಿಂದ ಕೆಲಸ ಮಾಡಬೇಕು. ಜೊತೆಗೆ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ಮುಂದಾಗಬೇಕು. ರೈತರಿಗೆ, ಸೈನಿಕರಿಗೆ ಬಡ ಮಹಿಳೆಯರ ಸಣ್ಣ ವ್ಯಾಪಾರಗಳಿಗೆ ಸಾಲವನ್ನು ನೀಡಿ ಅವರು ಆರ್ಥಿಕವಾಗಿ ಸಬಲರಾಗಲು ಮುಂದಾಗಬೇಕೆಂದರು.ಧುರೀಣ ಶಿವಾನಂದ ಭುಯ್ಯಾರ ಮಾತನಾಡಿ, ಬ್ಯಾಂಕಿನಲ್ಲಿ ಸಾಲ ಪಡೆದ ಸದಸ್ಯರು ಕೂಡ ಅಷ್ಟೇ ಜವಾಬ್ದಾರಿತನದಿಂದ ಸಾಲ ಮರುಪಾವತಿ ಮಾಡಿದಾಗ ಮಾತ್ರ ಬ್ಯಾಂಕುಗಳು ಪ್ರಗತಿಯಲ್ಲಿ ಸಾಧಿಸಲು ಶಕ್ತಿ ತುಂಬಿದಂತಾಗುತ್ತದೆ ಎಂದರು.ಸರಕಾರಿ ನೌಕರರ ಸಹಕಾರಿ ಬ್ಯಾಂಕಿನ ನಿರ್ದೇಶಕ ಸುರೇಶ್ ಶೆಡಶ್ಯಾಳ ಮಾತನಾಡಿ, ಒಂದು ಬ್ಯಾಂಕ್ ಸುಸ್ಥಿತಿಯಲ್ಲಿ ಅಭಿವೃದ್ದಿ ಹೊಂದಬೇಕಾದರೆ ನಿರ್ದೆಶಕ ಮಂಡಳಿಯ ಸಹಕಾರ ಅತ್ಯಗತ್ಯ ಎಂದರು.ಬ್ಯಾಂಕಿನ ಅದ್ಯಕ್ಷ ಸಿದ್ದಣ್ಣ ಸಕ್ರಿ ಮಾತನಾಡಿ, ನಮ್ಮ ಬ್ಯಾಂಕ್ ಬೆಳ್ಳಿ ಮಹೋತ್ಸವ ಆಚರಿಸಿದ್ದು, ನಮಗೆ ಹೆಮ್ಮೆ ತರುವ ವಿಚಾರ. ಬ್ಯಾಂಕ್ ಪ್ರಗತಿಯಲ್ಲಿದೆ ಸಾಕಷ್ಟು ವಹಿವಾಟು…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೦೨೪-೨೫ನೇ ಸಾಲಿಗೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಅಲೆಮಾರಿ, ಅರೆ ಅಲೆಮಾರಿ, ಪ್ರವರ್ಗ-೧ ರ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ಊಟ ಮತ್ತು ವಸತಿ ಸಹಾಯ ಯೋಜನೆಯ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಧಿಯನ್ನು ಅಕ್ಟೋಬರ್ ೧೫, ೨೦೨೪ ರವರೆಗೆ ವಿಸ್ತರಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು https://ssp.postmatric.karnataka.gov.in ವೈಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೮೦೫೦೭೭೦೦೦೫ ಅಥವಾ https://bcwd.karnataka.gov.in ವೈಬ್ಸೈಟ್ ವೀಕ್ಷಿಸಬಹುದಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವಿಜಯಪುರ ವತಿಯಿಂದ ೨೦೨೪-೨೫ನೇ ಸಾಲಿನ ಸಂಚಾರಿ ಕುರಿಗಾರರಿಗೆ ಗುರುತಿನ ಚೀಟಿ ಪಡೆಯಲು ಅರ್ಹ ಸಂಚಾರಿ ಕುರಿಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.ಸಂಚಾರಿ ಕುರಿಗಾರರ ಗುರುತಿನಚೀಟಿ ಪಡೆಯಲು, ಕನಿಷ್ಠ ೨೦ಕ್ಕಿಂತ ಹೆಚ್ಚು ಕುರಿ ಅಥವಾ ಮೇಕೆಗಳನ್ನುಗಳನ್ನು ಹೊಂದಿರಬೇಕು.ಸಂಚಾರಿ ಕುರಿಗಾರರು ತಮ್ಮ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಪಶು ಚಿಕಿತ್ಸಾಲಯ/ಪಶು ಚಿಕಿತ್ಸಾಲಯ/ಪಶು ಆಸ್ಪತ್ರೆಗಳ ಪಶು ವೈದ್ಯಾಧಿಕಾರಿಗಳು/ಮುಖ್ಯ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ನಿಗದಿತ ನಮೂನೆಯನ್ನು ಪಡೆದುಕೊಂಡು ವಲಸೆ ಹೋಗುವದಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳಿಂದ ಮಹಜರ ಪ್ರಮಾಣ ಪತ್ರ ಪಡೆದು, ಸೂಕ್ತ ದಾಖಲಾತಿಗಳೊಂದಿಗೆ ಭರ್ತಿ ಮಾಡಿದ ಅರ್ಜಿಗಳನ್ನು ಪಶು ಚಿಕಿತ್ಸಾಲಯ/ಪಶು ಆಸ್ಪತ್ರೆ/ಕಛೇರಿಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರ ಕಛೇರಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ವಿಜಯಪುರ ದೂರವಾಣಿ ಸಂಖ್ಯೆ: ೯೯೦೨೩೬೩೧೪೩ ಕಛೇರಿ ವೇಳೆಯಲ್ಲಿ ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಸಹಾಯಕ ನಿರ್ದೇಶಕರು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ವಿಜಯಪುರ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಲ್ಲಿ ಪ್ರತಿನಿತ್ಯ ಓಡಾಡುವ ೧೦೦ಕ್ಕೂ ಅಧಿಕ ಖಾಸಗಿ ವಾಹನಗಳು ಕೇವಲ ಪ್ರಯಾಣಿಕರ ಓಡಾಟಕ್ಕೆ ಇರಬೇಕಾದ ವಾಹನಗಳು ಅನಧಿಕೃತವಾಗಿ ಕ್ಯಾರಿಯರಗಳನ್ನು ಬಳಸಿ ಪ್ರತಿನಿತ್ಯ ಅನೇಕ ರೀತಿಯ ಸರಕುಗಳನ್ನು ಸಾರಿಗೆ ಇಲಾಖೆ ಹಾಗೂ ತೆರಿಗೆ ಇಲಾಖೆಯ ಯಾವುದೇ ಭಯವಿಲ್ಲದೇ ಸಾಗಿಸುತ್ತಿರುವುದು ಶೋಚನೀಯವಾಗಿದೆ. ಅದನ್ನು ತೆರವುಗೊಳಿಸುವಂತೆ ಆಗ್ರಹಿಸಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ರೈತಸಂಘದಿಂದ ಮನವಿ ಸಲ್ಲಿಸಲಾಯಿತು.ಈ ವೇಳೆ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಇದು ಪ್ರಯಾಣಿಕರ ಜೀವದ ಪ್ರಶ್ನೆಯಾಗಿರುವುದರಿಂದ ಜಿಲ್ಲೆಯಿಂದ ಓಡಾಡುತ್ತಿರುವ ಎಲ್ಲಾ ಕ್ಯಾರಿಯರ್ ಹಾಕಿರುವ ವಾಹನಗಳನ್ನು ಜಪ್ತಿ ಮಾಡಿ ಅವುಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.ಕರ್ನಾಟಕ ರಾಜ್ಯವಿಜಯಪುರದಿಂದ ಪ್ರಮುಖ ಮಾರ್ಗದಲ್ಲಿ ಸಂಚರಿಸುವ ವಿ.ಆರ್.ಎಲ್, ಎಸ್.ಆರ್.ಎಸ್, ಜನತಾ, ವರಲಕ್ಷ್ಮೀ, ಸುಗಮಾ, ಜಿ.ಪಿ, ಕೆ.ಇ.ಎಸ್, ಆರೇಂಜ್ ಸೇರಿದಂತೆ ಇತರೆ ಖಾಸಗಿ ಪ್ರಯಾಣಿಕರ ವಾಹನಗಳು ಯಾವುದೇ ಅನುಮತಿ ಇಲ್ಲದೇ ಕ್ಯಾರಿಯರ್ ಬಳಸುವುದನ್ನು ವಿರೊಧಿಸುತ್ತೇವೆ. ಇದರಿಂದ ಸರಕು ಸಾಗಾಣಿಕೆ ವಾಹನಗಳ ಮಾಲಿಕರಿಗೆ ಭಾರಿ ಪ್ರಮಾಣದ ಮೊಸ ಆಗುತ್ತಿದೆ, ಇದನ್ನು ಅತೀ…

Read More

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಮಗು ಸೇರಿದಂತೆ ವೈಯಕ್ತಿಕ ಸದೃಡ ಶರೀರ ಹಾಗೂ ಆರೋಗ್ಯಕ್ಕಾಗಿ ತಾಯಂದಿರು ಪ್ರೋಟಿನ್, ವಿಟಾಮಿನ್ ಹಾಗೂ ಪೌಷ್ಟಿಕಾಂಶಗಳ ಸೇವನೆಗೆ ಹೆಚ್ಚು ಆದ್ಯತೆ ನೀಡಬೇಕೆಂದು ಸಿಂದಗಿ ತಾಲ್ಲೂಕು ಸಿಡಿಪಿಓ ಶಂಭುಲಿಂಗ ಹಿರೇಮಠ ಹೇಳಿದರು.ತಾಲ್ಲೂಕಿನ ಕೊಂಡಗೂಳಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲಾ ಆವರಣದಲ್ಲಿ ಬುಧವಾರ ಜರುಗಿದ ರಾಷ್ಟ್ರೀಯ ಪೋಷಣಾ ಅಭಿಯಾನ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಗರ್ಭಿಣಿಯರು ಹಾಗೂ ಬಾಣಂತಿಯರು ಇಲಾಖೆಯಿಂದ ದೊರೆಯುವಂತ ಸೌಲಭ್ಯಗಳನ್ನು ಪಡೆದುಕೊಂಡು ತಮ್ಮ ವೈಯಕ್ತಿಕ ಆರೋಗ್ಯದ ಜೊತೆ ಮಗುವಿನ ಆರೋಗ್ಯ ಹಾಗೂ ಸ್ವಚ್ಚತೆಗೆ ಹೆಚ್ಚು ಮಹತ್ವ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಗರ್ಭಿಣಿಯರಿಗೆ ಸೀಮಂತ, ಮಕ್ಕಳಿಗೆ ಅನ್ನಪ್ರಾಶನ, ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ, ಅಪೌಷ್ಟಿಕತೆ ನಿವಾರಣೆ, ಹೆಣ್ಣುಮಗುವಿನ ಜನ್ಮದಿನಾಚರಣೆ, ತಾಯಿ ಹೆಸರಲ್ಲಿ ಮರ ನೆಡುವದು, ಸುಕನ್ಯಾ ಸಮೃದ್ಧಿ ಯೋಜನೆಯಡಿಯ ಪಾಸ್‌ಬುಕ್ ವಿತರಣೆ ಜರುಗಿದವು.ವಿಜಯಪುರ ಉಜ್ವಲ ಸಂಸ್ಥೆಯ ಸಾಗರ ಘಾಟಗೆ ಶಾಲಾ ಪೂರ್ವಶಿಕ್ಷಣ ಕುರಿತು ಮಾತನಾಡಿದರು.ಗ್ರಾಮದ ವೀರಘಂಟಯ್ಯ ಗದ್ದಿಗೆಮಠ ಸಾನಿಧ್ಯ ವಹಿಸಿದ್ದರು.ಗ್ರಾಮಪಂಚಾಯಿತಿ ಅಧ್ಯಕ್ಷೆ ದಾವಲಬಿ ಸೋಲಾಪೂರ, ಉಪಾಧ್ಯಕ್ಷೆ ಶಿವಲೀಲಾ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಸಫಾಯಿ ಕವiðಚಾರಿ ಅಭಿವೃದ್ಧಿ ನಿಗಮಗಳಿಂದ ಅನುಷ್ಠಾನಗೊಳಿಸುವ ವಿವಿಧ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲು ಆಸಕ್ತ ಅರ್ಹರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ನಿಗಮದಿಂದ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ನೇರ ಸಾಲ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ಸ್ವಾವಲಂಬಿ ಸಾರಥಿ ಯೋಜನೆ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಗಳಡಿ ಸಾಲ-ಸೌಲಭ್ಯ ಪಡೆಯಲಿಚ್ಚಿಸುವವರು ಗ್ರಾಮ ಒನ್, ಬೆಂಗಳೂರು ಒನ್ ಮತ್ತು ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು ದಿನಾಂಕ: ೧೦-೧೦-೨೦೨೪ ಕೊನೆಯ ದಿನಾಂಕವಾಗಿದೆ.ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ, ವಿವೇಕ ನಗರ ಪಶ್ಚಿಮ, ಬಿ.ಡಿಎ ಕಾಂಪ್ಲೆಕ್ಸ್, ಬಿಡಿಎ ಕಚೇರಿ ಹಿಂಭಾಗದಲ್ಲಿರುವ ಜಿಲ್ಲಾ ವ್ಯವಸ್ಥಾಪಕರ ಕಚೇರಿ ಹಾಗೂ ದೂರವಾಣಿ ಸಂಖ್ಯೆ ೦೮೩೫೨-೨೭೬೭೪೩ ಸಂಪರ್ಕಿಸಬಹುದಾಗಿದೆ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ೨೦೨೪-೨೫ನೇ ಸಾಲಿನ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಸ್ಪರ್ಧೆಗಳನ್ನು ಪುರುಷ ಹಾಗೂ ಮಹಿಳೆಯರಿಗಾಗಿ ಆಯಾ ತಾಲ್ಲೂಕಗಳಲ್ಲಿ ನಿಗದಿಪಡಿಸಿದ ಸ್ಥಳಗಳಲ್ಲಿ ಏರ್ಪಡಿಸಲಾಗಿದೆ.ಆಸಕ್ತವುಳ್ಳ ಕ್ರೀಡಾಪಟುಗಳು ತಮ್ಮ ತಾಲೂಕುಗಳಲ್ಲಿ ನಡೆಸುವ ತಾಲೂಕ ಮಟ್ಟದ ಅಥ್ಲೆಟಿಕ್, ವಾಲಿಬಾಲ್, ಪುಟ್‌ಬಾಲ್, ಖೋ-ಖೋ, ಕಬಡ್ಡಿ, ಥ್ರೋಬಾಲ್ ಹಾಗೂ ಯೋಗ ಕ್ರೀಡಾಪಟುಗಳು ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದಾಗಿದೆ.ತಾಲ್ಲೂಕ ಮಟ್ಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲ. ಸ್ಪರ್ಧೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಆಧಾರ ಕಾರ್ಡನ್ನು ಕಡ್ಡಾಯವಾಗಿ ತರುವುದು. ಈ ಕ್ರೀಡಾಕೂಟದಲ್ಲಿ ಕರ್ನಾಟಕ ರಾಜ್ಯದಲ್ಲಿ ವಾಸಿಸುವ ಕ್ರೀಡಾಪಟುಗಳು ಮಾತ್ರ ಅರ್ಹರಿರುತ್ತಾರೆ ಹಾಗೂ ಕ್ರೀಡಾಕೂಟದಲ್ಲಿ ರಕ್ಷಣಾಪಡೆ, ಅರೆರಕ್ಷಣಾಪಡೆ ಸೇರಿದ ಕ್ರೀಡಾಪಟುಗಳು ಭಾಗವಹಿಸಲು ಅರ್ಹರಿರುವುದಿಲ್ಲ.ಸೆ.೨೦ರಂದು ಸಿಂದಗಿಯ ತಾಲೂಕು ಕ್ರೀಡಾಂಗಣ, ಎನ್ ಆರ್ ಚವ್ಹಾಣ, ಮೊ:೯೪೮೦೬೭೮೦೯೭, ಸೆ.೨೧ರಂದು ದೇವರ ಹಿಪ್ಪರಗಿ ತಾಲೂಕಿನ ಜಗದಂಬ ಪ್ರೌಢ ಶಾಲೆ ಹಿಟ್ಟಿನಹಳ್ಳಿ, ಎನ್ ಆರ್ ಚವ್ಹಾಣ, ಮೊ:೯೪೮೦೬೭೮೦೯೭, ಸೆ.೨೧ರಂದು ಆಲಮೇಲ ತಾಲೂಕಿನ ಮಲಘಾಣದ ಸರಕಾರಿ ಪ್ರೌಢ ಶಾಲೆ, ಎನ್…

Read More

ಮಕ್ಕಳ ರಕ್ಷಣಾ ಘಟಕದ ಪ್ರಾಯೋಜಕತ್ವ ಯೋಜನೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ತಂದೆಯಿಲ್ಲದ ಮಕ್ಕಳ ಖಾತೆಗೆ ವರ್ಷಕ್ಕೆ ೨೪,೦೦೦ ರೂ. ಸ್ಕಾಲರ್ಶಿಪ್ ಸೌಲಭ್ಯವಿದ್ದು, ಜನಸಾಮಾನ್ಯರಿಗೆ ಈ ವಿಚಾರ ತಿಳಿದೇ ಇಲ್ಲ. ಆದ್ದರಿಂದ ತಮಗೆ ಗೊತ್ತಿರುವ ಯಾರಾದರೂ ತಂದೆ ಇಲ್ಲದ ಮಕ್ಕಳಿದ್ದಲ್ಲಿ ಅವರ ಪೋಷಕರಿಗೆ ಕೂಡಲೇ ಅರ್ಜಿ ಸಲ್ಲಿಸಲು ತಿಳಿಸಿ ಎಂಬ ಸಂದೇಶ ಸಾಮಾಜಿಕ ಜಾಲತಾಣಗಳ ಮುಖಾಂತರ ಹರಿದಾಡುತ್ತಿದ್ದು, ಈ ವ್ಯಾಟ್ಸಾಫ್ ಸಂದೇಶ ಜನರನ್ನು ಗೊಂದಲಕ್ಕೀಡು ಮಾಡಿದ್ದು, ಈ ತಪ್ಪು ಸಂದೇಶ ನೋಡಿದ ಜನರು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಮಕ್ಕಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ ಸೇರಿ ಎಲ್ಲಾ ಕಡೆ ಜನ ಅಲೆದಾಡುತ್ತಿದ್ದಾರೆ. ಮಕ್ಕಳ ರಕ್ಷಣಾ ಕಚೇರಿಯಲ್ಲಿ ಪ್ರತಿ ದಿನ ನೂರಾರು ಜನ ಬಂದು ವಿಚಾರಿಸುತ್ತಿರುವುದು ಮತ್ತು ಅನೇಕರು ಫೋನ್ ಕರೆ ಮಾಡಿ ವಿಚಾರಿಸುತ್ತಿದ್ದಾರೆ. ಆದ್ದರಿಂದ, ಸಾರ್ವಜನಿಕರು ಇಂತಹ ಸಂದೇಶಗಳಿಗೆ ಮೋಸ ಹೋಗಬಾರದು.ಪ್ರಾಯೋಜಕತ್ವ ಯೋಜನೆ : ಪ್ರಾಯೋಜಕತ್ವ ಯೋಜನೆಯಡಿ ಮಕ್ಕಳನ್ನು ಕುಟುಂಬದ ವಾತಾವರಣದಲ್ಲಿ ಬೆಳೆಯುವಂತೆ ಬೆಂಬಲ ನೀಡುವುದು ಪ್ರಾಯೋಜಕತ್ವ ಯೋಜನೆ ಮುಖ್ಯ…

Read More