Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಾಡಿನ ಶ್ರೇಷ್ಠ ಸಂತ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್. ಎಂ. ಹೊನ್ನುಟಗಿ, ಡಿನ್ ರಾದ ಡಾ. ಆನಂದ ಅಂಬಲಿ, ಡಾ. ಎಸ್. ವಿ. ಪಾಟೀಲ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಡೈರೆಕ್ಟರ್ ಆರ್ ಆ್ಯಂಡ್ ಡಿ ಸೆಲ್ ಡಾ. ಎಂ. ಎಂ. ಪಾಟೀಲ, ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಡೆಪುಟಿ ರಜಿಸ್ಟ್ರಾರ ಸತೀಶ ಪಾಟೀಲ, ಸಹಾಯಕ ರಜಿಸ್ಟ್ರಾರ ಡಾ. ಶ್ರೀಧರ ಬಗಲಿ, ಅವರು ಶ್ರೀ ಭಕ್ತ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.ಈ ಕಾರ್ಯಕ್ರಮದಲ್ಲಿ ವಿವಿಯ ಆನಂದ ಪಾಟೀಲ, ಈರಯ್ಯ ಮಠಪತಿ, ಮಹೇಶ ಶಿವಣಗಿ, ಪವನ ಹಡಪದ, ನಾಗೇಶ ತಳವಾರ ಮುಂತಾದವರು ಉಪಸ್ಥಿತರಿದ್ದರು.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕನ್ನಡ ನಾಡು ನುಡಿಯ ಮೂಲಕ ಜನಸಾಮಾನ್ಯರಲ್ಲಿ ಅನುಭವಗಳಿಂದ ಕೂಡಿದ ಚಿಂತನಾತ್ಮಕ ಉಪನ್ಯಾಸಗಳನ್ನು ನಡೆಸಿ ನಾವು ನೀವೆಲ್ಲ ಪುನೀತರಾಗುವಲ್ಲಿ ದತ್ತಿ ಗೋಷ್ಠಿಗಳ ಪಾತ್ರ ಮಹತ್ವದ್ದು ಆದರೆ, ದತ್ತಿ ಗೋಷ್ಠಿಗಳನ್ನು ನಡೆಸುವಲ್ಲಿ ದತ್ತಿ ದಾನಿಗಳ ಕಾಯ೯ ಶ್ಲಾಘನೀಯ ಎಂದು ಸರ್ಕಾರಿ ಪ್ರಥಮ ದಜೆ೯ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಲಕ್ಷ್ಮಿ ಮೋರೆ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದಿ. ಪ್ರಭಾವತಿ ಮಲ್ಲಪ್ಪ ಪಟ್ಟಣಶೆಟ್ಟಿ ದತ್ತಿ. ದತ್ತಿ ದಾನಿಗಳು ಶ್ರೀ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವರು, ವಿಜಯಪುರ. ವಿಷಯ: ೧೨ನೇ ಶತಮಾನದ ಶರಣರ ಸಂದೇಶಗಳು. ಹಾಗೂ ಶ್ರೀಮತಿ ಶಾಂತಾಬಾಯಿ ಎಸ್ ಗುಂಡಳ್ಳಿ. ದತ್ತಿ ದಾನಿಗಳು ಶ್ರೀ ಶಾಂತಮಲ್ಲ ಹೊನ್ನಪ್ಪ ಗುಂಡಳ್ಳಿ, ವಿಜಯಪುರ. ವಿಷಯ: ವಚನ ಸಾಹಿತ್ಯದ ಕುರಿತು ಚಿಂತನೆ ಎಂಬ ಎರಡು ದತ್ತಿ ಗೋಷ್ಠಿಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ದತ್ತಿ ದಾನಿಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ, ೧೨ನೇ ಶತಮಾನದ ಶರಣರು ಸಮ ಸಮಾಜದ ಚಿಂತಕರಾಗಿದ್ದರು ಎಂದರು.ಅಧ್ಯಕ್ಷತೆ ವಹಿಸಿದ್ದ…
ಉದಯರಶ್ಮಿ ದಿನಪತ್ರಿಕೆ ಹೊನವಾಡ: ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಅದರಲ್ಲಿ ಕನಕದಾಸರು ನಾಡು ಕಂಡ ಅಪ್ರತಿಮ ದಾಸರಾಗಿದ್ದು ದಾಸಶ್ರೇಷ್ಠ ಎಂದೆನಿಸಿಕೊಂಡವರು ಎಂದು ಶಾಲೆಯ ಸಹ ಶಿಕ್ಷಕ ಬಿ ಡಿ ಜತ್ತಿ ಹೇಳಿದರು.ತಿಕೋಟಾ ತಾಲ್ಲೂಕಿನ ಹೊನವಾಡ ಗ್ರಾಮದ ವಿದ್ಯಾಚೇತನ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನಕದಾಸರ 537ನೇ ಜಯಂತಿ ಆಚರಣೆಯಲ್ಲಿ ಅವರು ಮಾತನಾಡಿದರು.ಬಾಡ ಗ್ರಾಮ ಕನಕದಾಸರ ಜನ್ಮಭೂಮಿಯಾದರೆ, ಬ್ಯಾಡಗಿ ತಾಲೂಕಿನ ಕಾಗಿನೆಲೆ ಕನಕದಾಸರ ಕರ್ಮಭೂಮಿ. ವಿಜಯನಗರ ಅರಸರ ಆಡಳಿತದಲ್ಲಿ ದಂಡನಾಯಕನಾಗಿದ್ದ ತಿಮ್ಮಪ್ಪ ನಾಯಕನಿಗೆ ಚಿನ್ನ ಸಿಕ್ಕಿದ್ದರಿಂದ ಕನಕನಾಗುತ್ತಾನೆ. ನಂತರ ಯುದ್ಧದಲ್ಲಿ ಪಾಲ್ಗೊಂಡು ಅಲ್ಲಿ ಕಂಡ ಹಿಂಸೆಯಿಂದ ಕನಕ ಕನಕದಾಸರಾಗುತ್ತಾರೆ ಎಂದು ವ್ಹಿ ಎನ್ ಪೂಜಾರಿ ಹೇಳಿದರು.ಮುಖ್ಯ ಗುರುಗಳಾದ ಎನ್ ವಿ ಕೋಟಿ ಸಹ ಶಿಕ್ಷಕ ಎಸ್ ಎ ಮಾಲಗಾರ, ಶ್ರೀಮತಿ ಎಂ ಎಲ್ ಭೋಸ್ಲೆ, ಶ್ರೀಮತಿ ಎಸ್ ಎ ಮಲ್ಲಾಡ್, ಶ್ರೀಮತಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಕನಕದಾಸ ವೃತ್ತದಲ್ಲಿ ಸೋಮವಾರ ಸಂತ ಕನಕದಾಸರ ಜಯಂತ್ಯುತ್ಸವ ಅಂಗವಾಗಿ ದಾಸ ಮಾಣಿಕ್ಯ, ಸಮಾನತೆಯ ಹರಿಕಾರ, ಹರಿಗೆ ಒಲಿದ ಶತಾಯು, ಸಂತ ಶ್ರೇಷ್ಠ ಶ್ರೀ ಕನಕದಾಸ ರವರ ಪುತ್ಥಳಿಗೆ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕರಾದ ರಾಮನಗೌಡ ಬ.ಪಾಟೀಲ ಯತ್ನಾಳ ರವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.ಮಹಾನಗರ ಪಾಲಿಕೆ ಸದಸ್ಯರು, ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಲೇಖನ:- ಸಂತೋಷ್ ರಾವ್ ಪೆರ್ಮುಡಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-೫೭೪೧೯೮ದೂ: ೯೭೪೨೮೮೪೧೬೦ ಉದಯರಶ್ಮಿ ದಿನಪತ್ರಿಕೆ ಹೀಗಿರುವಾಗ ಒಂದು ದಿನ ದೇವರಾಜ್ ಅವರು, ‘ಮಗನೇ ನಿನಗೆ ನಾನು ನನಗಿಷ್ಟವಾದ ಕುಟುಂಬದ ಒಂದು ಹುಡುಗಿಯನ್ನು ನೋಡಿ ನಿನಗೆ ಮದುವೆ ಮಾಡಬೇಕೆಂದು ನಿರ್ಧರಿಸಿದ್ದೇನೆ’ ಎಂದು ಹೇಳಿದರು. ಆಗ ಶ್ರವಣ್ ಇಲ್ಲಪ್ಪಾ ‘ನಾನು ಮದುವೆ ಆಗುವ ಹುಡುಗಿಯನ್ನು ನಾನೇ ಆಯ್ಕೆ ಮಾಡಿಕೊಳ್ಳುತ್ತೇನೆ’ ಎಂದು ಹೇಳಿದ. ಆಗ ತಂದೆಯು, ‘ಹುಡುಗಿಯ ಆಯ್ಕೆಯನ್ನು ನೀನೇ ಮಾಡಿಕೊಳ್ಳುವುದಾದರೆ ಆ ಹುಡುಗಿ ಬಿಲ್‌ಗೇಟ್ಸ್ರ ಮಗಳೇ ಆಗಿರಬೇಕು’ ಎಂದು ಸವಾಲು ಹಾಕಿದರು. ಆಗ ಶ್ರವಣ್ ನಗುತ್ತಾ ‘ಸರಿಯಪ್ಪಾ, ಹಾಗೆಯೇ ಆಗಲಿ’ ಎಂದು ಆ ಸವಾಲನ್ನು ಸ್ವೀಕರಿಸಿದ. ಮರುದಿನವೇ ನನ್ನ ಮಾತೂ ಉಳಿಯಬೇಕು ಮಗನ ಆಸೆಯೂ ಈಡೇರಬೇಕು ಎಂಬ ಉದ್ದೇಶದಿಂದ ದೇವರಾಜ್ ಅವರು ನೇರವಾಗಿ ಬಿಲ್‌ಗೇಟ್ಸ್ರನ್ನು ಭೇಟಿ ಮಾಡಲು ನಿರ್ಧರಿಸಿದರು. ಬಿಲ್‌ಗೇಟ್ಸ್ರನ್ನು ಭೇಟಿ ಮಾಡಿದ ದೇವರಾಜ್, ‘ನಾನು ನಿಮ್ಮ ಮಗಳಿಗೆ ಮದುವೆ ಮಾಡಲು ಒಬ್ಬ ಹುಡುಗನನ್ನು ನೋಡಿದ್ದೇನೆ’ ಎಂದು ಹೇಳಿದರು.…
Udayarashmi kannada daily newspaper
ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಬೇನಾಳ ಗ್ರಾಮಸ್ಥರ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಹಳ್ಳಿಯ ಬಾಲಕಿಯರು ಖೋಖೋ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸಕರ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಮತಕ್ಷೇತ್ರದ ಎಲ್ಲಾ ಕ್ರೀಡಾಪಟುಗಳಿಗೂ ಆರ್ಥಿಕ ನೆರವಿನ ಜತೆ ಅವರಿಗೆ ಎಲ್ಲಾ ರೀತಿಯ ಕ್ರೀಡಾಸಾಮಗ್ರಿ ಒದಗಿಸುವುದಾಗಿ ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಸಮೀಪದ ಬೇನಾಳ ಆರ್.ಎಸ್. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ರಾತ್ರಿ ಅಲ್ಲಿಯ ಪ್ರಾಥಮಿಕ ಶಾಲಾ ಬಾಲಕಿಯರ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಕ್ಕೆ ಗ್ರಾಮಸ್ಥರು ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಕ್ರೀಡಾಪಟುಗಳನ್ನು ಸನ್ಮಾನಿಸಿ ಮಾತನಾಡಿದರು.ರಾಜ್ಯ ಮಟ್ಟದ ಖೋಖೋ ಕ್ರೀಡೆಯನ್ನು ನಮ್ಮ ಬಸವನಾಡಿನಲ್ಲಿ ಯಶಸ್ವಿಯಾಗಿ ಸಂಘಟಿಸಿದ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅದಕ್ಕಾಗಿ ತಮ್ಮೆಲ್ಲಾ ಶಕ್ತಿ, ಪ್ರತಿಭೆಯನ್ನು ಪಣಕ್ಕೆ ಹಚ್ಚಿ ಸಂಯೋಜಿಸಿದ್ದಾರೆ. ಅವರ ಈ ಕಾರ್ಯ ಪ್ರಶಂಸನಾರ್ಯ ಎಂದರು. ಖೋಖೋ ಕ್ರೀಡಾಳುಗಳಿಗೆ ಮಾರ್ಗದರ್ಶನ ನೀಡಿದ ಶಿಕ್ಷಕ ಎನ್.ಬಿ. ದಾಸರ ಕಾರ್ಯವೂ ಶ್ಲಾಘನೀಯ ಎಂದರು.ಸಂಘಟಕ…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ದುಡಿದದ್ದೆಲ್ಲವನ್ನು ದುಶ್ಚಟಗಳಿಗೆ ಖರ್ಚುಮಾಡುವ ಬದಲು ಜೀವನ ನಿರ್ವಹಣೆಯ ಜೊತೆಗೆ ದೇವಸ್ಥಾನಗಳಿಗೆ ಹಾಗೂ ಸಮಾಜಮುಖಿ ಕಾರ್ಯಗಳಿಗೆ ಸ್ವಲ್ಪ ಹಣ ವಿನಿಯೋಗಿಸುವ ಮೂಲಕ ಸಾರ್ಥಕತೆ ಮೆರೆಯಬೇಕೆಂದು ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ಬನಶಂಕರಿದೇವಿ ಕಲ್ಯಾಣಮಂಟಪದಲ್ಲಿ ಶನಿವಾರ ಶ್ರೀ ಬನಶಂಕರಿದೇವಿ ಸೇವಾ ಸಮೀತಿಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಣಿಕೆ ಡಬ್ಬಿ ವಿತರಣೆ ಹಾಗೂ ಸಾಧಕರ ಸನ್ಮಾನ ಸಮಾರಂಭದ ಉದ್ಘಾಟಣೆ ನೆರವೇರಿಸಿ ಮಾತನಾಡಿದ ಅವರು ಕಷ್ಟಕಾಲದಲ್ಲಿ ಕೈ ಹಿಡಿಯುವುದು ನಾವು ಮಾಡಿದ ಪುಣ್ಯ ಕಾರ್ಯಗಳಾದ ದಾನ, ಧರ್ಮಗಳು. ಇಂದು ಸಾರಾಯಿ, ಗುಟಖಾ, ಮುಂತಾದ ದುಶ್ಚಟಗಳಿಗಳಿಗೆ ದಾಸರಾಗಿ ಶಾಂತಿ ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ, ಅದರ ಬದಲಾಗಿ ಆ ಹಣವನ್ನು ದೇವಸ್ಥಾನ, ಇಲ್ಲವೇ ಸಮಾಜಮುಖಿ ಕಾರ್ಯಗಳಿಗೆ ಮೀಸಲಿಟ್ಟು ಆರೋಗ್ಯಕರ ಜೀವನ ನಡೆಸಬೇಕು. ಸಮೀತಿಯವರು ಮನೆ, ಮನೆಗೆ ಕಾಣಿಕೆ ಡಬ್ಬಿ ವಿತರಿಸುವ ಮೂಲಕ ಪುಣ್ಯಕಾರ್ಯಕ್ಕೆ ಸುಲಭ ವಿಧಾನ ನೀಡಿದ್ದು ಪ್ರತಿಯೊಬ್ಬರು ಸತ್ಕಾರ್ಯದಲ್ಲಿ ಭಾಗಿಯಾಗಬೇಕೆಂದರು.ಹಟಗಾರ ಸಮಾಜದ ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷರಾದ ರಾಜು ಭದ್ರಣ್ಣವರ ಮಾತನಾಡಿ ಈ ಭಾಗದಲ್ಲಿ ಹಲವಾರು…
ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಇಲ್ಲಿನ ಗ್ರಾಮ ಪಂಚಾಯತಿಯಲ್ಲಿ ಕನಕದಾಸರ ೫೩೭ ನೇ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಾಲಾ ಮೋಟಗಿ, ಉಪಾಧ್ಯಕ್ಷೆ ಪದ್ಮಾವತಿ ಬಜಂತ್ರಿ, ಪ್ರಭು ಮುಧೋಳ, ಮಹಾಲಿಂಗ ಮಾಯನ್ನವರ, ಅಶೋಕ ಮೋಟಗಿ, ಶ್ರೀಶೈಲ ಮಠಪತಿ, ತುಕಾರಾಮ ದೊಡಮನಿ, ಹಣಮಂತ ಬಜಂತ್ರಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
ವಿರಕ್ತಮಠದ ಪರಿಸರ ಕುಟೀರದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ರಕ್ತ ಸಂಬಂಧಗಳಿಗಿಂತಲೂ ಮಿಗಿಲಾದದ್ದು ಸ್ನೇಹ ಸಂಬಂಧ, ಇಂದು ಸಾಂಧರ್ಬಿಕವಾಗಿ ದೂರವಾಗಿರುವ ಆತ್ಮೀಯ ಸಂಬಂಧಗಳನ್ನು ಸ್ನೇಹ ಸಮ್ಮಿಲನದಂತಹ ಕಾರ್ಯಕ್ರಮಗಳು ಬೆಸೆಯಲು ಸೇತುವೆಯಾಗಿವೆ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.ಗ್ರಾಮದ ವಿರಕ್ತಮಠದ ಪರಿಸರ ಕುಟೀರ ಆಶ್ರಮದಲ್ಲಿ ಮಹಾಲಿಂಗಪುರದ ಎಸ್‌ಸಿಪಿ ಪ್ರೌಢಶಾಲೆಯ ೧೯೮೬-೮೭ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದಿನ ಯಾಂತ್ರೀಕೃತ ಬದುಕಿನಲ್ಲಿ ರಕ್ತ ಸಂಬಂಧಗಳ ಮಧ್ಯೆ ಕಾಲ ಕಳೆಯಲು ಸಾಧ್ಯವಾಗದೆ ಮೊಬೈಲ್‌ನೊಂದಿಗೆ ಕಾಲ ಕಳೆಯುವಂತಾಗಿರುವುದು ವಿಪರ್ಯಾಸ, ಕೆಲವು ಸಮಯವನ್ನಾದರೂ ಮೀಸಲಿಟ್ಟು ಕುಟುಂಬ ಹಾಗೂ ಸಂಬಂಧಗಳಿಗೆ ಸಮಯ ಕೊಡಬೇಕಿದೆ ಎಂದರು.ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಶ್ರೀಕಾಂತ ಮಾಳಿ, ಶುಭಾಂಗಿಣಿ ಇಂಡಿಕರ, ಮಹಾನಂದಾ ಗೊಂಬಿ, ಹನಮಂತ ಶಿರೋಳ, ಪ್ರಭು ನೇಸೂರ, ಶಿವಲಿಂಗ ಟಿರಕಿ ಮಾತನಾಡಿದರು. ಮನೋಹರ ಶಿರೋಳ, ಶಿವಾನಂದ ಬಾಗೇವಾಡಿ, ಪಾರ್ವತಿ ಸೋರಗಾವಿ, ಶಂಕರ ಹೊಸಕೋಟಿ, ವಿವೇಕಾನಂದ ಕಡಪಟ್ಟಿ…
