ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕನ್ನಡ ನಾಡು ನುಡಿಯ ಮೂಲಕ ಜನಸಾಮಾನ್ಯರಲ್ಲಿ ಅನುಭವಗಳಿಂದ ಕೂಡಿದ ಚಿಂತನಾತ್ಮಕ ಉಪನ್ಯಾಸಗಳನ್ನು ನಡೆಸಿ ನಾವು ನೀವೆಲ್ಲ ಪುನೀತರಾಗುವಲ್ಲಿ ದತ್ತಿ ಗೋಷ್ಠಿಗಳ ಪಾತ್ರ ಮಹತ್ವದ್ದು ಆದರೆ, ದತ್ತಿ ಗೋಷ್ಠಿಗಳನ್ನು ನಡೆಸುವಲ್ಲಿ ದತ್ತಿ ದಾನಿಗಳ ಕಾಯ೯ ಶ್ಲಾಘನೀಯ ಎಂದು ಸರ್ಕಾರಿ ಪ್ರಥಮ ದಜೆ೯ ಮಹಿಳಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕಿ ಲಕ್ಷ್ಮಿ ಮೋರೆ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ದಿ. ಪ್ರಭಾವತಿ ಮಲ್ಲಪ್ಪ ಪಟ್ಟಣಶೆಟ್ಟಿ ದತ್ತಿ. ದತ್ತಿ ದಾನಿಗಳು ಶ್ರೀ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಸಚಿವರು, ವಿಜಯಪುರ. ವಿಷಯ: ೧೨ನೇ ಶತಮಾನದ ಶರಣರ ಸಂದೇಶಗಳು. ಹಾಗೂ ಶ್ರೀಮತಿ ಶಾಂತಾಬಾಯಿ ಎಸ್ ಗುಂಡಳ್ಳಿ. ದತ್ತಿ ದಾನಿಗಳು ಶ್ರೀ ಶಾಂತಮಲ್ಲ ಹೊನ್ನಪ್ಪ ಗುಂಡಳ್ಳಿ, ವಿಜಯಪುರ. ವಿಷಯ: ವಚನ ಸಾಹಿತ್ಯದ ಕುರಿತು ಚಿಂತನೆ ಎಂಬ ಎರಡು ದತ್ತಿ ಗೋಷ್ಠಿಗಳ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ದತ್ತಿ ದಾನಿಗಳ ನಿಸ್ವಾರ್ಥ ಸೇವೆಯನ್ನು ಸ್ಮರಿಸುತ್ತಾ, ೧೨ನೇ ಶತಮಾನದ ಶರಣರು ಸಮ ಸಮಾಜದ ಚಿಂತಕರಾಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಸುಜಾತಾ ಈರಣ್ಣ ಪಟ್ಟಣಶೆಟ್ಟಿಯವರು ಮಾತನಾಡುತ್ತಾ, ದತ್ತಿ ಗೋಷ್ಠಿಗಳ ಮೂಲಕ ಹಿರಿಯರ ಸ್ಮರಣೆ ಮಾಡುವುದು ನಿಜಕ್ಕೂ ನಮಗೆ ಒಂದು ಹಬ್ಬವಿದ್ದಂತೆ. ಈ ಹಿರಿಯರ ಹಬ್ಬದಲ್ಲಿ ಇಂದು ನಾವೆಲ್ಲ ೧೨ನೇ ಶತಮಾನದ ಶರಣರು ಕಾಯಕ, ದಾಸೋಹಗಳಿಗೆ ನೀಡಿದ ಮಹತ್ವವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅರಿತುಕೊಂಡು ಬಾಳುವುದು ಅತ್ಯಂತ ಮಹತ್ವದ ಸಂಗತಿ ಎಂದರು.
“೧೨ನೇ ಶತಮಾನದ ಶರಣರ ಸಂದೇಶಗಳು” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಶಿಕ್ಷಕ- ಸಾಹಿತಿ ಸಂತೋಷ ಬಂಡೆ ಮಾತನಾಡುತ್ತಾ, ನಡೆ-ನುಡಿಗಳನ್ನು ಒಂದಾಗಿಸಿ ನಮಗೆಲ್ಲ ಬದುಕಿನ ದಾರಿಯನ್ನು ತೋರಿಸಿಕೊಟ್ಟು ಹೋದ ಶರಣರ ಸಂದೇಶಗಳನ್ನು ಮೆಲುಕು ಹಾಕುತ್ತಾ “ಅರಿತರೆ ಶರಣ ಮರೆತರೆ ಮಾನವ” ಎಂಬುದನ್ನು ನಾವು ಮರೆಯಬಾರದು ಎಂದರು.
“ವಚನ ಸಾಹಿತ್ಯದ ಕುರಿತು ಚಿಂತನೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಸಾಹಿತಿ ಸುಜಾತಾ ಹ್ಯಾಳದರವರು ಮಾತನಾಡುತ್ತಾ, ವಚನಗಳ ತಾತ್ಪರ್ಯವನ್ನು ತಿಳಿದುಕೊಂಡು ಉತ್ತಮ ಜೀವನವನ್ನು ಸಾಗಿಸಿದಾಗ ಮಾತ್ರ ನಾವೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಎ.ಎಂ.ಹಳ್ಳೂರ, ಸುರಮ್ಮಾ ಪಾಟೀಲ, ಎಂ.ಜಿ.ಮೋಟಗಿ, ಸವಾ೯ನಂದ ಕೂಬರಡ್ಡಿ, ರವಿ ಬಿರಾದಾರ ಉಪಸ್ಥಿತರಿದ್ದು ಮಾತನಾಡಿದರು.
ಇದೇ ಸಂದರ್ಭದಲ್ಲಿ ದೇವರ ಹಿಪ್ಪರಗಿಯ ಮುರಾಜಿ೯ ವಸತಿ ಶಾಲೆಯ ಸಹ ಶಿಕ್ಷಕರಾದ ರಾಜಶೇಖರ ಕಂಬಾರ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ಸುರೇಶ ಜತ್ತಿ ಸ್ವಾಗತಿಸಿ ಗೌರವಿಸಿದರು.
ಡಾ. ಮಾಧವ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಗುರುದೇವಿ ಬಿರಾದಾರ ನಿರೂಪಿಸಿದರು. ವಿಜಯಲಕ್ಷ್ಮಿ ಹಳಕಟ್ಟಿ ವಂದಿಸಿದರು. ಮೆಹತಾಬ ಕಾಗವಾಡ ತತ್ವಪದವನ್ನು ಹಾಡಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಹಾಸಿಂಪೀರ ವಾಲೀಕಾರ, ಕೋಶಾಧ್ಯಕ್ಷ ಡಾ. ಸಂಗಮೇಶ ಮೇತ್ರಿ, ಕೆ.ಎಸ್.ಹಣಮಾಣಿ, ರಾಜೇಸಾಬ ಶಿವನಗುತ್ತಿ, ಡಾ. ಸುರೇಶ ಕಾಗಲಕರರೆಡ್ಡಿ, ಶ್ರೀಕಾಂತ ನಾಡಗೌಡ, ದ್ಯಾಮನಗೌಡ ಪಾಟೀಲ, ಕೀರ್ತಿ ಭಜಂತ್ರಿ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ರಾಮಗೊಂಡ ಪಡನಾಡ, ಎಂ.ಡಿ ಬಿಳಿಜಾಡರ, ರಹಿಂಮಲೀಕ ಹಳ್ಳೂರ, ಶಾಂತಾ ವಿಭೂತಿ, ಎಸ್.ಎಂ.ಬಿರಾದಾರ, ಫಕ್ರುದ್ದಿನ್ ಹಿರೇಕೊಪ್ಪ ಉಪಸ್ಥಿತರಿದ್ದರು.

