ವಿರಕ್ತಮಠದ ಪರಿಸರ ಕುಟೀರದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ರಕ್ತ ಸಂಬಂಧಗಳಿಗಿಂತಲೂ ಮಿಗಿಲಾದದ್ದು ಸ್ನೇಹ ಸಂಬಂಧ, ಇಂದು ಸಾಂಧರ್ಬಿಕವಾಗಿ ದೂರವಾಗಿರುವ ಆತ್ಮೀಯ ಸಂಬಂಧಗಳನ್ನು ಸ್ನೇಹ ಸಮ್ಮಿಲನದಂತಹ ಕಾರ್ಯಕ್ರಮಗಳು ಬೆಸೆಯಲು ಸೇತುವೆಯಾಗಿವೆ ಎಂದು ಚಿಮ್ಮಡ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಹೇಳಿದರು.
ಗ್ರಾಮದ ವಿರಕ್ತಮಠದ ಪರಿಸರ ಕುಟೀರ ಆಶ್ರಮದಲ್ಲಿ ಮಹಾಲಿಂಗಪುರದ ಎಸ್‌ಸಿಪಿ ಪ್ರೌಢಶಾಲೆಯ ೧೯೮೬-೮೭ನೇ ಸಾಲಿನ ವಿದ್ಯಾರ್ಥಿಗಳು ಭಾನುವಾರ ಹಮ್ಮಿಕೊಂಡ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಇಂದಿನ ಯಾಂತ್ರೀಕೃತ ಬದುಕಿನಲ್ಲಿ ರಕ್ತ ಸಂಬಂಧಗಳ ಮಧ್ಯೆ ಕಾಲ ಕಳೆಯಲು ಸಾಧ್ಯವಾಗದೆ ಮೊಬೈಲ್‌ನೊಂದಿಗೆ ಕಾಲ ಕಳೆಯುವಂತಾಗಿರುವುದು ವಿಪರ್ಯಾಸ, ಕೆಲವು ಸಮಯವನ್ನಾದರೂ ಮೀಸಲಿಟ್ಟು ಕುಟುಂಬ ಹಾಗೂ ಸಂಬಂಧಗಳಿಗೆ ಸಮಯ ಕೊಡಬೇಕಿದೆ ಎಂದರು.
ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಶ್ರೀಕಾಂತ ಮಾಳಿ, ಶುಭಾಂಗಿಣಿ ಇಂಡಿಕರ, ಮಹಾನಂದಾ ಗೊಂಬಿ, ಹನಮಂತ ಶಿರೋಳ, ಪ್ರಭು ನೇಸೂರ, ಶಿವಲಿಂಗ ಟಿರಕಿ ಮಾತನಾಡಿದರು. ಮನೋಹರ ಶಿರೋಳ, ಶಿವಾನಂದ ಬಾಗೇವಾಡಿ, ಪಾರ್ವತಿ ಸೋರಗಾವಿ, ಶಂಕರ ಹೊಸಕೋಟಿ, ವಿವೇಕಾನಂದ ಕಡಪಟ್ಟಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಇದೇ ಸಂಧರ್ಬದಲ್ಲಿ ಶ್ರೀ ಪ್ರಭು ಮಹಾಸ್ವಾಮಿಗಳು ಶ್ರೀ ಮಠದ ಪರವಾಗಿ ಮಹಿಳಾ ಸಹಪಾಠಿಗಳಿಗೆ ತವರಿನ ಕಾಣಿಕೆಯಾಗಿ ಹಸಿರು ಸೀರೆ, ಅರಿಷಿಣ ಕುಂಕುಮದ ಭಾಗಿನ ನೀಡಿ ಗೌರವಿಸಿದರು ಹಾಗೂ ಹಲವು ಸಾಧಕರನ್ನು ಸತ್ಕರಿಸಲಾಯಿತು.
ಶಿಲ್ಪಾ ಗುಜ್ಜರ ಪ್ರಾರ್ಥಿಸಿದರು. ಶ್ರೀಕಾಂತ ಮಾಳಿ ನಿರೂಪಿಸಿ ವಂದಿಸಿದರು.

