ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಾಡಿನ ಶ್ರೇಷ್ಠ ಸಂತ ಶ್ರೀ ಭಕ್ತ ಕನಕದಾಸ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್. ಎಂ. ಹೊನ್ನುಟಗಿ, ಡಿನ್ ರಾದ ಡಾ. ಆನಂದ ಅಂಬಲಿ, ಡಾ. ಎಸ್. ವಿ. ಪಾಟೀಲ, ಉಪಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಡೈರೆಕ್ಟರ್ ಆರ್ ಆ್ಯಂಡ್ ಡಿ ಸೆಲ್ ಡಾ. ಎಂ. ಎಂ. ಪಾಟೀಲ, ರಜಿಸ್ಟ್ರಾರ ಡಾ. ಆರ್. ವಿ. ಕುಲಕರ್ಣಿ, ಡೆಪುಟಿ ರಜಿಸ್ಟ್ರಾರ ಸತೀಶ ಪಾಟೀಲ, ಸಹಾಯಕ ರಜಿಸ್ಟ್ರಾರ ಡಾ. ಶ್ರೀಧರ ಬಗಲಿ, ಅವರು ಶ್ರೀ ಭಕ್ತ ಕನಕದಾಸ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ವಿವಿಯ ಆನಂದ ಪಾಟೀಲ, ಈರಯ್ಯ ಮಠಪತಿ, ಮಹೇಶ ಶಿವಣಗಿ, ಪವನ ಹಡಪದ, ನಾಗೇಶ ತಳವಾರ ಮುಂತಾದವರು ಉಪಸ್ಥಿತರಿದ್ದರು.

