Author: editor.udayarashmi@gmail.com

ವಿಶ್ರಾಂತ ದೈಹಿಕ ಶಿಕ್ಷಕ ಅನಂತಪೂರ ದಂಪತಿಗೆ ಹೃದಯಸ್ಪರ್ಶಿ ಸನ್ಮಾನ ಉದಯರಶ್ಮಿ ದಿನಪತ್ರಿಕೆ ಚಿಕ್ಕಪಡಸಲಗಿ: ಸಮೀಪದ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಹಲ ದಶಕಗಳ ಕಾಲ ಅಮೋಘ ಸೇವೆ ಸಲ್ಲಿಸಿ ನಿವೃತ್ತರಾದ ಹಿನ್ನೆಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪೂರ ಹಾಗೂ ಅವರ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅನಂತಪೂರ ದಂಪತಿಗಳಿಗೆ ಹೃದಯಸ್ಪರ್ಶಿ ಸನ್ಮಾನಿಸಿ ಗೌರವಿಸಲಾಯಿತು.ಶಾಲೆಯ ಹಳೆ ವಿದ್ಯಾರ್ಥಿಗಳಾದ ಚಿಕ್ಕಪಡಸಲಗಿ ಮಡಿವಾಳ ಮಾಚಿದೇವ ಕೈಗಾರಿಕಾ ತರಬೇತಿ ಕೇಂದ್ರದ ಶಿಕ್ಷಕಿ ಶ್ರೀಮತಿ ಶಾಂತಾ ರೋಣಿಹಾಳ ಹಾಗೂ ಅವರ ಸಹೋದರಿ ಶ್ರೀಮತಿ ಕಲಾವತಿ ಕರ್ಜಗಿ, ಪುತ್ರ ತರುಣ, ಮೊಮ್ಮಗಳು ದಿಯಾ ಸೇರಿದಂತೆ ಅಪ್ತರು ಜಮಖಂಡಿ ನಿವಾಸಕ್ಕೆ ತೆರಳಿ ಅನಂತಪೂರ ದಂಪತಿಗಳಿಗೆ ಆತ್ಮೀಯವಾಗಿ ಶಾಲು ಹೊದಿಸಿ ಸತ್ಕರಿಸಿ ಗೌರವ ನಮನ ಸಲ್ಲಿಸಿದರು.ಈ ವೇಳೆ ಮಾತನಾಡಿದ ಶ್ರೀಮತಿ ಶಾಂತಾ ರೋಣಿಹಾಳ, ತಾವು ಅನಂತಪೂರ ಗುರುಗಳ ಕೈಯಲ್ಲಿ ಕಲಿತು ಅಕ್ಷರ ಜ್ಞಾನ ಪಡೆದಿರುವುದು ನನ್ನ ಸೌಭಾಗ್ಯ. ಅವರ ಶಿಸ್ತುಬದ್ಧ ಚಾಕಚಕ್ಕತೆಯ ನಡೆನುಡಿಗಳಿಂದ ಪ್ರೇರಿತಳಾಗಿ ಆದರ್ಶಪ್ರಾಯವಾದ ಗುಣಸ್ವಭಾವ ಮೈಗೂಡಿಸಿಕೊಂಡಿರುವೆ. ಅನಂತಪೂರ ಗುರುಗಳು…

Read More

ಲೇಖಕರು-ಜಯಶ್ರೀ.ಜೆ. ಅಬ್ಬಿಗೇರಿ ಉಪನ್ಯಾಸಕರು, ಬೆಳಗಾವಿ, ಮೊ.೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ‘ಯಾರೊಂದಿಗೆ ಹೇಗೆ ಮಾತನಾಡಬೇಕು ಅಂತ ತಿಳಿಯದೇ ಎಷ್ಟೋ ಸಲ ಅಪಾರ್ಥಗಳು ಸೃಷ್ಟಿಯಾಗಿ ಬಿಡುತ್ತವೆ. ಮಾತನಾಡಿದರೆ ರಗಳೆ ಅಂತ ಮಾತನಾಡಲೇಬೇಕಾದ ಸಂದರ್ಭ ಬಂದಾಗಲೂ ಮೌನ ವಹಿಸುತ್ತೇನೆ. ಆಗಲೂ ಬೈಸಿಕೊಳ್ಳುತ್ತೇನೆ. ಮಾತನಾಡದೇ ಇದ್ದುದಕ್ಕೆ. ಬಾಯಿ ಬಿಟ್ಟರೂ ತೊಂದರೆ ಮುಚ್ಚಿಕೊಂಡಿದ್ದರೂ ತೊಂದರೆ ಯಾವಾಗ, ಎಲ್ಲಿ, ಎಷ್ಟು, ಹೇಗೆ ಮಾತನಾಡುವುದು ತಿಳಿಯದೇ ತಲೆ ಗಿರಗಿಟ್ಲೆ ಆಡಿಸುತ್ತದೆ. ಅಪರಿಚಿತರನ್ನು ಕಂಡಾಗಲಂತೂ ಮೈ ಮೇಲೆ ಮುಳ್ಳು ಬಿದ್ದವರ ತರ ಆಡ್ತಿನಿ. ಗೆಳೆಯರೊಂದಿಗೆ ಕೊಂಚ ಸಲುಗೆಯಿಂದ ಮಾತನಾಡಿದರೆ ನಿನ್ನ ಮಾತು ಮನಸ್ಸಿಗೆ ನೋವು ತಂತು ಅಂತಾರೆ. ಮೌನ ವಹಿಸಿದರೆ ಆತ್ಮೀಯತೆಯೇ ಇಲ್ಲ ಅಂತ ಬೈತಾರೆ. ಅಬ್ಬಬ್ಬಾ! ಎಷ್ಟೊಂದು ಕಠಿಣ ಈ ಸಂವಹನ. ನಾವಾಡುವ ಮಾತುಗಳು ಕೇವಲ ನಮ್ಮ ಮನದ ಅಭಿಪ್ರಾಯಗಳನ್ನು ಸೂಚಿಸುತ್ತವೆ ಅಂತ ತಿಳಿದಿದ್ದೆ. ಹಲವು ಬಾರಿ ನಾನು ಬಳಸುವ ಪದಗಳು ನಿಜ ಸಂದೇಶವನ್ನು ತಲುಪಿಸದೇ ತಪ್ಪು ಕಲ್ಪನೆಯನ್ನು ಮೂಡಿಸುತ್ತವೆ. ವಿಸ್ಮಯಕಾರಿ ಪರಿಣಾಮ ಬೀರುತ್ತವೆ. ಅದಕ್ಕೆ ಬಲ್ಲವರು ಹೇಳಿದ್ದು ಸರಿಯಾಗಿಯೇ ಇದೆ.…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಈ ಸಂಸ್ಥೆಯ ಶ್ರೀ ಸಂಗನ ಬಸವ ಫಾರ್ಮಸಿ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ಎನ್ ಎಸ್ ಎಸ್ ಘಟಕ ಮತ್ತು ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿ ವತಿಯಿಂದ ನಗರದದಲ್ಲಿ ಮೂರು ಕಡೆಗಳಲ್ಲಿ ಜನಜಾಗೃತಿ ಅಭಿಯಾನದ ಅಂಗವಾಗಿ ಬೀದಿ ನಾಟಕ ಪ್ರದರ್ಶನ ನಡೆಯಿತು.ಮಂಗಳವಾರ ಶ್ರೀ ಸಿದ್ಧೇಶ್ವರ ದೇವಸ್ಥಾನ, ಗಾಂಧಿ ಚೌಕ ಮತ್ತು ಕೇಂದ್ರ ಬಸ್ ನಿಲ್ದಾಣದ ಎದುರು ಫಾರ್ಮಸಿ ಕಾಲೇಜಿನ ಡಿ. ಫಾರ್ಮ್ ವಿದ್ಯಾರ್ಥಿಗಳು ಏಡ್ಸ್ ರೋಗ ತಡೆಗಟ್ಟುವ ವಿಧಾನಗಳು ಮತ್ತು ಮುಂಜಾಗೃತೆ ಕ್ರಮಗಳ ಕುರಿತು ಬೀದಿ ನಾಟಕ ಪ್ರದರ್ಶನದ ಮೂಲಕ ಜನಜಾಗೃತಿ ಮೂಡಿಸಿದರು.ಈ ಸಂದರ್ಭದಲ್ಲಿ ವಿಜಯಪುರದ ಜಿಲ್ಲಾ ಏಡ್ಸ್ ಪ್ರೆವೆನ್ಶನ್ ಅಂಡ್ ಕಂಟ್ರೋಲ್ ಯುನಿಟ್ ಸಿಬ್ಬಂದಿ ಬಾಬುರಾವ ತಳವಾರ, ರವಿ ಕಿತ್ತೂರ ಮತ್ತು ಅರ್ಚನಾ ವಲಕೋಟಿ, ಬಿ.ಎಲ್.ಡಿ.ಈ ಫಾರ್ಮಸಿ ಕಾಲೇಜಿನ ಸಿಬ್ಬಂದಿ ಪ್ರಶಾಂತ್ ಜೋರಾಪೂರ, ಸಂದೀಪ್ ಉಮರಾಣಿ, ಅಜಯ ಶಹಾಪುರ, ಶಿವರಾಜ್ ಕಾಪಸೆ, ಡಾ. ಮಲ್ಲಿನಾಥ, ಡಾ. ಚೇತನಕುಮಾರ ಮುಂತಾದವರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ಗೋಲಗೇರಿ: ಸಿಂದಗಿಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿರುವ ಎಂ.ಬಿ.ಯಡ್ರಾಮಿ ಅವರಿಗೆ ಸಾಹಿತಿ, ವ್ಯಂಗ್ಯ ಚಿತ್ರಕಾರ, ಗೋಲಗೇರಿ ಸಮೂಹ ಸಂಪನ್ಮೂಲ ವ್ಯಕ್ತಿ ಶರಣು ಚಟ್ಟಿ ಅವರು ರಚಿಸಿದ ’ತುಂಟಮಕ್ಕಳು’ ಪುಸ್ತಕ ನೀಡಿ ಸ್ನೇಹಿತರ ಬಳಗದಿಂದ ಗೌರವಿಸಿ ಅಭಿನಂದಿಸಲಾಯಿತು.ಈ ಸಂದರ್ಭದಲ್ಲಿ ಮಡಿವಾಳ ನಾಯ್ಕೋಡಿ, ಸಾಸಾಬಾಳ ಸಿದ್ಧಾಪುರ ವಸ್ತಿ ಶಾಲೆಯ SDMC ಅಧ್ಯಕ್ಷ ಕುತುಬುದ್ದೀನ್ ಕೋರಬು, ಕಲ್ಪತರು ಶಿಕ್ಷಣ ಸಂಸ್ಥೆಯ ಮುಖ್ಯ ಗುರು ಮಹಾಂತೇಶ ಗೊಂದಳಿ, ಸಂಜೀವಕುಮಾರ ಯಂಕಂಚಿ, ಲಕ್ಷ್ಮಣ ಕಲಾಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read More

ಚಿಮ್ಮಡದಲ್ಲಿ ಚರ್ಮ ಅಭಿವೃದ್ದಿ ತರಬೇತಿ ಕಾರ್ಯಕ್ರಮ ಸಮಾರೋಪ ಉದಯರಶ್ಮಿ ದಿನಪತ್ರಿಕೆ ಚಿಮ್ಮಡ: ಸರಕಾರ ಹಾಗೂ ನಿಗಮದ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗ ನಡೆಸುವುದರ ಮೂಲಕ ಸ್ವಾವಲಂಭಿಗಳಾಗಿ ಬದುಕಬೇಕೆಂದು ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದ ರಾಜ್ಯಾಧ್ಯಕ್ಷ ನಾಗರಾಜ ಮುಂಡರಗಿ ಹೇಳಿದರು.ಗ್ರಾಮದ ಜನತಾ ಪ್ಲಾಟ್ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ೬೦ ದಿನಗಳ ತರಬೇತಿ ಸಮಾರೋಪ ಹಾಗೂ ಫಲಾನುಭಿಗಳ ಸೌಲಭ್ಯ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪ್ರತಿಯೊಬ್ಬ ತರಬೇತುದಾರರು ನಿಗಮದಿಂದ ದೊರೆಯುವ ಸಾಲ ಸೌಲಭ್ಯ ಪಡೆಯುವ ಮೂಲಕ ಸ್ವಯಂ ಉದ್ಯೋಗ ಪ್ರಾರಂಭಿಸಿ ಆರ್ಥಿಕವಾಗಿ ಸಬಲರಾಗಿ ತಮ್ಮ ಮಕ್ಕಳನ್ನು ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳುವಂತೆ ಬೆಳೆಸಬೇಕೆಂದರು.ಜಿಲ್ಲಾ ಸಂಯೋಜಕ ಎನ್.ಎ. ಗಂಗಾಧರ ಮಾತನಾಡಿ, ಬಾಬು ಜಗಜೀವನರಾಮ್ ಚರ್ಮ ಕೈಗಾರಿಕೆ ಅಭಿವೃದ್ದಿ ನಿಗಮದಿಂದ ಇದುವರೆಗೆ ಗ್ರಾಮ ವ್ಯಾಪ್ತಿಯಲ್ಲಿಯೇ ನೂರಾರು ಜನ ಫಲಾನುಭವಿಗಳು ವ್ಯಾನಿಟಿ ಬ್ಯಾಗ್, ಪರ್ಸ್, ಪೌಚ್ ಸೇರಿದಂತೆ ಹಲವಾರು ವಸ್ತುಗಳನ್ನು ತಯಾರಿಸುವ ತರಬೇತಿ ಪಡೆದುಕೊಂಡಿದ್ದು ಪ್ರತಿಯೊಬ್ಬರು ಈ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ವಿದ್ಯಾರ್ಥಿಗಳಿಗೆ ಅಪೌಷ್ಠಿಕತೆ ಮತ್ತು ರಕ್ತ ಹೀನತೆ ನಿವಾರಿಸಲು ಮಧ್ಯಾಹ್ನದ ಬಿಸಿಯೂಟದೊಂದಿಗೆ ವಾರದ ಎಲ್ಲಾ 6 ದಿನಗಳಲ್ಲಿ ಪೂರಕ ಪೌಷ್ಠಿಕ ಆಹಾರವಾಗಿ ಮೊಟ್ಟೆ ವಿತರಿಸುವ ಯೋಜನೆ ಇಂದು ರಾಜ್ಯದಾದ್ಯಂತ ಅನುಷ್ಠಾನಗೊಳ್ಳುತ್ತಿದೆ.ಈ ನಿಮಿತ್ತ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯ ವತಿಯಿಂದ ಅಕ್ಷರ ದಾಸೋಹ ಮಧ್ಯಾನ್ಹದ ಉಪಹಾರ ಯೋಜನೆಯಡಿ ವಾರದ 6 ದಿನಗಳ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಹಾಗೂ ಬಾಳೆಹಣ್ಣನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷ ಮಾಳಪ್ಪ ಪೂಜಾರಿ,ಉಪಾಧ್ಯಕ್ಷ ರಮೇಶ ಮಠಪತಿ, ಪರಶುರಾಮ ಹೊಸಮನಿ, ಸದಸ್ಯರಾದ ಹನಮಂತ ಝಳಕಿ, ಸಂತೋಷ ಸಾಲೋಟಗಿ, ಪಡೆವ್ವ ನಡುವಿನಮನಿ, ಶಾಲುಬಾಯಿ ಸೈನಸಾಕಳೆ, ಮುಖ್ಯ ಶಿಕ್ಷಕರಾದ ಅನಿಲ ಪತಂಗಿ, ವ್ಹಿ ವೈ ಪತ್ತಾರ, ಎಸ್ ಎಸ್ ಅರಬ ಹಾಗೂ ಶಿಕ್ಷಕರಾದ ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಎಸ್ ಎಂ ಪಂಚಮುಖಿ, ಸಾವಿತ್ರಿ ಸಂಗಮದ, ಎಫ್ ಎ ಹೊರ್ತಿ, ಎಸ್ ಬಿ ಕುಲಕರ್ಣಿ, ಎಸ್ ವ್ಹಿ ಬೇನೂರ,…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ತಾಲ್ಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್ ಶಾಲೆಯಲ್ಲಿ ಮಂಗಳವಾರದಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಅಕ್ಷರ ಫೌಂಡೇಶನ್ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗಣಿತ ಕಲಿಕಾ ಆಂದೋಲನದ ಸ್ಪರ್ಧೆಯಲ್ಲಿ ಕೆಜಿಎಸ್ ಶಾಲೆಯ 4ನೇ ವರ್ಗದ ರಂಜಿತಾ ವಾಘಮೋಡೆ-ಪ್ರಥಮ ಮತ್ತು 5ನೇ ವರ್ಗದ ವಿದ್ಯಾಶ್ರೀ ಜೊತಗೊಂಡ- ಪ್ರಥಮ ಸ್ಥಾನ ಪಡೆದು, ಶಾಲೆಗೆ ಕೀರ್ತಿ ತಂದಿದ್ದಾರೆ. ವಿಜೇತರಿಗೆಪ್ರಶಸ್ತಿ ಪತ್ರ, ನಗದು ಬಹುಮಾನ ವಿತರಿಸಲಾಯಿತು.ಮುಖ್ಯ ಶಿಕ್ಷಕಿ ವ್ಹಿ ವೈ ಪತ್ತಾರ, ಶಿಕ್ಷಕರಾದ ಎಸ್ ಎಂ ಪಂಚಮುಖಿ, ಸಂತೋಷ ಬಂಡೆ, ಎಸ್ ಆರ್ ಚಾಳೇಕರ, ಎಸ್ ಬಿ ಕುಲಕರ್ಣಿ, ಶ್ರದ್ಧಾ ಬಂಕಲಗಾ, ಎಸ್ ಡಿ ಬಿರಾದಾರ, ಜೆ ಸಿ ಗುಣಕಿ, ಎಸ್ ಎನ್ ಡಂಗಿ, ಅತಿಥಿ ಶಿಕ್ಷಕ ಪ್ರಜ್ವಲ ಕುಲಕರ್ಣಿ ಸೇರಿದಂತೆ ಅನೇಕರು ಮಕ್ಕಳ ಸಾಧನೆಗೆ ಅಭಿನಂದಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಭೀಮಾ ನದಿ ಸೇತುವೆ ಬಳಿ ಲೋಕೋ ರೈಲು ಹಳಿತಪ್ಪಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.ತಾಲ್ಲೂಕಿನ ಪಡನೂರ ಗ್ರಾಮದ ಭೀಮಾ ಬ್ರಿಡ್ಜ್ ಹತ್ತಿರ ಘಟನೆ ನಡೆದಿದೆ.ರೈಲು ಹಳಿ ತಪ್ಪಿದ ಪರಿಣಾಮ ಈ ಭಾಗದ ರೈಲು ಸಂಚಾರ ರದ್ದು ಮಾಡಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರದಿಂದ ಕಲಬುರಗಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.ರೈಲು ಹಳಿತಪ್ಪಿರುವ ಹಿನ್ನೆಲೆಯಲ್ಲಿ ಕೆಲ ರೈಲು ಸಂಚರ ರದ್ದಾಗಿದೆ. ಮೈಸೂರು-ಪಂಢರಪುರ ನಡುವಿನ ರೈಲು ಸಂಖ್ಯೆ 16535 ರೈಲನ್ನು ಇಂದು ರದ್ದು ಮಾಡಲಾಗಿದೆ.ಫಂಡರಪುರ-ಮೈಸೂರು ನಡುವುನ ರೈಲು ಸಂಖ್ಯೆ 16536 ಸೆ.6ರ ಸಂಚಾರ ಪಂಢರಾಪುರ-ವಿಜಯಪುರ ನಡುವೆ ಭಾಗಶ: ರದ್ದಾಗಲಿದೆ ಎಂದು ತಿಳಿದುಬಂದಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತಾಗಿ ನಡೆದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ವರ್ಷ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಾಮ ನಿರ್ದೇಶಿತ ಸಮಿತಿ ಸದಸ್ಯ ರಫಿ ಭಂಡಾರಿ ಮಾತನಾಡಿ, ಕಳೆದ ವರ್ಷ ದೌಲತ್‌ಕೋಟೆಯಲ್ಲಿರುವ ಹಾನಿಗೊಳಗಾದ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ಕರೆದು ನಿರ್ದೇಶನ ನೀಡಬೇಕು. ಇನ್ನೋರ್ವ ಸದಸ್ಯರಾದ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ದ್ವಿದಳ ದಾನ್ಯ ಪೌಷ್ಟಿಕಾಂಶವಿರುವ ಆಹಾರ ನೀಡಬೇಕು. ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಿ ಸಮರ್ಪಕವಾಗಿ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಅಧಿಕಾರಿಗಳಿಗೆ ಸೂಚಿಸಿದರು.ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಪ್ರಧಾನ ಮಂತ್ರಿಗಳ ಹೊಸ ೧೫ ಅಂಶಗಳ ಕಾರ್ಯಕ್ರಮ ಅನುಷ್ಠಾನಗೊಳಿಸುವ ಕುರಿತಾಗಿ ನಡೆದ ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಪ್ರಸಕ್ತ ವರ್ಷ ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಯಾವುದೇ ಕಾರಣಕ್ಕೂ ವಿಳಂಬ ಮಾಡದೇ ತ್ವರಿತ ಗತಿಯಲ್ಲಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ನಾಮ ನಿರ್ದೇಶಿತ ಸಮಿತಿ ಸದಸ್ಯ ರಫಿ ಭಂಡಾರಿ ಮಾತನಾಡಿ, ಕಳೆದ ವರ್ಷ ದೌಲತ್‌ಕೋಟೆಯಲ್ಲಿರುವ ಹಾನಿಗೊಳಗಾದ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಶಿಕ್ಷಕರು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಸಭೆ ಕರೆದು ನಿರ್ದೇಶನ ನೀಡಬೇಕು. ಇನ್ನೋರ್ವ ಸದಸ್ಯರಾದ ಅಲ್ಲಾಭಕ್ಷ ಬಿಜಾಪುರ ಮಾತನಾಡಿ, ಅಂಗನವಾಡಿ ಮಕ್ಕಳಿಗೆ ದ್ವಿದಳ ದಾನ್ಯ ಪೌಷ್ಟಿಕಾಂಶವಿರುವ ಆಹಾರ ನೀಡಬೇಕು. ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ…

Read More