ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಓಸಿ, ಮಟಗಾ ಜೂಜಾಟವಾಡುತ್ತಿದ್ದ ಇಬ್ಬರ ಮೇಲೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ತಾಲೂಕಿನ ನಾಲವಾಡ ಪಟ್ಟಣದ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಂತು ರೂಪಾಯಿಗೆ ೮೦ ರೂ ನೀಡುವ ಕರಾರಿನ ಮೇಲೆ ಓಸಿ ಮಟಗಾ ಜೂಜಾಟದಲ್ಲಿ ತೊಡಗಿದ್ದ ಹಣಮಂತ ಬೇವಿನಕಟ್ಟಿ ಈತನ ಮೇಲೆ ಇಲ್ಲಿನ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ನೀಡಿದ ದೂರಿನ ಆಧಾರದ ಮೇಲೆ ಮತ್ತು ತಾಲೂಕಿನ ನಾಲತವಾಡ ಪಟ್ಟಣದ ವಿರೇಶ್ವರ ವೃತ್ತದ ಬಳಿ ಸಾರ್ವಜನಿಕ ಸ್ಥಳದಲ್ಲಿ ನಿಂತು ರೂಪಾಯಿಗೆ ೮೦ ರೂ ನೀಡುವ ಕರಾರಿನ ಮೇಲೆ ಓಸಿ ಮಟಗಾ ಜೂಜಾಟದಲ್ಲಿ ತೊಡಗಿದ್ದ ಶಕೀಲ ಸುಗಂಧಿ ಈತನ ಮೇಲೆ ಪಿಎಸ್‌ಐ ಸಂಜಯ ತಿಪರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣಗಳು ದಾಖಲಾಗಿದೆ. ಆರೋಪಿ ಸ್ಥಾನದಲ್ಲಿರುವ ಹಣಮಂತ ಹಾಗೂ ಶಕೀಲ ಇವರಿಬ್ಬರಿಂದ ಓಸಿ ಚೀಟಿ, ಬಾಲ್ ಪೆನ್ನು ಮತ್ತು ಕೆಲ ಹಣವನ್ನು ವಶಕ್ಕೆ ಪಡೆದಿದ್ದಾರೆ.
