ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ತಾಲೂಕಿನ ಕೇಸಾಪೂರ ಗ್ರಾಮದ ಸಂಗಮೇಶ್ವರ ದೇವಸ್ಥಾನದ ಆವರಣದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ಪಣಕ್ಕೆ ಹಣ ಹಚ್ಚಿ ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಇಲ್ಲಿನ ಪಿಎಸ್‌ಐ ಸಂಜಯ ತಿಪರೆಡ್ಡಿ ಪ್ರಕರಣ ದಾಖಲಿಸಿದ್ದಾರೆ.
ಜೈನಾಪುರದ ಬೀರಪ್ಪ ದಿಂಡವಾರ, ನಾಲತವಾಡದ ಪವಾಡೆಪ್ಪ ಕನಬಿಗೌಡರ, ಕೇಸಾಪುರದ ಮಂಜು ಚಲವಾದಿ, ಭೂಪಣ್ಣ ವಡ್ಡರ, ಬಸವರಾಜ ಭೋವೇರ ಮತ್ತು ಹಣಮಂತ ಮಾದರ ಮೇಲೆ ಪ್ರಕರಣ ದಾಖಲಾಗಿದ್ದು ರೂ ೩೮೫೫೦, ೫೨ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆಯಲಾಗಿದೆ.
