ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರಳ ಸಜ್ಜನಿಕೆಯ ಮತ್ತು ಸದಾ ಸರ್ಕಾರಿ ನೌಕರರ ಹಿತಬಯಸುವ ಶಿಕ್ಷಕರಾದ ಶ್ರೀ. ಸುರೇಶ ಶೆಡಸ್ಯಾಳ. ಅವರು ಸತತವಾಗಿ ನಾಲ್ಕು ಅವಧಿಗೆ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಸಮರ್ಥ ಸಮಾಜ ಸೇವಕರೆಂಬುದನ್ನು ಸಾಬೀತು ಪಡಿಸಿ ಈ ಬಾರಿ ಅವಿರೋಧವಾಗಿ ಆಯ್ಕೆಯಾಗಿ ನೌಕರರ ಸಂಘದ ಇತಿಹಾಸದ ಮೈಲುಗಲ್ಲಾಗಿದ್ದಾರೆ.
ಈ ಸಂಭ್ರಮದಲ್ಲಿ, ಭೂ ಮಾಪನ ಇಲಾಖೆಯಿಂದ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಶಿವಾನಂದ ಮಗ್ಗದ ಮತ್ತು ಭೂ ಮಾಪನ ಇಲಾಖೆಯ ಲಿಪಿಕ ವೃಂದದ ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ಶ್ರೀ. ಸತೀಶ ಹಿಮಕರವರು, ನೂತನ ಅಧ್ಯಕ್ಷರನ್ನು ಸನ್ಮಾನಿಸಿ ಗೌರವಿಸಿದರು.

