Subscribe to Updates
Get the latest creative news from FooBar about art, design and business.
Author: editor.udayarashmi@gmail.com
ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಅಭಿಮತ ಉದಯರಶ್ಮಿ ದಿನಪತ್ರಿಕೆ ಇಂಡಿ: ರಾಜ್ಯದಲ್ಲಿ ಯಾರೂ ಸಹ ಹಸಿವಿನಿಂದ ಬಳಲಬಾರದು ಎಂಬ ಉದ್ದೇಶ ಇಟ್ಟುಕೊಂಡು ಸರ್ಕಾರ ಅನ್ನಭಾಗ್ಯ ಯೋಜನೆ ಸೇರಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಅವರು ಮಂಗಳವಾರ ಪಟ್ಟಣದ ಮಿನಿ ವಿಧಾನಸೌಧದ ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಚೇರಿ ಉದ್ಘಾಟಿಸಿ ಮಾತನಾಡಿದರು.ಈ ಹಿಂದೆ ದೇವರಾಜ್ ಅರಸು ಅವರು ಉಳುವವನೇ ಭೂಮಿಯ ಒಡೆಯ ಎನ್ನುವ ಯೋಜನೆಯಿಂದ ಬಡವರಿಗೆ ನ್ಯಾಯ ಒದಗಿಸಿದ್ದರು. ಅವರ ಮಾದರಿಯಲ್ಲಿಯೇ ರಾಜ್ಯದ ಎಲ್ಲಾ ಜನರಿಗೆ ಸಮಬಾಳು, ಸಮಪಾಲು ಎನ್ನುವ ತತ್ವದ ಅಡಿಯಲ್ಲಿ ಇಂದಿನ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.೨೦೧೩ ರಿಂದ ೨೦೧೮ರ ವರೆಗೆ ಕಾಂಗ್ರೆಸ್ ಸರ್ಕಾರ ಬಡವರಿಗಾಗಿ, ದೀನ ದಲಿತರಿಗಾಗಿ ೮೫೭೧೮ ಕೋಟಿ ವೆಚ್ಚ ಮಾಡಿದೆ. ನೀರಾವರಿಗಾಗಿ ೪೦೦೦೦ ಕೋಟಿ ವೆಚ್ಚ ಮಾಡಿದೆ. ಪ್ರಸಕ್ತ ವರ್ಷದಲ್ಲಿ ೫೮೦೦೦…
ನಿವೃತ್ತಿಗೊಂಡ ರಮಾನಂದ ಸ್ವಗ್ರಾಮಕ್ಕೆ ಆಗಮನ | ಅದ್ದೂರಿ ಸ್ವಾಗತ ಮತ್ತು ಗೌರವ ಉದಯರಶ್ಮಿ ದಿನಪತ್ರಿಕೆ ಚಡಚಣ: ಮಳೆ, ಬಿಸಿಲು, ಚಳಿಯನ್ನು ಲೆಕ್ಕಿಸದೇ ಕುಟುಂಬದ ಬಗ್ಗೆ ಚಿಂತಿಸದೇ ದೇಶ ರಕ್ಷಣೆಗಾಗಿ ತ್ಯಾಗಿಯಾಗಿ ಸೇವೆಯನ್ನು ಸಲ್ಲಿಸುತ್ತಿರುವ ಭಾರತೀಯ ಸೈನಿಕರ ಸೇವೆ ನಿಜಕ್ಕೂ ಶ್ಲಾಘನೀಯವಾದುದು ಎಂದು ನಿವೃತ್ತ ಶಿಕ್ಷಕ ಎಚ್.ಎಸ್.ಬನಸೋಡೆ ಹೇಳಿದರು.ಮಂಗಳವಾರದಂದು ಶಿರಾಡೋಣ ಗ್ರಾಮದ ಬೀರೇಶ್ವರ ದೇವಾಸ್ಥಾನದ ಆವರಣದಲ್ಲಿ ಗ್ರಾಮದ ಅಭಿಮಾನ ಬಳಗ ಹಾಗೂ ಗೆಳೆಯರ ಬಳಗದವರು ಸೇರಿದಂತೆ ಗ್ರಾಮಸ್ಥರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ೨೪ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ ಸ್ವಗ್ರಾಮಕ್ಕೆ ಆಗಮಿಸಿದ ನಿವೃತ್ತ ಯೋಧ ರಮಾನಂದ ಭೀಮಾಶಂಕರ ಕುಲಕರ್ಣಿ ಅವರ ಸ್ವಾಗತ ಮತ್ತು ಸನ್ಮಾನ ಸಮಾರಂಭದ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು. ಸೈನ್ಯಕ್ಕೆ ಸೇರಬೇಕಾದರೇ ಪುಣ್ಯ ಮಾಡಿರಬೇಕು. ಅಂತಹ ಪಣ್ಯ ರಮಾನಂದ ಕುಲಕರ್ಣಿರವರು ಪಡೆದುಕೊಂಡು ಬಂದಿದ್ದರೂ ಎನ್ನುವುದರಿಂದಲೇ ಅವರ ೨೪ ವರ್ಷ ಸೇನೆಯಲ್ಲಿನ ಸುದೀರ್ಘ ಭಾರತಾಂಭೆ ಸೇವೆಗೆ ಇಂದು ಗೌರವ ಸಿಕ್ಕಂತಾಗಿದೆ. ರಮಾನಂದ ಅವರಂತೆ ಈ ಗ್ರಾಮದಲ್ಲಿ ಇನ್ನು ಮುಂದೆ ನೂರಾರು ಸಂಖ್ಯೆ ಯುವಕರು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಲೋಕಸಭಾ ಸಂಸದರಾದ ರಮೇಶ ಜಿಗಜಿಣಗಿ ಅವರು ಕೇಂದ್ರ ರೇಲ್ವೆ ಖಾತೆ ಸಚಿವರಾದ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಜಿಲ್ಲೆಗೆ ಸಂಬಂಧಿಸಿದ ವಿವಿಧ ಬೇಡಿಕೆಗಳನ್ನು ಸಲ್ಲಿಸಿ ಮನವಿ ಮಾಡಿಕೊಂಡಿದ್ದಾರೆ.ಮಂಗಳವಾರ ರೇಲ್ವೆ ಸಚಿವರನ್ನು ಭೇಟಿ ಮಾಡಿ ೬೫೩೫/೩೬ ಗೋಳಗುಮ್ಮಟ ಎಕ್ಸಪ್ರೆಸ್ ಸೂಪರ್ ಫಾಸ್ಟ್ ಪರಿವರ್ತಿಸುವುದು, ಪ್ರತಿದಿನ ೨೦೬೫೭/೨೦೬೫೮ ಹುಬ್ಬಳ್ಳಿ ದೆಹಲಿ ಹಾಗೂ ೧೭೩೨೩/೧೭೩೨೪ ಹುಬ್ಬಳ್ಳಿ ವಾರಣಸಿ ದಿನಾಂಪ್ರತಿ ಮಾಡುವುದು ಮತ್ತು ವಿಜಯಪುರ ಮಂಗಳೂರು ಹಾಗೂ ವಿಜಯಪುರ ಯಶವಂತಪುರ ತಾತ್ಕಾಲ್ ರೈಲುಗಳನ್ನು ಖಾಯಂ ಮಾಡಿ ಓಡಿಸುವ ಬೇಡಿಕೆಯನ್ನು ಸಲ್ಲಿಸಿದ್ದು, ಈ ಬೇಡಿಕೆಗೆ ರೇಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರದಲ್ಲಿ ಈಡೇರಿಸುವ ಭರವಸೆ ನೀಡಿದ್ದಾರೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ತಿಕೋಟಾ: ಹಣ, ಸಂಪತ್ತು ಹಾಗೂ ಜಮೀನು ಇದ್ದವನಿಗೆ ಸಧ್ಯದ ಜಗತ್ತಿನಲ್ಲಿ ಬೆಲೆ ಇಲ್ಲ, ಯಾರ ಹತ್ತಿರ ವಿಧ್ಯೆ ಇದೆಯೋ ಆ ವ್ಯಕ್ತಿಗೆ ಜಗತ್ತಿನಲ್ಲಿ ಗೌರವದ ಬೆಲೆ ಇದೆ ಎಂದು ಬಸವನ ಬಾಗೇವಾಡಿಯ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಕನಮಡಿಯಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಗ್ರಾಮೀಣವಲಯ ವಿಜಯಪುರ ಇವರ ಸಹಯೋಗದೊಂದಿಗೆ ಮಾಣಿಕೇಶ್ವರಿ ಹಾಗೂ ಚೈತನ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ತಾಲ್ಲೂಕ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.ಯಾವ ಮಗುವಿನಲ್ಲಿ ಯಾವ ಪ್ರತಿಭೆ ಇದೆ ಎಂದು ಶಿಕ್ಷಕರು ಗುರ್ತಿಸಬೇಕು. ಮಕ್ಕಳ ಪ್ರತಿಭೆ ಗುರ್ತಿಸಿ ಪ್ರೋತ್ಸಾಹಿಸಬೇಕು. ಪ್ರತಿಯೊಂದು ಮಕ್ಕಳಲ್ಲಿ ವಿಶೇಷ ಪ್ರತಿಭೆ ಇದ್ದೆ ಇರುತ್ತದೆ. ಮಕ್ಕಳನ್ನು ಎತ್ತರ ಮಟ್ಟಕ್ಕೆ ಒಯ್ಯುವ ಶಕ್ತಿ ಶಿಕ್ಷಕರಲ್ಲಿದೆ. ಶಿಕ್ಷಕರು ನಿರಂತರ ಅಧ್ಯಯನ ಮಾಡುತ್ತಾ ಇರಬೇಕು. ಆಗ ಮಕ್ಕಳ ವಿಧ್ಯೆ ಹೆಚ್ಚಾಗುತ್ತದೆ.ಶಿಕ್ಷಕರು ಶಿಲ್ಪಿಗಳು ಇದ್ದಂತೆ, ಮಕ್ಕಳ ಪ್ರತಿಭೆ ಗುರ್ತಿಸಿದಾಗ ಜಗತ್ತೆ ಅವರನ್ನು…
*ಉದಯರಶ್ಮಿ ದಿನಪತ್ರಿಕೆ* ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ 2024-25ನೇ ಸಾಲಿನ ಶೇ24.10, ಶೇ. 7.25, ಹಾಗೂ ಶೇ.5ರಷ್ಟು ಯೋಜನೆಯ ಕಲ್ಯಾಣ ಕಾರ್ಯಕ್ರಮಗಳಡಿ ಸಹಾಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ (ಶಿಷ್ಯವೇತನ), ಬಡತನ ರೇಖೆಗಿಂಡ ಕೆಳಗಿರುವವರಿಗೆ 24/7 ಕುಡಿಯುವ ನೀರು ಸಂಪರ್ಕ, ವಿಶೇಷಚೇತನರಿಗೆ ಇಲೆಕ್ಟ್ರಿಕಲ್ ತ್ರಿಚಕ್ರ ವಾಹನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅರ್ಹ ಫಲಾನುಭವಿಗಳು ನಿಗದಿತ ನಮೂನೆ ಅರ್ಜಿಯನ್ನು ಪಾಲಿಕೆ ಕಚೇರಿಯಲ್ಲಿ ಪಡೆದುದಿನಾಂ ಕ : 20-12-2024ರೊಳಗಾಗಿ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸೂಚನಾ ಫಲಕ ಅಥವಾ ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ವಿಕಲಚೇತನರ ದಿನಾಚರಣೆಯಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೀವನದಲ್ಲಿ ಸಾಧನೆ ಮಾಡಲು ಮನಸ್ಸು ಮುಖ್ಯ, ಮನಸ್ಸಿದ್ದಲ್ಲಿ ಮಾರ್ಗ ಎಂಬಂತೆ ವಿಶೇಷ ಚೇತನರು ಒಂದು ವಿಶೇಷ ಸದೃಢ ಮನಸ್ಸು ಹೊಂದಿರುತ್ತಾರೆ. ಸಾಧನೆಗೆ ಯಾವುದೂ ಅಡ್ಡಿಯಾಗಲಾರದು. ಆತ್ಮವಿಶ್ವಾಸದಿಂದ ಎಂತಹ ಸನ್ನಿವೇಶ-ಸಂದರ್ಭವನ್ನು ಛಲದಿಂದ ಎದುರಿಸಿ ಸಾಧನೆಗೆ ಮುಂದಾಗುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಕರೆ ನೀಡಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ವಿಕಲಚೇತನರ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಧನೆ ಸಾಧಕನ ಸೊತ್ತು. ದೃಢ ಮನಸ್ಸು ಹೊಂದಿ, ಸಾಧಕರಾಗಿ ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು ಎಂದು ಹೇಳಿದರು.ಜೀವನದಲ್ಲಿ ಆಶಾಭಾವನೆ ಹೊಂದಿರಬೇಕು. ಸದಾ ಪ್ರಯತ್ನವಾದಿಯಾಗಿರಬೇಕು. ಸತತ ಪ್ರಯತ್ನ ಯಶಸ್ವಿಗೆ ಸಹಕಾರಿಯಾಗಿದೆ. ಜೀವನದಲ್ಲಿ ಸಾಧನೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಜಾನಪದ ಕಲಾ ಪ್ರಕಾರಗಳ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಯುವಜನ ಮೇಳ ಹಾಗೂ ಯುವಜನೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಉತ್ತೇಜಿಸುವ ನಿಟ್ಟಿನಲ್ಲಿ ಯುವಜನರಿಗೆ ಕಲಾ ಪ್ರಕಾರಗಳ ತರಬೇತಿ ಶಿಬಿರವನ್ನು 50 ಶಿಬಿರಾರ್ಥಿಗಳಿಗೆ ಡಿ.10ರಿಂದ 17ರವರೆಗೆ 8 ದಿನಗಳ ಆಯೋಜಿಸಲಾಗಿದೆ.ಆಸಕ್ತ ಯುವಕ-ಯುವತಿಯರು ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ ಕಚೇರಿ ಅರ್ಜಿ ಪಡೆದು, ದಿನಾಂಕ : 08-12-2024ರೊಳಗೆ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ: 08352-251085, ಮೊ: 8792185141 ಸಂಖ್ಯೆಗೆ ಸಂಪರ್ಕಿಸಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೇಂದ್ರ ಪುರಸ್ಕೃತ ಶಿಷ್ಯವೇತನ ಕಾರ್ಯಕ್ರಮದಡಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಇ-ಕೆವೈಸಿ ಬಯೋ ಮೆಟ್ರಿಕ್ ಮಾಡುವುದು ಕಡ್ಡಾಯವಾಗಿರುತ್ತದೆ.ಈಗಾಗಲೇ ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಬಯೋಮೆಟ್ರಿಕ್ ಇ-ದೃಢೀಕರಣ ಮಾಡಲು ನಾಗರಿಕ ಸೇವಾ ಕೇಂದ್ರಗಳಾದ ಗ್ರಾಮ ಒನ್, ಕರ್ನಾಟಕ ಒನ್ ಮತ್ತು ಇತರೆ ಸೇವಾ ಕೇಂದ್ರಗಳಲ್ಲಿ ಮತ್ತು ಸಹಾಯಕ ನಿರ್ದೇಶಕರು (ಗ್ರೇಡ್-1) ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಕಚೇರಿಯಲ್ಲಿ ವಿದ್ಯಾರ್ಥಿಗಳು ಶಿಷ್ಯವೇತನಕ್ಕೆ ಅರ್ಜಿ ಸಲ್ಲಿಸಿದ ಪ್ರತಿ ಮತ್ತು ಆಧಾರ ಕಾರ್ಡ ಪ್ರತಿಯೊಂದಿಗೆ ಬಯೋಮೆಟ್ರಿಕ್ ಇ-ದೃಢೀಕರಣವನ್ನು ಉಚಿತವಾಗಿ ಮಾಡಿಕೊಂಡು ಶಿಷ್ಯವೇತನ ಪಡೆಯಲು ಸೂಚಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಂಘಟನೆ, ಶಿಸ್ತು, ಸಮಯ ಪಾಲನೆ, ದೇಶ ಸೇವೆಗೆ ಸದಾ ಸಿದ್ದವಾಗಿದ್ದು, ಸೇವೆಯೇ ತನ್ನ ಉಸಿರಾಗಿಸಿಕೊಂಡು ಸೇವೆ ಗೈಯುತ್ತಿರುವ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಪ್ರಾಚಾರ್ಯೆ ಡಾ. ಆರ್ ಎಂ ಮಿರ್ದೆ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ, ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಸಹಯೋಗದಲ್ಲಿ ಜರುಗಿದ ೨೦೨೪-೨೫ ಪ್ರಸಕ್ತ ವರ್ಷದ ರೋವರ್ಸ್ ಮತ್ತು ರೆಂಜರ್ಸ ವಿದ್ಯಾರ್ಥಿಗಳಿಗೆ ದೀಕ್ಷಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಉದ್ದೇಶಗಳು ಸಿದ್ದಾಂತಗಳನ್ನು ಅಳವಡಿಸಿಕೊಂಡು ದೇಶದ ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ದಾರಿದೀಪ. ಅದರಂತೆ ವಿದ್ಯಾರ್ಥಿಗಳು ತಮ್ಮ ಕಲಿಕಾ ಹಂತದಲ್ಲಿ ಇಂತಹ ಬೃಹತ್ ಸಂಘಟನೆಯಲ್ಲಿ ಪಾಲ್ಗೊಂಡು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024ಕ್ಕೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ದಿದ್ದು, ನಗರದ ಮೂರು ಜನ ಗಣ್ಯರು ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದಾರೆ.ಕಾಂಗ್ರೆಸ್ ಮುಖಂಡ ಹಮೀದ್ ಮುಶ್ರಿಫ್ ಅವರು ರೂ.1.50 ಲಕ್ಷ (1 ಲಕ್ಷ 50 ಸಾವಿರ ರೂಪಾಯಿ) ಹಣವನ್ನು ಪ್ರಾಯೋಜಕತ್ವಕ್ಕಾಗಿ ನೆರವು ನೀಡಿದ್ದಾರೆ.ಅದೇ ರೀತಿ ನಗರದ ಖ್ಯಾತ ಉದ್ಯಮಿ ಜೆ. ಜಿ. ಪಾರೇಖ ಅವರು ರೂ. 1.01 (1 ಲಕ್ಷ 1 ಸಾವಿರ ರೂಪಾಯಿ ಹಣವನ್ನು) ನೀಡಿದ್ದಾರೆ. ಈ ಹಣವನ್ನು ವೃಕ್ಷಥಾನ್ ಹೆರಿಟೇಜ್ ರನ್ 21 ಕಿ. ಮೀ. ಓಟದಲ್ಲಿ ಪಾಲ್ಗೋಳ್ಳುತ್ತಿರುವ ಬಡ ಯುವಕರ ನೋಂದಣಿಗೆ ಪ್ರಾಯೋಜಕತ್ವಕ್ಕಾಗಿ ನೀಡಿದ್ದಾರೆ.ನಗರದ ಗಣ್ಯ ವ್ಯಾಪಾರಸ್ಥ ಶರಣು ಗುಡ್ಡೊಡಗಿ ಅವರು ರೂ. 75 ಸಾವಿರ ಹಣವನ್ನು ಪ್ರಾಯೋಜಕತ್ವಕ್ಕಾಗಿ ನೀಡಿದ್ದಾರೆ.ಹಮೀದ್ ಮುಶ್ರಿಫ್ ಮತ್ತು ಶರಣು ಗುಡ್ಡೊಡಗಿ ಅವರು ಕಳೆದ ಬಾರಿಯ ವೃಕ್ಷಥಾನ್ ಹೆರಿಟೇಜ್ ರನ್ ಓಟಕ್ಕೂ ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದು ಗಮನಾರ್ಹವಾಗಿದೆ. ಮೂರೂ ಜನ ಪ್ರಾಯೋಜಕರಿಗೆ…
