*ಉದಯರಶ್ಮಿ ದಿನಪತ್ರಿಕೆ*
ವಿಜಯಪುರ: ಮಹಾನಗರ ಪಾಲಿಕೆ ವತಿಯಿಂದ 2024-25ನೇ ಸಾಲಿನ ಶೇ24.10, ಶೇ. 7.25, ಹಾಗೂ ಶೇ.5ರಷ್ಟು ಯೋಜನೆಯ ಕಲ್ಯಾಣ ಕಾರ್ಯಕ್ರಮಗಳಡಿ ಸಹಾಯ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯ (ಶಿಷ್ಯವೇತನ), ಬಡತನ ರೇಖೆಗಿಂಡ ಕೆಳಗಿರುವವರಿಗೆ 24/7 ಕುಡಿಯುವ ನೀರು ಸಂಪರ್ಕ, ವಿಶೇಷಚೇತನರಿಗೆ ಇಲೆಕ್ಟ್ರಿಕಲ್ ತ್ರಿಚಕ್ರ ವಾಹನ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಫಲಾನುಭವಿಗಳು ನಿಗದಿತ ನಮೂನೆ ಅರ್ಜಿಯನ್ನು ಪಾಲಿಕೆ ಕಚೇರಿಯಲ್ಲಿ ಪಡೆದು
ದಿನಾಂ ಕ : 20-12-2024ರೊಳಗಾಗಿ ಅರ್ಜಿ ಸಲ್ಲಿಸಬೇಕು. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ ಕಚೇರಿಯ ಸೂಚನಾ ಫಲಕ ಅಥವಾ ವಿಷಯ ನಿರ್ವಾಹಕರನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
