Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳು ವಿಕಲಚೇತನರೆಂದು ಅವರನ್ನು ಮನೆಯಲ್ಲೇ ಇರಿಸದೇ ಶಾಲೆಗಳಿಗೆ ಸೇರಿಸಿ ವಿಶೇಷ ಜ್ಞಾನ ನೀಡಿ, ಎಲ್ಲರಂತೆ ಸಾಮಾನ್ಯ ಜೀವನ ಸಾಗಿಸಲು ಅನುಕೂಲ ಕಲ್ಪಿಸಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಅವರು ಮಂಗಳವಾರದಂದು ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ‘ವಿಶ್ವ ವಿಕಲಚೇತನರ ದಿನ’ವನ್ನು ಉದ್ಘಾಟಿಸಿ ಮಾತನಾಡಿದರು.ವಿಶ್ವದಲ್ಲಿ ಬಹಳಷ್ಟು ವಿಕಲಚೇತನರು ತಾವು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ನಾನಾ ರಂಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ. ಅಂಗವೈಕಲ್ಯ ಅವರ ಪ್ರತಿಭೆಗೆ ಅಡ್ಡಿಯಾಗದಂತೆ ಸಮಾಜ ಅವರಿಗೆ ಸಮಾನ ಅವಕಾಶಗಳನ್ನು ಕೊಡಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಎಸ್ ಎಸ್ ಅರಬ ಮಾತನಾಡಿ, ವಿಕಲಾಂಗ ವ್ಯಕ್ತಿಗಳು ಕಲೆ, ವಿಜ್ಞಾನ, ಕ್ರೀಡೆ, ಸಂಗೀತ, ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ಈ ದಿನವು ವಿಕಲಾಂಗ ವ್ಯಕ್ತಿಗಳ ಅಪಾರ ಸಾಮರ್ಥ್ಯವನ್ನು ಮತ್ತು ಅವರ ನಾಯಕತ್ವವನ್ನು ಸಶಕ್ತಗೊಳಿಸುವ ಮಹತ್ವವನ್ನು ನಮಗೆ ನೆನಪಿಸುತ್ತದೆ ಎಂದು ಹೇಳಿದರು.ಶಿಕ್ಷಕರಾದ ಎನ್ ಬಿ ಚೌಧರಿ, ಎಸ್ ಪಿ ಪೂಜಾರಿ, ಅತಿಥಿ ಶಿಕ್ಷಕಿ ಅಲ್ಫಿಯಾ ಅಂಗಡಿ ಸೇರಿದಂತೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ವಿದ್ಯಾರ್ಥಿ ದೆಸೆಯೆಯಲ್ಲಿಯೇ ಭವಿಷ್ಯದ ಮುಂದಾಲೋಚನೆ ರೂಢಿಸಿಕೊಳ್ಳಬೇಕಾಗಿದೆ ಎಂದು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರಾಣೇಶ ಜೋಶಿ ಹೇಳಿದರು.ಪಟ್ಟಣದ ಅಭ್ಯುದಯ ಶಾಲೆಯಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲೀ ಸಂಸ್ಥಾನದ ಯತಿವರೇಣ್ಯರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಆಯೋಜಿಸಿರುವ ಭಗವದ್ಗೀತಾ ಅಭಿಯಾನ ಕರ್ನಾಟಕ—೨೦೨೪ ಸಂಬಂಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಭಾರತದ ಸಮಗ್ರತೆ ಸಂಸ್ಕೃತಿಯ ಮೇಲೆ ನಿಂತಿದೆ. ಅದನ್ನು ರಾಮಾಯಣ, ಮಹಾಭಾರತದಂತಹ ಆದರ್ಶ ಗ್ರಂಥಗಳು ಎತ್ತಿ ಹಿಡಿಯುತ್ತಿವೆ. ಭಗವದ್ಗೀತಾ ಅಭಿಯಾನದಂತಹ ವಿಶಿಷ್ಠ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಬದುಕಿಗೆ ಅರ್ಥವನ್ನು ತರುವ ಕಾರ್ಯವನ್ನು ಸರ್ಣವಲ್ಲೀ ಶ್ರೀಗಳು ನಡೆಸುತ್ತಿದ್ದಾರೆ. ನಾವೆಲ್ಲ ಜಾಗೃತಗೊಳ್ಳಬೇಕಾಗಿದೆ. ಅಲ್ಲದೆ ಸಾಧನೆಯ ಪಥದಲ್ಲಿ ಸಾಗುವಾಗ ಮೂಕನಾಗಿರಬೇಕು. ಸಾಧನೆಯ ಗುರಿಯನ್ನು ಮುಟ್ಟುವ ಗಮನವೊಂದೆ ಇರಬೇಕು. ವಿದ್ಯಾರ್ಥಿಗಳು ಭಗವದ್ಗೀತೆಯ ಅಧ್ಯಯನದ ಮೂಲಕ ಬೆಳಕಿನ ದಾರಿ ಕಂಡುಕೊಳ್ಳ ಬೇಕಾಗಿದೆ ಎಂದರು.ನಿವೃತ್ತ ಮುಖ್ಯ ಶಿಕ್ಷಕ ಎಸ್.ಎಚ್.ಮುದ್ನಾಳ ಮಾತನಾಡಿ ನಾವು ಪ್ರತಿ ಕ್ಷಣದಲ್ಲೂ ಸರಿಯೋ? ತಪ್ಪೋ? ಎನ್ನುವುದನ್ನ ಯೋಚಿಸುತ್ತಿರಬೇಕು. ಕೆಟ್ಟದ್ದನ್ನು ಪ್ರಾರಂಭದ ಹಂತದಿಂದಲೇ ಕೈಬಿಡುತ್ತಿರಬೇಕು. ಭಗವಂತ ನಮ್ಮಿಂದ ಏನನ್ನೂ…
ಉದಯರಶ್ಮಿ ದಿನಪತ್ರಿಕೆ ಆಲಮೇಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಭಾಗದ ಮಹಿಳೆಯರ ಸ್ವಾವಲಂಬನೆ, ವಿದ್ಯಾರ್ಥಿಗಳ ಏಳಿಗೆ, ಅನಾಥರಿಗೆ ಊರುಗೋಲಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರಗತಿಪರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್ ಎಸ್ ಚಂಡಕಿ ಹೇಳಿದರುಅವರು ತಾಲೂಕಿನ ದೇವಣಗಾಂವ ಗ್ರಾಮದ ಪ್ರಗತಿಪರ ಶಿಕ್ಷಣ ಸಂಸ್ಥೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ ಟ್ರಸ್ಟ್ (ರಿ) ವತಿಯಿಂದ, ವಿದ್ಯಾರ್ಥಿಗಳಿಗೆ ಉಚಿತವಾಗಿ ಮೂರು ತಿಂಗಳ ಟ್ಯೂಷನ್ ಕ್ಲಾಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರುಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಗ್ರಾಮೀಣ ಭಾಗಕ್ಕೆ ತಲುಪಿಸುತ್ತಿರುವ ಪೂಜ್ಯ ಹೆಗ್ಗಡೆ ದಂಪತಿಗಳಿಗೆ ನಮ್ಮ ಶಾಲೆಯ ಪರವಾಗಿ ಕೃತಜ್ಞತೆಗಳು ಸಲ್ಲಿಸಬೇಕಿದೆ, ಗಾಂಧೀಜಿಯವರ ಗ್ರಾಮ ಅಭಿವೃದ್ಧಿ ಕನಸನ್ನು ಧರ್ಮಸ್ಥಳ ಸಂಸ್ಥೆ ನನಸು ಮಾಡುತ್ತಿದೆ, ಮಹಿಳೆಯರ ಸಬಲೀಕರಣ, ಅನಾಥರ, ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುತ್ತಿದೆ ಇಂದಿನಿಂದ ಪ್ರಾರಂಭವಾಗುವ ಟ್ಯೂಷನ್ ಕ್ಲಾಸ್ ಸದುಪಯೋಗ ಪಡೆದುಕೊಂಡು ಉತ್ತಮ ರೀತಿಯಲ್ಲಿ ಅಂಕಗಳನ್ನು ಗಳಿಸಬೇಕು ಎಂದರು.ಸಿಂದಗಿ ತಾಲೂಕು ಯೋಜನಾಧಿಕಾರಿ ಕೃಷ್ಣಮೂರ್ತಿಪ್ರಾಸ್ತಾವಿಕ ಮಾತನಾಡಿ ಯೋಜನೆಯು ನಡೆದು ಬಂದ ಹಾದಿ, ಸ್ವ ಸಹಾಯ ಸಂಘಗಳ…
ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾಯಾ೯ಲಯ ಆವರಣದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಪ್ರಯುಕ್ತ ಸಸಿಗಳನ್ನು ನೆಡಲಾಯಿತು.ಬಿಒಓ ಕಚೇರಿ ಸಿಬ್ಬಂದಿ ಅಂಬರೀಶ್ ಪಲ್ಲೇದ, ಬಿ.ಡಿ.ತೇಲಿ, ವಿಶ್ರಾಂತ ಶಿಕ್ಷಕ ತಳವಾರ ಇತರರು ತಮ್ಮ ದೈನಂದಿನ ಕಾಯಕದ ಜೊತೆಗೆ ಸಸಿಗಳನ್ನು ನೆಟ್ಟು, ನೀರುಣಿಸಿದರು. ಹಸಿರು ಭಾವದ ಸಾಮಾಜಿಕ ಜವಾಬ್ದಾರಿ ಮೆರೆದರು.ಸಾಮಾಜಿಕ ಸೇವಾ ಮನೋಭಾವನೆಯಲ್ಲಿ ನೆಮ್ಮದಿ, ಸಂತೃಪ್ತಿ ಲಭಿಸುತ್ತದೆ. ಆ ಕಾರಣ ಪ್ರತಿಯೊಬ್ಬರು ಪ್ರಕೃತಿ ಪ್ರೇಮಾಂಕುರ ಬೆಳೆಸಿಕೊಂಡು ಹಸಿರು ನಂದನಕ್ಕೆ ಕಾರಣರಾಗಬೇಕು. ಮನುಕುಲದ ಜೀವ ಸತ್ವಕ್ಕೆ ಒಂದಿಷ್ಟು ನೇಚರ್ ಪರಿಸರ ಸಂರಕ್ಷಿಸುವ ಹಸಿರು ತತ್ವ ಹೃದಯ ಮನಭಾವದಲ್ಲಿ ಚಿಗುರೊಡೆಯಬೇಕು ಎಂದರು.
’ವೀಣಾಂತರಂಗ’ ಲೇಖನ- ವೀಣಾ ಹೇಮಂತ್ ಗೌಡ ಪಾಟೀಲಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ರತನ್ ಟಾಟಾ ಅವರ ಜೀವನದಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ವಹಿಸಿದ ವ್ಯಕ್ತಿ ಅವರ ಅಜ್ಜಿ ನವಾಜ್ ಬಾಯ್ ಟಾಟಾ… ಲೇಡಿ ರತನ್ ಟಾಟಾ ಎಂಬ ಹೆಸರಿನಿಂದ ಕರೆಯಲ್ಪಡುತ್ತಿದ್ದ ಈಕೆ ಟಾಟಾ ಉದ್ಯಮವನ್ನು ಸ್ಥಾಪಿಸಿದ ಜಮಶೇಡ್ ಜೀ ಟಾಟಾ ಅವರ ಕಿರಿಯ ಮಗನನ್ನು ವಿವಾಹವಾಗಿದ್ದರು.ಟಾಟಾ ಸಂಸ್ಥೆಯ ಅತ್ಯಂತ ಹಿರಿಯ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಈಕೆ ಅತಿ ದೊಡ್ಡ ದಾನಿಯಾಗಿದ್ದರು.1965ರ ಆಗಸ್ಟ್ ತಿಂಗಳಲ್ಲಿ ಆಕೆ ನಿಧನ ಹೊಂದಿದಾಗ ಮುಂಬೈಯ ಅಗಸ್ಟ್ 22ರ ಟೈಮ್ಸ್ ಆಫ್ ಇಂಡಿಯಾ ಪೇಪರ್ ನಲ್ಲಿ ಪಾರ್ಸಿ ಜನಾಂಗದ ಅತ್ಯಂತ ಪ್ರಭಾವಿ ಉದ್ಯಮಿ ಮಾತ್ರವಲ್ಲದೇ ಸಮಾಜ ಕಲ್ಯಾಣ ವಲಯದಲ್ಲಿಯೂ ಹೆಸರಾದ ಮಹಿಳೆ ಎಂದು ಆಕೆಯ ಕುರಿತು ಹೇಳಲಾಗಿತ್ತು.ರತನ್ ಟಾಟಾ ಅವರ ಉದ್ಯಮ ತರಬೇತಿ ಸಂಸ್ಥೆಯಲ್ಲಿ 300ಕ್ಕೂ ಹೆಚ್ಚು ಯುವತಿಯರು ವಿವಿಧ ಉದ್ಯಮಶೀಲತಾ ಕೆಲಸಗಳಲ್ಲಿ ತರಬೇತಿ ಹೊಂದಿದ್ದು ಅವರೆಲ್ಲರ ಜವಾಬ್ದಾರಿಯನ್ನು ಮತ್ತು ಸಂಸ್ಥೆಯ ಜವಾಬ್ದಾರಿಯನ್ನು ಖುದ್ದು ಆಕೆಯೇ ವಹಿಸಿದ್ದಳು. ಪಾರ್ಸಿ…
ಯತ್ನಾಳರೊಂದಿಗೆ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥದ ಆಶಯ ವ್ಯಕ್ತಪಡಿಸಿದ ಮಾಜಿ ಸಿಎಂ ಯಡಿಯೂರಪ್ಪ ಶಿವಮೊಗ್ಗ: ಬಿಜಾಪುರ ಶಾಸಕ ಮತ್ತು ಸದಾ ತಮ್ಮನ್ನು ಟೀಕಿಸುವ ಬಸನಗೌಡ ಪಾಟೀಲ್ ಯತ್ನಾಳ್ ಅವರು “ಹೊರಗಿನವರಲ್ಲ” ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬುಧವಾರ ಹೇಳಿದ್ದಾರೆ.ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿಯ ಎಲ್ಲಾ ಆಂತರಿಕ ಸಮಸ್ಯೆಗಳನ್ನು ಚರ್ಚೆಯ ಮೂಲಕ ಇತ್ಯರ್ಥಪಡಿಸುವ ವಿಶ್ವಾಸ ವ್ಯಕ್ತಪಡಿಸಿದರು ಮತ್ತು ರಾಜ್ಯ ಬಿಜೆಪಿ ಮುಖ್ಯಸ್ಥರಾಗಿರುವ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಅವರು ಪಕ್ಷವನ್ನು ಬಲಪಡಿಸುವಲ್ಲಿ ನಿಟ್ಟಿನಲ್ಲಿ ಎಲ್ಲರನ್ನು ಒಟ್ಟಿಗೆ ತೆಗೆದುಕೊಂಡು ಹೋಗಬೇಕೆಂದು ಸಲಹೆ ನೀಡಿದರು.ಯತ್ನಾಳ್ ಅವರು ಹೊರಗಿನವರಲ್ಲ, ಕೆಲವು ಕಾರಣಗಳಿಂದ ಅವರು ಆಕ್ರೋಶಗೊಂಡಿರಬಹುದು. ಮಾತನಾಡೋಣ. ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗಬೇಕು ಎಂಬುದು ನನ್ನ ನಿರೀಕ್ಷೆ. ಇದು ವಿಜಯೇಂದ್ರ ಅವರ ನಿರೀಕ್ಷೆಯೂ ಹೌದು ಎಂದು ಮಾಜಿ ಮುಖ್ಯಮಂತ್ರಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.ಯಾವುದೇ ಲೋಪದೋಷಗಳಿದ್ದರೆ ಎದುರು-ಬದುರು ಕುಳಿತು ಚರ್ಚಿಸಿ, ಇತ್ಯರ್ಥಪಡಿಸಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಬೇಕು. ಇದು…
ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಸಂಭ್ರಮದ ವಿಶ್ವ ವಿಕಲಚೇತನರ ದಿನಾಚರಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯಾರಲ್ಲಿ ನ್ಯೂನ್ಯತೆಗಳನ್ನು ಮೀರಿ ಬೆಳೆಯುವ ಶಕ್ತಿ ಇರುತ್ತದೆಯೋ ಅಂಥವರಿಗೆ ದೇವರು ಸವಾಲುಗಳನ್ನು ಎಸೆಯುತ್ತಾನೆ. ಆ ದೇವರು ಎಸೆದ ಸವಾಲನ್ನು ಸಮರ್ಪಕವಾಗಿ ಎದುರಿಸಿದವನ ಸಾಧಕನಾಗಿ ಹೊರ ಹೊಮ್ಮುತ್ತಾನೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಸವಿತಾ ಕಾಳೆ ಹೇಳಿದರು.ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ವಿಶ್ವ ವಿಲಚೇತರ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು; ಸಮಸ್ಯೆಗಳು ಮನುಷ್ಯನನ್ನು ಸಾಧಕನನ್ನಾಗಿ ಹೊರಹೊಮ್ಮಿಸುವುದಕ್ಕೆ ಪ್ರೇರಣೆ ನೀಡುತ್ತವೆ. ಅಂತೆಯೇ ದೈಹಿಕವಾಗಿ ಅಂಗ ವೈಕ್ಯಲತೆಯೂ ಸಹ ಮನಸ್ಸಿನಲ್ಲಿ ಅಡಗಿರುವ ಸೂಪ್ತ ಚೇತನವನ್ನು ಜಾಗೃತಗೊಳಿಸಿ ಸಾಧನೆಯ ಶಿಖರವೇರುವುದಕ್ಕೆ ಪ್ರೇರಣೆ ನೀಡುತ್ತದೆ. ನನಗೆ ಅಂಗವೈಕಲ್ಯವಿದೆ ಎಂದು ಮರುಗುತ್ತ ಕುಳಿತರೆ ಏನು ಮಾಡುವುದಕ್ಕೂ ಸಾಧ್ಯವಾಗುವುದಿಲ್ಲ. ನಮಗೆ ದೇವರು ನೀಡಿದ ಈ ಸವಾಲು ನಿಜವಾಗಲೂ ನಮ್ಮಲ್ಲಿರುವ ಶಕ್ತಿಯನ್ನು ಜಗತ್ತಿಗೆ ತೋರಿಸುವುದಕ್ಕೆ ಮಾಡಿಕೊಟ್ಟ ಅವಕಾಶ ಎಂದು ತಿಳಿದು ಮುನ್ನುಗಿದ್ದರೆ ಎಲ್ಲವೂ ಸರಿಯಾಗಿರುವ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಾದಕ ವಸ್ತುಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿರುವ ಜಾಲವನ್ನು ಪತ್ತೆ ಹಚ್ಚಿ ಶಿಸ್ತು ಕ್ರಮ ಕೈಗೊಳ್ಳುವಂತೆ ಭಾರತೀಯ ಜನತಾ ಪಾರ್ಟಿಯ ವಾಣಿಜ್ಯ ಮತ್ತು ವ್ಯಾಪಾರ ಪ್ರಕೋಷ್ಟ್ ಕದಿಂದ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಜಿಲ್ಲೆಯಲ್ಲಿ ಹೆಚ್ಚುತಿರುವ ಮಾದಕ ವಸ್ತುಗಳು ಮಾರಾಟವನ್ನು ತಡೆಗಟ್ಟಬೇಕು ಇದರಿಂದ ಜಿಲ್ಲೆಯ ಯುವ ಜನಾಂಗ ಹೀನಾಯ ಸ್ಥಿತಿಗೆ ತಲಪುವ ಸಾಧ್ಯತೆ ಹೆಚ್ಚಾಗಿದೆ ಮತ್ತು ಪೋಷಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿ ಕೂಡಲೇ ಪೊಲೀಸ್ ಇಲಾಖೆ ತಕ್ಷಣವೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ರಾಜ್ಯ ವ್ಯಾಪ್ತಿ ಉಗ್ರ ಹೋರಾಟ ಅನಿವಾರ್ಯ ಎಂದು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟ್ ಕ ರಾಜ್ಯ ಸಂಚಾಲಕ ಶ್ರೀ ವಿಜಯಕುಮಾರ ಕುಡುಗಿನೂರ ಹೇಳಿದರುಜಿಲ್ಲಾ ಸಂಚಾಲಕ ಭರತ ಕುಲಕರ್ಣಿ ಮಾತನಾಡಿ, ಜಿಲ್ಲೆಯ ನದಿ ತೀರದಲ್ಲಿ ಅತೀ ಹೆಚ್ಚು ಗಾಂಜಾ ಪದಾರ್ಥ ದೊರಕುತಿದ್ದು ಇದರಿಂದ ಗ್ರಾಮೀಣ ಭಾಗದ ಯುವಕರು ದುಷ್ಟಚಟಕ್ಕೆ ತುತ್ತಗುತ್ತಿದ್ದು ತುಂಬಾ ನೋವಿನ ಸಂಗತಿ ಇದರಿಂದ ಬಡ ಕೂಲಿ ಕಾರ್ಮಿಕ ಪೋಷಕರಿಗೆ ಆರ್ಥಿಕತೆ ಅಭದ್ರವಾಗಲಿದೆ ತಕ್ಷಣ ಅಂತ ವೆಕ್ತಿ…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ ನೇತೃತ್ವದಲ್ಲಿ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಕಚೇರಿಯಲ್ಲಿ ಬುಧವಾರ ಅವರ ಆಪ್ತ ಸಹಾಯಕರಿಗೆ ೧೯೯೫ರ ಅವಧಿ ಖಾಸಗಿ ಶಾಲಾ-ಕಾಲೇಜುಗಳಿಗೆ ಅನುದಾನದ ಕುರಿತು ಅಧಿವೇಶನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಧ್ವನಿ ಎತ್ತುವಂತೆ ಮನವಿ ಸಲ್ಲಿಸಲಾಯಿತು.ಅವರು ಸಲ್ಲಿಸಿದ ಮನವಿಯಲ್ಲಿ ನಮ್ಮ ಒಕ್ಕೂಟದ ಬೇಡಿಕೆಯಾಗಿರುವ ರಾಜ್ಯದಲ್ಲಿ ೧೯೯೫ರ ನಂತರದಲ್ಲಿ ಸ್ಥಾಪನೆಯಾಗಿರುವ ಖಾಸಗಿ ಶಾಲಾ-ಕಾಲೇಜುಗಳನ್ನು ವೇತನ ಅನುದಾನಕ್ಕೆ ಒಳಪಡಿಸಲು ಕುರಿತು ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ಜರುಗುವ ಸರ್ಕಾರದ ಅಧಿವೇಶನದಲ್ಲಿ ನಮ್ಮ ಒಕ್ಕೂಟದ ಬೇಡಿಕೆಯ ಕುರಿತು ಶಾಸಕರು ಸವಿಸ್ತಾರವಾಗಿ ಚರ್ಚೆ ಮಾಡುವ ಮೂಲಕ ಸರ್ಕಾರದ ಗಮನ ಸೆಳೆದು ನಮ್ಮ ಬೇಡಿಕೆಯ ಈಡೇರಿಸುವಂತೆ ಕೇಳಿಕೊಳ್ಳುತ್ತೇವೆ. ೧೯೯೫ರ ನಂತರದಲ್ಲಿ ಖಾಸಗಿ ಶಾಲಾ-ಕಾಲೇಜುಗಳನ್ನು ಸರ್ಕಾರದ ವೇತನ ಅನುದಾನಕ್ಕೆ ಒಳಪಡಿಸುವ ವಿಚಾರ ಸರ್ಕಾರದ ಮುಂದೆ ಇದೆಯೇ, ಎಷ್ಟು ವರ್ಷಗಳವರೆಗೆ ವೇತನ ಅನುದಾನ ಒಳಪಡಿಸಲು ಸರ್ಕಾರದ ನಿರ್ಧಾರವೇನು…
ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಸ್ಥಳೀಯ ಅಯ್ಯಪ್ಪ ಸ್ವಾಮಿ ಭಕ್ತರು ನಿಷ್ಠೆಯಿಂದ ತಮ್ಮ ಕೆಲಸದಲ್ಲಿ ತೊಡಗುವುದರೊಂದಿಗೆ ಧಾರ್ಮಿಕ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದಾರೆ ಎಂದು ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ತಾಲೂಕು ಘಟಕದ ಉದ್ಘಾಟಿಸಿ ಮಾತನಾಡಿದ ಅವರು, ಅಯ್ಯಪ್ಪ ಸ್ವಾಮಿ ಭಕ್ತರು ಸಂಘಟಿತರಾಗಿ ಸಂಘಟನೆ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮಕ್ಕಳಿಗೆ ಉನ್ನತ ಸಂಸ್ಕಾರದ ಮಹತ್ವ ತಿಳಿಸಿಕೊಡಬೇಕು ಎಂದರು.ಸಾನಿಧ್ಯ ವಹಿಸಿದ್ದ ಅಯ್ಯಪ್ಪ ಸೇವಾ ಸಮಾಜಂ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ದತ್ತಾತ್ರೆಯ ಶಿಂತ್ರೆ ಮಾತನಾಡಿ, ಸೇವಾ ಸಮಾಜ ಸಂಘಟನೆ ಸದಸ್ಯರು ಇತರರಿಗೆ ಮಾದರಿಯಾಗುವಂತಹ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಶಿಸ್ತು, ಸಮಯಪ್ರಜ್ಞೆ, ಸೇವೆಯ ಮಹತ್ವ ಅರಿತುಕೊಂಡು ಅದರಂತೆ ಕಾರ್ಯ ನಿರ್ವಹಿಸಬೇಕು ಎಂದರು.ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಪಟ್ಟಣದಲ್ಲಿ ಸೇವಾ ಸಮಾಜಂ ಸಂಘಟನೆ ಉದ್ಘಾಟನೆಗೊಂಡಿದ್ದು ಸಂತಸ ತಂದಿದೆ. ಅಯ್ಯಪ್ಪ ಸ್ವಾಮಿ ಭಕ್ತರು ತಮ್ಮ…
