ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಇಲ್ಲಿನ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾಯಾ೯ಲಯ ಆವರಣದಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನದ ಪ್ರಯುಕ್ತ ಸಸಿಗಳನ್ನು ನೆಡಲಾಯಿತು.
ಬಿಒಓ ಕಚೇರಿ ಸಿಬ್ಬಂದಿ ಅಂಬರೀಶ್ ಪಲ್ಲೇದ, ಬಿ.ಡಿ.ತೇಲಿ, ವಿಶ್ರಾಂತ ಶಿಕ್ಷಕ ತಳವಾರ ಇತರರು ತಮ್ಮ ದೈನಂದಿನ ಕಾಯಕದ ಜೊತೆಗೆ ಸಸಿಗಳನ್ನು ನೆಟ್ಟು, ನೀರುಣಿಸಿದರು. ಹಸಿರು ಭಾವದ ಸಾಮಾಜಿಕ ಜವಾಬ್ದಾರಿ ಮೆರೆದರು.
ಸಾಮಾಜಿಕ ಸೇವಾ ಮನೋಭಾವನೆಯಲ್ಲಿ ನೆಮ್ಮದಿ, ಸಂತೃಪ್ತಿ ಲಭಿಸುತ್ತದೆ. ಆ ಕಾರಣ ಪ್ರತಿಯೊಬ್ಬರು ಪ್ರಕೃತಿ ಪ್ರೇಮಾಂಕುರ ಬೆಳೆಸಿಕೊಂಡು ಹಸಿರು ನಂದನಕ್ಕೆ ಕಾರಣರಾಗಬೇಕು. ಮನುಕುಲದ ಜೀವ ಸತ್ವಕ್ಕೆ ಒಂದಿಷ್ಟು ನೇಚರ್ ಪರಿಸರ ಸಂರಕ್ಷಿಸುವ ಹಸಿರು ತತ್ವ ಹೃದಯ ಮನಭಾವದಲ್ಲಿ ಚಿಗುರೊಡೆಯಬೇಕು ಎಂದರು.

