Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಎಲ್ಲರ ಮನಗೆದ್ದ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ಈ ಹಂತಕ್ಕೆ ಬೆಳೆಯಲು ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ. ಬರುವ ದಿನಗಳಲ್ಲಿ ಈ ಬ್ಯಾಂಕಿನ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಇದ್ದು ಒಳ್ಳೆಯವರನ್ನು ಆರಿಸಿ ತರುವಂತೆ ಬ್ಯಾಂಕ್ ನ ಮತದಾರರಲ್ಲಿ ಬ್ಯಾಂಕ್ ನ ಅಧ್ಯಕ್ಷ ಸತೀಶ ಓಸ್ವಾಲ ಮನವಿ ಮಾಡಿಕೊಂಡರು.ಪಟ್ಟಣದ ದಿ ಕರ್ನಾಟಕ ಕೋ ಅಪ್ ಬ್ಯಾಂಕ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಪಾಟೀಲ, ಓಸ್ವಾಲ್, ನಾಗಠಾಣ, ಕಳಸಾ, ಮೋಟಗಿ, ಮೋಮಿನ, ಕಪಟಕರ, ನಾವದಗಿ, ಕುಂಟೋಜಿ, ನಾಯನೇಗಲಿ, ಝಳಕಿ, ರಕ್ಕಸಗಿ, ಶಿವಯೋಗಿಮಠ, ಸಜ್ಜನ, ನಾಶಿ ಸೇರಿದಂತೆ ಎಲ್ಲ ಸಮಾಜದ ಮನೆತನಗಳ ಹಿರಿಯರು ಶ್ರಮಿಸಿ ಸುಸಜ್ಜಿತ ಕಟ್ಟಡದೊಂದಿಗೆ ಒಳ್ಳೆಯ ಬ್ಯಾಂಕ್ ನ್ನು ನಿರ್ಮಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಾವು ನಮ್ಮ ಅವಧಿಯನ್ನು ಪೂರ್ಣಗೊಳಿಸಿದ್ದೇವೆ. ನಮ್ಮನ್ನು ಆಯ್ಕೆ ಮಾಡಿದ ಎಲ್ಲ ಚುನಾಯಿತರಿಗೆ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ಬರುವ ದಿನಗಳಲ್ಲಿ ಒಳ್ಳೆಯ ನಿರ್ದೇಶಕರನ್ನು ಆಯ್ಕೆ ಮಾಡಿ ನಮ್ಮೂರಿನ ಹೆಮ್ಮೆಯ ಬ್ಯಾಂಕನ್ನು ಇನ್ನಷ್ಟು…

Read More

ಶಾಸಕರ ಮನವಿಗೆ ಸ್ಪಂದಿಸಿದ ತಿಕೋಟಾ ಜಾತ್ರೆ ಸಂಘಟಕರು | ಮುಂದೆ ರೇಸ್ ಆಯೋಜಿಸುವುದಿಲ್ಲ ಎಂದು ಪ್ರಕಟಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಾತ್ರೆಗಳನ್ನು ವಿಜೃಂಭಣೆಯಿಂದ ಆಚರಿಸಬೇಕು. ಆದರೆ, ರೈತರು ಬಸವಣ್ಣ ಎಂದು ಪೂಜಿಸುವ ಎತ್ತುಗಳಿಗೆ ನೋವುಂಟು ಮಾಡುವ ಓಟಗಳನ್ನು ಆಯೋಜನೆಯನ್ನು ತಡೆಯಬೇಕು ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಮನವಿ ಮಾಡಿದ್ದಾರೆ.ಈ ಮನವಿಗೆ ಸ್ಪಂದಿಸಿದ ತಿಕೋಟಾ ಜಾತ್ರೆ ಸಂಘಟಕರು ಇನ್ನು ಮುಂದೆ ಎತ್ತಿನ ಗಾಡಿಗಳ ರೇಸ್ ಆಯೋಜಿಸುವುದಿಲ್ಲ ಎಂದು ಪ್ರಕಟಿಸುವ ಮೂಲಕ ಶಾಸಕರ ಕರೆಗೆ ಒಪ್ಪಿಗೆ ಸೂಚಿಸಿದ್ದಾರೆ.ಬುಧವಾರ ತಿಕೋಟಾ ಪಟ್ಟಣದಲ್ಲಿ ನಡೆಯುತ್ತಿರುವ ಶ್ರೀ ಲಕ್ಷ್ಮಿದೇವಿ ಮತ್ತು ಶ್ರೀ ದಾನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡು ಶಾಸಕರು ಮಾತನಾಡಿದರು.ತಿಕೋಟಾ ಜನತೆ ಜಾತ್ರೆಗಳನ್ನು ಶ್ರದ್ಧಾ ಭಕ್ತಿ, ವಿಜೃಂಭಣೆ ಮತ್ತು ಸಾಮರಸ್ಯದಿಂದ ಆಚರಿಸುತ್ತಾರೆ. ರೈತರು ಸಾಕುಪ್ರಾಣಿಗಳನ್ನು ಕುಟುಂಬ ಸದಸ್ಯರಂತೆ ಕಾಣುತ್ತೇವೆ. ಅಲ್ಲದೇ, ಎತ್ತುಗಳನ್ನು ಬಸವಣ್ಣನವರ ಪ್ರತಿರೂಪ ಎಂದು ಪೂಜಿಸುತ್ತೇವೆ. ಮತ್ತೋಂದೆಡೆ ರೇಸ್ ಆಯೋಜಿಸುವ ಮೂಲಕ ಈ ಮೂಕ ಪ್ರಾಣಿಗಳಿಗೆ ನೋವು ಉಂಟ ಮಾಡಲಾಗುತ್ತದೆ. ಅವುಗಳ ಮೂಕರೋಧನೆ ಅರ್ಥ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಮ್ಮದ್ ನಜೀರ್‌ವರಿಗೆ ಬಿಜಾಪುರ ನಗರದ ಹೊಸ ಐಬಿ ಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಅಭಿವೃದ್ಧಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಎಂ.ಎಂ.ಡಿ.ಸಿ ಮುಖಂಡರಾದ ಜೈನುಲ್ ಆಬಿದಿನ್ ಪಿರಜಾದೆ ರವರು ಮಾತನಾಡಿ, ಬಿಜಾಪುರ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಸಮುದಾಯದ ಸಂಖ್ಯೆ ಹೆಚ್ಚಿರುವುದನ್ನು ಗಮನಿಸಿ, ಮುಂದಿನ ಬಜೆಟ್‌ನಲ್ಲಿ ಜಿಲ್ಲೆಯಗ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಿಸಲು ವಿನಂತಿಸಲಾಯಿತು. ಈ ಮೂಲಕ ಶಿಕ್ಷಣ, ಉದ್ಯೋಗ, ಸಾಮಾಜಿಕ ಕಲ್ಯಾಣ, ಮತ್ತು ಆರ್ಥಿಕ ಅಭಿವೃದ್ಧಿ ಕ್ಷೇತ್ರಗಳಲ್ಲಿ ಹೆಚ್ಚಿನ ಹೂಡಿಕೆಯನ್ನು ಮಾಡುವ ಅಗತ್ಯವನ್ನು ಮಂಡಿಸಲಾಯಿತು.ನಿಗಮದ ಎಂ.ಡಿ. ಮಹಮ್ಮದ್ ನಜೀರ್ ಅವರು ಮಾತನಾಡಿ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಿಗಮದ ಬದ್ಧತೆಯನ್ನು ಪುನರುಚ್ಚರಿಸಿದರು. ಹಾಗೂ ಬಿಜಾಪುರ ಜಿಲ್ಲೆಯ ಬೇಡಿಕೆಗಳಿಗೆ ಗಮನಕೊಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬಿಜಾಪುರ ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದ ಜಿಲ್ಲಾ ಮಟ್ಟದ ಮುಖಂಡರು, ಬಿಜಾಪುರ ಜಿಲ್ಲಾ ವಕ್ಫ ಮಂಡಳಿಯ ಜಿಲ್ಲಾಧ್ಯಕ್ಷರಾದ ಕೌಸರ್ ನಿಯಾಝ್ ಅತ್ತಾರ, ಮುಖಂಡರಾದ ಪಿರ್ ಪಟೇಲ್, ಎಂ.ಎಂ.ಡಿ.ಸಿ ಮುಖಂಡರುಗಳಾದ ಇಖಲಾಸ್…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಭಗವದ್ಗೀತಾ ಅಭಿಯಾನದ ರಾಜ್ಯ ಮಟ್ಟದ ಸ್ಪರ್ದೆ ಡಿ.೧೩ ರಂದು ಬೆ.೧೦:೩೦ ಕ್ಕೆ ವಿಜಯಪುರದ ದರ್ಗಾಜೈಲಿನ ಬಳಿ ಇರುವ ವಿದ್ಯಾ ಭಾರತಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ.ಜಿಲ್ಲಾ ಮಟ್ಟದಲ್ಲಿ ಪ್ರಥಮ ಮತ್ತು ದ್ವಿತಿಯ ಸ್ಥಾನ ಪಡೆದ ವಿದ್ಯಾರ್ಥಿಗಳು ಈ ಸ್ಫರ್ದೆಯಲ್ಲಿ ಭಾಗವಹಿಸಲು ಅರ್ಹರಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀರಾಮ ಭಟ್ಟ- ಮೊ: ೮೧೪೭೯೦೫೦೦೫, ಗುರು ಕುಲಕರ್ಣಿ- ಮೊ: ೯೩೭೯೫೭೩೭೩೮ ಇವರನ್ನು ಸಂಪರ್ಕಿಸಬಹುದು ಎಂದು ಅಭಿಯಾನದ ತಾಲೂಕು ಸಂಚಾಲಕ ರಾಮಚಂದ್ರ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ ಲೇಖನ- ವಿವೇಕಾನಂದ. ಎಚ್. ಕೆ.ಬೆಂಗಳೂರು, ಮೊ:9844013068 ಉದಯರಶ್ಮಿ ದಿನಪತ್ರಿಕೆ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಇರಬೇಕಾದ ಆಹಾರದ ವಿಷಯವಾಗಿ ಒಂದಷ್ಟು ಚರ್ಚೆಗಳು ನಡೆಯುತ್ತಿದೆ..ಹಿಂದು – ಮುಸ್ಲಿಂ,ಆರ್ಯ – ದ್ರಾವಿಡ,ದಲಿತ – ಬ್ರಾಹ್ಮಣ,ಹಿಂದಿ – ಕನ್ನಡ,ಎಡಪಂಥೀಯ – ಬಲಪಂಥೀಯ,ಬಿಜೆಪಿ‌ – ಕಾಂಗ್ರೆಸ್,ಉತ್ತರ ಭಾರತ – ದಕ್ಷಿಣ ಭಾರತ,ಆಸ್ತಿಕ – ನಾಸ್ತಿಕ,ಸಂಪ್ರದಾಯ – ವೈಚಾರಿಕತೆ,ಮೂಡನಂಬಿಕೆ – ವೈಜ್ಞಾನಿಕತೆ..ಹೀಗೆ ವಿಭಜನೆಯಾಗಿರುವ ಭಾರತದ ಸಾಮಾಜಿಕ, ರಾಜಕೀಯ ವ್ಯವಸ್ಥೆಯ ಮುಂದುವರಿದ ಭಾಗವಾಗಿ ಈ ವಿವಾದವನ್ನು ನೋಡಬೇಕಾಗುತ್ತದೆ. ಏಕೆಂದರೆ ಈ ವಿವಾದ ದಿಢೀರನೆ ಉದ್ಭವಿಸಿಲ್ಲ. ಶತಮಾನಗಳ ಒತ್ತಡದ ಮನಸ್ಥಿತಿ ಹೀಗೆ ಆಗಾಗ ಸ್ಪೋಟಿಸುತ್ತದೆ.ಒಂದು ವರ್ಗ ಸಸ್ಯಹಾರವೇ ಶ್ರೇಷ್ಠ ಎನ್ನುತ್ತಾ ಇಡೀ ಸಂಪ್ರದಾಯಗಳನ್ನೇ ತನ್ನ ಹಿಡಿತದಲ್ಲಿಟ್ಟುಕೊಂಡು, ಈಗಲೂ ಮುಂದುವರಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ, ಜಾಗೃತ ಮನಸ್ಥಿತಿಯ, ವೈಚಾರಿಕ ಪ್ರಜ್ಞೆಯ ಮತ್ತೊಂದು ವರ್ಗ ಅದರ ವಿರುದ್ಧ ಮಾಂಸಾಹಾರ ಕೂಡ ಅತ್ಯಂತ ಸಹಜ, ಪ್ರಾಕೃತಿಕ ಆಹಾರ. ಇದನ್ನು ಶೋಷಣೆಯ ಮಾರ್ಗವಾಗಿ ಇಲ್ಲಿಯೂ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಅದರ ವಿರುದ್ಧ ತಿರುಗಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಾಡಿನ ಅಭಿವೃದ್ಧಿಯಲ್ಲಿ ಎಸ್.ಎಮ್.ಕೃಷ್ಣ ಅವರು ಪಾತ್ರ ಮಹತ್ವದ್ದಾಗಿದೆ. ಮಾದರಿಯ ರಾಜಕರಣ ಮಾಡಿದ ಧೀಮಂತ ನಾಯಕ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ಬ್ಲಾಕ್ ಕಾಂಗ್ರೇಸ್ ಕಾರ್ಯಾಲಯದಲ್ಲಿ ಮಾಜಿ ಸಿಎಂ, ಮಾಜಿ ಕೇಂದ್ರ ಸಚಿವ ಎಸ್.ಎಮ್.ಕೃಷ್ಣ ನಿಧನದ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸಿ ಮಾತನಾಡಿದರು.ಸರಕಾರ ಆರ್ಥಿಕ ಅವಲಂಬನೆ ಹೆಚ್ಚಿಗಿರೋಕೆ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಯೇ ಕಾರಣ. ಕರ್ನಾಟಕ ಕಂಡಂತಹ ಅತ್ಯಂತ ಧೀಮಂತ ಹಿರಿಯ ರಾಜಕಾರಣಿ, ಸ್ವಾತಂತ್ರö್ಯ ಪೂರ್ವದ ತಲೆಮಾರು. ರಾಜ್ಯ ಮತ್ತು ರಾಷ್ಟç ಮಟ್ಟದಲ್ಲಿ ಆಡಳಿತಾತ್ಮಕ ಹುದ್ದೆ ಅಲಂಕರಿಸಿದ್ದ ನಮ್ಮ ಕನ್ನಡದ ಹೆಮ್ಮೆಯ ಕೃಷ್ಣಾಜಿ ಅವರ ನಿಧನದ ಸುದ್ದಿ ಕೇಳಿ ಅತ್ಯಂತ ದುಃಖ ಹಾಗೂ ದಿಗಭ್ರಮೆಯಾಗಿದೆ ಎಂದು ತೀವ್ರ ಸಂತಾಪ ಸೂಚಿಸಿದರು.ಈ ವೇಳೆ ಮಾಜಿ ಶಾಸಕ ಶರಣಪ್ಪ ಸುಣಗಾರ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುರೇಶ ಪೂಜಾರಿ, ಪುರಸಭೆ ಸದಸ್ಯ ಹಾಸೀಂಪಿರ ಆಳಂದ, ಜಿಲ್ಲಾ ಕೆಡಿಪಿ ಸದಸ್ಯ ನೂರಅಹ್ಮದ ಅತ್ತಾರ, ಪುರಸಭೆ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ, ಪುರಸಭೆ ನಾಮನಿರ್ದೇಶಿತ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಉತ್ತರ ಕರ್ನಾಟಕ ಭಾಗದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ಕ್ರಷ್ಣಾ ಮೇಲ್ದಂಡೆ ಯೋಜನೆ ಹತ್ತು, ಹಲವು ಸವಾಲುಗಳ ನಡುವೆ ದಶಕಗಳಿಂದ ಕುಂಟುತ್ತಾ ಸಾಗಿದ್ದು, ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಿ ಯೋಜನೆ ಪೂರ್ಣಗೊಳಿಸಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಎಸ್.ಬಿ.ಪಾಟೀಲ ಗುಂದಗಿ ಹೇಳಿದರು.ಪಟ್ಟಣದ ಆಡಳಿತ ಸೌಧದ ಮುಂಭಾಗದಲ್ಲಿ ಸಿಂದಗಿ ವಕೀಲರ ಸಂಘದ ವತಿಯಿಂದ ಆಲಮಟ್ಟಿ ಆಣೆಕಟ್ಟು ಮೇಲೆತ್ತರಕ್ಕೆರಿಸುವಂತೆ ಒತ್ತಾಯಿಸಿ ಪ್ರತಿಭಟಿಸಿ ರಾಜ್ಯಪಾಲರಿಗೆ ಗ್ರೇಡ್-೨ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಗೆ ರೂ.೪೦ ಸಾವಿರ ಕೋಟಿ ಅನುದಾನ ನೀಡುವುದಾಗಿ ಹೇಳಿದ್ದ ಕಾಂಗ್ರೆಸ್ ಸರಕಾರ ಇಲ್ಲಿಯವರೆಗೂ ಅನುದಾನ ನೀಡಿಲ್ಲ. ಯೋಜನೆಯ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿಕೊಂಡು ಬರುತ್ತಿದೆ. ಕೂಡಲೇ ಯೋಜನೆ ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಎಂದು ಒತ್ತಾಯಿಸಿದ್ದಾರೆ.ಈ ವೇಳೆ ನ್ಯಾಯವಾದಿ ದಾನಪ್ಪಗೌಡ ಚನಗೊಂಡ ಮಾತನಾಡಿ, ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವಂತೆ ಸರಕಾರಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ. ಆಲಮಟ್ಟಿ ಆಣೆಕಟ್ಟು ಎತ್ತರವನ್ನು ಹೆಚ್ಚಿಸದರೆ ಹೆಚ್ಚುವರಿ ನೀರು…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಾ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಬಿ ಯಡ್ರಾಮಿ ಅವರು ಮಂಗಳವಾರ ಪರಿಷತ್ತಿನ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ , ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಐ ಎಸ್ ಟಕ್ಕೆ, ಶಿಕ್ಷಣ ಸಂಯೋಜಕ ಎಂ ಪಿ.ಭಿಸೆ, ಮುಖ್ಯ ಗುರು ಎಸ್ ಬಿ ಪಡಶೆಟ್ಟಿ, ಡಿ ಎಮ್ ಮಾವೂರ, ರವಿ ಹೊಸಮನಿ, ಗಿರೀಶ ಗತಾಟೆ, ಡಾ ಸಮೀರ ಹಾದಿಮನಿ, ಶೈಲಶ್ರೀ ಯಡ್ರಾಮಿ, ಸಿ ಆರ್ ಪಿ ಗಳಾದ ಡಿ ಡಿ ಮುಲ್ಲಾ, ನಂದಿಕೋಲ, ಮರ್ತೂರ ಮುಂತಾದವರು ಉಪಸ್ಥಿತರಿದ್ದರು.

Read More

ಸಜ್ಜನ ರಾಜಕಾರಣಿ’ ಎಂದು ಪಕ್ಷಾತೀತವಾಗಿ ಶ್ಲಾಘಿಸಿದ ನಾಯಕರು ಬೆಳಗಾವಿ: ಕರ್ನಾಟಕ ವಿಧಾನಸಭೆ ಮಂಗಳವಾರ ನಿಧನರಾದ ಮಾಜಿ ಮುಖ್ಯಮಂತ್ರಿ ಮತ್ತು ವಿದೇಶಾಂಗ ಸಚಿವ ಎಸ್‌ಎಂ ಕೃಷ್ಣ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು, ಅಗಲಿದ ನಾಯಕ “ಸಜ್ಜನ ರಾಜಕಾರಣಿ”, ಬೆಂಗಳೂರನ್ನು ಐಟಿ ಹಬ್ ಮಾಡುವಲ್ಲಿ ಅವರ ಕೊಡುಗೆ ಅಪಾರ ಎಂದು ಎಂದು ನಾಯಕರು ಶ್ಲಾಘಿಸಿದರು.ಕೃಷ್ಣ ಅವರ ಡ್ರೆಸ್ಸಿಂಗ್ ಸೆನ್ಸ್, ಭಾಷೆಯ ಮೇಲಿನ ಹಿಡಿತ, ಟೆನಿಸ್ ಆಟದ ಮೇಲಿನ ಪ್ರೀತಿ ಬಗ್ಗೆಯೂ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದರು.ಮಂಗಳವಾರ ಬೆಳಗಿನ ಜಾವ ತಮ್ಮ ನಿವಾಸದಲ್ಲಿ ನಿಧನರಾದ 92 ವರ್ಷ ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರು ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರುಸದನ ಆರಂಭವಾಗುದ್ದಂತೆ, ಸ್ಪೀಕರ್ ಯು ಟಿ ಖಾದರ್ ಅವರು ಸಂತಾಪ ಸೂಚಿಸಿ ಕೃಷ್ಣ ಅವರನ್ನು ಧೀಮಂತ ವ್ಯಕ್ತಿ ಎಂದು ಬಣ್ಣಿಸಿದರು.ಕೃಷ್ಣ ಅವರು ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ, ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭೆ ಮತ್ತು ರಾಜ್ಯಸಭೆ – ಎಲ್ಲಾ ನಾಲ್ಕು ಸದನಗಳ ಸದಸ್ಯರಾಗಿ ಸೇವೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ನ್ಯಾಯಾಂಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ಅವರು ಡಿ.೧೪ ಹಾಗೂ ೧೫ ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.ಡಿ.೧೫ ರಂದು ಬೆಳಿಗ್ಗೆ ೧೦-೩೦ಕ್ಕೆ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More