ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲೂಕಾ ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಂ ಬಿ ಯಡ್ರಾಮಿ ಅವರು ಮಂಗಳವಾರ ಪರಿಷತ್ತಿನ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ , ಗೌರವ ಕಾರ್ಯದರ್ಶಿ ಶ್ರೀಶೈಲ ಮಠಪತಿ, ಕ್ಷೇತ್ರ ಸಮನ್ವಯಾಧಿಕಾರಿಗಳಾದ ಐ ಎಸ್ ಟಕ್ಕೆ, ಶಿಕ್ಷಣ ಸಂಯೋಜಕ ಎಂ ಪಿ.ಭಿಸೆ, ಮುಖ್ಯ ಗುರು ಎಸ್ ಬಿ ಪಡಶೆಟ್ಟಿ, ಡಿ ಎಮ್ ಮಾವೂರ, ರವಿ ಹೊಸಮನಿ, ಗಿರೀಶ ಗತಾಟೆ, ಡಾ ಸಮೀರ ಹಾದಿಮನಿ, ಶೈಲಶ್ರೀ ಯಡ್ರಾಮಿ, ಸಿ ಆರ್ ಪಿ ಗಳಾದ ಡಿ ಡಿ ಮುಲ್ಲಾ, ನಂದಿಕೋಲ, ಮರ್ತೂರ ಮುಂತಾದವರು ಉಪಸ್ಥಿತರಿದ್ದರು.

