Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೃಷಿ ಮಹಾವಿದ್ಯಾಲಯ ವಿಜಯಪುರದಲ್ಲಿ ಖಾಲಿ ಇರುವ 2 ಗ್ರಂಥಾಲಯ ಸಹಾಯಕರ ತಾತ್ಕಾಲಿಕ ಹುದ್ದೆಗೆ ಡಿಸೆಂಬರ್ 22ರಂದು ನಡೆಯಬೇಕಾಗಿದ್ದ ಸಂದರ್ಶನವನ್ನು ಡಿಸೆಂಬರ್ 24ರಂದು ಬೆಳಿಗ್ಗೆ 11 ಗಂಟೆಗೆ ವಿಜಯಪುರ ಕೃಷಿ ಮಹಾವಿದ್ಯಾಲಯದ ಸಂದರ್ಶನ ಕೊಠಡಿಯಲ್ಲಿ ನಡೆಯಲಿದೆ. ಗ್ರಂಥಾಲಯ ವಿಜ್ಞಾನದಲ್ಲಿ ಪದವಿ ಪಡೆದ ಆಸಕ್ತ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಹಾಜರಾಗಬಹುದಾಗಿದೆ ಎಂದು ವಿಜಯಪುರ ಕೃಷಿ ಮಹಾವಿದ್ಯಾಲಯದ ಪ್ರಕಟಣೆ ತಿಳಿಸಿದೆ.

Read More

ಗಾಂಧಿ ಚಿಂತನೆಗಳು ಮತ್ತು ಪ್ರಸ್ತುತ ಭಾರತ ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ, ಡಾ.ಫ.ಗು.ಹಳಕಟ್ಟಿ ಸ್ನಾತಕೋತ್ತರ ಕೇಂದ್ರ ವಚನಸಂಗಮ ತೊರವಿ, ವಿಜಯಪುರ ಇವರ ಸಂಯುಕ್ತಾಯಶ್ರದಲ್ಲಿ ಗಾಂಧೀಜಿಯವರ ಬೆಳಗಾವಿ ಭೇಟಿಯ ಶತಮಾನೋತ್ಸವ ವರ್ಷಾಚರಣೆ ಅಂಗವಾಗಿ ಗಾಂಧಿ ವಿಚಾರಧಾರೆಗಳ ಕುರಿತು ಡಿ.13 ರಂದು ಸ್ನಾತಕೋತ್ತರ ಕೇಂದ್ರದ ಸಭಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಗುಂಪು ಚರ್ಚೆ ಹಮ್ಮಿಕೊಳ್ಳಲಾಗಿದೆ.ಅಂದು ಮಧ್ಯಾಹ್ನ 3 ಗಂಟೆಯುವ ಕಾರ್ಯಕ್ರಮಕ್ಕೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನಿರ್ದೇಶಕರಾದ ಪ್ರೊ: ಎಸ್.ಎಂ.ಗಂಗಾಧರಯ್ಯ ಅಧ್ಯಕ್ಷತೆ ವಹಿಸಲಿದಾರೆ. ಗಾಂಧಿವಾದಿಗಳಾದ ಆನಂದ ಕೃಷ್ಣಾ ಮೆಣಸೆ ಸಂಪನ್ಮೂಲ ವ್ಯಕ್ತಿಗಳಾಗಿ ಹಾಗೂ ಸಿಂಡಿಕೇಟ್ ಸದಸ್ಯರಾದ ರಫೀಕ್ ಭಂಡಾರಿ, ಗಾಂಧಿವಾಧಿ ಅಪ್ಪಾಸಾಹೇಬ ಯರನಾಳ ಅವರು ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಕರ್ನಾಟಕ ಎಂದು ಹೆಸರಾಗಿ 50 ವರ್ಷ ಪೂರೈಸಿದ ಸವಿ ನೆನಪಿಗಾಗಿ ಹೆಸರಾಯಿತು ಕರ್ನಾಟಕ ಕನ್ನಡದ ಏಕೀಕರಣದ ಇತಿಹಾಸ ಪರಿಚಸುವ ಪುಸ್ತಕ ಹೊರತರುತಿದ್ದೇವೆ ಈ ಪುಸ್ತಕಕ್ಕೆ ಈ ಕೆಳಗಿನ ವಿಷಯ ಆಯ್ಕೆ ಮಾಡಿಕೊಂಡು ಲೇಖನಗಳನ್ನು ಬರೆದು ಕಳಿಸಬಹುದು.ವಿಷಯ:

Read More

’ಜಯ್ ನುಡಿ’ (ವ್ಯಕ್ತಿತ್ವ ವಿಕಸನ ಲೇಖನ ಮಾಲಿಕೆ) ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಉಪನ್ಯಾಸಕರು, ಬೆಳಗಾವಿ ಮೊ:೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಏನೇನೋ ಮಾಡುವ ಮನಸ್ಸು ಇದ್ದರೂ ದೈನಂದಿನ ಜೀವನದಲ್ಲಿ ಒಂದು ತೀವ್ರತರವಾದ ಅಸಮಾಧಾನ. ನಿರುತ್ಸಾಹ, ನಿಸ್ತೇಜ, ನಿಸ್ಸಾರ ಬೆಂಬಿಡದೇ ಕಾಡಿಸುತ್ತದೆ. ಇದು ನಮಗೆಲ್ಲರಿಗೂ ಒಂದಿಲ್ಲೊಂದು ಸಲ ಆಗುವ ಅನುಭವವೇ ಆಗಿದೆ. ಕೆಲವೊಮ್ಮೆ ಒಬ್ಬರೇ ಕುಳಿತು ಯೋಚನೆ ಮಾಡುವ ಪ್ರಸಂಗ ಬಂದಾಗ ಈ ನಿರುತ್ಸಾಹ ನನ್ನ ಸುಂದರ ಬದುಕನ್ನು ಹಾಳುಗೆಡುವುತ್ತಿದೆ ಎಂದೆನಿಸದೇ ಇರದು. ಬದುಕಿನ ಪಯಣದಲ್ಲಿ ನಿರುತ್ಸಾಹದ ನಿಲ್ದಾಣವು ಏಕಾದರೂ ಬರುತ್ತದೆಯೋ ಎಂದು ಹಲಬುತ್ತೇವೆ. ನಿರುತ್ಸಾಹ ಒಮ್ಮೆ ಪಾಯ ತೋಡಿದರೆ ಸಾಕು ಅದೇ ಅರಸ. ನಾವು ಗುಲಾಮರು. ಮುಸ್ಸಂಜೆ ಬಾನಂಚಿನಲ್ಲಿ ಮೂಡಿದ ಮಳೆಬಿಲ್ಲು ಕಂಡರೂ ಮಂಕು ಕಣ್ಣಿಗೆ. ಹೊಸದಾಗಿ ಅರಳಿದ ಹೂಗಳ ಹಿತವಾದ ಸುವಾಸನೆಗೂ ನಿರಾಸಕ್ತಿ. ನಿರುತ್ಸಾಹದ ನದಿ ಸರಾಗವಾಗಿ ಹರಿದುಕೊಂಡು ಹೋಗುತ್ತದೆ. ಅದು ಒಂದು ತರಹ ಜೀವಚ್ಛವದ ಹಾಗೆ. ಆಕಾಶದ ಉದ್ದಗಲ ಹಾರುವ ಹಕ್ಕಿ ಆಗಬೇಕು ಎಂದು ಕನಸು ಕಾಣುವ ಕಂಗಳಿಗೆ ನಿರುತ್ಸಾಹ ನಕ್ಷತ್ರಕನಂತೆ…

Read More

ಸಾವಿಲ್ಲದ ಶರಣರು ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಶ್ರೀ ಶಿರಡಿ ಸಾಯಿಬಾಬಾ ಒಬ್ಬ ಶ್ರೇಷ್ಠ ಅಜ್ಞಾತ ಸಾಧಕ ತಪಸ್ವಿ ಕೇವಲ ಮಹಾರಾಷ್ಟ್ರವಲ್ಲ ಇಡೀ ಭಾರತ ಜಗತ್ತನ್ನು ವ್ಯಾಪಿಸಿದ ಅವರ ಭಕ್ತ ಸಂಕುಲವು ಶಿರಡಿಯನ್ನು ಒಂದು ಆಧ್ಯಾತ್ಮಿಕ ಕ್ಷೇತ್ರವಾಬ್ಬಾಗಿ ಮಾಡಿದೆ.ಶಿರಡಿ ಸಾಯಿ ಬಾಬಾ (ಅಜ್ಞಾತ – ೧೫ ಅಕ್ಟೋಬರ್ ೧೯೧೮) ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ, ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು ಮತ್ತು ತಮ್ಮ ಜೀವನದ ಅವಧಿಯಲ್ಲಿ ಹಾಗು ನಂತರ ಅವರು ಮುಸ್ಲಿಮ್ ಅಥವಾ ಹಿಂದೂಗಳೇ ಎಂಬುದು ಅನಿಶ್ಚಿತವಾಗಿಯೇ ಉಳಿಯಿತು.ಆಧ್ಯಾತ್ಮಿಕ ಸಾಧಕ ಯಾವುದೇ ವ್ಯಕ್ತಿಯಾದರು ಸರಿ ಜನಿಸಿದ ಮೇಲೆ ತನ್ನನು ತಾನು ಗುರುವಿಗೆ ಸಮರ್ಪಿಸಿಕೊಳ್ಳದಿದ್ದರೆ/ಶರಣಾಗತನಾಗದಿದ್ದರೆ ಆತನಿಗೆ ಮುಕ್ತಿ ಹಾಗು ಜೀವನದ ಏಳಿಗೆಗಳೇ ಇರುವುದಿಲ್ಲ ಎಂಬ ಅಂಶವನ್ನು ಶಿರಡಿ ಸಾಯಿಬಾಬಾ ಬಲವಾಗಿ ನಂಬಿದ್ದರು…

Read More

ಉದಯರಶ್ಮಿ ದಿನಪತ್ರಿಕೆ ಯಡ್ರಾಮಿ: ಯಡ್ರಾಮಿ ತಾಲೂಕಿನ ನಾಗರಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ಮೇಲಾದ ಲಾಠಿ ಚಾರ್ಜ್ ವಿರೋಧಿಸಿ ಶಹಾಪುರ ಸಿಂದಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಗುರುವಾರ ಪ್ರತಿಭಟನೆ ಮಾಡಲಾಯಿತು .ಈ ವೇಳೆ, ಪಂಚಮಸಾಲಿ ಕಲಬುರಗಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಕುಳಗೇರಿ ಮಾತನಾಡಿ, ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಮಹಾಪೀಠದ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಆಗ್ರಹಿಸಿದ ಲಿಂಗಾಯತ ಪಂಚಮಸಾಲಿ ಸಮುದಾಯದ 2- ಎ ಮೀಸಲಾತಿ ಹೋರಾಟವನ್ನು ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನೆ ನಿಯಂತ್ರಿಸಲು ದುರುದ್ದೇಶದಿಂದ ಲಾಠಿಚಾರ್ಜ್ ನೆಪದಲ್ಲಿ ಸಮಾಜ ಬಾಂಧವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಸರ್ಕಾರದ ಕ್ರಮ ಅತ್ಯಂತ ಹೀನ ಕೃತ್ಯವಾಗಿದೆ . ಪ್ರತಿಯೊಬ್ಬರಿಗೂ ಅನ್ಯಾಯದ ವಿರುದ್ಧ ಹೋರಾಟ ಮಾಡುವ ಸ್ವಾತಂತ್ರ್ಯ ಇದೆ. ಆದರೆ ಸರ್ಕಾರಕ್ಕೆ ಹೋರಾಟದ ಬಿಸಿ ಅರಗಿಸಿಕೊಳ್ಳಲು ಆಗದೇ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ರಾಣಿ ಚನ್ನಮ್ಮ ವೃತ್ತದಲ್ಲಿ ತಾಲೂಕಿನ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಗುರುವಾರ ಜಮಾಯಿಸಿ ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರ ಮೇಲೆ ನಡೆದ ಲಾಠಿ ಜಾರ್ಜ ಖಂಡಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಬಸವೇಶ್ವರ ವೃತ್ತದವರೆಗೂ ಮೆರವಣಿಗೆ ಮೂಲಕ ಆಗಮಿಸಿದ ನಂತರ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಅರ್ಧ ಗಂಟೆ ಕಾಲಕ್ಕೂ ಹೆಚ್ಚು ರಸ್ತೆ ತಡೆದು ಟೈಯರ್ಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರಿಗೆ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.ಪ್ರತಿಭಟನೆ ಉದ್ದೇಶಿಸಿ ಲಿಂಗಾಯತ ಪಂಚಮಸಾಲಿ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಂಕರಗೌಡ ಬಿರಾದಾರ ಮಾತನಾಡಿ, ಬೆಳಗಾವಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜ ಬಾಂಧವರು ಮೀಸಲಾತಿಗಾಗಿ ಹೋರಾಟ ಮಾಡುವ ಸಂದರ್ಭದಲ್ಲಿ ಪೊಲೀಸರು ಲಾಠಿ ಪ್ರಹಾರ ಮಾಡಿದರುವದು ಅನ್ನದಾತರಿಗೆ ಮಾಡಿರುವ ಹಲ್ಲೆಯಾಗಿದೆ. ಇದು ನಮ್ಮ ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ. ನಮ್ಮ ಬಾಂಧವರು ಸಮಾಜದ ಬಡ ವಿದ್ಯಾರ್ಥಿಗಳ ಶಿಕ್ಷಣ, ಉದ್ಯೋಗಕ್ಕಾಗಿ ಮೀಸಲಾತಿಗಾಗಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ಅಖಂಡ ೧೮೮ ದಿನದ ಹೋರಾಟದ ಫಲವಾಗಿ ಬಸವನಬಾಗೇವಾಡಿ ವಿದ್ಯುತ್ ವಿಭಾಗೀಯ ಕಚೇರಿ ದಿ.12.12.2012 ರಂದು ಆದೇಶ ಸಿಕ್ಕಿತು. ಇದರಿಂದಾಗಿ 297 ಗ್ರಾಮಗಳ ಜನರು ವಿಜಯಪುರಕ್ಕೆ ಹೋಗಿ ಬರುವುದನ್ನು ತಪ್ಪಿಸಿದಂತಾಗಿದೆ. ಇಂದಿಗೆ ಈ ಕಚೇರಿಯು ಹತ್ತು ವರ್ಷದ ಹಿಂದೆ ಆದೇಶದೊಂದಿಗೆ ಆರಂಭವಾಗಿ ಇಂದಿಗೆ ಹನ್ನೊಂದು ವರ್ಷಕ್ಕೆ ಕಾಲಿಡುತ್ತಿದ್ದರೂ ಜನರಿಗೆ ಈ ಕಚೇರಿಯ ಸೌಲಭ್ಯಗಳು ಸರಿಯಾಗಿ ಜನರಿಗೆ ಸಿಗುತ್ತಿಲ್ಲ ಎಂದು ರೈತಪರ, ಜನಪರ ಸಾಮಾಜಿಕ ಹೋರಾಟಗಾರ ಮಲ್ಲಿಕಾರ್ಜುನ ಕೆಂಗನಾಳ ಹೇಳಿದರು.ಗುರುವಾರ ದೂರವಾಣಿ ಮೂಲಕ ಮಾತನಾಡಿದ ಅವರು, ಪಟ್ಟಣದಲ್ಲಿ ವಿದ್ಯುತ್ ವಿಭಾಗೀಯ ಕಚೇರಿ ಇಲ್ಲದ ಪರಿಣಾಮವಾಗಿ ಜನರು ಜಿಲ್ಲಾ ಕೇಂದ್ರ ವಿಜಯಪುರಕ್ಕೆ ತಮ್ಮ ಕೆಲಸಗಳಿಗಾಗಿ ಅಲೆದಾಡುವ ಪರಿಸ್ಥಿತಿಯಿತ್ತು. ಅಲ್ಲದೇ ದೂರದ ತಾಳಿಕೋಟಿ, ಮುದ್ದೇಬಿಹಾಳ, ನಿಡಗುಂದಿ, ಕೊಲ್ಹಾರ ತಾಲೂಕಿನ ಸೇರಿದಂತೆ ಇದರ ವ್ಯಾಪ್ತಿಯಲ್ಲಿ ಬರುವ ಗ್ರಾಮದ ಜನರು ವಿದ್ಯುತ್ ಕೆಲಸಗಳಿಗಾಗಿ ವಿಜಯಪುರದಲ್ಲಿರುವ ವಿಭಾಗೀಯ ಕಚೇರಿಗೆ ಹೋಗುವ ಪರಿಸ್ಥಿತಿಯಿತ್ತು. ಜನರ ಅಲೆದಾಡುವದನ್ನು ಮನಗಂಡು ಅವರ ಕೆಲಸಗಳು ಸುಲಭವಾಗಿ ಬೇಗನೇ ಆಗುವ ಉದ್ದೇಶದಿಂದ ಹೆಸ್ಕಾಂ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಗ್ರಂಥಾಲಯಗಳು ಜ್ಞಾನದ ಹೆಬ್ಬಾಗಿಲುಗಳಾಗಿವೆ. ಪ್ರತಿಯೊಬ್ಬರೂ ಗ್ರಂಥಾಲಯಗಳ ಲಾಭವನ್ನು ಪಡೆದುಕೊಳ್ಳಬೇಕೆಂದು ಎಂದು ವಿಜಯಪುರದ ಡಾ.ಫ.ಗು.ಹಳಕಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಗ್ರಂಥಪಾಲಕ ಡಾ.ಎಂ.ಎಂ.ಬಾಚಲಾಪೂರ ಹೇಳಿದರು.ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು,ಪ್ರಸ್ತುತ ಸಮಾಜದಲ್ಲಿ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಿದರೂ ವಿದ್ಯಾರ್ಥಿಗಳಲ್ಲಿ ಜ್ಞಾನದ ಮಟ್ಟ ಏರುಗತಿಯಲ್ಲಿ ಕಂಡುಬರುತ್ತಿಲ್ಲ. ಹತ್ತು ಹದಿನೈದು ವರ್ಷಗಳ ಹಿಂದೆ ಹಳ್ಳಿಗಳಲ್ಲಿನ ಗ್ರಂಥಾಲಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಓದುಗರು ಸಿಗುತ್ತಿದ್ದರು. ಆದರೆ ಇಂದು ಓದುವ ಹವ್ಯಾಸ ಕಡಿಮೆಯಾಗುತ್ತಿದಯೇ ಎಂಬ ಪ್ರಶ್ನೆ ಮೂಡುವಂತಾಗಿದೆ. ನಿರಂತರ ಓದುವಿಕೆಯನ್ನು ಇಟ್ಟುಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್, ಇಂದಿನ ರಾಜ್ಯಸಭೆ ಸದಸ್ಯೆ ಡಾ.ಸುಧಾಮೂರ್ತಿ ಅವರಂತಹ ವ್ಯಕ್ತಿಗಳು ನಮಗೆ ಆದರ್ಶವಾಗಬೇಕಿದೆ ಎಂದರು.ಪ್ರಪಂಚದಲ್ಲಿಯೇ ಭಾರತವು ಒಂದು ತುಂಬಾ ವಿಶಿಷ್ಠ ದೇಶವಾಗಿದೆ. ನಾಗರಿಕತೆಗಳು ಕಣ್ಣು ಬಿಡುವದಕ್ಕಿಂತ ಮುನ್ನವೇ ದೇಶದಲ್ಲಿ ಸ್ಥಿರವಾದ ಜೀವನ ನಡೆದಿತ್ತು.ಪ್ರಪಂಚವು ಅಕ್ಷರಜ್ಞಾನ ಪಡೆಯುವಾಗಲೇ ಪ್ರಾಚೀನ ಭಾರತದಲ್ಲಿ ಸರ್ವಶ್ರೇಷ್ಠವಾದ ಗ್ರಂಥಾಲಯಗಳು ತಲೆಯೆತ್ತಿದ್ದು ಭಾರತೀಯರಿಗೆ ಹೆಮ್ಮೆಯ ಸಂಗತಿ…

Read More

ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಸಂಶಯಾಸ್ಪದವಾಗಿ ವ್ಯಕ್ತಿಯ ಮೃತದೇಹವೊಂದು ತಾಲೂಕಿನ ಚಲಮಿ ತಾಂಡಾ ಗ್ರಾಮದ ಮನೆಯೊಂದರಲ್ಲಿ ಪತ್ತೆಯಾಗಿದೆ.ಮೃತ ದುರ್ದೈವಿಯನ್ನು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಹಗರಟಗಿ ಗ್ರಾಮದ ಶಂಕ್ರಪ್ಪ ಬಡಿಗೇರ(೫೭) ಎಂದು ಗುರುತಿಸಲಾಗಿದೆ.ಈತ ಹುಣಸಗಿ ತಾಲೂಕಿನ ಕುರೇಕಿನಾಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಎಂದು ತಿಳಿದು ಬಂದಿದೆ. ತಲೆಗೆ ಬಲವಾದ ಪೆಟ್ಟು ಬಿದ್ದು ರಕ್ತಸ್ರಾವವಾಗಿ ಅಸುನೀಗಿದ್ದಾನೆ ಎನ್ನಲಾಗಿದ್ದು, ಘಟನೆಯ ಹಿನ್ನಲೆ ನಿಘೂಡವಾಗಿದೆ.ಈ ವ್ಯಕ್ತಿ ಇಲ್ಲಿಗೆ ಯಾಕೆ ಬಂದಿದ್ದ? ಇದು ಕೊಲೆಯಾ ಅಥವಾ ಸಹಜ ಸಾವಾ ಎಂಬ ಬಗ್ಗೆ ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ.ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ಬೇಟಿ ನೀಡಿ ಪರಿಶೀಲಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

Read More