Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ಥಳೀಯ ನೆಲೆ ಪ್ರಕಾಶನದ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ನಾಡಿನ ಜಾನಪದ ವಿದ್ವಾಂಸರಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭವು ಪಟ್ಟಣದ ಸಾರಂಗಮಠದ ಸಭಾ ಭವನದಲ್ಲಿ ಡಿ.೧೫ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯವಹಿಸುವರು. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಅವರು ಅಧ್ಯಕ್ಷತೆವಹಿಸಲಿದ್ದಾರೆ.ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಅವರಿಗೆ ದೇಸಿ ಸನ್ಮಾನ ಪ್ರಶಸ್ತಿಯನ್ನು ಆಕ್ಲೆಂಡ್‌ನಲ್ಲಿನ ಬಸವ ಸಮಿತಿ ಸಂಸ್ಥಾಪಕ ಡಾ.ಲಿಂಗಣ್ಣ ಕಲಬುರ್ಗಿ ಅವರು ಪ್ರದಾನ ಮಾಡುವರು.ಡಾ.ಸಂಗಮೇಶ ಬಿರಾದಾರ ಅವರ ಬದುಕು-ಬರಹ ಕೃತಿಯನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಬಿಡುಗಡೆಗೊಳಿಸವರು. ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಬಿ.ಹೂಗಾರ ಲೇಖಕರ ಮಾತುಗಳನ್ನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯಪುರದಲ್ಲಿ ಮೊಳಗಿದ “ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ ಇಲ್ಲವೇ ನಿಗಮಗಳನ್ನು ಮುಚ್ಚಿಬಿಡಿ” ಘೋಷಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ‘ನಿಗಮಗಳಿಗೆ ಅನುದಾನ ಬಿಡುಗಡೆ ಮಾಡಿ’, ‘ಇಲ್ಲವೇ ನಿಗಮಗಳನ್ನು ಮುಚ್ಚಿಬಿಡಿ’, ಎಂಬ ಘೋಷಣೆ ಮೂಲಕ ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಉದ್ದೇಶಿಸಿ ಇಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವಿಜಯಪುರ ಜಿಲ್ಲಾಧ್ಯಕ್ಷ ಸಿದ್ದು ಬುಳ್ಳಾ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾತನಾಡುವ ಮೂಲಕ, ಹಿಂದುಳಿದ ವರ್ಗಗಳು ತಾವು ಪಡೆಯುತ್ತಿದ್ದ ಆರ್ಥಿಕ ನೆರವಿನಿಂದ ವಂಚಿತವಾಗುತ್ತಿವೆ. ಅರಿವು ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಸಿಗುವಂತ ಆರ್ಥಿಕ ನೆರವು ಕೂಡಾ ಸಿಗುತ್ತಿಲ್ಲ. ಸಣ್ಣ ಹಿಡುವಳಿದಾರರಿಗೆ ಸಿಗುವಂತಹ ಗಂಗಾ ಕಲ್ಯಾಣ ಯೋಜನೆ ಸಂಪೂರ್ಣ ನಿಂತುಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಅಹಿಂದ ಹೇಳಿದಂಥವರು ಹಿಂದುಳಿದ ವರ್ಗಗಳಿಗೆ ವಂಚನೆ ಮಾಡಿ ಆಡಳಿತ ನಡೆಸುತ್ತಿದ್ದಾರೆ. ಹಿಂದುಳಿದ ವರ್ಗಗಳ ಪರವಾಗಿರುವಂಥವರು ಎಂದು ಹೇಳಿಕೊಂಡವರು ಸಂಪೂರ್ಣವಾಗಿ ಅವರು ಹೇಳಿದ್ದ ಮಾತನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಟೀಕಿಸಿದರು. ಹಿಂದುಳಿದ ವರ್ಗಗಳ ಧ್ವನಿಯಾಗಿ, ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತದ ಅನುಸಾರವಾಗಿ ಜನರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವ್ಯಕ್ತಿತ್ವದ ವಿಕಸನ, ಸಾಮಾಜಿಕ ಸಾಮರಸ್ಯ ಇವು ಭಗವದ್ಗೀತಾ ಅಭಿಯಾನದ ಪ್ರಮುಖ ಉದ್ದೇಶಗಳು. ಈ ಎರಡನ್ನೂ ತಮ್ಮ ಸಂಸ್ಥೆಯ ಹೆಸರಿನಲ್ಲಿ ಹೊಂದಿರುವ ಶಾಲೆ ಸಿಕ್ಯಾಬ್ ಶಾಲೆ. ಪರಮ ಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಶುಕ್ರವಾರ ವಿಜಯಪುರದ ಸಿಕ್ಯಾಬ್ ಶಾಲೆಗೆ ಭೇಟಿ ನೀಡಿದರು.ಅಲ್ಲಿ ಭಗವದ್ಗೀತಾ ಶ್ಲೋಕ ಪಠಣ ಹಾಗೂ ಶ್ರೀಗಳವರ ಆಶೀರ್ವಚನವು ನೆರವೇರಿತು.ಭಗವದ್ಗೀತಾ ಅಭಿಯಾನ ವಿಜಯಪುರದ ಒಂದು ಮಾದರಿ ಕಾರ್ಯಕ್ರಮವಾಯಿತು. ಸಿಕ್ಯಾಬ್ ಶಾಲೆಯು ಮುಸಲ್ಮಾನರ ಶಾಲೆಯಾಗಿದ್ದು ಅಲ್ಲಿ ಅಭಿಯಾನ ನಡೆದದ್ದು ಬಹಳ ವಿಶೇಷ.ಮನುಷ್ಯ ಹೇಗೆ ಅದ:ಪತನ ಹೊಂದುತ್ತಾನೆ? ವಿಷಯಗಳ ಆಕರ್ಷಣೆ ಅತಿಯಾಗಿ ಇರುವುದೇ ಅವನ ಪತನದ ದಾರಿ ಎಂದರು. ಪತನದ ದಾರಿಯನ್ನು ತಪ್ಪಿಸಿಕೊಂಡು ಉನ್ನತಿಯ ದಾರಿಯತ್ತ ಹೋಗಬೇಕು. ಅದನ್ನು ಭಗವದ್ಗೀತೆ ಕೊಡುತ್ತದೆ ಅದಕ್ಕಾಗಿ ಭಗವದ್ಗೀತೆಯನ್ನು ಎಲ್ಲರೂ ಓದಬೇಕು ಎಂದರು. ಭಗವದ್ಗೀತೆಯು ತನ್ನನ್ನು ತಾನೇ ಉದ್ದರಿಸಿಕೊಳ್ಳಬೇಕು ಎಂಬುದನ್ನು ಹೇಳುತ್ತದೆ. ಪತನ ದಾರಿಯತ್ತ ಸಾಗಬಾರದು. ಬೇಕು ಎನ್ನುವ ಆಸೆಯೇ ಅನೇಕರ ಪತನಕ್ಕೆ ಕಾರಣವಾಗುತ್ತದೆ. ಧ್ಯಾನಯೋಗವನ್ನು ಪಡೆದುಕೊಳ್ಳುವುದರ ಮೂಲಕ ತನ್ನನ್ನು ತಾನು…
ಹಿರಿಯ ಲೇಖಕ ಚನ್ನವೀರಸ್ವಾಮಿ ಹಿರೇಮಠ ಸರ್ವಾಧ್ಯಕ್ಷತೆಯಲ್ಲಿ ಆಲಮೇಲ ತಾಲ್ಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನ B* ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲ್ಲೂಕಿನ ವಿಭೂತಿಹಳ್ಳಿ ಗ್ರಾಮದಲ್ಲಿ ಶನಿವಾರ ದಿ.೧೪ರಂದು ಆಲಮೇಲ ತಾಲ್ಲೂಕು ೨ನೇ ಕನ್ನಡ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ನಡೆಯಲಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಶಿವಶರಣ ಗುಂದಗಿ ತಿಳಿಸಿದರು.ಹಿರಿಯ ಲೇಖಕ, ಕಲಾವಿದ ಚನ್ನವೀರಸ್ವಾಮಿ ಹಿರೇಮಠ ಅವರು ಸಮ್ಮೇಳನಾಧ್ಯಕ್ಷರಾಗಿದ್ದು, ಬೆಳಿಗ್ಗೆ ಧ್ವಾಜಾರೋಹಣದೊಂದಿಗೆ ಸಮ್ಮೇಳನ ಸಡಗರಕ್ಕೆ ಚಾಲನೆ ಸಿಗಲಿದೆ. ಬೆ.೮.೩೦ಕ್ಕೆ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಯಡ್ರಾಮಿ ಚಾಲನೆ ನೀಡುವರು. ಬೆಳಿಗ್ಗೆ ೧೦ಕ್ಕೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದ್ದು ಶಾಸಕ ಅಶೋಕ ಮನಗೂಳಿ ಉದ್ಘಾಟನೆವ ನೆರವೇರಿಸುವರು. ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು. ಮಾಜಿ ಶಾಸಕ ರಮೇಶ ಭೂಸನೂರ ಸ್ಮರಣ ಸಂಚಿಕೆ ಹಾಗೂ ಸಮ್ಮೇಳನಾಧ್ಯಕ್ಷರ ನುಡಿಪುಸ್ತಕವನ್ನು ಮಾಜಿ ಶಾಸಕ ಅರುಣ ಶಹಾಪೂರ ಬಿಡುಗಡೆ ಮಾಡುವರು. ಸಮ್ಮೇಳನಾಧ್ಯಕ್ಷ ಚನ್ನವೀರಸ್ವಾಮಿ ಹಿರೇಮಠ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಲಿದ್ದಾರೆ. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಸಿದ್ಧರಾಮ…
ಶ್ರೀ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಸೋಂದಾ ಶ್ರೀಗಳ ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಕ್ಕಳಲ್ಲಿ ಮನೋ ನಿಗ್ರಹ ಶಕ್ತಿ ವರ್ಧನೆಯಾಗುವುದರ ಮೂಲಕ ಅಧ್ಯಯನದೆಡೆಗೆ ಮನಸ್ಸನ್ನು ಕೇಂದ್ರೀಕರಿಸುವಲ್ಲಿ ಭಗವದ್ಗೀತೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಆಧ್ಯಾತ್ಮದ ಜೊತೆಯಲ್ಲಿ ವ್ಯಕ್ತಿತ್ವ ನಿರ್ಮಾಣದಲ್ಲಿಯೂ ಸಹ ಭಗವದ್ಗೀತೆಯು ಪರಿಣಾಮಕಾರಿಯಾದ ವಿಷಯವಾಗಿ ಗುರುತಿಸಿಕೊಳ್ಳುತ್ತದೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಹೇಳಿದರು.ಭಗವದ್ಗೀತಾ ಅಭಿಯಾನದ ಪ್ರಯುಕ್ತ ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನುದ್ಧೇಶಿಸಿ ಆಶಿರ್ವಚನ ನೀಡಿದ ಅವರು; ಒತ್ತಡ ಬದುಕಿನಲ್ಲಿ ಜೀವಿಸುತ್ತಿರುವ ಮಾನವನಿಗೆ ಮುಕ್ತಿ ಮಾರ್ಗ ತೋರಿಸುವಲ್ಲಿ ಭಗವದ್ಗೀತೆ ನೆರವಾಗುತ್ತದೆ. ಅಧ್ಯಯನ ಮಾಡುವ ವಿದ್ಯಾರ್ಥಿಗಳ ಮನಸ್ಸು ಗೊಂದಲದ ಗೂಡಾಗಿದ್ದರೆ ಅಲ್ಲಿ ಸ್ಪಷ್ಟವಾದ ಫಲವನ್ನು ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಹೇಗೆ ಕುರುಕ್ಷೇತ್ರ ಯುದ್ಧದಲ್ಲಿ ಗೊಂದಲಗೊಂಡ ಅರ್ಜುನನಿಗೆ ಭಗವಾನ್ ಶ್ರೀಕೃಷ್ಣನ ವಾಣಿಯು ನಿರ್ದಿಷ್ಟ ಗುರಿಯನ್ನು ತೋರಿ ಗೊಂದಲದಿಂದ ಹೊರ ಬರುವಂತೆ ಮಾಡಿತೋ ಹಾಗೆಯೇ ಇಂದು ವಿದ್ಯಾರ್ಥಿ ಜೀವನದಲ್ಲಿ ಭಗವದ್ಗೀತೆಯ ಪಾರಾಯಣದಿಂದ, ಅದರಲ್ಲಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಲು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಲಿಂಗಾಯತ ಸಮಾಜ ಬಾಂಧವರ ಮೇಲೆ ಲಾಠಿ ಪ್ರಹಾರ ನಡೆಸಿ, ಸ್ವಾಮೀಜಿಗಳನ್ನು, ಶಾಸಕರು, ಸಂಸದರು, ಮುಖಂಡರು ಗಳನ್ನು ಬಂಧಿಸಿರುವ ಕಾಂಗ್ರೆಸ್ ಸರ್ಕಾರದ ಸರ್ವಾಧಿಕಾರಿ ಧೋರಣೆ ಖಂಡಿಸಿ ಶುಕ್ರವಾರ ಪಕ್ಷಾತೀತವಾಗಿ ವಿವಿಧ ಸಮುದಾಯ ಬಾಂಧವರು ನಗರದ ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.ಇಲ್ಲಿಯ ರಾಷ್ಟೀಯ ಹೆದ್ದಾರಿಯಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಾಕಾರರು, ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೆಲಕಾಲ ಹೆದ್ದಾರಿ ಬಂದ್ ಮಾಡಿದರು. ನಂತರ ಟಯರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯುದ್ದಕ್ಕೂ ಲಿಂಗಾಯತ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಪಂಚಮಸಾಲಿ ವಿರೋಧಿ ಸರ್ಕಾರಕ್ಕೆ ಧಿಕ್ಕಾರ, ಸರ್ವಾಧಿಕಾರಿ ಧೋರಣೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಧಿಕ್ಕಾರ, ಬೊಲೋ ಭಾರತ್ ಮಾತಾಕಿ ಜೈ, ಪಂಚಮಸಾಲಿ ಸಮಾಜಕ್ಕೆ ಜಯವಾಗಲಿ, ಹಿಂದೂ ಹುಲಿ ಬಸನಗೌಡ ಪಾಟೀಲ ಯತ್ನಾಳ ರವರಿಗೆ ಜಯವಾಗಲಿ, ಸಮಾಜಕ್ಕೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ಪಟ್ಟಣದಲ್ಲಿ ನವೀಕರಣಗೊಂಡ ಪಟ್ಟದ್ದೇವರ ಹಿರೇಮಠದ ಉದ್ಘಾಟಣೆ ಮಠದ ೧೦ನೇ ಪೀಠಾಧಿಕಾರಿ ಗುರುಸಿದ್ದಬಸವ ಶಿವಾಚಾರ್ಯರ ಜನ್ಮ ಶತಮಾನೋತ್ಸವ ಮುಳಗಡೆಯ ಗ್ರಾಮದಿಂದ ನೂತನ ಗ್ರಾಮವಾಗಿ ಪುನರ್ವಸತಿ ಕೇಂದ್ರದಲ್ಲಿ ಕೊಲ್ಹಾರ ಪಟ್ಟಣವಾಗಿ ಹೊಸ ಕೊಲ್ಹಾರದ ೨೫ರ ಬೆಳ್ಳಿ ಸಂಬ್ರಮ ಹಾಗೂ ಕೆನೆಮೊಸರಿನ ಸವಿನಾಡೋತ್ಸವ ಕಾರ್ಯಕ್ರಮಗಳನ್ನು ೨೦೨೫ ಮೇ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವದು ಎಂದು ವೇದಮೂರ್ತಿ ಮುರುಘೇಂದ್ರ ಮಹಾಸ್ವಾಮಿಗಳು ತಿಳಿಸಿದರು.ಪಟ್ಟಣದ ಹಿರೇಮಠದಲ್ಲಿ ಕಾರ್ಯಕ್ರಮ ನಿಮಿತ್ಯ ನಡೆದ ಸ್ಥಳೀಯ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಮಠದ ಪೀಠಾಧೀಕಾರಿಗಳಾದ ಪ್ರಭುಕುಮಾರ ಶಿವಾಚಾರ್ಯರ ಅಣತಿಯಂತೆ ಬರುವ ಜನೇವರಿ ೧ ರಿಂದ ಮೇ ತಿಂಗಳ ತನಕ ನೂರಾರು ಗ್ರಾಮಗಳನ್ನು ಪಾದಯಾತ್ರೆ ಮೂಲಕ ಸಂಚರಿಸುತ್ತಾ ಭಕ್ತರು ಕೊಟ್ಟ ಜೋಳಿಗೆಯಿಂದ ಆಗಲಿ ಸಮಾಜದ ಏಳಿಗೆ ಮತ್ತು ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆಯನ್ನು ಜೊಳಿಗೆಯಲ್ಲಿ ಬೇಡುತ್ತಾ ಪ್ರವಚನಗಳನ್ನು ಪಠಿಸುತ್ತಾ ರುದ್ರಾಕ್ಷ ಧಾರಣೆ ಮಾಡುವ ಮೂಲಕ ಭಕ್ತರ ಮನದಲ್ಲಿ ಧರ್ಮ ಸಂಸ್ಕಾರ ಸಂಸ್ಕೃತಿಯ ಉಪದೇಶಾಮೃತವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಹಳೇಬೇರಿನ ಪರಂಪರೆಯಿಂದ ಹೊಸ ಜಗತ್ತಿನ ಪರಂಪರೆಯ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಆರೋಗ್ಯದ ದೇಹ ಆತ್ಮದ ಅರಮನೆಯಾದರೆ ಅನಾರೋಗ್ಯದ ದೇಹ ಆತ್ಮದ ಸೆರೆಮನೆ. ಜೀವನದಲ್ಲಿ ಆಸ್ತಿ, ಅಂತಸ್ತು, ಅಧಿಕಾರ ಯಾವುದೂ ನಮ್ಮೊಟ್ಟಿಗೆ ಇರಲಾರದು. ಸ್ಥಿರವಾಗಿ ಇರುವದು ಆರೋಗ್ಯ ಮಾತ್ರ ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಸಂಸ್ಥಾಪಕ, ಖ್ಯಾತ ನೇತೃ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಹೇಳಿದರು.ಪಟ್ಟಣದ ಹುಡ್ಕೋ ಬಡವಾಣೆಯ ಗವಿಸಿದ್ದೇಶ್ವರ ವೇದಿಕೆಯಲ್ಲಿ ಹಿಮಾಲಯನ್ ಧ್ಯಾನಯೋಗಿ ಮತ್ತು ಆಧ್ಯಾತ್ಮಿಕ ಪ್ರವಚನಕಾರ ಪ.ಪೂ.ನಿರಂಜನ ಮಹಾಸ್ವಾಮಿಗಳು ೧೧ ದಿನಗಳ ಕಾಲ ನಿರಂತರವಾಗಿ ನಡೆಸಿಕೊಟ್ಟ ಯೋಗಾಭ್ಯಾಸ ಮತ್ತು ಆಧ್ಯಾತ್ಮಿಕ ಪ್ರವಚನದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.ಹುಟ್ಟುವಾಗ ದೇವರು ಎಲ್ಲರಿಗೂ ಒಂದೇ ತರನಾದ ದೇಹದ ಜೊತೆಗೆ ವಾರಂಟಿ ಕೊಟ್ಟಿರುತ್ತಾನೆ. ಆದರೆ ಗ್ಯಾರಂಟಿ ಕೊಟ್ಟಿರುವದಿಲ್ಲ. ನಾವು ಒಳ್ಳೆಯ ಆಚಾರ, ವಿಚಾರ, ಅಹಾರ ಪದ್ಧತಿಯನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮತ್ತು ಯಾವ ವ್ಯಕ್ತಿ ಸಂತೃಪ್ತಿಯಿಂದ ಜೀವಿಸುತ್ತಾನೋ ಆ ವ್ಯಕ್ತಿ ಮಾತ್ರ ಆರೋಗ್ಯವಂತನಾಗಿ ಜೀವಿಸಲು ಸಾಧ್ಯ, ಆ ಸಂತೃಪ್ತಿ ಆಧ್ಯಾತ್ಮದಲ್ಲಿ ಮಾತ್ರ ಇರೋದು. ಎಲ್ಲರೂ ಯೋಗವನ್ನು ಕಲಿತು ಆರೋಗ್ಯವಂತರಾಗಿ ಬದುಕಬೇಕು…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 2024-25ನೇ ಸಾಲಿನ ವಿಜಯಪುರ ಜಿಲ್ಲಾ ಮಟ್ಟದ ವಿಕಲಚೇತನರ ಕ್ರೀಡಾಕೂಟ ಡಿ.17ರಂದು ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಿಗ್ಗೆ 10-30ಕ್ಕೆ ಕ್ರೀಡಾಕೂಟವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ. ಬಿ. ಪಾಟೀಲ ಅವರು ಉದ್ಘಾಟಿಸಲಿದ್ದಾರೆ. ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ, ಕರ್ನಾಟಕ ಸರ್ಕಾರದ ನವದೆಹಲಿಯ ವಿಶೇಷ ಪ್ರತಿನಿಧಿ ಹಾಗೂ ವಿಧಾನ ಪರಿಷತ್ತಿನ ಶಾಸಕರಾದ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟಜೆರ್ಂಟ್ ನಿಯಮಿತದ ಅಧ್ಯಕ್ಷರು ಹಾಗೂ ಶಾಸಕರಾದ ಅಪ್ಪಾಜಿ ಸಿ.ಎಸ್.ನಾಡಗೌಡ, ಸಂಸದರಾದ ರಮೇಶ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ ನಿಯಮಿತ ಬೆಂಗಳೂರು ಮತ್ತು ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ವಿಜಯಪುರ ವತಿಯಿಂದ 2024-25ನೇ ಸಾಲಿನಲ್ಲಿ 5 ವಾರದ ಕೋಳಿ ಮರಿಗಳನ್ನು ಉತ್ಪಾದಿಸಿ ಗ್ರಾಮೀಣ ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡ, ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ತಲಾ 50 ಕೋಳಿಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಆಸಕ್ತ ರೈತ ಮಹಿಳೆಯರು ದಿನಾಂಕ : 25-12-2024ರೊಳಗೆ ಆಯಾ ತಾಲೂಕಾ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಪಶುಪಾಲನಾ ಇಲಾಖೆಗೆ ಅರ್ಜಿಗಳನ್ನು ಸಲ್ಲಿಸಬೇಕು.ಈ ಕುರಿತಂತೆ ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ನಮೂನೆಗಾಗಿ ಆಯಾ ತಾಲೂಕಾ ಪಶು ಆಸ್ಪತ್ರೆ ಕಚೇರಿಗಳನ್ನು ಸಂಪರ್ಕಿಸಬಹುದಾಗಿಎ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
