ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಪಟ್ಟಣದಲ್ಲಿ ನವೀಕರಣಗೊಂಡ ಪಟ್ಟದ್ದೇವರ ಹಿರೇಮಠದ ಉದ್ಘಾಟಣೆ ಮಠದ ೧೦ನೇ ಪೀಠಾಧಿಕಾರಿ ಗುರುಸಿದ್ದಬಸವ ಶಿವಾಚಾರ್ಯರ ಜನ್ಮ ಶತಮಾನೋತ್ಸವ ಮುಳಗಡೆಯ ಗ್ರಾಮದಿಂದ ನೂತನ ಗ್ರಾಮವಾಗಿ ಪುನರ್ವಸತಿ ಕೇಂದ್ರದಲ್ಲಿ ಕೊಲ್ಹಾರ ಪಟ್ಟಣವಾಗಿ ಹೊಸ ಕೊಲ್ಹಾರದ ೨೫ರ ಬೆಳ್ಳಿ ಸಂಬ್ರಮ ಹಾಗೂ ಕೆನೆಮೊಸರಿನ ಸವಿನಾಡೋತ್ಸವ ಕಾರ್ಯಕ್ರಮಗಳನ್ನು ೨೦೨೫ ಮೇ ತಿಂಗಳಲ್ಲಿ ಹಮ್ಮಿಕೊಳ್ಳಲಾಗುವದು ಎಂದು ವೇದಮೂರ್ತಿ ಮುರುಘೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಹಿರೇಮಠದಲ್ಲಿ ಕಾರ್ಯಕ್ರಮ ನಿಮಿತ್ಯ ನಡೆದ ಸ್ಥಳೀಯ ಭಕ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಮ್ಮ ಮಠದ ಪೀಠಾಧೀಕಾರಿಗಳಾದ ಪ್ರಭುಕುಮಾರ ಶಿವಾಚಾರ್ಯರ ಅಣತಿಯಂತೆ ಬರುವ ಜನೇವರಿ ೧ ರಿಂದ ಮೇ ತಿಂಗಳ ತನಕ ನೂರಾರು ಗ್ರಾಮಗಳನ್ನು ಪಾದಯಾತ್ರೆ ಮೂಲಕ ಸಂಚರಿಸುತ್ತಾ ಭಕ್ತರು ಕೊಟ್ಟ ಜೋಳಿಗೆಯಿಂದ ಆಗಲಿ ಸಮಾಜದ ಏಳಿಗೆ ಮತ್ತು ದುಶ್ಚಟಗಳ ಭಿಕ್ಷೆ ಸದ್ಗುಣಗಳ ದೀಕ್ಷೆಯನ್ನು ಜೊಳಿಗೆಯಲ್ಲಿ ಬೇಡುತ್ತಾ ಪ್ರವಚನಗಳನ್ನು ಪಠಿಸುತ್ತಾ ರುದ್ರಾಕ್ಷ ಧಾರಣೆ ಮಾಡುವ ಮೂಲಕ ಭಕ್ತರ ಮನದಲ್ಲಿ ಧರ್ಮ ಸಂಸ್ಕಾರ ಸಂಸ್ಕೃತಿಯ ಉಪದೇಶಾಮೃತವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಹಳೇಬೇರಿನ ಪರಂಪರೆಯಿಂದ ಹೊಸ ಜಗತ್ತಿನ ಪರಂಪರೆಯ ಯುವ ಪೀಳಿಗೆಯಲ್ಲಿ ಸಾಮರಸ್ಯದ ಬದುಕನ್ನು ಸಾಗಿಸುವ ಸಮಾಜೋತ್ಸವ ಕಾರ್ಯಕ್ರಮವನ್ನು ಪಂಚಪೀಠಾಧಿಕಾರಿಗಳ, ನಾಡಿನ ಹೆಸರಾಂತ ರಾಜಕಾರಣಿಗಳ ಪ್ರತಿಷ್ಟಿತ ವಿವಿದ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಆಚರಿಸಲು ನಿಮ್ಮಗಳ ಸಹಕಾರ ಅಗತ್ಯವಾಗಿದ್ದು ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಹಳೇ ಗ್ರಾಮ ಕೊಲ್ಹಾರ ಮುಳಗಡೆಯಾದ ನಂತರ ಹೊಸ ಕೊಲ್ಹಾರದಲ್ಲಿ ಶ್ರೀಮಠದಿಂದ ಇಲ್ಲಿಯವರೆಗೂ ಯಾವುದೇ ಕಾರ್ಯಕ್ರಮಗಳೂ ನಡೆಯದೇ ಇರುವದರಿಂದ ಮಠದ ಭಕ್ತರ ಅಪೇಕ್ಷೆ ಮೇರೆಗೆ ಸದ್ಗುಣಗಳ ಸದ್ವಿಚಾರದೊಂದಿಗೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಭಕ್ತರ ಇಚ್ಚೆಯಂತೆ ಧರ್ಮದ ಈ ಕಾರ್ಯಕ್ರಮ ನಡೆಯುತ್ತವೆ ತಮ್ಮೆಲ್ಲರ ಸಹಕಾರ ಇರಲಿ ಎಂದರು.
ಪೂರ್ವಭಾವಿ ಸಭೆಯಲ್ಲಿ ವಿನೀತಕುಮಾರ ದೇಸಾಯಿ, ಕೆ.ಎಸ್.ದೇಸಾಯಿ, ಈರಣಗೌಡ ಕೋಮಾರ, ಚನಮಲ್ಲಪ್ಪ ಗಿಡ್ಡಪ್ಪಗೋಳ, ಟಿ.ಟಿ.ಹಗೇದಾಳ, ಶ್ರೀಶೈಲ ಪತಂಗಿ, ನಿಂಗಪ್ಪ ಗಣಿ, ಮಲ್ಲಿಕಾರ್ಜುನ ಗರಸಂಗಿ, ಶಂಕ್ರೆಪ್ಪ ನಾಗರಾಳ, ಮಲ್ಲಪ್ಪ ಉಳ್ಳಾಗಡ್ಡಿ, ಸದಾಶಿವ ಗಣಿ, ಮುದೆಪ್ಪ ಮೇಲಗಿರಿ, ಮಲ್ಲಪ್ಪ ಗಿಡ್ಡಪ್ಪಗೋಳ ಅನೇಕ ಪ್ರಮುಖರು ಪಾಲ್ಗೊಂಡಿದ್ದರು.
ಇದೇ ಸಂದರ್ಬದಲ್ಲಿ ಕಾರ್ಯಕ್ರಮದ ಕ್ಯಾಲೇಂಡರನ್ನು ಬಿಡುಗಡೆಗೊಳಿಸಲಾಯಿತು.

