Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಸೇರಿದಂತೆ ವಿವಿಧ ರಾಜಕೀಯ ಮುಖಂಡರುಗಳು ವಿಜಯಪುರ ಜಿಲ್ಲೆಯ ಯುವ ಜನರ ಮತ ಪಡೆಯುವಗೋಸ್ಕರ ವಿಜಯಪುರ ಜಿಲ್ಲೆಗೆ ರಾಜಕೀಯ ಹಿತಾಸಕ್ತಿಗಾಗಿ ಈ ಹಿಂದೆ ತಪ್ಪಿ ಹೋಗಿರುವ 371 ಜೆ ಕಲ್ಯಾಣ ಕರ್ನಾಟಕ ಮೀಸಲಾತಿಯನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಚುನಾವಣೆ ಮುಗಿದ ನಂತರ ಯಾವೊಬ್ಬ ಜನಪ್ರತಿನಿಧಿಗಳು ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ ಶೈಕ್ಷಣಿಕ ಹಾಗೂ ಔದ್ಯೋಗಿಕ ಮೀಸಲಾತಿಯಾಗಿರುವ 371ಜೆ ಬಗ್ಗೆ ಮಾತನಾಡದೇ ಜಿಲ್ಲೆಯ ಯುವ ಜನತೆಗೆ ಜನಪ್ರತಿನಿಧಿಗಳು ಅನ್ಯಾಯ ಎಸಗುತ್ತಿರುವುದು ಖಂಡನೀಯವಾದುದು ಕೂಡಲೇ ಬೆಳಗಾವಿಯಲ್ಲಿ ಜರುಗುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಜಯಪುರ ಜಿಲ್ಲೆಗೆ ನ್ಯಾಯಯುತವಾಗಿ ಸಿಗಬೇಕಾಗಿರುವ 371ಜೆ ಮೀಸಲಾತಿ ಬಗ್ಗೆ ಪಕ್ಷಾತೀತವಾಗಿ ಧ್ವನಿ ಎತ್ತಿ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಲು ಮುಂದಾಗಬೇಕೆಂದು ಕರ್ನಾಟಕ ರಾಜ್ಯ ಪದವೀಧರ ಒಕ್ಕೂಟದ ಅಧ್ಯಕ್ಷ ಲಾಯಪ್ಪ ಇಂಗಳೆ ಹಾಗೂ ಕಾರ್ಯಾಧ್ಯಕ್ಷರಾದ ಕಲ್ಲಪ್ಪ ಶಿವಶರಣ ಅವರು ಜಂಟಿಯಾಗಿ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ವಿಜಯಪುರ ಜಿಲ್ಲೆಯು ನಂಜುಡಪ್ಪ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಪತ್ರಕರ್ತ ರಾಹುಲ್ ಆಪ್ಟೆ ಅವರ ಪುತ್ರಿ ಶೃದ್ದಾ ಆಪ್ಟೆ ಭಗವದ್ಗೀತಾ ಭಾಷಣ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿವಿಜಯಪುರದ ಸಾಯಿ ಗಾರ್ಡನ್ ಮೈದಾನದಲ್ಲಿ ನಡೆದ ಭಗವದ್ಗೀತಾ ಅಭಿಯಾನ 2024 ರಾಜ್ಯ ಮಟ್ಟದ ಮಹಾಸಮರ್ಪಣೆ ಕಾರ್ಯಕ್ರಮ ದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಗಂಗಾಧರೇಂದ್ರ ಶ್ರೀಗಳು, ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ, ಸಿಂದಗಿ ಸಾರಂಗಮಠದ ಶ್ರೀಗಳು ಸೇರಿದಂತೆ ಸ್ವಾಮೀಜಿಗಳು ಹಾಗೂ ಭಗವದ್ಗೀತಾ ಅಭಿಯಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಶಿರಸಿ, ಭಗವದ್ಗೀತಾ ಅಭಿಯಾನ ಅವರು ಆಯೋಜನೆ ಮಾಡಿದ್ದ ಸ್ಪರ್ಧೆಯಲ್ಲಿ ಶೃದ್ದಾ ಆಪ್ಟೆ ಸಂಸ್ಕೃತದಲ್ಲಿ ಭಗವದ್ಗೀತಾ ಬಗ್ಗೆ ಭಾಷಣ ಮಾಡಿ ರಾಜ್ಯದಲ್ಲೇ ಪ್ರಥಮ‌ ಸ್ಥಾನ ಪಡೆದಿದ್ದಾರೆ.

Read More

ವಿಧಾನಸಭೆಯಿಂದ ಬಿಜೆಪಿ ಶಾಸಕರ ಸಭಾತ್ಯಾಗ | ಸ್ಪೀಕರ್ ಪಕ್ಷಪಾತಿ ಎಂಬ ಆರೋಪ | ಪಕ್ಷದ ನಿರ್ಧಾರ ಗೌರವಿಸದ ಶಾಸಕರು ಬೆಳಗಾವಿ: ವಕ್ಪ್ ಆಸ್ತಿ ವಿವಾದ ಕುರಿತ ಚರ್ಚೆಗೆ ಸ್ಪೀಕರ್ ಯುಟಿ ಖಾದರ್ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಶಾಸಕರು ಶುಕ್ರವಾರ ವಿಧಾನಸಭೆಯಿಂದ ಸಭಾತ್ಯಾಗ ನಡೆಸಿದರು.ಬಿಜೆಪಿ ಶಾಸಕ ಎನ್. ಮುನಿರತ್ನ ವಿರುದ್ಧದ ಹನಿಟ್ರಾಪ್ ಹಾಗೂ ಎದುರಾಳಿಗಳಿಗೆ ಹೆಚ್ ಐವಿ ಸೋಂಕು ತಗುಲುವ ಇಂಜೆಕ್ಷನ್ ಆರೋಪ ಕುರಿತು ಸದನದಲ್ಲಿ ಚರ್ಚೆಗೆ ಕಾಂಗ್ರೆಸ್ ಶಾಸಕರು ಪಟ್ಟು ಹಿಡಿದಾಗ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದ ಬಿಜೆಪಿ ಶಾಸಕರು ಸಭೆಯಿಂದ ನಿರ್ಗಮಿಸಿದರು.ಸಭಾತ್ಯಾಗದ ನಂತರ ಆರ್.ಅಶೋಕ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ಸ್ಪೀಕರ್ ಒಂದು ಕಡೆಯವರಂತೆ ವರ್ತಿಸುತ್ತಿದ್ದಾರೆ. ವಿಧಾನಸಭೆಯಲ್ಲಿ ವಕ್ಪ್ ವಿಚಾರ ಕುರಿತ ಚರ್ಚೆಗೆ ಸೋಮವಾರವೇ ಅವರ ಬಳಿ ಮನವಿ ಮಾಡಿದ್ದೆ. ಸಾಮಾನ್ಯವಾಗಿ ಪ್ರಶ್ನೋತ್ತರ ಅವಧಿ ನಂತರ ಚರ್ಚೆಗೆ ಸಮಯವನ್ನು ನೀಡಲಾಗುತ್ತದೆ. ಉದ್ದೇಶಪೂರ್ವಕವಾಗಿ ರಾಜ್ಯ ಸರ್ಕಾರ ಚರ್ಚೆಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ಲಕ್ಷ ನುಡಿಮುತ್ತುಗಳನ್ನು ಬರೆದ ಯುವ ಸಾಹಿತಿ ಭೀಮರಾಯ ಹೂಗಾರ ಅವರು ಮಂಡ್ಯದಲ್ಲಿ ಡಿ.೨೦ ರಿಂದ ೨೨ ರವರೆಗೆ ಹಮ್ಮಿಕೊಂಡಿರುವ ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಂಗವಾಗಿ ತಮ್ಮ ಬೈಕ್ ಮೂಲಕ ಡಿ.೧೪ ರಿಂದ ಹೂವಿನಹಿಪ್ಪರಗಿಯಿಂದ ಬೆಳಗ್ಗೆ ೭ ಗಂಟೆಗೆ ತುಮಕೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.ಯುವ ಸಾಹಿತಿ ಭೀಮರಾಯ ಹೂಗಾರ ಶುಕ್ರವಾರ ಸಂಜೆ ಪತ್ರಿಕೆಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಅವರು, ಸಮ್ಮೇಳನದಂಗವಾಗಿ ವಿಶ್ವ ಹುಟ್ಟು ಸಾವು ಎಂಬ ಪುಸ್ತಕ ರಚಿಸಿದ್ದೇನೆ. ಡಿ.೧೫ ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಈ ಪುಸ್ತಕವನ್ನು ಸಿದ್ದಗಂಗಾಶ್ರೀಗಳಿಂದ ಬಿಡುಗಡೆಗೊಳಿಸಿದ ನಂತರ ಬೆಂಗಳೂರ ಮಾರ್ಗವಾಗಿ ಬೆಂಗಳೂರಿನಲ್ಲಿರುವ ಲೀಲಾವತಿ ಸ್ಮಾರಕ, ಪುನೀತ ರಾಜಕುಮಾರ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಸ್ತಕವನ್ನು ಅರ್ಪಿಸಿದ ನಂತರ ನಟ ಶಿವರಾಜಕುಮಾರ ಅವರಿಗೆ ಪುಸ್ತಕವನ್ನು ನೀಡುತ್ತೇನೆ. ನಂತರ ಕನ್ನಡ ವಾಣಿಜ್ಯ ಚಲನಚಿತ್ರ ಮಂಡಳಿಗೆ ಬಿಡುಗಡೆಗೊಂಡ ಪುಸ್ತಕವನ್ನು ನೀಡಲಾಗುವದು. ಸಮ್ಮೇಳನದಂಗವಾಗಿ ಮಂಡ್ಯದಲ್ಲಿ ಡಿ.೧೭ ರಂದು ಹಮ್ಮಿಕೊಂಡಿರುವ ಮ್ಯಾರಾಥಾನ್ ಓಟದಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಗೋರಬಾಯಿ ಟೋಳಿ ಮಹಿಳಾ ಸಮೂಹ ಸಂಸ್ಥೆ ಸಹಯೋಗದಲ್ಲಿ ಡಿ. ೧೪ ರಂದು ಬೆಳಗ್ಗೆ ೧೧ ಗಂಟೆಗೆ ದಿ.ಶಂಕರ ಡಾಕಪ್ಪ ಲಮಾಣಿ ಸ್ಮರಣಾರ್ಥ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಇಂದುಮತಿ ಲಮಾಣಿ ರಚಿಸಿದ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸವರು. ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ವಹಿಸುವರು. ವಿಜಯಪುರದ ಅಂಭಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಬಿಜ್ಜರಗಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಪುಸ್ತಕ ಬಿಡುಗಡೆ ಗೊಳಿಸಿ ಉಪನ್ಯಾಸ ನೀಡುವರು. ಸಾಹಿತಿ ಕಮಲಾ ಗೆಜ್ಜಿ ಪುಸ್ತಕ ಪರಿಚಯಿಸುವರು. ಬೆಂಗಳೂರಿನ ಸಾಹಿತಿ ಬಾಬು ಕೃಷ್ಣಮೂರ್ತಿ ಅವರಿಗೆ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ ಮಾಡಲಾಗುವದು. ಮುಖ್ಯ ಅತಿಥಿಗಳಾಗಿ ರಾಷ್ಟೋತ್ಥಾನ ಪರಿಷತ್ತಿನ ವಿಘ್ನೇಶ್ವರ…

Read More

ಉದಯರಶ್ಮಿ ದಿನಪತ್ರಿಕೆ ಬಸವನಬಾಗೇವಾಡಿ: ಪಟ್ಟಣದಲ್ಲಿ ವಿಶ್ವಹಿಂದು ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹನುಮಾಮಾಲಾ ಕಾರ್ಯಕ್ರಮದಂಗವಾಗಿ ಹನುಮ ಮಾಲಾಧಾರಿಗಳಿಂದ ಪ್ರಮುಖ ಬೀದಿಗಳಲ್ಲಿ ರಾಮಾಂಜನೇಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವಿಠ್ಠಲ ಮಂದಿರದಲ್ಲಿ ಬೆಳಗ್ಗೆ ಪವನ ಹೋಮ ನೆರವೇರಿಸಿದರು. ನಂತರ ಹನುಮಾನ ದೇವಸ್ಥಾನದಿಂದ ಹನುಮಾನ ಪಲ್ಲಕ್ಕಿ ಉತ್ಸವ, ಬಸವೇಶ್ವರ, ರಾಮ, ಶಿವಾಜಿ, ಹನುಮಾನ ಮೂರ್ತಿಗಳ ಮೆರವಣಿಗೆ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಮೆರವಣಿಗೆಯಲ್ಲಿ ಹನುಮ ಮಾಲಾಧಾರಿಗಳಿಂದ ಅಯೋಧ್ಯಾಪತಿ ಶ್ರೀರಾಮಚಂದ್ರ ಕೀ ಜೈ, ಪವನ ಸುತ ಹನುಮಾನ ಕೀ ಜೈ, ಜೈ ಶ್ರೀ ರಾಮ ಜಯ ಜಯ ಶ್ರೀರಾಮ, ಹರ ಹರ ಮಹಾದೇವ, ಭಾರತ ಮಾತಾ ಕೀ ಜೈ ಘೋಷಣೆ ಕೇಳಿಬಂದವು.ಮೆರವಣಿಗೆಯಲ್ಲಿ ಧರ್ಮ ಪ್ರಸಾರ ಜಿಲ್ಲಾ ಪ್ರಮುಖ ತಮ್ಮಣ್ಣ ಬಡಿಗೇರ, ವಿರೇಶ ಹಿರೇಮಠ, ಮಹಾದೇವ ಇಟಗಿ, ರಾಹುಲ ಜಗತಾಪ, ರವಿ ಮ್ಯಾಗೇರಿ, ಭಾಗ್ಯವಂತ ಚೌಧರಿ, ಮಂಜುನಾಥ ಮುದೂರ, ಶಿವು ರೇವಡಕರ, ನಿಂಗಪ್ಪ ಬಡಿಗೇರ, ಶಿವಾನಂದ ಬೆಲ್ಲದ, ಪದ್ಮರಾಜ ಒಡೆಯರ,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕಿನ ಯಂಕಂಚಿ ಗ್ರಾಮದ ಕುಂಟೋಜಿ ಹಿರೇಮಠಕ್ಕೆ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಬೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.ಈ ಸಂದರ್ಭದಲ್ಲಿ ಶ್ರೀಮಠದ ಪಿಠಾಧೀಪತಿ ಅಭಿನವ ರುದ್ರಮುನಿ ಶಿವಾಚಾರ್ಯರು ಸಚಿವರನ್ನು ಸನ್ಮಾನಿಸಿ ಗೌರವಿಸಿದರು.ಈ ವೇಳೆ ಶ್ರೀಮಠದ ಭಕ್ತರು ಹಾಗೂ ಮುಖಂಡರು ಇದ್ದರು.

Read More

ವಿಶ್ವ ವಿಕಲಚೇತನರ ದಿನ & ಮಾನವ ಹಕ್ಕುಗಳ ದಿನ ನಿಮಿತ್ತ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿಕಲಚೇತನರು ವಿಶೇಷ ಚೇತನರಾಗಿದ್ದು, ತಮ್ಮ ವಿಕಲತೆ ಕುರಿತು ಕೀಳರಿಮೆ ಭಾವನೆ ಹೊಂದದೆ ಎಂದಿಗೂ ಎದೆಗುಂದದೆ, ಜೀವನದಲ್ಲಿ ಮುನ್ನಡೆಯಬೇಕು ಎಂದು ಸಿಂದಗಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹರೀಶ ಜಾದವ್ ಹೇಳಿದರು.ಪಟ್ಟಣದ ತಾಲೂಕು ಪಂಚಾಯತ್ ಸಭಾಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಮಕೀಲರ ಸಂಘ, ತಾಲೂಕು ಪಂಚಾಯತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನರ ಹಾಗೂ ಶಿಶು ಅಭಿವೃದ್ಧಿ ಯೋಜನಾ ಇಲಾಖೆಯ ಸಹಯೋಗದಲ್ಲಿ ಜರುಗಿದ ವಿಶ್ವ ವಿಕಲಚೇತನರ ದಿನ ಹಾಗೂ ಮಾನವ ಹಕ್ಕುಗಳ ದಿನಾಚರಣೆಯ ನಿಮಿತ್ತ ಹಮ್ಮಿಕೊಂಡ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ವಿಕಲಚೇತನರಾದ ಸ್ಟೀಫನ್ ಹಾಕಿನ್ಸ್, ಪುಟ್ಟರಾಜ ಗವಾಯಿಗಳು ಸೇರಿದಂತೆ ಹಲವಾರು ಗಣ್ಯರು ಸಾಧಕರು ಸಾಧನೆಯನ್ನು ನೆನೆದು ತಾವು ಸಾಧನೆ ಮಾಡಿ ಮುಖ್ಯವಾಹಿನಿಗೆ ಬರಬೇಕು. ಭಗವಂತ ಎಲ್ಲರಿಗೂ ಒಂದೊAದು ಶಕ್ತಿ ಕೊಟ್ಟಿರುತ್ತಾನೆ. ಅದೇ ರೀತಿಯ ವಿಕಲಾಂಗವಾಗಿದ್ದರೂ ಅದಕ್ಕೆ…

Read More

ಉದಯರಶ್ಮಿ ದಿನಪತ್ರಿಕೆ ಮೋರಟಗಿ: ಜ್ಞಾನವಿಕಾಸ ವಾತ್ಸಲ್ಯ ಕಾರ್ಯಕ್ರಮ ಮೂಲಕ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಬಡವರ ಪಾಲಿಗೆ ಬೆನ್ನೆಲುಬಾಗಿ ನಿಂತಿದೆ ಎಂದು ಗ್ರಾಪಂ ಉಪಾಧ್ಯಕ್ಷ ಯುಸುಫ್ ಮುಲ್ಲಾ ಹೇಳಿದರು.ಸಿಂದಗಿ ಮತಕ್ಷೇತ್ರದ ಮೋರಟಗಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡ ಜ್ಞಾನವಿಕಾಸ ಯೋಜನೆಯ ಅಡಿಯಲ್ಲಿ ಕುಷ್ಠ ರೋಗ ಫಲಾನುಭವಿ ಮಸಾಶನ ಹಾಗೂ ಕಿಟ್ ನೀಡಿ ವಿತರಿಸಿ ಮಾತನಾಡಿದರು.ಧರ್ಮಸ್ಥಳ ಸಂಸ್ಥೆಯು ಅಸಹಾಯಕರ ನೇರವಿಗಾಗಿ ಹೊಸ ಯೋಜನೆಗಳನ್ನು ತರುತ್ತಾ ವೃದ್ಧರ, ಅಂಗವಿಕಲರ ಸಹಾಯಕ್ಕಾಗಿ ಸದಾ ಮಿಡಿಯುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ರೈತರಿಗೆ ಹಾಗೂ ಕೂಲಿ ಕಾರ್ಮಿಕ ವರ್ಗಕ್ಕೆ ಮತ್ತು ಬಡ ಜನರಿಗೆ ಸಾಕಷ್ಟು ಸಹಾಯಕಾರಿಯಾಗಿದೆ. ಬಂಗಾರ ಅಡವಿಟ್ಟರು ನಮ್ಮ ಸಮಯಕ್ಕೆ ಹಣ ಸಿಗದ ಸಂದರ್ಭದಲ್ಲಿ ತಮ್ಮ ಮೇಲೆ ವಿಶ್ವಾಸಯಿಟ್ಟು ಕೇವಲ ತಮ್ಮ ಆಧಾರ ಕಾರ್ಡ ಮೇಲೆ ಸಾಲದ ಮೂಲಕ ಲಕ್ಷ ಲಕ್ಷ ಹಣ ತಮ್ಮ ಖಾತೆಗೆ ಜಮಾ ಮಾಡುತ್ತಾರೆ. ತಾವೆಲ್ಲರೂ ಸಮಯಕ್ಕೆ ಸರಿಯಾಗಿ ಹಣ ಭರಣೆ ಮಾಡಿ ಸಂಘ ಸಂಸ್ಥೆಗಳು ಬೆಳೆಯುವಲ್ಲಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ಥಳೀಯ ನೆಲೆ ಪ್ರಕಾಶನದ ಎಂ.ಎಂ.ಪಡಶೆಟ್ಟಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ) ನಾಡಿನ ಜಾನಪದ ವಿದ್ವಾಂಸರಿಗೆ ಕೊಡಮಾಡುವ ವಾರ್ಷಿಕ ಪ್ರಶಸ್ತಿ ದೇಸಿ ಸನ್ಮಾನ ಪ್ರಶಸ್ತಿ ಪ್ರದಾನ ಸಮಾರಂಭವು ಪಟ್ಟಣದ ಸಾರಂಗಮಠದ ಸಭಾ ಭವನದಲ್ಲಿ ಡಿ.೧೫ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನಿಧ್ಯವಹಿಸುವರು. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ.ಎಂ.ಎಸ್.ಮದಭಾವಿ ಅವರು ಅಧ್ಯಕ್ಷತೆವಹಿಸಲಿದ್ದಾರೆ.ಜಾನಪದ ವಿದ್ವಾಂಸ ಡಾ.ಸಂಗಮೇಶ ಬಿರಾದಾರ ಅವರಿಗೆ ದೇಸಿ ಸನ್ಮಾನ ಪ್ರಶಸ್ತಿಯನ್ನು ಆಕ್ಲೆಂಡ್‌ನಲ್ಲಿನ ಬಸವ ಸಮಿತಿ ಸಂಸ್ಥಾಪಕ ಡಾ.ಲಿಂಗಣ್ಣ ಕಲಬುರ್ಗಿ ಅವರು ಪ್ರದಾನ ಮಾಡುವರು.ಡಾ.ಸಂಗಮೇಶ ಬಿರಾದಾರ ಅವರ ಬದುಕು-ಬರಹ ಕೃತಿಯನ್ನು ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಬಿಡುಗಡೆಗೊಳಿಸವರು. ವಿಶ್ರಾಂತ ಪ್ರಾಧ್ಯಾಪಕ ಡಾ.ಎಂ.ಬಿ.ಹೂಗಾರ ಲೇಖಕರ ಮಾತುಗಳನ್ನಾಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More