ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು, ವಿಜಯಪುರದ ಗೋರಬಾಯಿ ಟೋಳಿ ಮಹಿಳಾ ಸಮೂಹ ಸಂಸ್ಥೆ ಸಹಯೋಗದಲ್ಲಿ ಡಿ. ೧೪ ರಂದು ಬೆಳಗ್ಗೆ ೧೧ ಗಂಟೆಗೆ ದಿ.ಶಂಕರ ಡಾಕಪ್ಪ ಲಮಾಣಿ ಸ್ಮರಣಾರ್ಥ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರದಾನ ಹಾಗೂ ಇಂದುಮತಿ ಲಮಾಣಿ ರಚಿಸಿದ ಕಾಡಿನ ಕರಡಿ ನಾಡಿಗೆ ಬಂತು ಶಿಶು ಕಥಾ ಸಂಕಲನ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾನಿಧ್ಯವನ್ನು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ವಹಿಸವರು. ಅಧ್ಯಕ್ಷತೆಯನ್ನು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ವಹಿಸುವರು. ವಿಜಯಪುರದ ಅಂಭಾಭವಾನಿ ಮಹಿಳಾ ಸಂಘದ ಅಧ್ಯಕ್ಷೆ ಸುಧಾ ಬಿಜ್ಜರಗಿ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ, ಸಾಹಿತಿ ಜಂಬುನಾಥ ಕಂಚ್ಯಾಣಿ ಪುಸ್ತಕ ಬಿಡುಗಡೆ ಗೊಳಿಸಿ ಉಪನ್ಯಾಸ ನೀಡುವರು. ಸಾಹಿತಿ ಕಮಲಾ ಗೆಜ್ಜಿ ಪುಸ್ತಕ ಪರಿಚಯಿಸುವರು. ಬೆಂಗಳೂರಿನ ಸಾಹಿತಿ ಬಾಬು ಕೃಷ್ಣಮೂರ್ತಿ ಅವರಿಗೆ ಶಂಕರಶ್ರೀ ದತ್ತಿನಿಧಿ ಪ್ರಶಸ್ತಿ ಪ್ರಧಾನ ಮಾಡಲಾಗುವದು. ಮುಖ್ಯ ಅತಿಥಿಗಳಾಗಿ ರಾಷ್ಟೋತ್ಥಾನ ಪರಿಷತ್ತಿನ ವಿಘ್ನೇಶ್ವರ ಭಟ್, ಜನಪದ ಕಲಾವಿದರಾದ ಆರ್.ಬಿ.ನಾಯಕ, ವಸಂತ ಚವ್ಹಾಣ, ಶಾಂತಾ ಪಾಟೀಲ, ರಾಜು ರಾಠೋಡ, ತುಕಾರಾಮ ರಜಪೂತ, ಬಿ.ಎಸ್.ಬಸವರಾಜ, ಶಿವಾನಂದ ಡೋಣೂರ, ಎಚ್.ಎಸ್.ಗುರಡ್ಡಿ ಆಗಮಿಸುವರು.
ವಿಶೇಷ ಆಮಂತ್ರಿತರಾಗಿ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ ವೆಂಕಟೇಶ ಲಕ್ಷಾಣಿ ಆಗಮಿಸುವರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ತಿಳಿಸಿದ್ದಾರೆ.
