ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ವಿಶ್ವಹಿಂದು ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಹನುಮಾಮಾಲಾ ಕಾರ್ಯಕ್ರಮದಂಗವಾಗಿ ಹನುಮ ಮಾಲಾಧಾರಿಗಳಿಂದ ಪ್ರಮುಖ ಬೀದಿಗಳಲ್ಲಿ ರಾಮಾಂಜನೇಯ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ವಿಠ್ಠಲ ಮಂದಿರದಲ್ಲಿ ಬೆಳಗ್ಗೆ ಪವನ ಹೋಮ ನೆರವೇರಿಸಿದರು. ನಂತರ ಹನುಮಾನ ದೇವಸ್ಥಾನದಿಂದ ಹನುಮಾನ ಪಲ್ಲಕ್ಕಿ ಉತ್ಸವ, ಬಸವೇಶ್ವರ, ರಾಮ, ಶಿವಾಜಿ, ಹನುಮಾನ ಮೂರ್ತಿಗಳ ಮೆರವಣಿಗೆ ಆರಂಭಗೊಂಡು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಮೆರವಣಿಗೆಯಲ್ಲಿ ಹನುಮ ಮಾಲಾಧಾರಿಗಳಿಂದ ಅಯೋಧ್ಯಾಪತಿ ಶ್ರೀರಾಮಚಂದ್ರ ಕೀ ಜೈ, ಪವನ ಸುತ ಹನುಮಾನ ಕೀ ಜೈ, ಜೈ ಶ್ರೀ ರಾಮ ಜಯ ಜಯ ಶ್ರೀರಾಮ, ಹರ ಹರ ಮಹಾದೇವ, ಭಾರತ ಮಾತಾ ಕೀ ಜೈ ಘೋಷಣೆ ಕೇಳಿಬಂದವು.
ಮೆರವಣಿಗೆಯಲ್ಲಿ ಧರ್ಮ ಪ್ರಸಾರ ಜಿಲ್ಲಾ ಪ್ರಮುಖ ತಮ್ಮಣ್ಣ ಬಡಿಗೇರ, ವಿರೇಶ ಹಿರೇಮಠ, ಮಹಾದೇವ ಇಟಗಿ, ರಾಹುಲ ಜಗತಾಪ, ರವಿ ಮ್ಯಾಗೇರಿ, ಭಾಗ್ಯವಂತ ಚೌಧರಿ, ಮಂಜುನಾಥ ಮುದೂರ, ಶಿವು ರೇವಡಕರ, ನಿಂಗಪ್ಪ ಬಡಿಗೇರ, ಶಿವಾನಂದ ಬೆಲ್ಲದ, ಪದ್ಮರಾಜ ಒಡೆಯರ, ಅನಿಲ ಚವ್ಹಾಣ, ವಿರೇಶ ಗಬ್ಬೂರ, ಮಲ್ಲು ಕೋಲಕಾರ, ಕಿರಣಿ ಕೋಲಕಾರ, ಮಡು ಈರಕಾರ, ಪರಶು ಒಡೆಯರ, ಸಿದ್ದು ಜಾಡರ, ವಿನೋದ ರಗಟಿ, ನವೀನ ಬೇವನೂರ, ಅಭಿಷೇಕ ಹಂಜಗಿ, ಸಂತೋಷ ಹಿಂಗೋಲಿ, ಆಕಾಶ ಹಂಜಗಿ ಇತರರು ಇದ್ದರು.

