Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಆಲಮೇಲ: ಗ್ರಾಮೀಣ ಭಾಗದ ಬಡ ಜನರ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು 30 ವರ್ಷಗಳ ಹಿಂದೆ ಆರಂಬಿಸಿದ ಸಂಸ್ಥೆ ಇಂದು ಹೆಮ್ಮರವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವುಕುಮಾರ ಗುಂದಗಿ ಹೇಳಿದರು.ಅವರು ಪಟ್ಟಣದ ಗ್ರಾಮೀಣ ಅಭಿವೃದ್ಧಿ ವಿದ್ಯಾವರ್ಧಕ ಸಂಸ್ಥೆಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಬಿಳ್ಕೋಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮೀಣ ಬಾಗದ ಮಕ್ಕಳಿಗಾಗಿ ಆರಂಭಿಸಿದ ಈ ಸಂಸ್ಥೆ ಇಂದು ಪ್ರಾಥಮಿಕ ದಿಂದ ಪದವಿ ಮಹಾವಿದ್ಯಾಲಯದವರೆಗೆ ಒಂದೆ ಸಂಸ್ಥೆಯಲ್ಲಿ ಕಲಿಯುವಂತೆ ವ್ಯವಸ್ಥೆ ಮಾಡಲಾಗಿದೆ ಅದಕ್ಕೆ ಜನರ ಸಹಕಾರದಿಂದ ಈ ಮಟ್ಟಕ್ಕೆ ಬೆಳದಿದೆ ಎಂದು ಹೆಳಿದರು ಎಂದರು. ಮಕ್ಕಳು ಶಿಕ್ಷಣದಲ್ಲಿ ಉತ್ತಮ‌‌‌ ಸಾಧನೆ ಮಾಡಬೇಕು ಎಂದರೆ ಶಿಕ್ಷರಷ್ಟೆ ಪಾಲಕರ ಜವಾಬ್ದಾರಿ ಮುಖ್ಯವಾಗಿದೆ ಎಂದು ಹೇಳಿದರು.ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿಜೆತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಿದರು.ರಾಂಪೂರದ ನಿತ್ಯಾನಂದ ಮಹಾರಾಜರು ಸಾನಿದ್ಯ ವಹಿಸಿದ್ದರು. ಮುಖ್ಯ ಶಿಕ್ಷಕ ಜಿ.ಕೆ. ಅಂಬೂರೆ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎಸ್.ಆರ್. ಪೂಜಾರ,…

Read More

ವಿಧಾನಸಭೆಯಲ್ಲಿ ದಾಖಲೆಯ 17ನೇ ಬಜೆಟ್ ಮಂಡಿಸಿದ ಬಳಿಕ ಮುಖ್ಯಮಂತ್ರಿ ಸಿದ್ಧರಾಮಯ್ಯ ಸುದ್ದಿಗೋಷ್ಠಿ ಬೆಂಗಳೂರು: 2026-27ನೇ ಸಾಲಿನ ಆಯವ್ಯಯದಲ್ಲಿ ರಾಜ್ಯದ ಜನರ ಭರವಸೆಗಳನ್ನು ಈಡೇರಿಸುವ ಜೊತೆಗೆ ವಿತ್ತೀಯ ಶಿಸ್ತನ್ನೂ ಪಾಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.ಶುಕ್ರವಾರ ವಿಧಾನಸಭೆಯಲ್ಲಿ ದಾಖಲೆಯ 17ನೇ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, 2017ರಲ್ಲಿ ಜಿಎಸ್‌ಟಿ ಜಾರಿಗೆ ಬಂದಿದ್ದು, 8 ವರ್ಷಗಳ ನಂತರ ದರ ತರ್ಕಬದ್ಧಗೊಳಿಸಿದರು. ಇದರಿಂದ ಶೇ.10 ರಷ್ಟಿದ್ದ ರಾಜ್ಯದ ತೆರಿಗೆ ಸಂಗ್ರಹಣೆ, ಈಗ ಶೇ.4 ಕ್ಕೆ ಇಳಿದಿದೆ. ಕೆಲವು ರಾಜ್ಯಗಳು ಕೇಂದ್ರದ ದರ ಪರಿಷ್ಕರಣೆಯಿಂದ ತೊಂದರೆಗೊಳಗಾಗಿದ್ದು, ಇದುವರೆಗೂ ಚೇತರಿಸಿಕೊಂಡಿಲ್ಲ ಎಂದರು.ಜಿಎಸ್‌ಟಿ ಸಂಗ್ರಹಣೆಯಲ್ಲಿ ಮಹಾರಾಷ್ಟ್ರ ನಂತರ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಕೇಂದ್ರದ ಈ ಹೊಸ ನೀತಿಯಿಂದ ರಾಜ್ಯಕ್ಕೆ ಸುಮಾರು ಸುಮಾರು ₹10 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಮುಂದಿನ ವರ್ಷ ₹15,000 ಕೋಟಿಯಷ್ಟು ನಷ್ಟವಾಗಲಿದೆ. ಕೇಂದ್ರ ಸರ್ಕಾರ ಅಸಹಕಾರ ಮತ್ತು ಮಲತಾಯಿ ಧೋರಣೆ ತೋರುತ್ತಿದೆ. ಆದರೂ ನಮ್ಮ ಬಜೆಟ್ ನಲ್ಲಿ ಹೆಚ್ಚು ವಿತ್ತೀಯ…

Read More

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಅಪರಜಿಲ್ಲಾಧಿಕಾರಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಭಾರತದ ಜನಗಣತಿ 2026ರ ಮನೆ ಪಟ್ಟಿ ಜನಗಣತಿ ಕಾರ್ಯಕ್ಕೆ ವಿಶೇಷ ಪ್ರಕರಣ ಹೊಂದಿರುವ ನೌಕರರಿಗೆ ಮತ್ತು ಶಿಕ್ಷಕರಿಗೆ ಮನೆ ಪಟ್ಟಿ ಹಾಗೂ ಜನಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕೆಂದು ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸುರೇಶ ಶಡಶ್ಯಾಳ ನೇತೃತ್ವದಲ್ಲಿ ಅಪರಜಿಲ್ಲಾಧಿಕಾರಿ ಡಾ.ಔದ್ರಾಮ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಸುರೇಶ ಶಡಶ್ಯಾಳ ಈಗಾಗಲೇ ವರ್ಗಾವಣೆಯಾದ ಶಿಕ್ಷಕರು, ವಿಶೇಷ ಚೇತನ ನೌಕರರಿಗೆ ಹಾಗೂ ಗರ್ಭಿಣಿ ಮಹಿಳಾ ನೌಕರರಿಗೆ ತೀವ್ರತರವಾದ ಕಾಯಿಲೆಯುಳ್ಳ ಸರ್ಕಾರಿ ನೌಕರರಿಗೆ, ಒಂದು ವರ್ಷದ ಮಗು ಇರುವ ಮಹಿಳಾ ನೌಕರರಿಗೆ ಈಗಾಗಲೇ ಬಿ. ಎಲ್. ಓ ಆಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರಿಗೆ ಹಾಗೂ ಶಿಕ್ಷಕರಿಗೆ 55 ವರ್ಷ ಮೀರಿದ ಪುರುಷ ನೌಕರರಿಗೆ, 50 ವರ್ಷ ಮೀರಿದ ಮಹಿಳಾ ನೌಕರರಿಗೆ ಭಾರತದ ಜನಗಣತಿ ಮನೆ ಪಟ್ಟಿ ಕಾರ್ಯಕ್ಕೆ ವಿನಾಯಿತಿ ನೀಡಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ನೌಕರರ…

Read More

ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಸೃಷ್ಟಿಸಿದ ಗೃಹಲಕ್ಷ್ಮಿ ಯೋಜನೆ | ಪದವೀಧರರ ಪಾಲಿಗೆ ಆಶಾಕಿರಣ ಯುವ‌ನಿಧಿ ಯೋಜನೆ ಲೇಖನ- ಮಿಥುನ ಬನಸೋಡೆಪ್ರ ಶಿಕ್ಷಣಾರ್ಥಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಜಯಪುರ ಉದಯರಶ್ಮಿ ದಿನಪತ್ರಿಕೆ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳು ವಾಸ್ತವದಲ್ಲಿ ಕರುನಾಡು ಜನತೆಯ ಪಾಲಿಗೆ ವರದಾನವಾಗಿ ಹೊರಹೊಮ್ಮಿದ್ದು, ಗೃಹಲಕ್ಷ್ಮಿ ಯೋಜನೆಯಂತೂ ಮಹಿಳೆಯರ ಸ್ವಾವಲಂಬಿ‌ ಜೀವನಕ್ಕೆ ಸೋಪಾನವಾಗಿ‌ದ್ದು, ಮಹಿಳಾ‌ ಸಬಲೀಕರಣಕ್ಕೆ ನೈಜ ಶಕ್ತಿ‌ ತುಂಬಿದೆ‌.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ಚುಕ್ಕಾಣಿ ಹಿಡಿಯುತ್ತಿದ್ದಂತೆಯೇ ಪಂಚ ಗ್ಯಾರಂಟಿ ಯೋಜನೆಗಳನ್ನು ಹಂತ-ಹಂತವಾಗಿ ಜಾರಿಗೊಳಿಸುವುದರ ಮೂಲಕ ರಾಜ್ಯದ‌ ಶ್ರೀ ಸಾಮಾನ್ಯರಾದಿಯಾಗಿ ಎಲ್ಲ ವರ್ಗದ ಜನತೆಯ ಸಂಪ್ರೀತಿಗೆ ಪಾತ್ರರಾಗಿದ್ದಾರೆ.2023 ರ ಜುಲೈನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು 2023-24ನೇ ಸಾಲಿನ ಆಯವ್ಯಯ ಭಾಷಣದಲ್ಲಿ ರಾಜ್ಯದ ಜನತೆಗೆ ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ, ಗೃಹ ಲಕ್ಷ್ಮೀ ಮತ್ತು ಯುವ ನಿಧಿ ಯೋಜನೆಗಳನ್ನು ಜಾರಿಗೊಳಿಸುವುದಾಗಿ ಘೋಷಿಸಿದ್ದೇ ತಡ.ಶಕ್ತಿ ಯೋಜನೆಅದೇ ವರ್ಷದ ಜೂನ್ 11 ರಂದು ಶಕ್ತಿ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಆಂಧ್ರ ಪ್ರದೇಶದಲ್ಲಿ ಪ್ಯಾರಾ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಹಾಗೂ ಪ್ಯಾರಾ ಒಲಂಪಿಕ್ ಕಮಿಟಿ ಆಫ್ ಇಂಡಿಯಾ ಜಂಟಿಯಾಗಿ ಆಯೋಜನೆ ಮಾಡಿದ್ದ ೧೪ನೇ ಹಿರಿಯರ ಪುರುಷರ ಸಿಟ್ಟಿಂಗ್ ವಾಲಿಬಾಲ್ ನ್ಯಾಷನಲ್ ಚಾಂಪಿಯನ್‌ಶಿಪ್ ಲೀಗ್‌ನಲ್ಲಿ ಕರ್ನಾಟಕ ತಂಡ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ.ಈ ಆಟದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ದಿವ್ಯಾಂಗ ಕ್ರೀಡಾಪಟು ಯಮನಪ್ಪ ಶಂಕ್ರೆಪ್ಪ ದೊಡಮನಿ ಭಾಗಿಯಾಗಿ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ. ಪ್ಯಾರಾಲಿಂಪಿಕ್ ಕಮಿಟಿ ಆಫ್ ಇಂಡಿಯಾ ಅಧ್ಯಕ್ಷ ಸತ್ಯ ನಾರಾಯಣ, ಪ್ಯಾರಾ ವಾಲಿಬಾಲ್ ಫೆಡರೇಷನ್ ಆಫ್ ಇಂಡಿಯಾದ ಜನರಲ್ ಸೆಕ್ರೆಟರಿ ವಿಜಯರಾವ್ ಶಿಂದೆ, ದಿವ್ಯಾಂಗ ಪ್ಯಾರಾ ವಾಲಿಬಾಲ್ ಅಸೋಸಿಯೇಷನ್ ಆಫ್ ಕರ್ನಾಟಕ ಪ್ರಧಾನ ಕಾರ್ಯದರ್ಶಿ ತರಬೇತುದಾರ ರಾಘವೇಂದ್ರ, ಸಿಂದಗಿ ತಾಪಂ ಕಚೇರಿಯ ಎಂ.ಆರ್.ಡಬ್ಲ್ಯೂ ಮುತ್ತುರಾಜ ಸಾತಿಹಾಳ ಸೇರಿದಂತೆ ಸಹಚರ ಆಟಗಾರರು ದಿವ್ಯಾಂಗ ಮಿತ್ರರು ಅಭಿನಂದಿಸಿದ್ದಾರೆ.

Read More

ಸಿಂದಗಿಯ ಪ್ರೇರಣಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ೧೦ನೆಯ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶುಭ ಕೋರುವ ಸಮಾರಂಭ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ವಿದ್ಯಾರ್ಥಿಗಳಲ್ಲಿ ಕರ, ಉರ, ಶಿರ ಶುದ್ಧವಾಗಬೇಕು, ಸಮಾಜ ನಮಗೆ ಏನು ನೀಡಿದೆ ಎನ್ನುವುದರ ಬದಲು ಸಮಾಜಕ್ಕಾಗಿ ನಾವು ಏನು ಕೊಡುಗೆ ನೀಡಬೇಕಿದ ಎಂಬುದರ ಬಗ್ಗೆ ಅವಲೋಕಿಸಬೇಕು ಎಂದು ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮಯ್ಯ ಶ್ರೀಗಳು ಹೇಳಿದರು.ಸಿಂದಗಿ ನಗರದ ರಾಂಪುರ ರಸ್ತೆಯಲ್ಲಿರುವ ಪ್ರೇರಣಾ ಆಂಗ್ಲ ಮಾದ್ಯಮ ಶಾಲೆಯಲ್ಲಿ ೧೦ನೆಯ ತರಗತಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡ ಶೂಭಕೋರುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಬಂದಿದ್ದು ಎಲ್ಲ ಮಕ್ಕಳು ಮೊಬೈಲ್‌ನ್ನು ಬಿಟ್ಟು ಪುಸ್ತಕ ಹಿಡಿಯಬೇಕು. ಓದಿನೆಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.ಈ ವೇಳೆ ವಿಜಯಪುರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಬಿ.ಜಿ. ಸಜ್ಜನ, ವಿಜಯಪುರದ ಅಂಜುಮನ್ ಬಾಲಕಿಯರ ಪಪೂ ಕಾಲೇಜಿನ ಪ್ರಾಚಾರ್ಯ ಎಮ್.ಎ.ಜುಮನಾಳ ಎಮ್.ಸಿ.ಸಿಂದಗಿ ಮಾತನಾಡಿ, ವಿದ್ಯಾರ್ಥಿಗಳು ಕಲಿಸಿದ ಗುರು, ಪಾಲನೆ ಮಾಡಿದ ತಂದೆ-ತಾಯಿ ಧರ್ಮ ಗುರುಗಳನ್ನು ಜೀವನದಲ್ಲಿ ಮರೆಯಬಾರದು. ಮಕ್ಕಳು…

Read More

ಸಿಂದಗಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಮಂಡಿಸಿದ ೨೦೨೬-೨೭ ನೇ ಸಾಲಿನ ಬಜೆಟ್ ಸಂಪೂರ್ಣ ಬಡವರ, ರೈತರ ಮತ್ತು ರಾಜ್ಯದ ಅಭಿವೃದ್ದಿ ಪರವಾದ ಬಜೆಟ್ ಆಗಿದೆ. ಸಾಮಾಜಿಕ ನ್ಯಾಯ ಬಡಜನತೆಯ ಕಲ್ಯಾಣಕ್ಕೆ ಹೆಚ್ಚು ಮಹತ್ವ ಈ ಬಾರಿ ಮೂಡಿಬಂದಿದೆ. ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ರಾಜ್ಯದ ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ವಿರೋಧ ಪಕ್ಷದವರು ಎಷ್ಟೇ ಟೀಕಿಸಿದರು ರಾಜ್ಯದ ಜನತೆ ಈ ಬಾರಿಯ ಬಜೆಟೆಗೆ ಶಾಸಕ ಅಶೋಕ ಮನಗೂಳಿ ಸೈ ಎಂದಿದ್ದಾರೆ.ಅದರಲ್ಲಿ ಸಿಂದಗಿ ಮತಕ್ಷೇತ್ರಕ್ಕೆ ಮೊದಲ ಬಾರಿಗೆ ಕಾರ್ಮಿಕ ಮಕ್ಕಳಿಗಾಗಿ ೬ನೇ ತರಗತಿಯಿಂದ ೧೨ನೇ ತರಗತಿಯ ವರೆಗೆ ಶ್ರಮಿಕ ವಸತಿ ಶಾಲೆ, ಪ್ರಗತಿ ಪಥ ಯೋಜನೆಯಡಿಯಲ್ಲಿ ಸಿಂದಗಿ ಮತಕ್ಷೇತ್ರದ ೩೦ಕೀಮಿ ಗ್ರಾಮೀಣ ರಸ್ತೆಗಳ ಸುಧಾರಣೆಗೆ ಬಜೆಟ್‌ನಲ್ಲಿ ಅನುದಾನ ಮಂಜೂರಾಗಿದೆ, ಮತಕ್ಷೇತ್ರದ ಕೆಂಗನಾಳ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ, ಲೋಕೋಪಯೋಗಿ ಇಲಾಖೆಯ ಕೇಶಿಪ್ ಯೋಜನೆಯಡಿಯಲ್ಲಿ ಚಡಚಣ-ಇಂಡಿ-ಆಲಮೇಲ-ಗಾಣಗಾಪೂರ ಪಟ್ಟಣಕ್ಕೆ ಸೇರುವ…

Read More

ವಿದಾನಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕಳೆದ ಮೂರು ವರ್ಷಗಳಿಂದ ಅಭಿವೃದ್ಧಿ ಶೂನ್ಯ ಬಜೆಟ್ ಕೊಟ್ಟಿರುವಂತಹ ಸಿಎಂ ಸಿದ್ದರಾಮಯ್ಯ ಅವರು ಗ್ರಾರಂಟಿಯನ್ನೇ ಹೊಸ ಆರ್ಥಿಕತೆ ಸೃಷ್ಠಸಿದ್ದೇವೆ ಎನ್ನುವ ಭ್ರಮೆಯನ್ನು ಸೃಷ್ಠಿಸಿದ್ದಾರೆ. ಆರ್ಥಿಕತೆಯ ಹೊಸ ಭಾಷೆ ಬರೆಯುತ್ತೇವೆ. ಪ್ರತಿಯೊಬ್ಬರಿಗೂ ಸಶಕ್ತರನ್ನಾಗಿ ಮಾಡುತ್ತೇವೆ ಎಂದು ಹೊರಟಿದ್ದರು. ಆದರೆ ರಾಜ್ಯ ಆರ್ಥಿಕತೆಯಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ಪ್ರತಿ ತಿಂಗಳು ಸಂಬಳ ತೆಗೆದುಕೊಳ್ಳದ ಸ್ಥಿತಿಗೆ ರಾಜ್ಯ ಸರಕಾರಿ ನೌಕರರು ಬಂದು ತಲುಪಿದ್ದಾರೆ. ಜೊತೆಗೆ ಮಕ್ಕಳ ವಸತಿ, ಸ್ಕಾಲರ್‌ಶಿಪ್ ಇಲ್ಲದೇ ಮಕ್ಕಳು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಸಶಕ್ತಿಕರಣ ಮಾಡುತ್ತೇವೆ ಎಂದು ೫ಗ್ಯಾರಂಟಿಗಳನ್ನು ಕೊಟ್ಟು ಅಭಿವೃದ್ಧಿಗೆ ಹಣವಿಲ್ಲ ಎಂಬುದು ಸ್ವಪಕ್ಷದ ಶಾಸಕರಿಂದ ಮಾತುಗಳು ಕೇಳಿವರುತ್ತಿವೆ ಹಾಗಾಗಿ ಇದೊಂದು ಮರಿಚಿಕೆ ಬಜೆಟ್ ಆಗಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪುರ ತಿಳಿಸಿದ್ದಾರೆ.

Read More

ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಪತ್ರ ಉದಯರಶ್ಮಿ ದಿನಪತ್ರಿಕೆ ವಿಜಯಪುರ: 2026 ನೇ ಸಾಲಿನ ಬಜೆಟ್ ನಲ್ಲಿ ತಾವು ವಚನ ವಿಶ್ವ ವಿದ್ಯಾಲಯದ ಸ್ಥಾಪನೆಗೆ 25 ಎಕರೆ ಭೂಮಿ ನೀಡುವುದಾಗಿ ಘೋಷಣೆ ಮಾಡಿದ್ದು ಸಂತೋಷದ ವಿಚಾರ. ಆದರೆ ವಿಶ್ವ ವಿದ್ಯಾಲಯವು ಸರಕಾರಿ ವಿಶ್ವವಿದ್ಯಾಲಯ ಆಗಬೇಕೆ ಹೊರತು ಖಾಸಗಿ ಸಂಸ್ಥೆ ಅಥವಾ ಮಠಗಳು ನಡೆಸುವ ಸಂಸ್ಥೆ ಆಗಬಾರದು ಎಂದು ಪುಣೆಯ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ.ಶಶಿಕಾಂತ ಪಟ್ಟಣ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.ಈ ಕುರಿತು ಶುಕ್ರವಾರ ಪತ್ರಿಕೆಗೆ ಪತ್ರ ಬಿಡುಗಡೆ ಮಾಡಿದ ಅವರು, ಹೋದ ಸಲದ ಬಜೆಟ್ ನಲ್ಲಿ ನೀವು ಬೆಂಗಳೂರಿನಲ್ಲಿ ವಚನ ಅಧ್ಯಯನ ಸಂಸ್ಥೆಯನ್ನು ಸ್ಥಾಪಿಸುತ್ತೇನೆ ಎಂದು ಘೋಷಣೆ ಮಾಡಿದ್ದೀರಿ ಆದರೆ ಅದು ಇಲ್ಲಿಯವರೆಗೆ ಅನುಷ್ಠಾನಕ್ಕೆ ಬಂದಿಲ್ಲ.ನ್ಯಾಯಮೂರ್ತಿ ಶ್ರೀ ನಾಗಮೋಹನದಾಸ ವರದಿ ಆಧಾರಿತ ಸರಕಾರದ ನಿರ್ಣಯದ ಪ್ರಸ್ತಾವನೆ ಲಿಂಗಾಯತ ಧರ್ಮದ ಮಾನ್ಯತೆ ಮತ್ತು ಅಲ್ಪ ಸಂಖ್ಯಾತ ಸ್ಥಾನಮಾನದ…

Read More

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಖಾಲಿ ಚೊಂಬು ಕೊಟ್ಟಿದೆ ಎಂದು ಪ್ರತಿಪಕ್ಷ ಬಿಜೆಪಿ ಕಿಡಿ ಕಾರಿದೆ.ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ದಾಖಲೆಯ 17ನೇ ಬಾರಿ ಬಜೆಟ್ ಮಂಡಿಸಿದರು. ಆದರೆ ಪ್ರತಿಪಕ್ಷ ಬಿಜೆಪಿ ಈ ಬಜೆಟ್ ವಿರೋಧಿಸಿ, ಕೈಯಲ್ಲಿ ಖಾಲಿ ಚೊಂಬು ಹಿಡಿದು ಪ್ರತಿಭಟನೆ ನಡೆಸಿದೆ.ರಾಜ್ಯದ ಜನತೆಗೆ ಖಾಲಿ ಚೊಂಬು ಕೊಟ್ಟ ಕಾಂಗ್ರೆಸ್‌ ಸರ್ಕಾರಕ್ಕೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಹಲವು ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.ರಾಜ್ಯದ ಜನತೆಯನ್ನು ಸಾಲದ ಸುಳಿಯಲ್ಲಿ ಸಿಲುಕಿಸುವಂತಹ ಬಜೆಟ್‌ ಮಂಡಿಸಿದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಇಂದು ವಿಜಯೇಂ ಮತ್ತು ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿ ಶಾಸಕರು ವಿಧಾನಸೌಧದ ಮುಂಭಾಗದಲ್ಲಿ ಖಾಲಿ ಚೊಂಬು ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದರು.ಈ ವೇಳೆ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಆರ್ ಅಶೋಕ್, ರಾಜ್ಯದ…

Read More