Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೨೨೦ಕೆವಿ ನಂದಿಹಾಳ ವಿದ್ಯುತ್ ಉಪ ಕೇಂದ್ರದಲ್ಲಿ ತುರ್ತು ಕಾಮಗಾರಿ ಹಾಗೂ ತ್ರೈಮಾಸಿಕ ನಿರ್ವಹಣಾ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ೨೨೦ಕೆವಿ ನಂದಿಹಾಳ ಮಾರ್ಗಗಳಲ್ಲಿ ಬರುವ ೨೨೦ಕೆವಿ ಬಸವನ ಬಾಗೇವಾಡಿ ಮಾರ್ಗ-೨,೨೨೦ಕೆವಿ ವಿಜಯಪುರ ಮಾರ್ಗ೧ ಹಾಗೂ ೨, ೨೨೦ಕೆವಿ ವಿಜಯಪುರ ಉಪ-ಕೇಂದ್ರದಡಿ ಬರುವ ೧೧೦ಕೆ.ವಿ ಉಪ ಕೇಂದ್ರಗಳಾದ ವಿಜಯಪುರ ನಗರ, ಭೂತನಾಳ, ಕೆ.ಐ.ಎ.ಡಿ.ಬಿ ವಿಜಯಪುರ, ಜುಮನಾಳ, ೩೩ಕೆವಿ ಉಪ-ಕೇಂದ್ರಗಳಾದ ತಿಡಗುಂದಿ, ನಾಗಠಾಣ, ಹೊನ್ನುಟಗಿ, ೩೩ ಕೆವಿ ಅರಕೇರಿ ಎಲ್.ಐ.ಎಸ್ ಮಾರ್ಗ, ೨೨೦ಕೆ.ವಿ ವಿದ್ಯುತ್ ಕೇಂದ್ರ ಇಂಡಿ ಮೇಲೆ ಬರುವ ೧೧೦ಕೆವಿ ಉಪ-ಕೇಂದ್ರಗಳಾದ ಇಂಡಿ, ಝಳಕಿ, ಹಿರೆಮಸಳಿ, ಇಂಚಗೇರಿ, ಜಿಗಜಿವಣಗಿ, ಕೆರೂರ, ಚಡಚಣ, ರೊಡಗಿ, ಧೂಳಖೇಡ, ೩೩ಕೆವಿ ಉಪ-ಕೇಂದ್ರಗಳಾದ ನಾದ ಬಿಕೆ, ತಾಂಬಾ, ತಡವಲಗಾ, ಹಲಸಂಗಿ, ನೀವರಗಿ, ಹೋರ್ತಿ, ಬಿಎಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಮರಗೂರ ಹಾಗೂ ೨೨೦ಕೆ.ವಿ ವಿದ್ಯುತ್ ಕೇಂದ್ರ ಆಹೇರಿ ಮೇಲೆ ಬರುವ ೧೧೦ ಕೆ.ವಿ ಉಪ-ಕೇಂದ್ರಗಳಾದ ಸಿಂದಗಿ, ಮಲಘಾಣ (ಸಿಂದಗಿ) ಮತ್ತು ೩೩ ಕೆವಿ ಉಪ-ಕೇಂದ್ರಗಳಾದ ಗೋಲಗೇರಿ,ಕಲಕೇರಿ ವಿದ್ಯುತ್ ಉಪ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಯಕ್ತಾಪೂರ ಹಾಗೂ ಬೇವಿನಾನ ಗ್ರಾಮದ ಶ್ರೀ ಗುತ್ತಿಬಸವೇಶ್ವರ ದೇವಸ್ಥಾನ ಮಂಡಳಿಯವರು ಪಟ್ಟಣದ ಉಪತಹಸೀಲ್ದಾರ್ ಮೂಲಕ ಮಂಗಳವಾರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಆಗ್ರಹಿಸಿದರು.ಇದೇ ವೇಳೆ ಹಿರಿಯ ಮುಖಂಡ ಮಾಜಿ ಜಿಪಂ ಉಪಾಧ್ಯಕ್ಷೆ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ಈ ಭಾಗದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವಸ್ಥಾನದ ನವೀಕರಣಕ್ಕೆ ಮುಜುರಾಯಿ ಇಲಾಖೆಯಲ್ಲಿರುವ ದೇವಸ್ಥಾನದ ಹಣ ಮತ್ತು ಭಕ್ತರಿಂದ ದೇಣಿಗೆ ಸಂಗ್ರಹ ಮಾಡಿ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುವುದು ಎಂದು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈಗಾಗಲೇ ಭಕ್ತರಿಂದ ದೇಣಿಗೆ ಪಡೆದು ಹಣ ಸುರಪುರ ತಹಸೀಲ್ದಾರ್ ಖಾತೆಗೆ ಜಮಾ ಮಾಡಿ ಜಮಾ ಖರ್ಚಿನ ಲೆಕ್ಕ ನಿರ್ವಹಣೆ ಕುರಿತು ತಹಿಸೀಲ್ದಾರ ಸುರಪುರವರಿಗೆ ತಿಳಿಸಲಾಗಿದೆ, ಆದರೆ ಕೆಲವರು ದೇವಸ್ಥಾನದ ಹಣ ದುರುಪಯೋಗವಾಗಿದೆ ಎಂದು ದೂರು ನೀಡಿ ಭಕ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ, ಮುಜುರಾಯಿ ಇಲಾಖೆಯ ಅಡಿಯಲ್ಲಿ ಬರುವ 400 ಹೆಚ್ಚು ದೇವಸ್ಥಾನಗಳು ಹೇಗೆ ಹಣ ಸಂಗ್ರಹಿಸಿ ನಿರ್ವಹಣೆ ಮಾಡುತ್ತವೆ ಹಾಗೆಯೇ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ತಿಕೋಟಾದಲ್ಲಿರುವ ನರ್ಸಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸಂತೋಷ ಇಂಡಿ ಅವರು ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ 10ನೇ ಸೆನೆಟ್ ಚುನಾವಣೆಯಲ್ಲಿ ಸೆನೆಟ್ ಆಗಿ ಆಯ್ಕೆಯಾಗುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.ವೈದ್ಯಕೀಯ, ದಂತ ವೈದ್ಯಕೀಯ, ನರ್ಸಿಂಗ್, ಆಯುರ್ವೇದ, ಫಾರ್ಮಸಿ, ಫಿಸಿಯೋಥೆರಪಿ, ಹೋಮಿಯೋಪತಿ, ಯುನಾನಿ, ಅಲೈಡ್ ಹೆಲ್ತ್ ಸೈನ್ಸಸ್, ನ್ಯಾಚುರೋಪತಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ತನ್ನ ವೈವಿಧ್ಯಮಯ ಅಧ್ಯಾಪಕರನ್ನು ಹೊಂದಿರುವ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂತೋಷ ಇಂಡಿ ಅವರು 2024 ರಿಂದ 2027ರ ವರೆಗೆ ಮೂರು ವರ್ಷಗಳ ಅವಧಿಗೆ ಸೆನೆಟ್ ಆಗಿ ಆಯ್ಕೆಯಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಸಂತೋಷ ಇಂಡಿ ಅವರನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್. ವಿ. ಕುಲಕರ್ಣಿ ಅವರು ಸೋಮವಾರ ವಿಜಯಪುರದಲ್ಲಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್. ಎ. ಬಿರಾದಾರ(ಕನ್ನಾಳ), ತಿಕೋಟಾ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಸಿದ್ದಾಪುರ, ವಿಜಯಪುರ ಕಾಲೇಜಿನ ಪ್ರಾಚಾರ್ಯ ಡಾ. ಶಾಲ್ಮೊನ್ ಚೋಪಡೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಡಿಸೆಂಬರ್ 22 ರವಿವಾರರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2024 ರಲ್ಲಿ ಪಾಲ್ಗೊಳ್ಳಲು ವಿದೇಶಗಳಿಂದ ಓಟಗಾರರು ಆಗಮಿಸುತ್ತಿದ್ದಾರೆ.ವಿಜಯಪುರ ತಾಲೂಕಿನ ಹೊನಗನಹಳ್ಳಿ ಮೂಲದ ಮತ್ತು ಈಗ ಜರ್ಮನಿಯಲ್ಲಿ ಉದ್ಯೋಗಿಯಾಗಿರುವ ವಿರೇಶ ಬಿರಾದಾರ ಹಾಗೂ ಬಬಲೇಶ್ವರ ಮೂಲದ ಹಾಗೂ ಈಗ ಅಮೇರಿಕಾದ ಟೆಕ್ಸಾಸ್ ನಲ್ಲಿ ಸಾಫ್ಟವೇರ್ ಎಂಜನಿಯರ್ ಆಗಿರುವ ವಿನಯಕುಮಾರ ಜಂಗಮಶೆಟ್ಟಿ ಈ ಬಾರಿಯ ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.ವಿರೇಶ ಬಿರಾದಾರ ಜರ್ಮನಿಯಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದು, ಈಗಾಗಲೇ ವಿಪ್ರೊ, ಟಾಟಾ ಮ್ಯಾರಥಾನ್ ಮತ್ತು ಜರ್ಮನಿಯಲ್ಲಿ ನಡೆದ ಅನೇಕ ಮ್ಯಾರಥಾನ್ ಗಳಲ್ಲಿ ಓಡಿದ್ದಾರೆ. ಈ ಬಾರಿ ವಿಜಯಪುರದಲ್ಲಿ ನಡೆಯಲಿರುವ ಮ್ಯಾರಥಾನ್ ನಲ್ಲಿ 10 ಕಿ.ಮೀ ರನ್ ನಲ್ಲಿ ಓಡಲಿದ್ದಾರೆ.ಬಬಲೇಶ್ವರ ಮೂಲದ ವಿನಯಕುಮಾರ ಜಂಗಮಶೆಟ್ಟಿ ಅಮೇರಿಕಾದ ಟೆಕ್ಸಾಸ್ ನಲ್ಲಿ ಸಾಫ್ಟವೇರ್ ಎಂಜನಿಯರ್ ಆಗಿದ್ದು, ವಿಜಯಪುರದಲ್ಲಿ ನಡೆಯಲಿರುವ ಹೆರಿಟೇಜ್ ರನ್ ನಲ್ಲಿ 21 ಕಿ.ಮೀ ವಿಭಾಗದಲ್ಲಿ ಓಡಲಿದ್ದಾರೆ. ಅಲ್ಲದೇ, ಅವರು ಈಗಾಗಲೇ ಅನೇಕ ಮ್ಯಾರಥಾನ್ ಗಳಲ್ಲಿ ಪಾಲ್ಗೊಂಡು ಗಮನ ಸೆಳೆದಿದ್ದಾರೆ.ವಿದೇಶಗಳಿಂದ ಆಗಮಿಸಿ ಈ ಓಟದಲ್ಲಿ ಪಾಲ್ಗೊಳ್ಳುತ್ತಿರುವ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶಿಕ್ಷಣದ ಜೊತೆ, ಸಹಬಾಳ್ವೆ, ಸಂಸ್ಕಾರ, ಧೈರ್ಯ, ಅತ್ಯಗತ್ಯ, ಎಂದು ಯಡಿಯಾಪೂರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಮೀರಾ ಪಿ, ಕುಲ್ಕರ್ಣಿ ಹೇಳಿದರು.ಪಟ್ಟಣದ ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲೀಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯಾದಗಿರಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಸುರಪುರ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ “ಮಿಷನ್ ಶಕ್ತಿ” ಯೋಜನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಮಗ್ರ ಸಬಲೀಕರಣ ಕಲ್ಪಿಸುವ ನಿಟ್ಟಿನಲ್ಲಿ, ಸರ್ಕಾರದ ವಿವಿಧ ಇಲಾಖೆಗಳು ಅರಿವು ಮೂಡಿಸುವ ಕಾರ್ಯ ಶ್ಲಾಘಿಸಿದ ಅವರು, ಬಾಲ್ಯ ವಿವಾಹ ನಿಷೇಧ ಕಾಯ್ದೆ ವರದಕ್ಷಿಣೆ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ, ಭ್ರೂಣ ಹತ್ಯೆ, ಲಿಂಗ ತಾರತಮ್ಯ ಖಂಡಿಸುತ್ತಾ, ನಮಗೆ ನಾವೇ ಮಾದರಿಯಾಗಿ ಬದುಕಬೇಕು, ಕೆಲಸ ನಿರ್ವಹಿಸುತ್ತಿರುವ ಮತ್ತು ಸಾರ್ವಜನಿಕ, ಸ್ಥಳಗಳಲ್ಲಿ ಮಹಿಳೆಗೆ ಆಗುವ ಅವಮಾನ, ಶೋಷಣೆಯಿಂದ ಹೊರ ಬರಲು…
ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಾಚ್ಯ ಶಬ್ದ ಬಳಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಅವರನ್ನು ತಕ್ಷಣ ಹುಚ್ಚಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ತನಗೆ ಸಹೋದರಿ ಸಮಾನಳಾದ ಮಹಿಳಾ ಸಚಿವೆ ಒಬ್ಬರ ಬಗ್ಗೆ ಇಂಥ ಕೀಳು ಮಟ್ಟದ ಪದ ಪ್ರಯೋಗ ಮಾಡಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ, ಸಿ.ಟಿ ರವಿ ಅವರೇ ನಿಮಗೆ ಮನೆಯಲ್ಲಿ ಅಕ್ಕ-ತಂಗಿ, ತಾಯಿ, ಧರ್ಮಪತ್ನಿ ಇಲ್ಲವೇ? ಒಂದು ವೇಳೆ ಮನೆಯಲ್ಲಿ ತಾಯಿ ಇದ್ದರೆ, ಅಕ್ಕ ತಂಗಿ ಧರ್ಮಪತ್ನಿ ಇದ್ದರೆ ನಾನು ಮಹಿಳೆಯೊಬ್ಬರಿಗೆ ಈ ಪದ ಪ್ರಯೋಗ ಮಾಡಿದ್ದು ಸರಿಯೇ ಎಂದು ಅವರಿಂದ ಕೇಳಿ ತಿಳಿಯಿರಿ. ಆಗಲಾದರೂ ಸಂಸ್ಕಾರವಿಲ್ಲದ ನಿಮ್ಮ ಎಲುಬಿಲ್ಲದ ನಾಲಿಗೆಗೆ, ವಿವೇಚನೆಯನ್ನೇ ಕಳೆದುಕೊಂಡಿರುವ ನಿಮ್ಮ ಮೆದುಳಿಗೆ, ಮಾತೆತ್ತಿದರೆ ದೇಶಭಕ್ತಿ ಭಾರತ ಮಾತೆಯ ಬಗ್ಗೆ ಮಾತನಾಡುವ ಆಚಾರವಿಲ್ಲದ ನಿಮ್ಮ…
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿ, ಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪುಟ್ಟ ಮಕ್ಕಳು ಗುಂಪಾಗಿ ನೃತ್ಯ ಮಾಡುವಾಗ ಹೆದರುವುದಿಲ್ಲ, ಆದರೆ ಅದೇ ಮಕ್ಕಳನ್ನು ಒಬ್ಬೊಬ್ಬರಾಗಿ ವೇದಿಕೆಯ ಮೇಲೆ ಕರೆದು ನಿಲ್ಲಿಸಿದಾಗ ಕೆಲ ಮಕ್ಕಳು ವೇದಿಕೆಯ ಮೇಲೆ ಬರುತ್ತಲೇ ಭಯದಿಂದ ಅಳತೊಡುತ್ತಾರೆ.ಇದು ಕೇವಲ ಮಕ್ಕಳಿಗೆ ಮಾತ್ರ ಸೀಮಿತವಲ್ಲ.. ಬಹಳಷ್ಟು ಜನ ವೇದಿಕೆಯ ಮೇಲೆ ಮಾತನಾಡಲು ಎದ್ದು ನಿಲ್ಲುತ್ತಲೇ ಗಾಬರಿಯಿಂದ ನಡುಕ ಉಂಟಾಗಿ ಇಲ್ಲವೇ ಬೆವರಿ ಏನೂ ಮಾತನಾಡಲಾಗದೆ ಹೋಗುತ್ತಾರೆ. ಹೀಗೇಕೆ ಆಗುತ್ತದೆ?ವೇದಿಕೆಯ ಮೇಲೆ ಭಯದಿಂದ ಮುಕ್ತರಾಗಿ ಸರಾಗವಾಗಿ ಮಾತನಾಡಲು ಸಾಧ್ಯವಾಗದೆ ಇರುವ ಕಾರಣವಾದರೂ ಏನು?ಮೊದಲನೆಯದಾಗಿ ಭಯ ಮತ್ತು ಆತಂಕ.. ಭಾವನಾತ್ಮಕವಾಗಿ ಮತ್ತು ಮಾನಸಿಕವಾಗಿ ನನಗೆ ಮಾತನಾಡಲು ಸಾಧ್ಯವೇ?ಎಂಬ ಭಯ ಆತಂಕವನ್ನು ಉಂಟುಮಾಡುತ್ತದೆ. ನಮ್ಮ ಮನಸ್ಥಿತಿಯನ್ನು ಧನಾತ್ಮಕವಾಗಿ ಬದಲಾಯಿಸಿಕೊಂಡು ಭಯವನ್ನು ಹತ್ತಿಕ್ಕಿ ಹಿಂಜರಿಕೆ ಇಲ್ಲದೆ ವೇದಿಕೆಯ ಮೇಲೆ ಮೊದಮೊದಲು ಒಂದೆರಡು ನಿಮಿಷ ಮಾತನಾಡಲು ಆರಂಭಿಸಿದಾಗ ನಿಧಾನವಾಗಿ ಆತ್ಮವಿಶ್ವಾಸ ಕುದುರಿಸಿಕೊಳ್ಳಬೇಕು. ವಿಷಯ ಸಂಗ್ರಹಕ್ಕೆ ಒತ್ತು ನೀಡಿ ಕೇವಲ ಒಂದೆರಡು ವಿಷಯಗಳ ಮೇಲೆ ಸ್ಪಷ್ಟವಾಗಿ ಮತ್ತು…
ಸಾವಿಲ್ಲದ ಶರಣೆಯರು ಲೇಖನ- ಡಾ.ಶಶಿಕಾಂತ ಪಟ್ಟಣರಾಮದುರ್ಗಮೊ: 9552002338 ಉದಯರಶ್ಮಿ ದಿನಪತ್ರಿಕೆ ಕದಿರ ರೆಮ್ಮವ್ವೆ ಅವಿರಳ ವಚನಕಾರ್ತೆ. ಅವಳು ಹನ್ನೆರಡನೆಯ ಶತಮಾನದಲ್ಲಿ ಬಸವಾದಿ ಶರಣರ ವಚನ ಕ್ರಾಂತಿಯಲ್ಲಿ ಪಾಲ್ಗೊಂಡು ರಾಟಿಯಿಂದ ಕದಿರು ತೆಗೆದು ನೂಲುವ ಕಾಯಕದವಳಾಗಿದ್ದವಳು. ತೆಗೆದ ನೂಲನ್ನು ಮಾರಿ ಬಂದ ಹಣದಲ್ಲಿ ಗುರು ಲಿಂಗ ಜಂಗಮ ದಾಸೋಹ ಮಾಡಿ ಬದುಕಿದಳು. ಬಹುತೇಕರು ಈಕೆಯ ಕಾಲವನ್ನು ಬಸವಾದಿ ಪ್ರಮಥರ ಕಾಲವೆಂದು ನಿರ್ಣಯಿಸುತ್ತಾರೆ .ಡಾ ಎಲ್ ಬಸವರಾಜು ಅವರು ಇವಳ ವಚನದಲ್ಲಿ ಬರುವ “ಪರದಳ ವಿಭಾಡ” “ಗಜವೇಂಟೆಕಾರ ” ಎಂಬ ಪದಗಳನ್ನು ಗಮನಿಸಿ ಇವಳು ವಿಜಯನಗರದ 1430 ಕಾಲದ ವಚನಕಾರ್ತೆ ಎಂದು ತೀರ್ಮಾನಿಸುತ್ತಾರೆ. ಆದರೆ ಹರಿಹರ ತನ್ನ ರಗಳೆಯಲ್ಲಿ ಕದಿರ ರೆಮ್ಮವ್ವೆಯನ್ನು ಸ್ಮರಿಸಿದ್ದಾನೆ. ಪಾಲ್ಗುರಿಕೆ ಸೋಮನಾಥನು ತನ್ನ ಪಂಡಿತಾರಾಧ್ಯ ಚರಿತ್ರೆಯಲ್ಲಿ ಕದಿರ ರೆಮ್ಮವ್ವೆ ಶರಣೆಯ ಉಲ್ಲೇಖವಿದೆ. ಅಲ್ಲದೆ ಕದಿರು ಕಾಯಕದ ಕದಿರ ರೆಮ್ಮವ್ವೆಯ ಒಂದು ವಚನದಲ್ಲಿ ಬಸವಣ್ಣ , ಚೆನ್ನ ಬಸವಣ್ಣ ಪ್ರಭುದೇವರನ್ನು ಸ್ಮರಿಸಿದ್ದಾಳೆ. ಶರಣರ ವಚನಗಳ ಜೊತೆ ಈಕೆಯ ವಚನಗಳು ಮತ್ತು ಸಕಲ…
ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಟಾನ ಕುರಿತು ವಿಸ್ತೃತ ಚರ್ಚೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡವೊಂದು ಇಲ್ಲಿಯ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಟಾನ ಕುರಿತು ವಿಸ್ತೃತ ಚರ್ಚೆ ನಡೆಸಿತು.ಕಲಬುರ್ಗಿಯ ಕೇಂದ್ರೀಯ ವಿಶ್ವವಿದ್ಯಾನಿಲಯದ ಮಟ್ಟದಲ್ಲಿ ಸ್ನಾತಕೋತ್ತರ ಕೋರ್ಸ್ಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನ್ವಯ ಕೈಕೊಂಡಿರುವ ಕ್ರಮಗಳು, ಅನುಸರಿಸುತ್ತಿರುವ ಬೆಸ್ಟ್ ಪ್ರ್ಯಾಕ್ಟೀಸ್‌ಗಳು, ಎದುರಾದ ಸವಾಲುಗಳು ಮತ್ತು ಅವಕಾಶಗಳ ಕುರಿತು ಕೇಂದ್ರೀಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರ ತಂಡ ಪಿಪಿಟಿ ಮೂಲಕ ವಿವರಣೆ ನೀಡಿದರು.ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ಸ್ನಾತಕ ಕೋರ್ಸ್ಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಟಾನ ಕುರಿತು ವಿವರಣೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿವಿ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಅವರು, ಮುಂಬರುವ ವರ್ಷಗಳಲ್ಲಿ ಎರಡೂ ವಿಶ್ವವಿದ್ಯಾಲಯಗಳು ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ರ ಅನುಷ್ಟಾನದಲ್ಲಿ ಪರಸ್ಪರ ಸಹಾಯ, ಸಹಕಾರದಿಂದ ಕೆಲಸ ಮಾಡುವಂತಹ ವಾತಾವರಣ ಸೃಷ್ಟಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಕುಲಸಚಿವ ಶಂಕರಗೌಡ…
ಉದಯರಶ್ಮಿ ದಿನಪತ್ರಿಕೆ ವರದಿ: ಗುರು ಆರ್ ಹಿರೇಮಠಆಲಮೇಲ: ವಿಜಯಪುರ ಕಲಬುರ್ಗಿ ಜಿಲ್ಲೆಗಳ ನಡುಬಾಗದಲ್ಲಿರುವ ತಾಲೂಕಿನಲ್ಲಿ ಕಳೆದ ಎರಡು ಮೂರು ದಿನಗಳಿಂದ ಚಳಿ ಹೆಚ್ಚಾಗಿರುವುದರಿಂದ ಭೀಮಾ ತೀರದ ಗ್ರಾಮಗಳಲ್ಲಿ ಜನತೆ ನಡುಗುವಂತಾಗಿದೆಹವಾಮಾನ ಇಲಾಖೆಯ ಮುನ್ಸೂಚನೆ ಈಗಾಗಲೇ ನೀಡಿದ್ದು ಅದೇ ರೀತಿಯಾಗಿ ಈ ಭಾಗದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದೆ. ನಸುಕಿನ ಜಾವ ಹಾಗೂ ಸಾಯಂಕಾಲದ ವೇಳೆಗೆ ಚಳಿಯ ತೀವ್ರತೆ ಹೆಚ್ಚಾಗುತ್ತಿದ್ದು ಜನತೆ ತೊಂದರೆ ಅನುಭವಿಸುವಂತಾಗಿದೆ.ಹಲವು ದಿನಗಳಿಂದ ತಂಪು ಹೆಚ್ಚಾಗಿದೆ ಮನೆಯಲ್ಲಿದ್ದ ಸ್ವೆಟರ್, ಶಾಲು, ಟೋಪಿ, ಮಪಲಾರಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗಿದೆ.ಪ್ರಸಕ್ತ ಸಾಲಿನಲ್ಲಿ ಮಳೆಯ ಹೆಚ್ಚಳದಿಂದ ಹಾಗೂ ಬಂಗಾಳ ಕೊಲ್ಲಿ ವಾಯುವ್ಯ ಭಾಗದಲ್ಲಿ ವಾಯು ಭಾರ ಕುಸಿತದಿಂದ ಉಂಟಾಗಿರುವ ಈ ಚಳಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಜನರಲ್ಲಿ ಶೀತ, ಕೆಮ್ಮು ನೆಗಡಿ, ಕಾಣಿಸಿಕೊಂಡು ಆತಂಕಕ್ಕೀಡು ಮಾಡಿದೆ.ಬೆಳಗಿನ ವೇಳೆ ಅಲ್ಲಲ್ಲಿ ಮೈ ಕಾಯಿಸಿಕೊಳ್ಳುತ್ತಿರುವುದು ಕಂಡುಬರುತ್ತದೆ. ರಾತ್ರಿ ವೇಳೆಯಲ್ಲಿ ಸಂಜೆಯಾಗುತ್ತಲೇ ಎಲ್ಲರೂ ಗೂಡು ಸೇರುತ್ತಿದ್ದಾರೆ. ಬೆಳಗಿನ ಜಾವ ಸೂರ್ಯನ ಶಾಖ ಬಯಸಿ ಹಾತೊರೆಯುವಂತಾಗಿದೆ.ಬೆಳಗಿನ ವೇಳೆಯಲ್ಲಿ ದಟ್ಟವಾದ…
