ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಯಕ್ತಾಪೂರ ಹಾಗೂ ಬೇವಿನಾನ ಗ್ರಾಮದ ಶ್ರೀ ಗುತ್ತಿಬಸವೇಶ್ವರ ದೇವಸ್ಥಾನ ಮಂಡಳಿಯವರು ಪಟ್ಟಣದ ಉಪತಹಸೀಲ್ದಾರ್ ಮೂಲಕ ಮಂಗಳವಾರ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿ ಆಗ್ರಹಿಸಿದರು.
ಇದೇ ವೇಳೆ ಹಿರಿಯ ಮುಖಂಡ ಮಾಜಿ ಜಿಪಂ ಉಪಾಧ್ಯಕ್ಷೆ ಶಂಕ್ರಣ್ಣ ವಣಿಕ್ಯಾಳ ಮಾತನಾಡಿ, ಈ ಭಾಗದ ಆರಾಧ್ಯ ದೈವ ಶ್ರೀ ಬಸವೇಶ್ವರ ದೇವಸ್ಥಾನದ ನವೀಕರಣಕ್ಕೆ ಮುಜುರಾಯಿ ಇಲಾಖೆಯಲ್ಲಿರುವ ದೇವಸ್ಥಾನದ ಹಣ ಮತ್ತು ಭಕ್ತರಿಂದ ದೇಣಿಗೆ ಸಂಗ್ರಹ ಮಾಡಿ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುವುದು ಎಂದು ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈಗಾಗಲೇ ಭಕ್ತರಿಂದ ದೇಣಿಗೆ ಪಡೆದು ಹಣ ಸುರಪುರ ತಹಸೀಲ್ದಾರ್ ಖಾತೆಗೆ ಜಮಾ ಮಾಡಿ ಜಮಾ ಖರ್ಚಿನ ಲೆಕ್ಕ ನಿರ್ವಹಣೆ ಕುರಿತು ತಹಿಸೀಲ್ದಾರ ಸುರಪುರವರಿಗೆ ತಿಳಿಸಲಾಗಿದೆ, ಆದರೆ ಕೆಲವರು ದೇವಸ್ಥಾನದ ಹಣ ದುರುಪಯೋಗವಾಗಿದೆ ಎಂದು ದೂರು ನೀಡಿ ಭಕ್ತರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ, ಮುಜುರಾಯಿ ಇಲಾಖೆಯ ಅಡಿಯಲ್ಲಿ ಬರುವ 400 ಹೆಚ್ಚು ದೇವಸ್ಥಾನಗಳು ಹೇಗೆ ಹಣ ಸಂಗ್ರಹಿಸಿ ನಿರ್ವಹಣೆ ಮಾಡುತ್ತವೆ ಹಾಗೆಯೇ ಶ್ರೀ ಗುತ್ತಿಬಸವೇಶ್ವರ ದೇವಸ್ಥಾನ ಮಂಡಳಿಯವರು ನಿರ್ವಹಣೆ ಮಾಡುತ್ತಿದ್ದಾರೆ, ವಿರೋಧಿ ಬಣಗಳ ಮಾತಿಗೆ ಬೆಲೆ ನೀಡದೇ ಶೀಘ್ರವೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದರು.
ಪ್ರಮುಖರಾದ ಸೋಮುನಗೌಡ ದೊಡ್ಮನಿ, ಗುತ್ತಣ್ಣಗೌಡ ಪಾಟೀಲ, ಗುರಣ್ಣಗೌಡ ಗೂಗಲ್, ಶಿವನಗೌಡ ದೊಡ್ಡಮನಿ, ಚನ್ನಪ್ಪಗೌಡ ಪಾಟೀಲ, ಅಯ್ಯಪ್ಪಗೌಡ ವಂದಗನೂರು, ಲಾಲಪ್ಪ ಹೊಸ್ಮನಿ, ಬಸನಗೌಡ ಬೇವಿನಾಳ, ಸಿದ್ದನಗೌಡ ಪಾಟೀಲ, ಭೀಮು ಹೂಗಾರ , ಬಸವರಾಜ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
