Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಜ.26ರಂದು ಗಣರಾಜ್ಯೋತ್ಸವ ಅಂಗವಾಗಿ 2024ನೇ ಸಾಲಿನ (01-01-2024 ರಿಂದ 31-12-2024ರ ವರೆಗೆ) ರಾಜ್ಯ/ರಾಷ್ಟ್ರ/ ಅಂತರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕ್ರೀಡಾಪಟುಗಳಿಗೆ ಸನ್ಮಾನಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜನವರಿ 23 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ ಡಾ. ಬಿ.ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ ದೂ ಸಂಖ್ಯೆ 08325-251085/8792185141 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ ಕೋಸಂಬೆ ಅವರು ಜನವರಿ 9ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.ಅಂದು ಶಾಲೆಯಲ್ಲಿದೆ ಶಿಕ್ಷಣದ ಜೊತೆಗೆ ರಕ್ಷಣೆ, ಮಕ್ಕಳೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಜ.10 ರಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕರ ಕಚೇರಿಯಲ್ಲಿ ಆರ್.ಟಿ.ಇ ಕುರಿತು ಸಭೆಯನ್ನು ನಡೆಸಲಿದ್ದಾರೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಾರ್ಮಿಕ ಕಲ್ಯಾಣ ನಿಧಿ ವಂತಿಕೆಯನ್ನು ಇದೇ ಜನವರಿ 15 ಕೊನೆಯದಿನವಾಗಿದ್ದು ವಂತಿಕೆಯನ್ನು ಕಡ್ಡಾಯವಾಗಿ ಪಾವತಿಸುವಂತೆ ವಿಜಯಪುರ ಜಿಲ್ಲೆಯ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು ಕೋರಿದ್ದಾರೆ.ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ಧೆ-1965 ರಂತೆ ಬರುವ ಕಾರ್ಖಾನೆ ಕಾಯ್ದೆ 1948(ಡಿ)ರಡಿ ನೋಂದಣಿಯಾಗಿರುವ ಎಲ್ಲಾ ನೋಂದಾಯಿತ ಕಾರ್ಖಾನೆಗಳು, ಪ್ಲಾಂಟೆಶನಗಳು, ಕಾರ್ಯಾಗಾರಗಳು, ಮೋಟಾರು ದೊಡ್ಡ ಬಸ್ ಬಾಡಿಗೆ ಸೇವೆ, ವಾಹನ ಸಾರಿಗೆ ಸಂಸ್ಥೆಗಳು, ವಿದ್ಯುತ್‌ನ್ನು ಉಪಯೋಗಿಸಿ 10ಕ್ಕಿಂತ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುವ ಹಾಗೂ ವಿದ್ಯುತ್‌ನ್ನು ಉಪಯೋಗಿಸದೆ 20ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು ಹಾಗೂ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ಧೆ-1961 ಹಾಗೂ ಕರ್ನಾಟಕ ಸಂಘಗಳ ನೋಂದಣಿ ಕಾಯ್ಧೆ-1960ರ ಅಡಿಯಲ್ಲಿ 50 ಕ್ಕಿಂತ ಹಚ್ಚಿನ ಎಲ್ಲಾ ಸಿಬ್ಬಂದಿಗಳು ಮತ್ತು ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಐಟಿ/ಬಿಟಿ ಸಂಸ್ಥೆಗಳು/ಚಾರಿಟೇಬಲ್ ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳು ಹಾಗೂ ಎರಡೂ ಕಾಯ್ಧೆಗಳಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘ, ಸಂಸ್ಥೆಗಳು ಆನ್ ಲೈನ್ ಮೂಲಕ ವಂತೆಗೆಯನ್ನು ಪಾವತಿಸಬೇಕಾಗಿರುತ್ತದೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾರವಾಡ ಗ್ರಾಮ ಪಂಚಾಯತ, ಗ್ರಾಮೀಣ ಕುಡಿರುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಜಲ ಜೀವನ ಮಿಷನ್ ಯೋಜನೆಯಡಿ ಸಾರವಾಡ ಗ್ರಾಮದ 24 X 7 ನೀರು ಸರಬರಾಜು ಗ್ರಾಮ ಘೋಷಣೆ ಸಮಾರಂಭ ಕಾರ್ಯಕ್ರಮವನ್ನು ಜ.9 ಗುರುವಾರ ಬೆಳಿಗ್ಗೆ 11ಗಂಟೆಗೆ ಸಾರವಾಡ ಗ್ರಾಮದ ಈಶ್ವರ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ. ಬೃಹತ್ ಮತ್ತು ಮದ್ಯಮ ಕೈಗಾರಿಕೆ ಮೂಲ ಸೌಕರ್ಯ ಜಿಲ್ಲಾ ಉಸ್ತವಾರಿ ಸಚಿವರಾದ ಎಂ.ಬಿ.ಪಾಟೀಲ ಹಾಗೂ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಪ್ರೀಯಾಂಕ ಖರ್ಗೆ ಕಾರ್ಯಕ್ರಮ ಉದ್ಘಾಟನೆ ಹಾಗೂ ಘೋಷಣೆ ಮಾಡಲಿದ್ದಾರೆ.ಸಾರವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಲಕನ ಗೌಡ ಶಂಕರಗೌಡ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭಾ ಸದಸ್ಯರಾದ ರಮೇಶ್ ಜಿಗಜಿಣಗಿ, ವಿಧಾನ ಪರಿಷತ್ ಸದಸ್ಯರುಗಳಾದ ಸುನೀಲಗೌಡ ಪಾಟೀಲ್, ಪಿ.ಎಚ್.ಪೂಜಾರಿ ಎಚ್.ಆರ್.ನಿರಾಣಿ, ಪ್ರಕಾಶ ಉಕ್ಕೇರಿ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ಭಾಗವಹಿಸಲಿದ್ದಾರೆ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಗ್ರಾ.ಕು.ನೀ & ನೈ, ಕಾರ್ಯನಿರ್ವಾಹಕ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ 16 ನೇ ವಾರ್ಷಿಕ ಘಟಿಕೋತ್ಸವವು ಜ. 9 ಗುರುವಾರ ಮಧ್ಯಾಹ್ನ 12.30ಕ್ಕೆ ವಿಶ್ವವಿದ್ಯಾನಿಲಯದ ಆವರಣದ ಜ್ಞಾನಶಕ್ತಿ ಕ್ಯಾಂಪಸ್ನಲ್ಲಿ ನಡೆಯಲಿದೆ.ಘಟಿಕೋತ್ಸವದ ಘನ ಅಧ್ಯಕ್ಷತೆಯನ್ನು ಕರ್ನಾಟಕ ಸರ್ಕಾರದ ರಾಜ್ಯಪಾಲರು ಹಾಗೂ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳಾದ ಸನ್ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ.ಉನ್ನತ ಶಿಕ್ಷಣ ಸಚಿವ ಹಾಗೂ ವಿಶ್ವವಿದ್ಯಾನಿಲಯದ ಸಮಕುಲಾಧಿಪತಿಗಳಾದ ಡಾ.ಎಂ.ಸಿ. ಸುಧಾಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ. ಮುಖ್ಯ ಅತಿಥಿಗಳಾಗಿ ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ಸಂಸ್ಥೆಯ ಕುಲಪತಿಗಳಾದ ಪ್ರೊ.ಶಶಿಕಲಾ ವಂಜಾರಿ ಭಾಗವಹಿಸಲಿದ್ದಾರೆ. ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ,ಕೆ.ತುಳಸಿಮಾಲ, ಕುಲಸಚಿವ ಶಂಕರಗೌಡ ಶಿ. ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಹೆಚ್.ಎಂ. ಚಂದ್ರಶೇಖರ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ಪ್ರಕಟನೆಯು ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸವದತ್ತಿ ಹಾಗೂ ಬನಶಂಕರಿ ಜಾತ್ರೆ ಪ್ರಯುಕ್ತ ಜನವರಿ 12ರಿಂದ 17ರ ವರೆಗೆ ಬೆಳಗಾವಿ ಜಿಲ್ಲೆಯ ಸವದತ್ತಿಯ ಯಲಮ್ಮದೇವಿ ಜಾತ್ರೆ ಹಾಗೂ ಜ.13ರಿಂದ 18ರವರೆಗೆ ಬಾಗಲಕೋಟೆ ಜಿಲ್ಲೆಯ ಬದಾಮಿಯ ಬನಶಂಕರಿ ದೇವಿ ಜಾತ್ರೆ ನಿಮಿತ್ತ ಜಾತ್ರೆಗೆ ತೆರಳುವ ಭಕ್ತಾಧಿಗಳಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಬಸ್ ನಿಲ್ದಾಣ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟ, ಬ.ಬಾಗೇವಾಡಿ ಹಾಗೂ ನಿಡಗುಂದಿ ಬಸ್ ನಿಲ್ದಾಣದಿಂದ ವಿಶೇಷ ಸಾರಿಗೆ ಕಾರ್ಯಾಚರಣೆ ಮಾಡಲಾಗುತ್ತಿದ್ದು,ಪ್ರಯಾಣಿಕರು ಇದರ ಸದುಪಯೋಗ ಪಡೆಸಿಕೊಳ್ಳುವಂತೆ ವಿನಂತಿಸಲಾಗಿದೆ.ಹೆಚ್ಚಿನ ಮಾಹಿತಿಗಾಗಿ ವಿಜಯಪುರ 1ನೇ ಘಟಕದ ವ್ಯವಸ್ಥಾಪಕರ ಮೊ.ಸಂ 7760992263, 2ನೇ ಘಟಕದ 7760992264, ಇಂಡಿ- 7760992265, ಸಿಂದಗಿ- 7760992266, ಮುದ್ದೇಬಿಹಾಳ- 7760992267, ತಾಳಿಕೋಟ- 7760992268, ಬ.ಬಾಗೇವಾಡಿ- 7760992269, ವಿಜಯಪುರ ಕೇಂದ್ರ ಬಸ್ ನಿಲ್ದಾಣಾಧಿಕಾರಿ ಮೋ ಸಂ -7760992258…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಜ.1ರಿಂದ ಜ.31ರವರೆಗೆ “ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಕಾರ್ಯಕ್ರಮದ ಮೂಲಕ ಎಲ್ಲಾ ಘಟಕ ಹಾಗೂ ಬಸ್ ನಿಲ್ದಾಣಗಳಲ್ಲಿ ಅಪಘಾತ, ಅಪಘಾತಗಳಿಂದ ಉಂಟಾಗುವ ಪರಿಣಾಮ ಹಾಗೂ ಅಪಘಾತಗಳನ್ನು ತಡೆಗಟ್ಟಲು ಚಾಲಕರು ಅನುಸರಿಸಬೇಕಾದ ಕ್ರಮಗಳ ಕುರಿತು ಚಾಲಕರಿಗೆ ಮಾಹಿತಿ ನೀಡಲಾಗುವುದು. ಇದೇ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಿಗೆ ವೈದ್ಯಕೀಯ ಹಾಗೂ ನೇತ್ರ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಉದ್ಯೋಗ ಸ್ಥಳದಲ್ಲಿ ಮಹಿಳೆಯರ ಮೇಲಿನ ಕಿರುಕುಳ 2023ರ ಅಧಿನಿಯಮಕ್ಕೆ ಸಂಬಂಧಿಸಿದಂತೆ ವಿಜಯಪುರ ಮಹಾನಗರಪಾಲಿಕೆ ಕಛೇರಿಯಲ್ಲಿ ಆತಂರಿಕ ದೂರು ಸಮಿತಿ ರಚಿಸಲು ಸ್ವಯಂ ಸೇವಾ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಿದೆ.ಅರ್ಜಿ ಸಲ್ಲಿಸುವ ಸಂಸ್ಥೆ ಕಡ್ಡಾಯವಾಗಿ ಮಹಿಳಾ ಪ್ರತಿನಿಧಿಯನ್ನು ನೇಮಿಸಿಕೊಂಡಿರಬೇಕು. ಆ ಮಹಿಳಾ ಪ್ರತಿನಿಧಿಯು ಮಹಿಳೆಯರಿಗೆ ಸಂಬಂಧಿಸಿದ ಸೇವಾ ವಲಯಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ಹೊಂದಿರಬೇಕು. ಅರ್ಹ ಸ್ವಯಂ ಸೇವಾ ಸಂಸ್ಥೆಗಳು ಜ.15ರ ಒಳಗಾಗಿ ಸಂಬಂಧಪಟ್ಟ ದಾಖಲಾತಿಗಳೊಂದಿಗೆ ಮಹಾನಗರಪಾಲಿಕೆ ಆಯುಕ್ತ ಕಛೇರಿಗೆ ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಅಧ್ಯಕ್ಷರನ್ನಾಗಿ ಮಹಾಂತಗೌಡ ಬಿರಾದಾರ ವಕೀಲರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಆದೇಶಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಬನಶಂಕರಿ ದೇವಿಯ ಜಾತ್ರಾ ಮಹೋತ್ಸವ ಜ.೯ ರಿಂದ ೭ ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ.ಜ.೯ ರಂದು ಬೆಳಿಗ್ಗೆ ೮ಕ್ಕೆ ಗೋಮಾತಾ ಪೂಜಾ ಕಾರ್ಯಕ್ರಮ. ೧೦ಕ್ಕೆ ನೂತನ ತೇರಿನ ಉದ್ಘಾಟನೆ ಮತ್ತು ಯಾತ್ರಿ ನಿವಾಸ ಶಂಕುಸ್ಥಾಪನೆ ಹಾಗೂ ದಾನಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ, ೧ಕ್ಕೆ ಮಹಾಪ್ರಸಾದ, ಸಂಜೆ ೫:೩೦ಕ್ಕೆ ಹುಚ್ಚಯ್ಯನ ಕಳಸವನ್ನು ಸಕಲ ವಾದ್ಯ ವೈಭವಗೋಂದಿಗೆ ದೇವಸ್ಥಾನಕ್ಕೆ ಕರೆತರುವುದು. ೭:೩೦ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ.ಜ.೧೦ ರಂದು ಬೆಳಿಗ್ಗೆ ೭ಕ್ಕೆ ದೇವಿಗೆ ಬಣ್ಣ ಬಣ್ಣದ ಬಳೆಗಳಿಂದ ಅಲಂಕರಿಸುವುದು. ೧೨ಕ್ಕೆ ಎತ್ತು ಮತ್ತು ಕುದುರೆಗಳ ೩ನಿಮಿಷದ ಜೋಡಿ ಓಟದ ಸ್ಪರ್ದೆ, ೩ಕ್ಕೆ ಜೋಡು ಎತ್ತಿನ ಗಾಡಿಯ ೪ಕಿಮೀ ಓಟದ ಸ್ಪರ್ದೆ, ೭ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ.ಜ೧೧ ರಂದು ಬೆಳಿಗ್ಗೆ ೭ಕ್ಕೆ ದೇವಿಗೆ ಹೂ ಹಣ್ಣು ಮತ್ತು ಕಾಯಿಪಲ್ಲೆಗಳಿಂದ ಅಲಂಕಾರ, ಸಂಜೆ ೭ಕ್ಕೆ ದೇವಿಯ ಹುಚ್ಚಯ್ಯನ ಉತ್ಸವ, ೭-೩೦ಕ್ಕೆ ಮಹಾ ಪ್ರಸಾದ ೮ಕ್ಕೆ ಹಾಸ್ಯ ರಸಮಂಜರಿ ಕಾರ್ಯಕ್ರಮ.ಜ೧೨ ರಂದು ಬೆಳಿಗ್ಗೆ ೪ಕ್ಕೆ…
