ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಾರ್ಮಿಕ ಕಲ್ಯಾಣ ನಿಧಿ ವಂತಿಕೆಯನ್ನು ಇದೇ ಜನವರಿ 15 ಕೊನೆಯದಿನವಾಗಿದ್ದು ವಂತಿಕೆಯನ್ನು ಕಡ್ಡಾಯವಾಗಿ ಪಾವತಿಸುವಂತೆ ವಿಜಯಪುರ ಜಿಲ್ಲೆಯ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು ಕೋರಿದ್ದಾರೆ.
ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ಧೆ-1965 ರಂತೆ ಬರುವ ಕಾರ್ಖಾನೆ ಕಾಯ್ದೆ 1948(ಡಿ)ರಡಿ ನೋಂದಣಿಯಾಗಿರುವ ಎಲ್ಲಾ ನೋಂದಾಯಿತ ಕಾರ್ಖಾನೆಗಳು, ಪ್ಲಾಂಟೆಶನಗಳು, ಕಾರ್ಯಾಗಾರಗಳು, ಮೋಟಾರು ದೊಡ್ಡ ಬಸ್ ಬಾಡಿಗೆ ಸೇವೆ, ವಾಹನ ಸಾರಿಗೆ ಸಂಸ್ಥೆಗಳು, ವಿದ್ಯುತ್‌ನ್ನು ಉಪಯೋಗಿಸಿ 10ಕ್ಕಿಂತ ಹೆಚ್ಚು ಕಾರ್ಮಿಕರು ಕಾರ್ಯ ನಿರ್ವಹಿಸುವ ಹಾಗೂ ವಿದ್ಯುತ್‌ನ್ನು ಉಪಯೋಗಿಸದೆ 20ಕ್ಕಿಂತ ಹೆಚ್ಚು ಕಾರ್ಮಿಕರು ಕೆಲಸ ನಿರ್ವಹಿಸುವ ಎಲ್ಲಾ ಕಾರ್ಖಾನೆಗಳು ಹಾಗೂ ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆ ಕಾಯ್ಧೆ-1961 ಹಾಗೂ ಕರ್ನಾಟಕ ಸಂಘಗಳ ನೋಂದಣಿ ಕಾಯ್ಧೆ-1960ರ ಅಡಿಯಲ್ಲಿ 50 ಕ್ಕಿಂತ ಹಚ್ಚಿನ ಎಲ್ಲಾ ಸಿಬ್ಬಂದಿಗಳು ಮತ್ತು ಕಾರ್ಮಿಕರನ್ನು ನೇಮಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ಐಟಿ/ಬಿಟಿ ಸಂಸ್ಥೆಗಳು/ಚಾರಿಟೇಬಲ್ ಸಂಸ್ಥೆಗಳು/ ಶಿಕ್ಷಣ ಸಂಸ್ಥೆಗಳು ಹಾಗೂ ಎರಡೂ ಕಾಯ್ಧೆಗಳಡಿಯಲ್ಲಿ ನೋಂದಣಿಯಾದ ಎಲ್ಲಾ ಸಂಘ, ಸಂಸ್ಥೆಗಳು ಆನ್ ಲೈನ್ ಮೂಲಕ ವಂತೆಗೆಯನ್ನು ಪಾವತಿಸಬೇಕಾಗಿರುತ್ತದೆ ಎಂದು ವಿಜಯಪುರ ಜಿಲ್ಲೆಯ ಉಪವಿಭಾಗದ ಕಾರ್ಮಿಕ ಅಧಿಕಾರಿಗಳು ತಿಳಿಸಿದ್ದಾರೆ.
ಆನ್ ಲೈನ್ ಮೂಲಕ ವಂತಿಗೆ ಪಾವತಿಸಬೇಕಾದ ವೆಬ್ ಸೈಟ್ ವಿಳಾಸ www.klwb.karnataka.gov.in ಹಾಗೂ ಹೆಚ್ಚಿನ ಮಾಹಿತಿಗಾಗಿ ಮೋ.ಸಂಖ್ಯೆ 8277291175, 8277120505, 9141602562, 914158402, 9483710329 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
