Subscribe to Updates
Get the latest creative news from FooBar about art, design and business.
Author: editor.udayarashmi@gmail.com
8,640 ಕಿಲೋ ಮೀಟರ್ ಕಾಲ್ನಡಿಗೆಯ ಮಕ್ಕಾ ಪ್ರಯಾಣ | 3,300ಕಿ.ಮೀ ಕ್ರಮಿಸಿ ವಾಗ್ ಗಡಿ ಪ್ರವೇಶ | ನಿತ್ಯ 30 ಕಿ.ಮೀ ನಡಿಗೆ ಉದಯರಶ್ಮಿ ದಿನಪತ್ರಿಕೆ ವರದಿ: ಇಲ್ಯಾಸ್ ಪಟೇಲ್. ಬಳಗಾನೂರಯಾದಗಿರಿ: ನಮ್ಮಲ್ಲಿ ಜನರು ಅನೇಕ ಧರ್ಮಗಳನ್ನು (Religion) ಆಚರಣೆ ಮಾಡುತ್ತಿದ್ದರೂ ಸಹ ಆ ಧರ್ಮದಲ್ಲಿರುವ ನಂಬಿಕೆ ಮಾತ್ರ ಒಂದೇ ಅಂತ ಹೇಳಬಹುದು. ದೇವರಿಗೆ ಕಾಲ್ನಡಿಗೆಯಲ್ಲಿಹೋಗಿ ದೇವರಿಗೆ ಪೂಜೆ ಸಲ್ಲಿಸುವುದು ಬಹುತೇಕವಾಗಿ ಎಲ್ಲಾ ಧರ್ಮದವರು ಮಾಡುವಂತಹ ಒಂದು ಭಕ್ತಿಯ (Devotion) ಕೆಲಸ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಜನರು ದಸರಾ ಹಬ್ಬಕ್ಕೆ ದೂರ ದೂರದ ದೇವಸ್ಥಾನಗಳಿಗೆ ತಾವು ಎಷ್ಟೋ ದಿನಗಳ ಕಾಲದವರೆಗೆ ಬಿಸಿಲು, ಮಳೆ ಮತ್ತು ಚಳಿ ಎನ್ನದೆ ಕಾಲ್ನಡಿಗೆಯಲ್ಲಿ ಹೋಗಿ ಪೂಜೆ ಸಲ್ಲಿಸಿ ಬರುವುದನ್ನು ನಾವು ನೋಡುತ್ತೇವೆ. ಮುಸ್ಲಿಂ (Muslim) ಬಾಂಧವರು ಮೆಕ್ಕಾದಲ್ಲಿರುವ ಹಜ್ ಯಾತ್ರೆಗೆ ಹೋಗಲು ಇಡೀ ವಿಶ್ವದಾದ್ಯಂತದಿಂದ ಬರುವುದನ್ನು ನಾವು ನೋಡುತ್ತೇವೆ.ಕೆಲವರು ವಿಮಾನದಲ್ಲಿ ಬಂದರೆ, ಕೆಲವರು ಬೇರೆ ಬೇರೆ ಸಾರಿಗೆ ವ್ಯವಸ್ಥೆಗಳ ಮೂಲಕ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ.…
ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ನಂ.೨೯ಕ್ಕೆ ಉಪ ಚುನಾವಣೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ ೨೯ರಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಚುನಾವಣೆ ನಡೆಯುವ ಮಹಾನಗರ ಪಾಲಿಕೆ ವಾರ್ಡ್ ನಂ.೨೯ರ ವ್ಯಾಪ್ತಿಯಲ್ಲಿನ ಆಯುಧ ಲೈಸನ್ಸದಾರರು ತಮ್ಮ ಎಲ್ಲ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಎಲ್ಲ ಆಯುಧ ಲೈಸನ್ಸದಾರರು ತಮ್ಮ ಎಲ್ಲಾ ಶಸ್ತ್ರಾಸ್ತ್ರಗಳು ಅಂದರೆ ಎಸ್.ಬಿ.ಬಿ.ಎಲ್/ಡಿ.ಬಿ.ಬಿ.ಎಲ್, ಬಂದೂಕು, ರೈಫಲ್, ರಿವಾಲ್ವರ್ ಹಾಗೂ ಪಿಸ್ತೂಲುಗಳನ್ನು ಹೊಂದಲು ಕೊಟ್ಟ ಲೈಸನ್ಸ್ ಗಳನ್ನು ನವೆಂಬರ್ ೦೪ ರಿಂದ ನವೆಂಬರ್ ೨೬ರವರೆಗೆ ಸ್ಥಗಿತಗೊಳಿಸಲಾಗಿದೆ.ಈ ಆದೇಶವು ಬ್ಯಾಂಕುಗಳು ಮತ್ತು ಫ್ಯಾಕ್ಟರಿಗಳ ಭದ್ರತೆಗೋಸ್ಕರ ಪಡೆದುಕೊಂಡ ಆಯುಧಗಳಿಗೆ ಅನ್ವಯಿಸುವುದಿಲ್ಲ ಎಂದು ಆದೇಶದಲ್ಲಿ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆ ಘೋಷಣೆಯಾಗಿರುವುದರಿಂದ ಶಾಂತಿ ಸುವ್ಯವಸ್ಥೆ ಕಾಪಾಡಲು ಮುಂಜಾಗ್ರತಾ ಕ್ರಮವಾಗಿ ಚುನಾವಣೆ ನಡೆಯುವ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿನ ಆಯುಧ ಲೈಸನ್ಸದಾರರು ತಮ್ಮ ಎಲ್ಲ ಶಸ್ತ್ರಾಸ್ತ್ರಗಳನ್ನು ಹಾಗೂ ಮದ್ದು ಗುಂಡುಗಳನ್ನು ತಕ್ಷಣವೇ ಸಮೀಪದ ಪೊಲೀಸ್ ಠಾಣೆಯಲ್ಲಿ ಜಮೆ ಮಾಡುವಂತೆ ಜಿಲ್ಲಾ ದಂಡಾಧಿಕಾರಿಗಳಾದ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಆದೇಶ ಹೊರಡಿಸಿದ್ದಾರೆ.ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮ ಪಂಚಾಯತಿಯ ಅರಳದಿನ್ನಿ ಹಾಗೂ ಚಿಮ್ಮಲಗಿ ಗ್ರಾಮ ಪಂಚಾಯತಿಯ ಚಿಮ್ಮಲಗಿ ಕ್ಷೇತ್ರಕ್ಕೆ, ಇಂಡಿ ತಾಲೂಕಿನ ಸಾಲೋಟಗಿ ಹಾಗೂ ಖೇಡಗಿ ಗ್ರಾಮ ಪಂಚಾಯತ್, ಬಸವನಬಾಗೇವಾಡಿ ತಾಲೂಕಿನ ವಡವಡಗಿ ಗ್ರಾಮ ಪಂಚಾಯಿತಿಯ ನಾಗರಾಳ ಹುಲಿ, ಮುತ್ತಗಿ ಹಾಗೂ ಬ್ಯಾಕೋಡ ಗ್ರಾಮ ಪಂಚಾಯತಿಯ ಜಯವಾಡಗಿ ಉಪ ಚುನಾವಣೆ ನಡೆಸಲಾಗುವುದು.ಬಬಲೇಶ್ವರ ತಾಲೂಕಿನ ಬೋಳಚಿಕ್ಕಲಕಿ ಗ್ರಾಮ ಪಂಚಾಯತಿಯ ಕಾತ್ರಾಳ ಕ್ಷೇತ್ರಕ್ಕೆ, ವಿಜಯಪುರ ತಾಲೂಕಿನ ಕನ್ನೂರ, ನಾಗಠಾಣ, ಜುಮನಾಳ ಹಾಗೂ ಹೊನಗನಹಳ್ಳಿ ಗ್ರಾಮ ಪಂಚಾಯತಿಗೆ, ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮ ಪಂಚಾಯತಿಗೆ,…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ೧೧೦/೧೧ ಕೆವಿ ಝಳಕಿಯಿಂದ ಹೊರಡುವ ೩೩/೧೧ ಕೆವಿ ನಿವರಗಿ ವಿದ್ಯುತ್ ವಿತರಣಾ ಕೇಂದ್ರದ ಶಕ್ತಿ ಪರಿವರ್ತಕದ ತುರ್ತು ನಿರ್ವಹಣೆ ಕಾಮಗಾರಿ ಕೈಗೊಂಡಿರುವುದರಿಂದ ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಆಗುವ ಎಲ್ಲಾ ೧೧ ಕೆವಿ ಮಾರ್ಗಗಳಲ್ಲಿ ದಿನಾಂಕ:೧೫-೧೧-೨೦೨೪ ರಂದು ಬೆಳಿಗ್ಗೆ ೮ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಇಂಡಿ ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರ ಪ್ರಕಟಣೆ ತಿಳಿಸಿದೆ.
ಉದಯರಶ್ಮಿ ದಿನಪತ್ರಿಕೆ ಜಿಲ್ಲೆಯಲ್ಲಿ ಹಸಿರೀಕರಣದ ಸಂಕಲ್ಪವಿಜಯಪುರದಲ್ಲಿ ಅರಣ್ಯೀಕರಣ ಸಂಕಲ್ಪ ಮಾಡಲಾಗಿದೆ. ಹಸಿರು ಗ್ರಾಮ ಕನಸಿನ ಯೋಜನೆ ಸಾಕಾರಕ್ಕೆ ಜಿಲ್ಲಾ ಪಂಚಾಯತಿ, ತಾಲೂಕ ಪಂಚಾಯತಿ, ಗ್ರಾಮ ಪಂಚಾಯತಿಗಳು ಒತ್ತು ನೀಡಿವೆ. ಪ್ರತಿ ತಾಲ್ಲೂಕುಗಳಲ್ಲೂ ಸಸ್ಯಕ್ಷೇತ್ರಗಳನ್ನು ಈಗಾಗಲೇ ಸ್ಥಾಪಿಸಲಾಗಿದೆ. ಜಿಲ್ಲೆಯ ೨೧೧ ಗ್ರಾಮ ಪಂಚಾಯತಿಗಳನ್ನೂ ಹಸಿರು ಗ್ರಾಮಗಳನ್ನಾಗಿ ಪರಿವರ್ತಿಸಲು ಜಿಲ್ಲಾ ಪಂಚಾಯತಿ ಉದ್ದೇಶಿಸಿದೆ. ಅರಣ್ಯ ಇಲಾಖೆಯೊಂದಿಗೆ ಪ್ರತಿ ಗ್ರಾಮ ಪಂಚಾಯತಿಗಳೂ ಕೈಜೋಡಿಸಿವೆ. ಅರಣ್ಯೀಕರಣ ಕಾಮಗಾರಿಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಕ್ರಮವಹಿಸಲಾಗುತ್ತಿದೆ. ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಿಷಿ ಆನಂದ ಅವರು ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ಅರಣ್ಯ ಪ್ರದೇಶದ ವಿಸ್ತೀರ್ಣ ೧೭೯೪.೭೬ ಹೆಕ್ಟೇರ್ ನಷ್ಟು ಇದೆ. ಇದರಲ್ಲಿ ಲಭ್ಯವಿರುವ ಸರ್ಕಾರಿ ಜಮೀನು ಒಟ್ಟು ೧೦೫೩.೨೯ ಹೆಕ್ಟೇರ್ ಇದೆ. ಈ ಸರ್ಕಾರಿ ಜಮೀನಿನಲ್ಲಿ ಒಟ್ಟು ೭೫೪.೫೨ ಹೆಕ್ಟೇರ್ ನಲ್ಲಿ ೨.೪೯ ಲಕ್ಷ ಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಜಿಲ್ಲೆಗೆ ೨೦೨೪-೨೫ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ೪.೫೦ಲಕ್ಷ ಮಾನವ ದಿನಗಳ ಗುರಿ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕೈಗಾರಿಕೆ ಮತ್ತು ಮೂಲಭೂತ ಸೌಕರ್ಯಗಳು ಹಾಗೂ ವಿಜಯಪುರ ಜಿಲ್ಲೆ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲರವರ ಸೂಚನೆ ಮೆರೆಗೆ ಬೆಂಗಳೂರು ಬಿಡದಿಯ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಲಿ. ವತಿಯಿಂದ ದಿ.20 ಬುಧವಾರ ಮತ್ತು 21 ಗುರುವಾರ ರಂದು ಬೃಹತ್ ಉದ್ಯೋಗ ಮೇಳ ಬಿ.ಎಲ್.ಡಿ.ಇ ಸಂಸ್ಥೆ ಸಂಗನಬಸವ ಪಾಲಿಟೆಕ್ನಿಕ್ ನಲ್ಲಿ ಆಯೋಜಿಸಲಾಗಿದೆ.ಈ ಉದ್ಯೋಗ ಮೇಳದಲ್ಲಿ ವಿಜಯಪುರ ಜಿಲ್ಲೆಯ 2023 ರಲ್ಲಿ ಡಿಪ್ಲೋಮಾ ಮತ್ತು ಐಟಿಐ ಪಾಸಾದ ಹಾಗೂ 2024ರಲ್ಲಿ ಪ್ರಸ್ತುತ ಐದನೇ ಸೆಮಿಸ್ಟರ್ ನಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ತಮ್ಮ ಹೆಸರನ್ನು ಆನ್ ಲೈನ್ ಮೂಲಕ ನೋಂದಾಯಿಸಲು ದಿ.19 ಮಂಗಳವಾರ ಸಂ.5ಗಂ. ವರೆಗೆ ಇರುತ್ತದೆ ಹಾಗೂ ಮೇಳದ ದಿನದಂದೆ ಸ್ಥಳದಲ್ಲಿಯೇ ನೋಂದಣಿ ಮಾಡಲು ಅವಕಾಶ ಕಲ್ಪಿಸಲಾಗಿದೆ.ದಿ.20 ಬುಧವಾರ ಬೆ.9.30ಗಂ. ನೋಂದಣಿ ಮಾಡಿದ ವಿದ್ಯಾರ್ಥಿಗಳ ವಿಭಾಗವಾರು ಲಿಖಿತ ಪರೀಕ್ಷೆ ನಡೆಸಲಾಗುವುದು. ಲಿಖಿತ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ದಿ.21 ಗುರುವಾರ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು. ಮೇಳದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಬಯೋಡಾಟಾ…
ಉದಯರಶ್ಮಿ ದಿನಪತ್ರಿಕೆ ಬಸವಕಲ್ಯಾಣ: ಅನುಭವ ಮಂಟಪ ಅಭಿವೃದ್ಧಿ ಪ್ರಾಧಿಕಾರ ಮತ್ತು ಬಸವ ತಿಳುವಳಿಕೆ ಮತ್ತು ಅಧ್ಯಯನ ಕೇಂದ್ರ – ಪುಣೆ ಇದರ ವತಿಯಿಂದ ಬಸವಕಲ್ಯಾಣದಲ್ಲಿ ನಡೆದ ಸಮಾರಂಭದಲ್ಲಿ ಅಕ್ಕನ ಅರಿವು ಮತ್ತು ವಚನ ಅಧ್ಯಯನ ವೇದಿಕೆಯ ಸದಸ್ಯರ ಒಟ್ಟು ಐದು ಪುಸ್ತಕಗಳು ಬಿಡುಗಡೆಯಾದವು.ಶರಣೆ ಸುಧಾ ಪಾಟೀಲ ಅವರ ಮೂರು ಪುಸ್ತಕಗಳು ಲೋಕಾರ್ಪಣೆಗೊಂಡವು. ಅದರಲ್ಲಿ ” ಶರಣರ ನೆನೆದರ ಸರಗಿಯ ಇಟ್ಟಂಗ” ಶರಣರ ಪರಿಚಯ ಮತ್ತು ವಚನ ವಿಶ್ಲೇಷಣೆ ಕೃತಿಯನ್ನು ಡಾ..ಬಾಬಾಸಾಹೇಬ ಗಡ್ಡೆ ಅವರು, “ಹೃದಯದ ಮಾತು” ಕವನ ಸಂಕಲನವನ್ನು ಡಾ.ಉಮಾಕಾಂತ ಶೇಟ್ಕರ ಅವರು, “ಚುಕ್ಕಿ ಹೇಳಿದ ಕಥೆ” ಕವನ ಸಂಕಲನವನ್ನು ಶರಣೆ ಗೌರಮ್ಮ ನಾಶಿ ಅವರು ಲೋಕಾರ್ಪಣೆಗೊಳಿಸಿದರು.ಡಾ.ಶರಣಮ್ಮ ಗೊರೆಬಾಳ ಅವರ “ಮತ್ತೆ ನಕ್ಕಿತು ಭೂಮಿ” ಕವನ ಸಂಕಲನವನ್ನು ಡಾ.ವೀಣಾ ಎಲಿಗಾರ ಅವರು ಬಿಡುಗಡೆಗೊಳಿಸಿದರು. ಶರಣೆ ಬಸಮ್ಮ ಭರಮಶೆಟ್ಟಿ ಅವರ “ಬಾಡದಿರಲಿ ಸ್ನೇಹ “ಕವನ ಸಂಕಲನವನ್ನು ಡಾ.ಜಯಶ್ರೀ ಪಟ್ಟಣ ಮತ್ತು ಡಾ.ಶಶಿಕಾಂತ ಪಟ್ಟಣ ಅವರು ಲೋಕಾರ್ಪಣೆಗೊಳಿಸಿದರು.ಡಾ.ಶಶಿಕಾಂತ ಪಟ್ಟಣ ಮೂವರೂ ಸಾಹಿತಿಗಳನ್ನು ಪರಿಚಯಿಸಿ ಶುಭಹಾರೈಸಿದರು.ಕಾರ್ಯಕ್ರಮದಲ್ಲಿ…
’ಸಾವಿಲ್ಲದ ಶರಣರು’ ಲೇಖನ ಮಾಲೆ ಲೇಖನಡಾ.ಶಶಿಕಾಂತ ಪಟ್ಟಣಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ, ಪುಣೆ – ರಾಮದುರ್ಗ ಉದಯರಶ್ಮಿ ದಿನಪತ್ರಿಕೆ ಕನ್ನಡದ ಕುಲು ಗುರು ಶ್ರೇಷ್ಠ ಸಂಶೋಧಕ ಕನ್ನಡದ ಕಟ್ಟಾಳುಅಪ್ಪಟ ಬಸವ ಭಕ್ತ ಮತ್ತು ಕೆ ಎಲ್ ಈ ಸಂಸ್ಥೆಯ ಸ್ಥಾಪಕ ಸದಸ್ಯ ಕರ್ನಾಟಕ ವಿಶ್ವ ವಿದ್ಯಾಲಯದ ಸ್ಥಾಪನೆಗೆ ಕಾರಣಿ ಪುರುಷ ಹೀಗೆ ಹೇಳುತ್ತಾ ಹೋದರೆ ಪ್ರೊ.ಬಸವನಾಳರು ಮತ್ತು ಅವರ ಕೊಡುಗೆ ಬಗ್ಗೆ ಸುದೀರ್ಘ ಅಧ್ಯಯನ ಸಂಶೋಧನೆ ಅತ್ಯಗತ್ಯ. ಬದುಕಿದ್ದ 58 ವರ್ಷ ವಯಸ್ಸಿನಲ್ಲಿ ವಚನ ಸಾಹಿತ್ಯ ಮತ್ತು ಲಿಂಗಾಯತ ಧರ್ಮ ದರ್ಶನದ ಗಂಭೀರ ಅಧ್ಯಯನಕ್ಕೆ ಚಾಲನೆ ನೀಡಿದರು ಅವರು. ಹಳಕಟ್ಟಿ ಅವರು ಹಾಕಿದ ಭದ್ರ ಬುನಾದಿಗೆ ಕಳಶವಿತ್ತರು ಪ್ರೊ.ಬಸವನಾಳರು. ವಚನಗಳು ಗದ್ಯವೂ ಹೌದು, ಪದ್ಯವು ಹೌದು ಎಂದು ಪದ್ಯಗಳ ರೂಪದಲ್ಲಿ ಸಂಪಾದಿಸಿದ ಹೆಗ್ಗಳಿಕೆ ಪ್ರೊ ಶಿ.ಶಿ.ಬಸವನಾಳರಿಗೆ ಸಲ್ಲಬೇಕು.ಜನನ ಮತ್ತು ಶಿಕ್ಷಣಎಸ್.ಎಸ್.ಬಸವನಾಳ ಅಂದರೆ ಶಿವಲಿಂಗಪ್ಪ ಶಿವಯೋಗಪ್ಪ ಬಸವನಾಳರು ೧೮೯೩ ನವೆಂಬರ ೭ ರಂದು ಹಾವೇರಿಯಲ್ಲಿ ಜನಿಸಿದರು. ಇವರ ತಂದೆ ರೇಲ್ವೆ ಸ್ಟೇಶನ್…
Udayarashmi kannada daily newspaper
ಕೇಂದ್ರ ಸಚಿವ ಕುಮಾರಸ್ವಾಮಿಗೆ ‘ಕರಿಯಾ’ ಎಂದಿದ್ದಕ್ಕೆ ಕ್ಷಮೆ | ಸಚಿವ ಜಮೀರ್ ವಜಾಗೆ ಜೆಡಿ(ಎಸ್) & ಬಿಜೆಪಿ ಒತ್ತಾಯ ಮೈಸೂರು: ಕೇಂದ್ರ ಸಚಿವ ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರನ್ನು ‘ಕಾಲಿಯಾ’ ಎಂದು ಕರೆದಿದ್ದ ಸಚಿವ ಬಿ ಝಡ್ ಜಮೀರ್ ಅಹ್ಮದ್ ಖಾನ್ ಅವರು ಮಂಗಳವಾರ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.ಜಮೀರ್ ಅಹ್ಮದ್ ಖಾನ್ ಅವರ ಕಾಲಿಯಾ ಹೇಳಿಕೆಯನ್ನು ಎನ್‌ಡಿಎ “ಜನಾಂಗೀಯ” ನಿಂದನೆ ಎಂದು ಟೀಕಿಸಿತ್ತು.ವಸತಿ ಮತ್ತು ವಕ್ಫ್ ಸಚಿವರು ಜಮೀರ್ ಅಹ್ಮದ್ ಖಾನ್ ಅವರು ಈ ಹಿಂದೆ JD(S)ನಲ್ಲಿದ್ದರು ಮತ್ತು ಆ ಸಮಯದಲ್ಲಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಕುಮಾರಸ್ವಾಮಿಯವರಿಗೆ ಅತ್ಯಂತ ಆಪ್ತರಾಗಿದ್ದರು. ನನ್ನ ಹೇಳಿಕೆಯಿಂದ ಜೆಡಿಎಸ್ ಕಾರ್ಯಕರ್ತರಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ” ಎಂದು ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ಪ್ರೀತಿಯಿಂದ ಹಾಗೆ ಕರೆಯುತ್ತಿದ್ದೆ. ಅವರು ಕುಳ್ಳ ಎಂದು ಕರೆಯುತ್ತಿದ್ದರು. ನಾನು ಕರಿಯಣ್ಣ ಎಂದು ಕರೆಯುತ್ತಿದ್ದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯ…
