Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಡಾ.ಫ.ಗು.ಹಳಕಟ್ಟಿ, ಬಂಥನಾಳ ಸಂಗನಬಸವ ಶಿವಯೋಗಿಗಳು, ಬಿ.ಎಂ.ಪಾಟೀಲ ಹಾಗೂ ಬಂಗಾರಮ್ಮ ಸಜ್ಜನ ಅವರ ಸ್ಮರಣೆ ಕಾರ್ಯಕ್ರಮ ದಿ.27 ಸೋಮವಾರ ಬೆ.10ಗಂ. ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಗ್ರಂಥಾಲಯ ಸಭಾಂಗಣದಲ್ಲಿ ಚಿಂತನ-ಸಾಂಸ್ಕೃತಿಕ ಬಳಗದ ವತಿಯಿಂದ ಆಯೋಜಿಸಲಾಗಿದೆ.ಶಿವಮೊಗ್ಗ ಬೆಕ್ಕಿನ ಕಲ್ಮಠ ಮ.ನಿ.ಪ್ರ.ಸ್ವ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಲಿದ್ದಾರೆ. ಬೆಳಗಾವಿ ಕೆ.ಎಲ್.ಇ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ.ಅವಿನಾಶ ಕವಿ ಅವರು ಅರಿವಿನ ಕುರುಹು, ಇಷ್ಟಲಿಂಗ – ವೈಜ್ಞಾನಿಕ ಒಳನೋಟ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಕೈಗಾರಿಕೆ ಸಚಿವ, ಬಿ.ಎಲ್.ಡಿ.ಇ ಅಧ್ಯಕ್ಷ ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಚಿಂತನ ಬಳಗ ಕಾರ್ಯದರ್ಶಿ ಡಾ.ಮಹಾಂತೇಶ ಬಿರಾದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಯುವಕರನ್ನು ಯಾರೂ ಕೆಣಕಬಾರದು. ಅವರನ್ನು ಕೆಣಕಿದವರಾರೂ ಉದ್ಧಾರವಾಗಿಲ್ಲ ಎಂದು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಭಾರತ ಯುವಕರ ದೇಶ. ಯುವಕರು ದೇಶದ ಶಕ್ತಿ. ದೇಶದ ಭವಿಷ್ಯ ಯುವಕರ ಮೇಲೆ ನಿಂತಿದೆ. ಅವರು ಮನಸ್ಸು ಮಾಡಿದರೆ ಇತಿಹಾಸ ರಚಿಸಬಲ್ಲರು ಎಂದು ಅವರು ತಿಳಿಸಿದ್ದಾರೆ.ದೇಶದಲ್ಲಿ ಪ್ರತಿವರ್ಷ 20 ಲಕ್ಷಕ್ಕೂ ಹೆಚ್ಚು ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದು, ಅದಕ್ಕಾಗಿ ಹಗಲು- ರಾತ್ರಿ ಶ್ರಮವಹಿಸಿ ತಯಾರಿ ನಡೆಸುತ್ತಾರೆ. ಆದರೆ, ಪ್ರಶ್ನೆ ಸೋರಿಕೆಯಂಥ ಘಟನೆಗಳು ವಿದ್ಯಾರ್ಥಿಗಳು ಮಾತ್ರವಲ್ಲ ಅವರ ಪೋಷಕರ ಕನಸು ಮತ್ತು ಶ್ರಮವನ್ನೂ ನುಚ್ಚುನೂರು ಮಾಡುತ್ತವೆ. ಈಗ ದೇಶಾದ್ಯಂತ ಯುವಕರು ತಮಗಾಗಿರುವ ಅನ್ಯಾಯದ ವಿರುದ್ಧ ನೋವನ್ನು ಪ್ರತಿಭಟನೆಯ ರೂಪದಲ್ಲಿ ಹೊರ ಹಾಕುತ್ತಿದ್ದಾರೆ. ಆದರೆ, ಕೇಂದ್ರ ಸರಕಾರ ಈ ಪ್ರತಿಭಟನೆಯನ್ನು ನಿರ್ವಹಿಸುತ್ತಿರುವ ರೀತಿ ಖಂಡನೀಯವಾಗಿದೆ. ದೇಶದ ಭವಿಷ್ಯ ಎಂದೇ ಪರಿಗಣಿಸಲಾಗುವ ಯುವಕರು ನಮ್ಮ ಮಕ್ಕಳಿದ್ದಂತೆ. ಇಂಥ ಕಠಿಣ ಪರಿಸ್ಥಿತಿಯಲ್ಲಿ ನಾವೆಲ್ಲರೂ ಯುವಜನತೆಯೊಂದಿಗೆ ಪಕ್ಷಾತೀತವಾಗಿ ಬೆಂಬಲವಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: “ಯುವಕರ ನ್ಯಾಯಯುತ ಹೋರಾಟವನ್ನು ಗೌರವಿಸಿ ಅವರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸಬೇಕಾದದ್ದು ಸರಕಾರದ ನೈತಿಕ ಜವಾಬ್ದಾರಿಯಾಗಿದೆ. ಯುವಕರ ನ್ಯಾಯಯುತವಾದ ಬೇಡಿಕೆಗಳನ್ನು ಹತ್ತಿಕ್ಕುವ ಪ್ರಜಾಪ್ರಭುತ್ವ ವಿರೋಧಿ ನಿಲುವು ತಳೆದಿರುವ ಕೇಂದ್ರ ಸರಕಾರದ ವರ್ತನೆ ನಿಜಕ್ಕೂ ಅಪಾಯಕಾರಿ ಮತ್ತು ಆತ್ಮಹತ್ಯಾದಾಯಕ ಬೆಳವಣಿಗೆಯಾಗಿದೆ ಎಂದು ಕರ್ನಾಟಕ ರಾಜ್ಯ ಬಾಲವಿಕಾಸ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ” ಅನ್ಯಾಯವನ್ನು ಪ್ರತಿಭಟಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಹಕ್ಕಾಗಿದೆ. ನೀಟ್ ಪರೀಕ್ಷೆಯಲ್ಲಿ ಆಗಿರುವ ಅವಾಂತರದಿಂದ ಹಲವಾರು ಜನ ಯುವಕ ಯುವತಿಯರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಬೇಕಾದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ ಎಲ್ಲಿ ಅಡಗಿ ಕುಳಿತಿದ್ದಾರೆ.ಸರಕಾರಕ್ಕೆ ನೈತಿಕತೆ ಇದ್ದರೆ ತಕ್ಷಣ ಅವರ ರಾಜೀನಾಮೆ ಪಡೆದುಕೊಂಡು,ಪ್ರಧಾನ ಮಂತ್ರಿಗಳು ದೇಶದ ಯುವಕರ ಭವಿಷ್ಯದ ಜೊತೆ ಚಲ್ಲಾಟವಾಡಿದ್ದಕ್ಕೆ ದೇಶದ ಯುವಕರ ಮತ್ತು ಸಮಸ್ತ ದೇಶದ ಜನತೆಯ ಕ್ಷಮೆಯಾಚಿಸಬೇಕು.ಬಾಳಿ ಬೆಳಗಬೇಕಾಗಿದ್ದ ಹಲವಾರು ಪ್ರತಿಭಾವಂತ ಯುವಕ ಯುವತಿಯರ ಸಾವಿಗೆ ಕಾರಣರಾದವರನ್ನು ತಕ್ಷಣ ಭಂದಿಸಿ,…

Read More

ಲೇಖನ- ವೀಣಾ ಹೇಮಂತಗೌಡ ಪಾಟೀಲ್.ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಜೀವಂತ ವ್ಯಕ್ತಿಯ ಹೃದಯ ಮತ್ತು ಮೆದುಳುಗಳು ದಿನದ 24 ಗಂಟೆ, ವರ್ಷದ 365 ದಿವಸ ಮತ್ತು ಜೀವಿತದ ಕೊನೆಯವರೆಗೂ ತಮ್ಮ ಕಾರ್ಯವನ್ನು ನಿರ್ವಹಿಸುತ್ತದೆ. ವಿಶ್ರಾಂತಿ ಎಂಬುದು ಈ ಅಂಗಗಳಿಗೆ ಇಲ್ಲ. ಹೃದಯದ ಆರೋಗ್ಯವನ್ನು ಕಾಯ್ದುಕೊಳ್ಳಲು ನಾವು ಒಳ್ಳೆಯ ಆಹಾರ-ವಿಹಾರ, ದೈಹಿಕ ವ್ಯಾಯಾಮ, ಯೋಗ, ಧ್ಯಾನ, ಜಪ-ತಪ ಸತ್ಸಂಗಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಮೆದುಳಿನ ಆರೋಗ್ಯವನ್ನು ಕಾಯ್ದುಕೊಳ್ಳಲು ಸಜ್ಜನರ ಸಹವಾಸ ಮಾಡಬೇಕು ಒಳ್ಳೆಯ ಪರಿಸರದಲ್ಲಿ ಬದುಕನ್ನು ಕಟ್ಟಿಕೊಳ್ಳಬೇಕು.ಇದೀಗ ಪರೀಕ್ಷಾ ಸಮಯದಲ್ಲಿ ನಾವು ಪ್ರತಿಯೊಂದು ಮನೆಗಳಲ್ಲಿ ಕೇಳುವುದು ಒಂದೇ ಮಾತು ಪರೀಕ್ಷೆ ಬಂದಿದೆ, ಚೆನ್ನಾಗಿ ಅಭ್ಯಾಸ ಮಾಡು ಎಂದು. ಹಾಗಾದರೆ ಅಭ್ಯಾಸ ಎಂದರೇನು? ಎಂದು ಪ್ರಶ್ನಿಸಿಕೊಂಡಾಗ ನಾವು ಕಲಿತ ವಿಷಯವನ್ನು ಮನನ ಮಾಡಿಕೊಳ್ಳುವ ಓದುವ ಬರೆಯುವ ಮೂಲಕ ಪುನರಾವರ್ತಿಸುವ ಕಾರ್ಯವನ್ನು ಅಭ್ಯಾಸ ಎಂದು ಹೇಳಬಹುದು.ಬದುಕಿನಲ್ಲಿ ಬರುವ ಯಾವುದೇ ವಿಷಯಗಳನ್ನು ಅರಿಯಲು ನಮ್ಮಲ್ಲಿ ಅಭ್ಯಾಸದ ಅವಶ್ಯಕತೆ ಇದೆ. ಹೊಸ ವಿಷಯಗಳನ್ನು ಅರಿಯುವ, ಕಲಿಯುವ, ಮನನ ಮಾಡಿಕೊಳ್ಳುವ…

Read More

ಲೇಖನ- ಶೀತಲ್ ಹೆಗಡೆನಿರ್ವಾಹಕಿ”ನಮ್ಮ ಕಥಾ ಅರಮನೆ” ಉದಯರಶ್ಮಿ ದಿನಪತ್ರಿಕೆ ಉತ್ತಮ ವ್ಯಕ್ತಿಯೆಂದರೆ ಎತ್ತರಕ್ಕೇರುವುದು ಅಲ್ಲ, ಎತ್ತರಕ್ಕೇರಿದ ನಂತರವೂ ವಿನಯದಿಂದ ಬಾಗುವುದು. ಮಾತಿಗಿಂತ ನಡತೆಯೇ ಅವರ ಪರಿಚಯ, ಮಾನವೀಯತೆಯೇ ಅವರ ನಿಜವಾದ ಆಭರಣ.ಕಾಕತಾಳೀಯವೋ, ಕನ್ನಡ ಭುವನೇಶ್ವರಿಯ ಸಂಕೇತವೋ ತಿಳಿಯದು. ಕನ್ನಡ ರಾಜ್ಯೋತ್ಸವದ ದಿನವೇ (ನವೆಂಬರ್ 1) ಜನಿಸಿದ ಅಪ್ಪಟ ಕನ್ನಡಾಭಿಮಾನಿ. ವೃತ್ತಿಯಲ್ಲಿ ಪಶುವೈದ್ಯರಾಗಿ ಸೇವೆ ಸಲ್ಲಿಸಿ, ಇಂದು ಉನ್ನತ ಹುದ್ದೆಯಲ್ಲಿದ್ದರೂ ಸಮಯದ ಅಭಾವದ ನಡುವೆಯೂ ಕನ್ನಡಕ್ಕಾಗಿ ತನ್ನ ತನು-ಮನವನ್ನು ಮುಡಿಪಾಗಿಟ್ಟಿರುವ ಶ್ರಮಿಕ ವ್ಯಕ್ತಿತ್ವ, ನಮ್ಮ ಕಥಾ ಅರಮನೆಯ ಸಂಚಾಲಕರಾದ ಡಾ.ರಾಜಶೇಖರ ನಾಗೂರ ಅವರದು.ಪ್ರವೃತ್ತಿಯಲ್ಲಿ ಅವರು ಕೈಯಾಡಿಸಿದ ವಿಷಯಗಳು ಒಂದೆರಡಲ್ಲ. ಯಾವುದೇ ವಿಷಯವಾಗಿರಲಿ, ಅದರ ಬಗ್ಗೆ ನಿರರ್ಗಳವಾಗಿ, ಮನಮುಟ್ಟುವ ರೀತಿಯಲ್ಲಿ ಗಂಟೆಗಟ್ಟಲೆ ಮಾತನಾಡಬಲ್ಲ ಅಪರೂಪದ ವಾಗ್ಮಿ. ಎಲ್ಲರನ್ನೂ ಸಮಾನವಾಗಿ ಕಾಣುವ ಸಮತೋಲನದ ವ್ಯಕ್ತಿತ್ವ ಅವರದು.‘ಒಲವಧಾರೆ ❤️’ ಎಂಬ ಅಂಕಣದ ಮೂಲಕ ಓದುಗರ ಮನಸೂರೆಗೊಳ್ಳುವ ಚುಟುಕುಗಳು, ಕವಿತೆಗಳು ಮತ್ತು ಭಾವಪೂರ್ಣ ಬರಹಗಳನ್ನು ಯಾವುದೇ ಆಡಂಬರವಿಲ್ಲದೆ, ಕಠಿಣ ಪದಗಳ ಬಳಕೆಯಿಲ್ಲದೆ, ಸಾಮಾನ್ಯರ ಮನಸ್ಸಿಗೆ ಹತ್ತಿರವಾಗುವಂತೆ ಅಭಿವ್ಯಕ್ತಗೊಳಿಸುವ ನಿರೂಪಕರು…

Read More

ಲೇಖನ- ಡಾ. ರಾಜಶೇಖರ ನಾಗೂರಸಂಚಾಲಕರು’ನಮ್ಮ ಕಥಾ ಅರಮನೆ’ ಉದಯರಶ್ಮಿ ದಿನಪತ್ರಿಕೆ ಒಂದು ಕನಸು, ಒಂದು ಉದ್ದೇಶ ಮತ್ತು ಕನ್ನಡ ಸಾಹಿತ್ಯದ ಮೇಲಿನ ಅಪಾರ ಪ್ರೀತಿಯಿಂದ ಆರಂಭವಾದ “ನಮ್ಮ ಕಥಾ ಅರಮನೆ” ಇಂದು 39 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಫೇಸ್‌ಬುಕ್ ಮೂಲದ ಕನ್ನಡದ ಪ್ರಮುಖ ಸಾಹಿತ್ಯ ವೇದಿಕೆಯಾಗಿ ಬೆಳೆದಿದೆ. ಜುಲೈ 25 ಕ್ಕೆ ತನ್ನ 8ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಈ ವೇದಿಕೆ ಸಾವಿರಾರು ಬರಹಗಾರರ ಪ್ರತಿಭೆಗೆ ಬೆಳಕು ನೀಡಿದ ಅಕ್ಷರದ ಅರಮನೆಯಾಗಿದೆ.ಈ ಯಶಸ್ಸಿನ ಹಿಂದೆ ಸಂಸ್ಥಾಪಕರ ದೂರದೃಷ್ಟಿ, ಸಂಚಾಲಕರ ನಿಸ್ವಾರ್ಥ ಯೋಜನೆ, ನಿರ್ವಾಹಕರ ನಿರಂತರ ಸೇವೆ ಮತ್ತು ಲಕ್ಷಾಂತರ ಸಾಹಿತ್ಯ ಬರಹಗಳು, ಕೃತಿಗಳನ್ನು ರಚಿಸಿ ಹಂಚಿಕೊಂಡ ಸಾವಿರಾರು ಸದಸ್ಯರ ಸೃಜನಶೀಲತೆ ಅಡಗಿದೆ. ಕಥೆ, ಕವನ, ಲೇಖನ, ಚಿತ್ರಕವನ, ಸಾಹಿತ್ಯ ಸ್ಪರ್ಧೆಗಳು, ವಿಶೇಷ ಥೀಮ್‌ಗಳು ಹಾಗೂ ನಿರಂತರ ಸಾಹಿತ್ಯ ಚಟುವಟಿಕೆಗಳ ಮೂಲಕ ಈ ವೇದಿಕೆ ಕನ್ನಡದ ಓದು ಮತ್ತು ಬರವಣಿಗೆಯ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.ಹೊಸ ಬರಹಗಾರರಿಗೆ ಅವಕಾಶ, ಪ್ರತಿಭೆಗೆ ಪ್ರೋತ್ಸಾಹ, ಅನುಭವಿ ಲೇಖಕರಿಂದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸಾಮಾಜಿಕ ಭದ್ರತಾ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಾಗೂ ಅರ್ಹ ಫಲಾನುಭವಿಗಳ ಅಹವಾಲುಗಳನ್ನು ಆಲಿಸಲು ಜಿಲ್ಲಾಡಳಿತ ಜುಲೈ ೨೪ ರಂದು ಬೆಳಿಗ್ಗೆ ೧೧ ಗಂಟೆಗೆ ಜಿಲ್ಲೆಯ ವಿವಿಧ ೧೫ ಗ್ರಾಮಗಳಲ್ಲಿ ‘ಪಿಂಚಣಿ ಅದಾಲತ್’ ನಡೆಸಲು ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.ಕಂದಾಯ ಇಲಾಖೆ ಹಾಗೂ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಸುತ್ತೋಲೆಯನ್ವಯ ಈ ಅದಾಲತ್ ಗಳನ್ನು ಆಯೋಜಿಸಲಾಗುತ್ತಿದ್ದು, ಉಪ ವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.ಪಿಂಚಣಿ ಅದಾಲತ್ ನಡೆಯುವ ಸ್ಥಳಗಳ ವಿವರ: ಮುದ್ದೇಬಿಹಾಳ ತಾಲೂಕಿನ ಚೊಂಡಿ ಗ್ರಾಮದ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ೧೧ ಗಂಟೆಗೆ, ದೇವರಹಿಪ್ಪರಗಿ ತಾಲೂಕಿನ ಕೆಸರಟ್ಟಿ ತಾಂಡಾ ಸೇವಾಲಾಲ್ ದೇವಸ್ಥಾನದಲ್ಲಿ ಬೆಳಗ್ಗೆ ೧೧ ಗಂಟೆಗೆ. ವಿಜಯಪುರ ನಗರದ ಶಾಪೇಟಿ ಗಲ್ಲಿಯ ಶ್ರೀ ಮಹಾದೇವಪ್ಪನ ದೇವಸ್ಥಾನದಲ್ಲಿ ಬೆಳಗ್ಗೆ ೧೧ ಗಂಟೆಗೆ, ಲೋಹಗಾಂವ ಗ್ರಾಮದ ಸಮುದಾಯ ಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ, ಬಬಲೇಶ್ವರ ಪಟ್ಟಣ ಪಂಚಾಯಿತಿಯಲ್ಲಿ ಬೆಳಗ್ಗೆ ೧೧…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಾನು ಕೆಂಗನಾಳಗೆ ಅಂಜಿ ಓಡಿ ಹೋಗಿದ್ದೇನೆ ಎನ್ನುತ್ತೀರಿ, ಇನ್ನೊಂದು ಕಡೆ ಗೂಂಡಾ ಇರುವೆ ಎಂದು ಹೇಳುತ್ತಿರಿ, ನಿಮಗೆ ತಲೆಯಲ್ಲಿ ಸ್ವಲ್ಪವಾದರೂ ಬುದ್ಧಿ ಇದೆಯೋ ಅಥವಾ ಕೇವಲ ಮುಗ್ಧ ಜನರು ಠೇವಣಿ ಇರಿಸಿದ ಸಿದ್ಧಸಿರಿ ರೊಕ್ಕ ತುಂಬಿಕೊಂಡಿವೆಯೇ? ನಾನು ಗೂಂಡಾ ಎಂದು ಪದೇ ಪದೇ ಹೇಳುವ ನಗರ ಶಾಸಕ ಯತ್ನಾಳರ ಮೇಲೆ ೪೦ ಕ್ಕೂ ಹೆಚ್ಚು ಪ್ರಕರಣಗಳಿವೆ, ಹಾಗಾದರೆ ನಿಜವಾದ ಗೂಂಡಾ ಯಾರು? ಎಂಬುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್ ವಾಗ್ದಾಳಿ ನಡೆಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಗಳ ಹಚ್ಚುವುದು ಬಸನಗೌಡರ ಚಟ, ಹಿಂಧೂ-ಮುಸ್ಲಿಂ ಎಂಬ ಬೇಧ ಭಾವ ಜನತೆ ಎಂದೂ ಮಾಡುವುದಿಲ್ಲ, ಅವರ ಜೊತೆ ನೇರ ಸೆಣಸಾಟಕ್ಕೆ ನಾನು ಸಿದ್ಧ, ಹೀಗಾಗಿ ಜನರನ್ನು, ಅಮಾಯಕರನ್ನು ಎಳೆದು ತರಬೇಡಿ ಎಂದರು. ಯುವಕರಿಗೆ ಉದ್ಯೋಗ ಮಾಡಲು ಸಹಾಯ ಕಲ್ಪಿಸಿ, ಹಿಂದೂ ಬಾಂಧವರಿಗಾದರೂ ಉದ್ಯೋಗ ಹಚ್ಚಿಕೊಡಿ ಕೇವಲ ದ್ವೇಷ ಹರಡಿಸುವುದನ್ನು ಕಲಿಸಬೇಡಿ ಎಂದರು.ಬೇರೆ ಭಾಗದವರ ಮತದಾರರ…

Read More