ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ ಅವರ ತತ್ವ, ಸಿದ್ಧಾಂತಗಳು ಸದಾ ಪ್ರಸ್ತುತವಾಗಿದ್ದು, ಅವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಮಂಗಳವಾರ ತೊರವಿಯಲ್ಲಿ ಡಾ. ಅಂಬೇಡ್ಕರ ಅವರವ135ನೇ ಜಯಂತಿಗೆ ಚಾಲನೆ ನೀಡಿದ ಅವರು, ನಂತರ ವಿಜಯಪುರ ನಗರದಲ್ಲಿ ಡಾ. ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಬಳಿಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಮತ್ತು ಡಾ. ಬಿ. ಆರ್. ಅಂಬೇಡ್ಕರ ಶಕ್ತಿ ಸಂಘದ ವತಿಯಿಂದ ಆಯೋಜಿಸಲಾದ ಜಯಂತಿ ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಶ್ರೇಷ್ಠ ಸಂವಿಧಾನ ನೀಡಿದ ಬಾಬಾಸಾಹೇಬ ಅಂಬೇಡ್ಕರ ಅವರು ದೀರ್ಘಾಯುಷಿಯಾಗಿ ಬಾಳುವುದು ಮುಖ್ಯವಲ್ಲ. ಜೀವನದಲ್ಲಿ ಹೇಗೆ ಬದುಕುತ್ತೀರಿ ಎಂಬುದು ಮುಖ್ಯ ಎಂದು ಪ್ರತಿಪಾದಿಸಿದ್ದರು. ಅವರ ಆಶಯಗಳಿಗೆ ಅನುಗುಣವಾಗಿ ರಕ್ತದಾನ ಶಿಬಿರ ಆಯೋಜಿಸಿರುವುದು ಶ್ಲಾಘನೀಯವಾಗಿದೆ. ಈ ರೀತಿ ಸಮಾಜಮುಖಿ ಮತ್ತು ಜನಪರ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದು ಸಚಿವರು ಹೇಳಿದರು.
ಈ ಕಾರ್ಯಕ್ರಮಗಳಲ್ಲಿ ಮಾಜಿ ಶಾಸಕ ಪ್ರೊ.ರಾಜು ಆಲಗೂರ, ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಅಡಿವೆಪ್ಪ ಸಾಲಗಲ, ಸುರೇಶಗೌಡ ಪಾಟೀಲ, ಬಾಬುರಾವ ಮಹಾರಾಜರು, ಮುಖಂಡರಾದ ದಿನೇಶ ಹಳ್ಳಿ, ಸೋಮನಾಥ ಕಳ್ಳಿಮನಿ, ಪರಶುರಾಮ ಲಂಬು, ನಾಗರಾಜ ಲಂಬು, ರವಿ ತೊರವಿ, ಕೆ. ಎಂ. ಕೂಡಲಗಿ, ರಾಜೇಶ ತೊರವಿ, ಸುರೇಶ ಬಬಲೇಶ್ವರ, ಮಲ್ಲು ಹಾದಿಮನಿ, ಲಾಲು ಗುಡಿಮನಿ, ಶ್ರೀನಾಥ ಪೂಜಾರಿ, ವಿಜಯ ಪಡಗಾನೂರ, ಜಮೀರ ಭಕ್ಷಿ, ಹಸನ್ ನದಾಫ, ಅಬ್ದುಲ್ ರಜಾಕ್ ಹೊರ್ತಿ, ಉಮೇಶ ವಂದಾಲ, ದಯಾನಂದ ಹಲ್ಯಾಳ, ಮುಂತಾದವರು ಉಪಸ್ಥಿತರಿದ್ದರು.

