Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಭಾರತದ ಮಣ್ಣಿನಲ್ಲಿ ಜನಿಸಿದ್ದರೂ ಸಹಿತ ಅವರ ತತ್ವ – ಸಿದ್ಧಾಂತಗಳಿಂದ ಪ್ರತಿಪಾದಿಸಿದ ಮೌಲ್ಯಗಳಿಂದ ಅವರು ಇಡೀ ವಿಶ್ವದ ನಾಯಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಟಿ, ಭೂಬಾಲನ್ ಹೇಳಿದರು.ನಗರದ ಮಹಾತ್ಮ ಗಾಂಧಿ ಭವನದಲ್ಲಿ (ಹುತಾತ್ಮರ ದಿನಾಚರಣೆ) ‘ಸರ್ವೋದಯ ದಿನ’ ದ ನಿಮಿತ್ಯ ಗುರುವಾರ ಜರುಗಿದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿ ಬಾಪೂಜಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು ಅಮೆರಿಕೆಯ ಡಾಕ್ಟರ್ ಮಾರ್ಟಿನ್ ಲೂಥರ್ ಕಿಂಗ್ ಜ್ಯುನಿಯರ್, ಸೌತ್ ಆಫ್ರಿಕೆಯ ನೆಲ್ಸನ್ ಮಂಡೇಲಾ, ಬರ್ಮಾ ದೇಶದ ಆಂಗ್ ಸಾನ್ ಸೂಕಿ ಹೀಗೆ ಜಗತ್ತಿನ ನೂರಾರು ನಾಯಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.ಸೈನಿಕ ಶಾಲೆಯ ಪ್ರಾಂಶುಪಾಲರಾದ (ಗ್ರೂಪ್ ಕ್ಯಾಪ್ಟನ್) ಪ್ರತಿಭಾ ಬಿಸ್ಟ್ ಅವರು ಮಾತನಾಡಿ, ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತಾಡಬೇಡ ಎನ್ನುವ ತತ್ವದ ಮಹಾತ್ಮ ಗಾಂಧೀಜಿಯವರ ಮೂರು ಮಂಗಗಳ ಕಥೆಗಳನ್ನು ಮಕ್ಕಳಿಗೆ ಹೇಳಿದರು.ಚರ್ಚಿಲ್, ಮೌಂಟ್ ಬ್ಯಾಟನ್, ವಿಲ್ಲಿಂಗ್ ಡನ್, ಸ್ಮಟ್ಸ್ ಹೀಗೆ ರಾಜಕೀಯ ಶತ್ರುಗಳು ಎದೆಯಲ್ಲೂ ಸ್ನೇಹದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀಜರ ಸಮಾಜ ಬೆಂಗಳೂರು, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಕಲ್ಬುರ್ಗಿ, ಸಹಯೋಗದಲ್ಲಿ ಫೆಬ್ರವರಿ 1 ಮತ್ತು 2 ರಂದು ರಾಜ್ಯ ಮಟ್ಟದ ಮೂರನೇ ಬೃಹತ್ ಸಮಾವೇಶವನ್ನು, ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದ ಸಭಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಡಾ. ಎಸ್ ಎಸ್ ಪಾಟೀಲ್ ಕಡೂರ ಹೇಳಿದರು.ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮೊದಲ ದಿನ ವಿಚಾರ ಸಂಕೀರಣ, ಗ್ರಂಥಗಳ ಲೋಕಾರ್ಪಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ನಡೆಯಲಿದೆ. ವಿಶೇಷವಾಗಿ ಹಂಡೆಸಿರಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸಮಾವೇಶದಲ್ಲಿ ದಿವ್ಯ ಸಾನಿಧ್ಯವನ್ನು ನಿಡುಮಾಮಿಡಿ ಜಗದ್ಗುರುಗಳಾದ ಶ್ರೀ ವೀರಭದ್ರ ಚನ್ನಮಲ್ಲ ದೇಸಿಕೇಂದ್ರ ಮಹಾಸ್ವಾಮಿಗಳು, ಕೊಟ್ಟೂರು ಸಂಸ್ಥಾನ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ತೋಂಟದಾರ್ಯ ಸಂಸ್ಥಾನ ಮಠದ ಮ.ನಿ.ಪ್ರ. ಜಗದ್ಗುರು ಡಾಕ್ಟರ್ ಸಿದ್ದರಾಮಯ್ಯ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದಾರೆ ಎಂದರು.ಬೃಹತ್ ಕೈಗಾರಿಕೆ ಸಚಿವರಾದ ಎಂಬಿ ಪಾಟೀಲ್ ಕಾರ್ಯಕ್ರಮ ಉದ್ಘಾಟನೆ ಮಾಡುವರು.…

Read More

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ( ನಮ್ಮ ದೇಶದ ಎಲ್ಲಾ ದೇವರು ಮತ್ತು ಧರ್ಮಗಳಿಗೂ ಅನ್ವಯ ) – ವಿವೇಕಾನಂದ. ಎಚ್. ಕೆ.ಬೆಂಗಳೂರುಮೊ: 9844013068 ಉದಯರಶ್ಮಿ ದಿನಪತ್ರಿಕೆ ಚುನಾವಣಾ ಸಮಯದಲ್ಲಿ ಹಣ, ಹೆಂಡ, ಸೀರೆ, ಪಂಚೆ, ಜಾತಿ, ಧರ್ಮ ನೋಡಿ ಮತ ಹಾಕುವುದು. ಅನಂತರ ಸರ್ಕಾರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ, ಭ್ರಷ್ಟರಾಗಿದ್ದಾರೆ, ನಮ್ಮ ಬೇಡಿಕೆಗಳಿಗೆ, ಕಷ್ಟಗಳಿಗೆ ಯಾರೂ ಸ್ಪಂದಿಸುತ್ತಿಲ್ಲ, ಆದ್ದರಿಂದ ನಮಗೆ ಹೀಗೆ ಆಗುತ್ತಿರುವ ಎಲ್ಲ ತೊಂದರೆಗಳಿಗೆ ಪರಿಹಾರ ಮಾಡು ಎಂದು ದೇವರಲ್ಲಿ ಮೊರೆಹೋಗುವುದು. ದೇವರನ್ನು ಎಲ್ಲ ಕಷ್ಟಗಳು ಪರಿಹರಿಸು ಎಂದು ಕೇಳಿಕೊಳ್ಳಲು ಒಟ್ಟಾಗಿ ಹೋಗಿ ಬೆಂಕಿಯೋ, ಕಾಲ್ತುಳಿತವೋ, ಗಲಭೆಯೋ, ಮತ್ತೇನೋ ಅವಘಡಗಳಾಗಿ ಕೊನೆಗೆ ನಮ್ಮನ್ನು ರಕ್ಷಿಸಿ ಎಂದು ಮತ್ತೆ ಇದೇ ಸರ್ಕಾರಗಳನ್ನು ಬೇಡಿಕೊಳ್ಳುವುದು. ತುಂಬಾ ವಿಚಿತ್ರ ಪರಿಸ್ಥಿತಿ ಎನಿಸುತ್ತದೆ ಅಥವಾ ಇದೇ ಸಹಜ ಬದುಕೋ ಏನೋ ಒಂದೂ ಅರ್ಥವಾಗುತ್ತಿಲ್ಲ..ಒಟ್ಟಿನಲ್ಲಿ ನಮಗೆ ಸಮಸ್ಯೆಗಳು ಇರಬಾರದು, ನೆಮ್ಮದಿಯಿಂದ ಇರಬೇಕು, ಇದಕ್ಕೆ ಸರ್ಕಾರ ಸ್ಪಂದಿಸುತ್ತದೋ ಅಥವಾ ದೇವರು ಸ್ಪಂದಿಸುತ್ತಾರೋ ನಮಗೆ ಅರ್ಥವಾಗುತ್ತಿಲ್ಲ. ಅಜ್ಞಾನ, ಮೌಢ್ಯ, ಅಂಧಕಾರ, ವಿವೇಚನಾ…

Read More

ಉದಯರಶ್ಮಿ ದಿನಪತ್ರಿಕೆ ಅಫಜಲಪುರ: ತಾಲೂಕಿನ ಮಲ್ಲಾಬಾದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಆನೂರ ಗ್ರಾಮದ ಮಲ್ಲಣ್ಣಗೌಡ ಮಾಲಿಪಾಟೀಲ್ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.ಅವರು ಅವಿರೋಧ ಆಯ್ಕೆಯ ಬಳಿಕ ಮಾತನಾಡುತ್ತಾ ಮಲ್ಲಾಬಾದ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ರೈತರ ಒಳಿತಿಗಾಗಿ ಕೆಲಸ ಮಡುತ್ತೇನೆ ಎಂದರು. ನಂತರ ಆನೂರ ಮತ್ತು ಮಲ್ಲಾಬಾದ ಗ್ರಾಮಗಳ ಮುಖಂಡರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಸುರೇಶ ಜಮಾದಾರ, ಲಕ್ಕಪ್ಪ ಕಲ್ಲೂರ, ಸಿದ್ದರಾಮ ಜಮಾದಾರ, ಬಸು ನರೋಣ , ಸಿದ್ದಯ್ಯ ಮಠಪತಿ, ನಿಂಗಣ್ಣ ಕಲಶೆಟ್ಟಿ, ಗುಂಡು ಮಾಳಗೆ, ದತ್ತು ಘಾಣೂರ, ಚಂದ್ರಕಾಂತ ತೇಲ್ಕರ್, ಮಹಾಂತ ಸಾಹುಕಾರ ಗಾಡಿ, ಹಣಮಂತ ಗೌಂಡಿ, ಶಿವಶರಣ ಪ್ಯಾಟಿ, ಭಾಗಪ್ಪ ತಳಕೇರಿ, ಶ್ರೀಶೈಲ್ ಸ್ಥಾವರಮಠ, ಚಂದಪ್ಪ ಕನ್ನೋಳಿ, ರೇವಣಸಿದ್ದ ಕಲಶೆಟ್ಟಿ ಇದ್ದರು.

Read More

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕಿಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಮೊನ್ನೆ ಮೊನ್ನೆ ತಾನೆ ಹೊಸ ತರಗತಿಗೆ ಬಂದ ಹಾಗಿದೆ ಆಗಲೇ ಮಧ್ಯವಾರ್ಷಿಕ ಪರೀಕ್ಷೆ ಪೂರ್ವ ಸಿದ್ಧತಾ ಪರಿಕ್ಷೆಗಳು ಸಮೀಪಿಸುತ್ತಿವೆ. ಅಬ್ಬಾ! ಪರೀಕ್ಷೆಗಳಿಗೆ ಯಾವ ರೀತಿ ಸಿದ್ಧನಾಗಬೇಕೆಂಬುದೇ ದೊಡ್ಡ ಟೆನ್ಷನ್ ಆಗಿ ಬಿಟ್ಟಿದೆ. ಹೆಚ್ಚುತ್ತಿರುವ ಒತ್ತಡಕ್ಕೆ ಉಪ್ಪು ಸುರಿದಂತೆ ಹೆತ್ತವರ ಬೈಗುಳ, ಓದು ಎನ್ನುವ ಒತ್ತಾಯ,. ಈ ಸಲ ಹೆಚ್ಚು ಅಂಕ ತೆಗೆಯಲೇಬೇಕು ಎನ್ನುವ ಹೇರಿಕೆಯ ಮಾತುಗಳು ನೀನು ಚೆನ್ನಾಗಿ ಓದಿದರೆ ಒಳ್ಳೆಯ ಅಂಕಗಳನ್ನು ಪಡದೇ ಪಡೆಯುತ್ತಿಯಾ ಗಂಭೀರವಾಗಿ ಓದು ಎಂಬ ಶಿಕ್ಷಕರ ಹಿತ ನುಡಿಗಳು. ಅಯ್ಯೋ! ಒಂದೇ ಎರಡೇ ತಲೆ ಸಿಡಿದು ಮೂರಾ ಬಟ್ಟೆ ಆಗುತ್ತಿದೆ. ಇದು ಶಂಕರನ ಅಳಲು. ಶಂಕರ ಎದುರಿಸುತ್ತಿರುವುದು ಹೊರಗಿನ ಒತ್ತಡ. ಇದನ್ನು ಪ್ರೆಜ್ಯೂಮ್ ಪ್ರೆಶರ್ ಎನ್ನುವರು. ಸಾಮಾನ್ಯವಾಗಿ ಹೊರ ಒತ್ತಡವನ್ನು ಎಲ್ಲ ವಿದ್ಯಾರ್ಥಿಗಳು ಎದುರಿಸುತ್ತಾರೆ.ಪರೀಕ್ಷೆ ಸಮೀಪಿಸಿದಂತೆ ಎಲ್ಲಿಲ್ಲದ ತಲೆನೋವು ವಕ್ಕರಿಸಿಕೊಳ್ಳುತ್ತದೆ. ಒಂದು ವೇಳೆ ಫೇಲ್ ಆಗಿಬಿಟ್ಟರೆ ಎಂದು ನೆನೆದು ಬೆವರು ಕಿತ್ತು ಬರುತ್ತದೆ. ಊಟ ಆಟ…

Read More

ಉದಯರಶ್ಮಿ ದಿನಪತ್ರಿಕೆ ಚಡಚಣ: ತಾಲೂಕಿನ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಎನ್‌ಪಿಎಸ್ ರದ್ದುಪಡಿಸಿ ಯುಪಿಎಸ್ ಮರು ಜಾರಿಗೊಳಿಸುವಂತೆ ಒತ್ತಾಯಿಸಿ ಪತ್ರ ಬರೆದು ರವಾನಿಸಲಾಯಿತು.‌ತಾಲೂಕು ಘಟಕದ ಅಧ್ಯಕ್ಷರಾದ ಡಿ ಎಸ್ ಬಗಲಿ ಅವರು ಮಾತನಾಡಿ ಎನ್‌ಪಿಎಸ್ ನೌಕರರ ಮರಣ ಶಾಸನವಾಗಿದೆ. ಇದು ರದ್ದಾಗದಿದ್ದರೆ ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎಂದರು. ಹಾಗಾಗಿ ಇಂದು ತಾಲೂಕಿನ ಎಲ್ಲಾ ಎನ್‌ಪಿಎಸ್ ನೌಕರರು ಮಾನ್ಯ ಮುಖ್ಯಮಂತ್ರಿಗಳಿಗೆ ಓಪಿಎಸ್ ಮರು ಜಾರಿಗೊಳಿಸಿ ಎಂದು ಒತ್ತಾಯಿಸಿ ಪತ್ರಗಳನ್ನು ರವಾನಿಸುತ್ತಿದ್ದೇವೆ ಎಂದರು.ನೌಕರರಾದ ಸತೀಶ್ ಬಗಲಿ, ರಾಣಿ ಝಳಕಿ, ಶಿವದತ್ತ ಕೊಟ್ಟಲಗಿ, ಎಂ ಗಂಗಾಧರಪ್ಪ, ಆರ್ ವಿ ರವಿ, ರಾಜೇಶ್ವರಿ ಕಾಮಗೊಂಡ, ರಾಜಶೇಖರ ಶಿವಣಗಿ, ಶಶಿಧರ ಕಾಂಬಳೆ, ಜಗದೀಶ್ ಚಲವಾದಿ, ಎನ್ ಎಂ ಬಡಿಗೇರ, ಸದಾಶಿವ ಆಲಗೂರ, ಸುರೇಶ ವಾಲಿಕಾರ, ರಾಜು ವಾಲಿಕಾರ, ಎಸ್ ಎಂ ಮಾಳಿ, ಎಸ್ ಎಲ್ ಕೋಳಿ, ಎಂ ಆರ್ ಹಳ್ಳಿ, ಪರಶುರಾಮ ಖಾನಾಪುರ, ಚಿದಾನಂದ ಸೋನ್ಯಾಳ, ಮತ್ತಿತರ ಸರಕಾರಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಷ್ಟ್ರೀಯ ಹೆದ್ದಾರಿ-೨೧೮ ರ ಹೊನಗನಹಳ್ಳಿ ಇರುವ ರೇಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಜ.೨೯ಕ್ಕೆ ಪರಿಶೀಲಿಸಿ, ಸದರ ಕಾರ್ಯದಲ್ಲಿ ಒಳ್ಳೇ ಗುಣಮಟ್ಟ ಕಾಯ್ದುಕೊಂಡು ತೀವ್ರವಾಗಿ ಪೂರ್ಣಗೊಳಿಸಲು ಸೂಚಿಸಿರುತ್ತಾರೆ.ಕಾಮಗಾರಿ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಾದ ವ್ಹಿ.ಆಯ್. ಪಾಟೀಲ್, ಕಾರ್ಯನಿರ್ವಾಹಕ ಇಂಜಿನೀಯರರು ಹಾಗೂ ವಿವೇಕ ಆರ್. ಮಠ, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರೊಂದಿಗೆ ಸಂವಾದ ನಡೆಸಿ ೨೦೨೫ರ ಫೆಬ್ರುವರಿ ಚತುಷ್ಪಥ ಸೇತುವೆಯ ದ್ವೀಪಥರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುವುದಾಗಿ ಹಾಗೂ ೨೦೨೫ರ ಮಾರ್ಚ್ ಅಂತ್ಯದವರೆಗೆ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂಬ ಮಾಹಿತಿ ಪಡೆದರು.ರಾಷ್ಟ್ರೀಯ ಹೆದ್ದಾರಿ -೨೧೮ರ ಮುಳವಾಡ ಹತ್ತಿರ ಇರುವ ಟೋಲ್ ಪ್ಲಾಜಾದಲ್ಲೂ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಅಂಬುಲನ್ಸ್ ಮತ್ತು ಕ್ರೇನ್‌ನ್ನು ರಸ್ತೆಯ ಬಳಕೆದಾರರ ಸುರಕ್ಷತಾ ಹಿತದೃಷ್ಠಿಯಿಂದ ಹಾಗೂ ಸಾರ್ವಜನಿಕರು ಅಪಘಾತ ಸಂದರ್ಭದಲ್ಲಿ ಕೋರಿದಲ್ಲಿ ಕೂಡಲೇ ನಿಯೋಜಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಅಲ್ಲದೇ ರೈತರಿಗೆ ಹಾಗೂ ಸಾರ್ವಜನಿಕರೊಂದಿಗೆ ಸಯಂದಿಂದ ವರ್ತಿಸಿ ತಿಳುವಳಿಕೆ ನೀಡಿ ಕಾನೂನಾತ್ಮಕವಾಗಿ ಟೊಲ್ ಫೀ ವಸೂಲಾತಿಗೆ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಮಹಾರಾಷ್ಟ್ರದ ಲಾಥೂರ್‌ನಲ್ಲಿ ಕೋಳಿ ಶೀತ ಜ್ವರ ಕಂಡು ಬಂದ ಹಿನ್ನೆಲೆ ವಿಜಯಪುರದಲ್ಲಿ ಹಕ್ಕಿ ಜ್ವರ ಹರಡದಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.ಗಡಿ ಭಾಗ ಜಿಲ್ಲೆಗಳಲ್ಲಿ ಪಶು ವೈದ್ಯಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳನ್ನು ನಿಯೋಜಿಸಿ ಬೇರೆ ರಾಜ್ಯದಿಂದ ಬರುವ ಕೋಳಿ ಹಾಗೂ ಮೊಟ್ಟೆಯ ಮೇಲೆ ನಿಗಾ ಇರಿಸಲು ಹಾಗೂ ಕೆರೆ, ನೀರಿನ ಸಂಗ್ರಹಾರಗಳಲ್ಲಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮೃತಪಟ್ಟ ಹಕ್ಕಿಗಳನ್ನು ಪತ್ತೆ ಹಚ್ಚಲು ತಿಳಿಸಿಲಾಗಿದ್ದು, ಸಾರ್ವಜನಿಕರು, ಕೋಳಿ ಉತ್ಪನ್ನ ಹಾಗೂ ಮಾರಾಟಗಾರರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಕಾರಜೋಳ ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ಸಕ್ಕರೆ ಕಾರ್ಖಾನೆಗೆ ಜಿಲ್ಲಾಧಿಕಾರಿಗಳು ಬುಧವಾರ ಭೇಟಿ ನೀಡಿ ವೇಬ್ರೀಡ್ಜಗಳನ್ನು ಪರಿಶೀಲಿಸಿದರು.ಕಾರ್ಖಾನೆಯಲ್ಲಿ ಕಬ್ಬು ನುರಿಸುವಿಕೆಯಿಂದ ಸಕ್ಕರೆ ತಯಾರಾಗುವ ವಿವಿಧ ಹಂತಗಳವರೆಗಿನ ಪ್ರಕ್ರಿಯೆಗಳನ್ನು ಅವಲೋಕಿಸಿ ಸಕ್ಕರೆ ದಾಸ್ತಾನು ಪರಿಶೀಲನೆ ಮಾಡಿದರು.ಈ ಸಂದರ್ಭದಲ್ಲಿ ಆಹಾರ ಇಲಾಖೆ ಉಪನಿರ್ದೇಶಕರು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಹವಮಾನ ವೈಪರೀತ್ಯದಿಂದ ಹಾನಿಯಾದ ಬೆಳೆಗಳಿಗೆ ೮೫.೬೦ ರೂ. ಕೋಟಿ ಬೆಳೆ ವಿಮೆ ಪರಿಹಾರ ಅಂತಿಮಗೊಳಿಸಲಾಗಿರುತ್ತದೆ. ಈಗಾಗಲೇ, ಮುದ್ದೇಬಿಹಾಳ, ತಾಳಿಕೋಟಿ, ದೇವರಹಿಪ್ಪರಗಿ, ಆಲಮೇಲ ತಾಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರ ೧೦.೩೦ ಕೋಟಿ ರೂ. ಜಮೆಯಾಗಿರುತ್ತದೆ.ಉಳಿದಂತೆ ೬೫.೧೦ ಅಂದಾಜು ಇನ್ನೂ ರೂ. ೬೫.೧೦ ಕೋಟಿ ಬೆಳೆ ವಿಮೆ ಪರಿಹಾರ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಆಧಾರ ಜೋಡಣೆಯಾದ ರೈತರ ಬ್ಯಾಂಕ್ ಖಾತೆಗೆ ನೇರ ಜಮೆ ಮಾಡಲಾಗುವುದು. ಆದಕಾರಣ ವಿಮೆ ತುಂಬಿದ ರೈತರು ಬ್ಯಾಂಕ್ ಖಾತೆಗೆ ಆಧಾರ ಜೋಡಣೆಯಾದ ಬಗ್ಗೆ ಖಾತರಿಪಡೆಸಿಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Read More