ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ತಾಲೂಕಿನ ಮಲ್ಲಾಬಾದ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ನಡೆದಿದ್ದು ಚುನಾವಣೆಯಲ್ಲಿ ಆನೂರ ಗ್ರಾಮದ ಮಲ್ಲಣ್ಣಗೌಡ ಮಾಲಿಪಾಟೀಲ್ ಅವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಅವರು ಅವಿರೋಧ ಆಯ್ಕೆಯ ಬಳಿಕ ಮಾತನಾಡುತ್ತಾ ಮಲ್ಲಾಬಾದ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಗೆ ಬರುವ ಗ್ರಾಮಗಳ ರೈತರ ಒಳಿತಿಗಾಗಿ ಕೆಲಸ ಮಡುತ್ತೇನೆ ಎಂದರು. ನಂತರ ಆನೂರ ಮತ್ತು ಮಲ್ಲಾಬಾದ ಗ್ರಾಮಗಳ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸುರೇಶ ಜಮಾದಾರ, ಲಕ್ಕಪ್ಪ ಕಲ್ಲೂರ, ಸಿದ್ದರಾಮ ಜಮಾದಾರ, ಬಸು ನರೋಣ , ಸಿದ್ದಯ್ಯ ಮಠಪತಿ, ನಿಂಗಣ್ಣ ಕಲಶೆಟ್ಟಿ, ಗುಂಡು ಮಾಳಗೆ, ದತ್ತು ಘಾಣೂರ, ಚಂದ್ರಕಾಂತ ತೇಲ್ಕರ್, ಮಹಾಂತ ಸಾಹುಕಾರ ಗಾಡಿ, ಹಣಮಂತ ಗೌಂಡಿ, ಶಿವಶರಣ ಪ್ಯಾಟಿ, ಭಾಗಪ್ಪ ತಳಕೇರಿ, ಶ್ರೀಶೈಲ್ ಸ್ಥಾವರಮಠ, ಚಂದಪ್ಪ ಕನ್ನೋಳಿ, ರೇವಣಸಿದ್ದ ಕಲಶೆಟ್ಟಿ ಇದ್ದರು.