ಉದಯರಶ್ಮಿ ದಿನಪತ್ರಿಕೆ
ಚಡಚಣ: ತಾಲೂಕಿನ ಕರ್ನಾಟಕ ರಾಜ್ಯ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಎನ್‌ಪಿಎಸ್ ರದ್ದುಪಡಿಸಿ ಯುಪಿಎಸ್ ಮರು ಜಾರಿಗೊಳಿಸುವಂತೆ ಒತ್ತಾಯಿಸಿ ಪತ್ರ ಬರೆದು ರವಾನಿಸಲಾಯಿತು.
ತಾಲೂಕು ಘಟಕದ ಅಧ್ಯಕ್ಷರಾದ ಡಿ ಎಸ್ ಬಗಲಿ ಅವರು ಮಾತನಾಡಿ ಎನ್‌ಪಿಎಸ್ ನೌಕರರ ಮರಣ ಶಾಸನವಾಗಿದೆ. ಇದು ರದ್ದಾಗದಿದ್ದರೆ ಸರ್ಕಾರಿ ನೌಕರರ ನಿವೃತ್ತಿ ಜೀವನವನ್ನು ಸಂಕಷ್ಟಕ್ಕೆ ತಳ್ಳುತ್ತದೆ ಎಂದರು. ಹಾಗಾಗಿ ಇಂದು ತಾಲೂಕಿನ ಎಲ್ಲಾ ಎನ್‌ಪಿಎಸ್ ನೌಕರರು ಮಾನ್ಯ ಮುಖ್ಯಮಂತ್ರಿಗಳಿಗೆ ಓಪಿಎಸ್ ಮರು ಜಾರಿಗೊಳಿಸಿ ಎಂದು ಒತ್ತಾಯಿಸಿ ಪತ್ರಗಳನ್ನು ರವಾನಿಸುತ್ತಿದ್ದೇವೆ ಎಂದರು.
ನೌಕರರಾದ ಸತೀಶ್ ಬಗಲಿ, ರಾಣಿ ಝಳಕಿ, ಶಿವದತ್ತ ಕೊಟ್ಟಲಗಿ, ಎಂ ಗಂಗಾಧರಪ್ಪ, ಆರ್ ವಿ ರವಿ, ರಾಜೇಶ್ವರಿ ಕಾಮಗೊಂಡ, ರಾಜಶೇಖರ ಶಿವಣಗಿ, ಶಶಿಧರ ಕಾಂಬಳೆ, ಜಗದೀಶ್ ಚಲವಾದಿ, ಎನ್ ಎಂ ಬಡಿಗೇರ, ಸದಾಶಿವ ಆಲಗೂರ, ಸುರೇಶ ವಾಲಿಕಾರ, ರಾಜು ವಾಲಿಕಾರ, ಎಸ್ ಎಂ ಮಾಳಿ, ಎಸ್ ಎಲ್ ಕೋಳಿ, ಎಂ ಆರ್ ಹಳ್ಳಿ, ಪರಶುರಾಮ ಖಾನಾಪುರ, ಚಿದಾನಂದ ಸೋನ್ಯಾಳ, ಮತ್ತಿತರ ಸರಕಾರಿ ಎನ್ ಪಿ ಎಸ್ ನೌಕರರು ಉಪಸ್ಥಿತರಿದ್ದರು.