ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಹಂಡೆವಜೀಜರ ಸಮಾಜ ಬೆಂಗಳೂರು, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ ಕಲ್ಬುರ್ಗಿ, ಸಹಯೋಗದಲ್ಲಿ ಫೆಬ್ರವರಿ 1 ಮತ್ತು 2 ರಂದು ರಾಜ್ಯ ಮಟ್ಟದ ಮೂರನೇ ಬೃಹತ್ ಸಮಾವೇಶವನ್ನು, ವಿಶ್ವಗುರು ಬಸವಣ್ಣನವರ ಐಕ್ಯ ಸ್ಥಳ ಕೂಡಲಸಂಗಮದ ಸಭಾಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ರಾಜ್ಯಾಧ್ಯಕ್ಷ ಡಾ. ಎಸ್ ಎಸ್ ಪಾಟೀಲ್ ಕಡೂರ ಹೇಳಿದರು.
ವಿಜಯಪುರ ನಗರದಲ್ಲಿ ಮಾಧ್ಯಮಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಮೊದಲ ದಿನ ವಿಚಾರ ಸಂಕೀರಣ, ಗ್ರಂಥಗಳ ಲೋಕಾರ್ಪಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ ನಡೆಯಲಿದೆ. ವಿಶೇಷವಾಗಿ ಹಂಡೆಸಿರಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಸಮಾವೇಶದಲ್ಲಿ ದಿವ್ಯ ಸಾನಿಧ್ಯವನ್ನು ನಿಡುಮಾಮಿಡಿ ಜಗದ್ಗುರುಗಳಾದ ಶ್ರೀ ವೀರಭದ್ರ ಚನ್ನಮಲ್ಲ ದೇಸಿಕೇಂದ್ರ ಮಹಾಸ್ವಾಮಿಗಳು, ಕೊಟ್ಟೂರು ಸಂಸ್ಥಾನ ಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ತೋಂಟದಾರ್ಯ ಸಂಸ್ಥಾನ ಮಠದ ಮ.ನಿ.ಪ್ರ. ಜಗದ್ಗುರು ಡಾಕ್ಟರ್ ಸಿದ್ದರಾಮಯ್ಯ ಸ್ವಾಮೀಜಿಗಳು ಸೇರಿದಂತೆ ವಿವಿಧ ಮಠಾಧೀಶರು ವಹಿಸಲಿದ್ದಾರೆ ಎಂದರು.
ಬೃಹತ್ ಕೈಗಾರಿಕೆ ಸಚಿವರಾದ ಎಂಬಿ ಪಾಟೀಲ್ ಕಾರ್ಯಕ್ರಮ ಉದ್ಘಾಟನೆ ಮಾಡುವರು. ಹಂಡೆ ಅರಸರ ಭಾವಚಿತ್ರವನ್ನು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್ ಪಾಟೀಲ್, ಬಾಗಲಕೋಟ ಹಾಗೂ ವಿಜಯಪುರ ಜಿಲ್ಲೆ ಸಂಸದರು ಹಾಗೂ ಬಳ್ಳಾರಿ ನಗರ ಶಾಸಕರು ಅನಾವರಣಗೊಳಿಸಲಿದ್ದಾರೆ. ಹಂಡೆ ಅರಸು ಮನೆತನದ ಗ್ರಂಥಗಳ ಲೋಕಾರ್ಪಣೆಯನ್ನು ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಹುನಗುಂದ ಶಾಸಕರಾದ ವಿಜಯಾನಂದ ಕಾಶಪ್ಪನವರ ಸೇರಿದಂತೆ ವಿಜಯಪುರ ಬಾಗಲಕೋಟೆ ಜಿಲ್ಲೆಯ ವಿವಿಧ ಶಾಸಕರುಗಳು ವಿಧಾನ ಪರಿಷತ್ತಿ ಸದಸ್ಯರು ಮಾಜಿ ಶಾಸಕರುಗಳು ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ರಾಜ್ಯಾಧ್ಯಕ್ಷ ಡಾ. ಎಸ್.ಎಸ್. ಪಾಟೀಲ್ ಕಡೂರ ವಹಿಸಲಿದ್ದಾರೆ.
ಸಂಶೋಧಕರಾದ ಎಂ.ಎಸ್ ಚೌಧರಿ, ವಿಶ್ರಾಂತ ಪ್ರಾಧ್ಯಾಪಕರಾದ ಡಾ.ಕೆ. ರವೀಂದ್ರನಾಥ, ಸಂಶೋಧಕರಾದ ಡಾ. ಡಿ.ಎನ್. ಪಾಟೀಲ್ ಅವರಿಗೆ ರಾಷ್ಟ್ರೀಯ ಹಂಡೆಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದ್ದಾರೆ. ಸಮಾಜದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದ್ದಾರೆ. ಜಿಲ್ಲೆಯ ಸಮಾಜದ ಎಲ್ಲ ಬಂಧುಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ವಿನಂತಿಸಿಕೊಂಡರು.
ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠದ ಅಧ್ಯಕ್ಷರಾದ ಜಿ.ಎನ್. ಪಾಟೀಲ್, ಸಮಾಜದ ರಾಜ್ಯ ಉಪಾಧ್ಯಕ್ಷರಾದ ಎಸ್.ಜಿ ಪಾಟೀಲ್, ಬಾಪುಗೌಡ ಬಿರಾದಾರ, ಪ್ರಧಾನ ಕಾರ್ಯದರ್ಶಿ ಆರ್.ಎಸ್. ಪಾಟೀಲ್ (ಅಗಸಬಾಳ) ಸಹ ಕಾರ್ಯದರ್ಶಿಗಳಾದ ಪ್ರಭು ಬೆಳ್ಳಿ, ದೇವೇಂದ್ರ ಗೋನಾಳ, ಯುವ ಘಟಕದ ಅಧ್ಯಕ್ಷ ಸಂಗನಗೌಡ ಯಂಕಂಚಿ, ಬಾಗಲಕೋಟ ಜಿಲ್ಲಾಧ್ಯಕ್ಷ ವಿ.ಕೆ.ಪಾಟೀಲ್ ಮುಖಂಡರುಗಳಾದ ಎಸ್.ಹೆಚ್. ಪಾಟೀಲ್, ಎಸ್.ಎಸ್. ಪಾಟೀಲ್, ವಿನಯ ಪಾಟೀಲ್ ಸೇರಿದಂತೆ ಸಮಾಜದ ಪ್ರಮುಖರು ಇದ್ದರು.