Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ದೇವರಹಿಪ್ಪರಗಿ: ಜಾತ್ರಾ ಮಹೋತ್ಸವದ ಅಂಗವಾಗಿ ಜರುಗುವ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜನರಲ್ಲಿ ಭಕ್ತಿಭಾವಗಳನ್ನು ಜಾಗೃತಿಗೊಳಿಸುವುದರ ಜೊತೆಗೆ ಐಕ್ಯತೆಯನ್ನುಂಟು ಮಾಡುತ್ತವೆ ಎಂದು ಸಿದ್ಧರಾಮ ಸ್ವಾಮೀಜಿ ಹೇಳಿದರು.ಪಟ್ಟಣದ ಗಂಗಾನಗರದಲ್ಲಿ ಶನಿವಾರ ಬಾಲಹನುಮಾನ ದೇವಸ್ಥಾನದ ೧೧ ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಇಂದು ಜಾತ್ರೆಯ ಅಂಗವಾಗಿ ಧರ್ಮಸಭೆ, ನಾಟಕ, ರಸಮಂಜರಿ, ಡೋಳ್ಳಿನ ಪದ, ಭಾರ ಎತ್ತುವ ಸ್ಪರ್ಧೆ ಸಹಿತ ಹತ್ತುಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ ಮಾತನಾಡಿ, ನಿಂಗು ಯಂಭತ್ನಾಳ ನೇತೃತ್ವದಲ್ಲಿ ಮಾಲಾಧಾರಿಗಳು ಸತತ ೧೧ನೇ ವರ್ಷದಲ್ಲಿ ಯಶಸ್ವಿಯಾಗಿ ಜಾತ್ರಾ ಮಹೋತ್ಸವ ನಡೆಸಿಕೊಂಡು ಬರುತ್ತಿರುವುದು ಅತ್ಯಂತ ಸಮಯೋಚಿತ ಹಾಗೂ ಅನುಕರಣೀಯ ಕಾರ್ಯ ಎಂದರು.ಕಾರ್ಯಕ್ರಮದಲ್ಲಿ ಗಾಯಕ ಸಿದ್ಧಯ್ಯಸ್ವಾಮಿ ಪಡದಹಳ್ಳಿ, ತಬಲಾ ವಾದಕ ಮಲ್ಲಿಕಾರ್ಜುನ ಜೇವರಗಿ, ಸಂಘಟಕ ನಿಂಗು ಯಂಭತ್ನಾಳ, ಬಾಬು ಸೌದಿ, ಕಾಶೀನಾಥ ರಾಮಗೊಂಡ, ಬಸವರಾಜ ಕುಂಬಾರ ಶ್ರೀಶೈಲ ಸೌದಿ, ಜಟ್ಟೆಪ್ಪ ಪೂಜಾರಿ ಸಹಿತ ಮಾಲಾಧಾರಿಗಳು, ಭಕ್ತರು ಇದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಂಜಗಿ ಗ್ರಾಮದ ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕೀರ್ದಿ ಸಾರು ಬೀಳು ಜಮೀನುಗಳ ಮತ್ತು ಅರಣ್ಯ ಜಮೀನುಗಳು ೧೯೬೪ ರಿಂದ ಇಲ್ಲಿಯವರೆಗೆ ಜಮೀನುಗಳ ಹಕ್ಕು ಬದಲಾವಣೆ ಮಾಡಿ ಖರೀದಿಸಿದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇಂಡಿ ಉಪವಿಭಾಗಾದಿಕಾರಿಗಳು, ಹಾಗೂ ತಹಶೀಲ್ದಾರರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.ಹಂಜಗಿ ಗ್ರಾಮದ ಜಮೀನು ಸರ್ವೆ ನಂ. ೪೪೮, ೫೩೧, ೫೨೫,೫೩೦, ೫೩೨, ೪೨೪, ೩೮೭, ೩೫೩, ೫೨೮, ೮೯, ೫೧೬, ೫೧೭, ೩೩೬ ಒಟ್ಟು ೨೧೪ ಎಕರೆಗಳಿಗಿಂ ಮೆಲ್ಪಟ್ಟ ಜಮೀನುಗಳು, ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕಿರ್ಣ ಸಾರ ಬೀಳು ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನುಗಳು ಇದ್ದವು. ಇವುಗಳನ್ನು ಸರಕಾರದ ಯಾವ ಆದೇಶದ ಮೇರೆಗೆ ಸಾರ್ವಜನಿಕರಿಗೆ ಹಂಚಲಾಗಿದೆ? ಈ ಜಮೀನುಗಳನ್ನು ಸಾರ್ವಜನಿಕರಿಗೆ ಹಂಚಲು ಸಮರ್ಥ (ಕಾಂಪಿಟೆಂಟ್) ಅಧಿಕಾರಿಗಳು, ಯಾರು?, ಸದರಿ ಜಮೀನುಗಳನ್ನು ಹಂಚಲು ಜಾರಿ ಮಾಡಿದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಂಜಗಿ ಗ್ರಾಮದ ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕೀರ್ದಿ ಸಾರು ಬೀಳು ಜಮೀನುಗಳ ಮತ್ತು ಅರಣ್ಯ ಜಮೀನುಗಳು ೧೯೬೪ ರಿಂದ ಇಲ್ಲಿಯವರೆಗೆ ಜಮೀನುಗಳ ಹಕ್ಕು ಬದಲಾವಣೆ ಮಾಡಿ ಖರೀದಿಸಿದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇಂಡಿ ಉಪವಿಭಾಗಾದಿಕಾರಿಗಳು, ಹಾಗೂ ತಹಶೀಲ್ದಾರರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.ಹಂಜಗಿ ಗ್ರಾಮದ ಜಮೀನು ಸರ್ವೆ ನಂ. ೪೪೮, ೫೩೧, ೫೨೫,೫೩೦, ೫೩೨, ೪೨೪, ೩೮೭, ೩೫೩, ೫೨೮, ೮೯, ೫೧೬, ೫೧೭, ೩೩೬ ಒಟ್ಟು ೨೧೪ ಎಕರೆಗಳಿಗಿಂ ಮೆಲ್ಪಟ್ಟ ಜಮೀನುಗಳು, ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕಿರ್ಣ ಸಾರ ಬೀಳು ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನುಗಳು ಇದ್ದವು. ಇವುಗಳನ್ನು ಸರಕಾರದ ಯಾವ ಆದೇಶದ ಮೇರೆಗೆ ಸಾರ್ವಜನಿಕರಿಗೆ ಹಂಚಲಾಗಿದೆ? ಈ ಜಮೀನುಗಳನ್ನು ಸಾರ್ವಜನಿಕರಿಗೆ ಹಂಚಲು ಸಮರ್ಥ (ಕಾಂಪಿಟೆಂಟ್) ಅಧಿಕಾರಿಗಳು, ಯಾರು?, ಸದರಿ ಜಮೀನುಗಳನ್ನು ಹಂಚಲು ಜಾರಿ ಮಾಡಿದ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲೊಂದಾದ “ಯುವನಿಧಿ ಯೋಜನೆ”ಯ ವ್ಯಾಪಕ ಪ್ರಚಾರಕ್ಕಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ವಿಜಯಪುರ ರವರ ಸಹಯೋಗದಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜನಲ್ಲಿ ಹಮ್ಮಿಕೊಳ್ಳಲಾಗಿತ್ತು.ತಾಲೂಕಿನ ಪಂಚಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರಾಜಶೇಖರ ಅವಜಿ ಮಾತನಾಡಿ, ಯುವನಿಧಿ ಯೋಜನೆ ಅಡಿ ಪದವಿಧರರಿಗೆ ರೂ.೩೦೦೦ ಮತ್ತು ಡಿಪ್ಲೋಮಾದಾರರಿಗೆ ರೂ.೧೫೦೦ ಸರಕಾರ ನಿರುದ್ಯೋಗ ಭತ್ಯೆ ನೀಡಲಾಗುತ್ತಿದೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಕೌಶಲ್ಯ ತರಬೇತಿ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿದರು.ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಸಂಜುಕುಮಾರ ಚವ್ಹಾಣ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಯುವನಿಧಿ ಯೋಜನೆಯಡಿ ಹೆಸರು ನೋಂದಾಯಿಸಿ ಸರಕಾರದ ಲಾಭವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಪ್ಲೇಸಮೆಂಟ್ ಅಧಿಕಾರಿಗಳಾದ ಬಂದೇನವಾಜ ದೇಸಾಯಿ ನಿರೂಪಿಸಿ, ಜಿಲ್ಲಾ ಉದ್ಯೋಗಾಧಿಕಾರಿ ಮಹೇಶ.ಜೆ.ಮಾಳವಾಡೇಕರ ವಂದಿಸಿದರು.ಕಾರ್ಯಕ್ರಮದಲ್ಲಿ ವಿಜಯಪುರ ತಾಲೂಕಿನ ಪಂಚಗ್ಯಾರಂಟಿ ಸದಸ್ಯರುಗಳಾದ ಮಾರುತಿ ಸುಬೇದಾರ, ಪರುಶುರಾಮ ವಾಲೀಕಾರ, ಹಮೀದಾ ಪಟೇಲ, ಮಾಹಾದೇವ ಕವಲಗಿ, ಕಾಲೇಜು ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಗತ್ತಿನ ಪ್ರತಿಯೊಂದು ಅಂಶವು ಜ್ಞಾನದ ಮೇಲೆ ನಿಂತಿದೆ.ಜ್ಞಾನಕ್ಕಿಂತ ಪವಿತ್ರವಾದುದು ಈ ಜಗತ್ತಿನಲ್ಲಿ ಬೇರೆ ಯಾವುದು ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸುನಿಲಗೌಡ.ಬಿ.ಪಾಟೀಲ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಸಮನ್ವಯ ಆಂಗ್ಲ ಮಾಧ್ಯಮ ಹಾಗೂ ಎಸ್.ಎಸ್.ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯಲ್ಲಿ ಏರ್ಪಡಿಸಿದ ” ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮಕ್ಕಳ ಹಬ್ಬ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಮಕ್ಕಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಕ್ಷರದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ ಅವರಲ್ಲಿ ಅಡಕವಾಗಿರುವ ಸುಪ್ತ ಪ್ರತಿಭೆಯನ್ನು ಹೊರಹಾಕುವುದು ಬಹಳ ಅವಶ್ಯವಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ ಧಾರವಾಡದ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ, ವಿದ್ಯಾರ್ಥಿಗಳು ಜಗತ್ತಿನ ಮಾಂತ್ರಿಕ ವಸ್ತು ಹಾಗೂ ಶತ್ರುವಾದ ಮೋಬೈಲ್ ಬಳಕೆ ಮಾಡಬಾರದು. ಶಾಲೆಯಲ್ಲಿ ಶಿಕ್ಷಕರ ಹೇಳುವ ಪಾಠವನ್ನು ಚೆನ್ನಾಗಿ ಮನನ ಮಾಡಿಕೊಂಡು, ಪ್ರಶ್ನಿಸುವ ಕೌಶಲ್ಯ ಬೆಳೆಸಿಕೊಳ್ಳಬೇಕು. ಮುಂದಿನ ಜೀವನದ ಗುರಿಯ ಹೆಜ್ಜೆಯನ್ನು ಈಗಿನಿಂದಲೇ ಸಜ್ಜಾಗುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.ಸಮಾಜ…

Read More

ಜಿಲ್ಲಾ ಆಸ್ಪತ್ರೆ ಏಡ್ಸ್ಸ್ ನಿಯಂತ್ರಣ ಕಛೇರಿ ಜಿಲ್ಲಾ ಮೇಲ್ವಿಚಾರಕ ಬಾಬುರಾವ ತಳವಾರ ಕರೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹೆಚ್.ಐ.ವಿ ಸೋಂಕಿನ ಕುರಿತು ವಿದ್ಯಾರ್ಥಿಗಳು ಮತ್ತು ಯುವಜನತೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಜಿಲ್ಲಾ ಆಸ್ಪತ್ರೆ ಏಡ್ಸ್ಸ್ ನಿಯಂತ್ರಣ ಕಛೇರಿ ಜಿಲ್ಲಾ ಮೇಲ್ವಿಚಾರಕ ಬಾಬುರಾವ ತಳವಾರ ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ಕೋಶ ಹಾಗೂ ಯುವ ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಏಡ್ಸ್ಸ್ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಹೆಚ್.ಐ.ವಿ ಸೋಂಕಿತ ವ್ಯಕ್ತಿಗಳೊಂದಿಗೆ ತಾರತಮ್ಯ ಮತ್ತು ಕಳಂಕ ಹೋಗಲಾಡಿಸಲು ಸಮುದಾಯದ ಪಾತ್ರ ಅತ್ಯಂತ ಮುಖ್ಯವಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಮಗ್ರ ಸಮಾಲೋಚನೆ ಮತ್ತು ಪರೀಕ್ಷಾ ಕೇಂದ್ರಗಳು ಲಭ್ಯವಿದ್ದು, ಸೋಂಕಿತರಿಗೆ ಉಚಿತ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಜನರು ಈ ಸೌಲಭ್ಯಗಳ ಬಗ್ಗೆ ಹೆಚ್ಚು ಜಾಗೃತರಾಗಬೇಕಾಗಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮಹಿಳಾ ವಿವಿಯ ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಏಡ್ಸ ಒಂದು ಗಂಭೀರವಾದ ಕಾಯಿಲೆ ಇದರ ಬಗ್ಗೆ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿಜ್ಞಾನ ವಸ್ತುಪ್ರದರ್ಶನಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪಯಣದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ವೈಜ್ಞಾನಿಕ ಪರಿಕಲ್ಪನೆಗಳ ಪ್ರಾಯೋಗಿಕ ಅಪ್ಲಿಕೇಶನ್ ಕಲಿಕೆ ಮತ್ತು ಪ್ರಾಯೋಗಿಕ ಅನ್ವಯಕ್ಕೆ ವೇದಿಕೆಯನ್ನು ಒದಗಿಸುತ್ತವೆ ಎಂದು ಮುಖ್ಯ ಶಿಕ್ಷಕಿ ಐರಿನ್ ಹೇಳಿದರು.ಗುರುವಾರ ನಿರ್ಮಲಾಲಯ ಆಂಗ್ಲ ಮಾದ್ಯಮ ಶಾಲೆಯಲ್ಲಿ ಹಮ್ಮಿಕೊಂಡ ವಿಜ್ಞಾನ ಮೇಳದ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.ವಿಜ್ಞಾನ ಮೇಳ ಹಮ್ಮಿಕೊಳ್ಳುವದರಿಂದ ವಿದ್ಯಾರ್ಥಿಗಳನ್ನು ಉತ್ತೇಜಿಸುವದು ವಿಜ್ಞಾನ ಪ್ರದರ್ಶನಗಳ ಪ್ರಾಥಮಿಕ ಉದ್ದೇಶವಾಗಿದೆ. ಇದು ಪಠ್ಯಪುಸ್ತಕಗಳನ್ನು ಮೀರಿ ವಿಜಾನದ ಆಳವಾದ ತಿಳುವಳಿಗೆಯನ್ನು ಬೆಳೆಸುತ್ತದೆ ಎಂದು ಹೇಳಿದರು.ಶಾಲೆಯಲ್ಲಿ ಹಮ್ಮಿಕೊಂಡಿದ ವಿಜ್ಞಾನ ಮೇಳದಲ್ಲಿ ಎಲ್‌ಕೆಜಿ ಯಿಂದ ೧೦ನೇ ತರಗತಿಯ ಮಕ್ಕಳು ಪಾಲ್ಗೊಂಡಿದ್ದು ಆಯಾ ತರಗತಿಗೆ ಅನುಗುಣವಾಗಿ ಅವರ ವಿಷಯಕ್ಕೆ ತಕ್ಕಂತೆ ವಸ್ತುಗಳನ್ನು ನಿರ್ಮಿಸಿ ಪ್ರದರ್ಶಿಸಿದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ. ದಿ. ಡಾ. ಆರ್. ಸಿ. ಬಿದರಿ ಅವರ ಸ್ಮರಣಾರ್ಥ ಕ್ಯಾನ್ಸರ್ ಕುರಿತು ಮುಂದುವರೆದ ವೈದ್ಯಕೀಯ ಶಿಕ್ಷಣ ರಾಜ್ಯ ಮಟ್ಟದ ಉಪನ್ಯಾಸ ಕಾರ್ಯಕ್ರಮ ರವಿವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಿತು.ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ.ಎಂ.ಪಾಟೀಲ್ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವೈದ್ಯಕೀಯ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಿಕಂದರಾಬಾದಿನ ರೇನೋವಾ ಸೌಮ್ಯ ಕ್ಯಾನ್ಸರ್ ಸೆಂಟರ್ ನ ಮೆಡಿಕಲ್ ಅಂಕೋಲಾಜಿ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥ ಡಾ. ಪಿ. ಎಸ್. ದತ್ತಾತ್ರೇಯ ಉದ್ಘಾಟಿಸಿದರು.ವೈದ್ಯಕೀಯ ಶಾಸ್ತ್ರ ವಿಭಾಗದ ಪ್ರೊ. ಡಾ. ಆರ್. ಸಿ. ಬಿದರಿ ಪ್ರಾಸ್ತಾವಿಕ ಮಾತನಾಡಿದರು.ಡಾ. ಸಿ .ಆರ್. ಬಿದರಿ ಸ್ಮಾರಕ ದತ್ತಿ ವತಿಯಿಂದ ಆಯೋಜಿಸಲಾಗಿದ್ದ ಈ ಉಪನ್ಯಾಸದಲ್ಲಿ ಮುಂಬೈ ಮತ್ತು ಹೈದ್ರಾಬಾದ ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 400 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸುಮಾರು 1300 ಜನ ಕಾರ್ಯಕ್ರಮಕ್ಕೆ ಆನಲೈನ್ ನೊಂದಣಿ ಮಾಡಿದ್ದು ಗಮನಾರ್ಹವಾಗಿದೆ.ಈ ಸಂದರ್ಭದಲ್ಲಿ ವಿಜಯೇಂದ್ರ ಬಿದರಿ, ಡಾ.…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ವಿದ್ಯಾರ್ಥಿಗಳಿಗೆ ಸೋಶಿಯಲ್ ಮಿಡಿಯಾ ದುಶ್ಚಟವಾಗಿ ಪರಿಣಮಿಸಿದೆ ಅದರಿಂದ ಮುಕ್ತರಾಗಬೇಕು ಎಂದರೆ ಮಕ್ಕಳನ್ನ ಮೋಬೈಲದಿಂದ ದೂರವಿಟ್ಟು ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಿಎಸ್‌ಐ ಅರವಿಂದ ಅಂಗಡಿ ಹೇಳಿದರುಭಾನುವಾರ ಪಟ್ಟಣದ ಎ.ಕೆ. ನಂದಿ ಪದವಿ ಪೂರ್ವ ಕಾಲೇಜಿನ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ ಹೇಳಿದರು.ಇದು ಸ್ಪರ್ದಾ ಯುಗವಿದ್ದು ಕ್ಷಣಕ್ಷಣಕ್ಕೂ ಸ್ಪರ್ದೇ ನಡೆಯುತಿದೆ ಸ್ಪರ್ದೇಗೆ ತಯಾರ ಆಗಬೇಕು ಎಂದುರೆ ಶಿಕ್ಷಣದಿಂದ ಮಾತ್ರ ಸಾದ್ಯ. ಶೋಶಿಯಲ ಮಿಡಾಯ ಹೆಚ್ಚು ಬಳಕೆ ಮಾಡಿದಂತೆ ಅಪರಾದ ಕೃತ್ಯಗಳು ಹೆಚ್ಚುತಿದೆ ಅದನ್ನು ತಡೆಗಟ್ಟಬೇಕು ಎಂದರೆ ಅವಶಕತೆ ಇರುವದನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು ಹಾಗೂ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮೋಬೈಲದಿಂದ ದೂರವಿಟ್ಟು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರುಉಪನ್ಯಾಸಕ ಎನ್.ಎಸ್. ದೇವರಮನಿ ಮಾತನಾಡಿ ಓರ್ವ ವ್ಯೆಕ್ತಿಯ ಭವಿಷ್ಯ ನಿರ್ಮಾಣವಾಗಬೇಕು ಎಂದರೆ ಅದು ಶಿಕ್ಷಣದಿಂದ ಮಾತ್ರ ಸಾದ್ಯ ಅದಕ್ಕೆ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂದಿನ ಸ್ಪರ್ದಾ ಯುಗದಲ್ಲಿ ಪೊಷಕರು ತಮ್ಮ…

Read More

ಉದಯರಶ್ಮಿ ದಿನಪತ್ರಿಕೆ ತಿಕೋಟಾ: ತಾಲೂಕಿನ ಬಿಜ್ಜರಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ನರೇಗಾ ದಿನಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದ ಗ್ರಾಪಂ ಸದಸ್ಯ ಸುಭಾಷಗೌಡ ಪಾಟೀಲ ಅವರು, ಪ್ರಸ್ತುತ ಗ್ರಾಮೀಣರಿಗೆ ನೀಡುತ್ತಿರುವ 100 ದಿನಗಳ ಬದಲು 150 ದಿನಗಳಿಗೆ ಹೆಚ್ಚಳ ಮಾಡಿ ಗ್ರಾಮೀಣ ಜನರಿಗೆ ಇನ್ನಷ್ಟು ಕೆಲಸ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿ ಮುಂದಾಗಬೇಕು ಎಂದರು.ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಮಾತನಾಡಿ, ಮನರೇಗ ಎನ್ನುವುದು ಕೇವಲ ಒಂದು ಯೋಜನೆಯಾಗಿರದೇ ಅದು ಗ್ರಾಮೀಣರ ಪಾಲಿನ ಕಲ್ಪವೃಕ್ಷವಾಗಿದೆ. 100 ದಿನಗಳ ಉದ್ಯೋಗ ಖಾತರಿ ನೀಡುವದಷ್ಟೇ ಅಲ್ಲದೇ ರೈತ್ತರ ಜಮೀನಿನಲ್ಲಿ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ಗ್ರಾಮಾಭಿವೃದ್ಧಿಗಾಗಿ ಸಮುದಾಯ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣರಿಗೆ ವರದಾನವಾಗಿದೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮೀಬಾಯಿ ಕ್ಯಾತನ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜೆ.ಎ.ದಶವಂತ,ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜನಾಧಿಕಾರಿ ಕಲ್ಲಪ್ಪ ನಂದರಗಿ, ಸಂಪನ್ಮೂಲ ವ್ಯಕ್ತಿ ರಮೇಶ ಭಜಂತ್ರಿ, ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಾದ ಗೀತಾ ಶೇಗಾವಿ, ಕಾವ್ಯ…

Read More