ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ತಾಲೂಕಿನ ಬಿಜ್ಜರಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ನರೇಗಾ ದಿನಾಚರಣೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದ ಗ್ರಾಪಂ ಸದಸ್ಯ ಸುಭಾಷಗೌಡ ಪಾಟೀಲ ಅವರು, ಪ್ರಸ್ತುತ ಗ್ರಾಮೀಣರಿಗೆ ನೀಡುತ್ತಿರುವ 100 ದಿನಗಳ ಬದಲು 150 ದಿನಗಳಿಗೆ ಹೆಚ್ಚಳ ಮಾಡಿ ಗ್ರಾಮೀಣ ಜನರಿಗೆ ಇನ್ನಷ್ಟು ಕೆಲಸ ನೀಡುವ ಮೂಲಕ ಗ್ರಾಮಗಳ ಅಭಿವೃದ್ಧಿ ಮುಂದಾಗಬೇಕು ಎಂದರು.
ಕಾರ್ಯನಿರ್ವಾಹಕ ಅಧಿಕಾರಿ ಬಸವಂತರಾಯಗೌಡ ಬಿರಾದಾರ ಮಾತನಾಡಿ, ಮನರೇಗ ಎನ್ನುವುದು ಕೇವಲ ಒಂದು ಯೋಜನೆಯಾಗಿರದೇ ಅದು ಗ್ರಾಮೀಣರ ಪಾಲಿನ ಕಲ್ಪವೃಕ್ಷವಾಗಿದೆ. 100 ದಿನಗಳ ಉದ್ಯೋಗ ಖಾತರಿ ನೀಡುವದಷ್ಟೇ ಅಲ್ಲದೇ ರೈತ್ತರ ಜಮೀನಿನಲ್ಲಿ ವಿವಿಧ ವೈಯಕ್ತಿಕ ಕಾಮಗಾರಿಗಳನ್ನು ಹಾಗೂ ಗ್ರಾಮಾಭಿವೃದ್ಧಿಗಾಗಿ ಸಮುದಾಯ ಕಾಮಗಾರಿಗಳನ್ನು ನೀಡುವ ಮೂಲಕ ಗ್ರಾಮೀಣರಿಗೆ ವರದಾನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಲಕ್ಷ್ಮೀಬಾಯಿ ಕ್ಯಾತನ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜೆ.ಎ.ದಶವಂತ,
ಮಾಹಿತಿ ಶಿಕ್ಷಣ ಮತ್ತು ಸಂವಹನ ಸಂಯೋಜನಾಧಿಕಾರಿ ಕಲ್ಲಪ್ಪ ನಂದರಗಿ, ಸಂಪನ್ಮೂಲ ವ್ಯಕ್ತಿ ರಮೇಶ ಭಜಂತ್ರಿ, ಸಮಾಜ ಕಾರ್ಯ ಪ್ರಶಿಕ್ಷಣಾರ್ಥಿಗಳಾದ ಗೀತಾ ಶೇಗಾವಿ, ಕಾವ್ಯ ಕುಂಬಾರ, ಲಕ್ಷ್ಮಿ ರಾಠೋಡ, ಶೃತಿ ಭಜಂತ್ರಿ, ಗ್ರಾಮ ಪಂಚಾಯತಿಯ ದುಂಡಪ್ಪ ನಾಗರಳ್ಳಿ, ಬಸವರಾಜ ಜೊಲ್ಲಿ, ಗೋಪಾಲ ಕುಂಬಾರ ಸೇರಿದಂತೆ ಇತರರು ಹಾಜರಿದ್ದರು.