ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಹಂಜಗಿ ಗ್ರಾಮದ ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕೀರ್ದಿ ಸಾರು ಬೀಳು ಜಮೀನುಗಳ ಮತ್ತು ಅರಣ್ಯ ಜಮೀನುಗಳು ೧೯೬೪ ರಿಂದ ಇಲ್ಲಿಯವರೆಗೆ ಜಮೀನುಗಳ ಹಕ್ಕು ಬದಲಾವಣೆ ಮಾಡಿ ಖರೀದಿಸಿದ ಬಗ್ಗೆ ದಾಖಲೆಗಳನ್ನು ನೀಡುವಂತೆ ಇಂಡಿ ಉಪವಿಭಾಗಾದಿಕಾರಿಗಳು, ಹಾಗೂ ತಹಶೀಲ್ದಾರರಿಗೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಮನವಿ ಸಲ್ಲಿಸಲಾಯಿತು.
ಹಂಜಗಿ ಗ್ರಾಮದ ಜಮೀನು ಸರ್ವೆ ನಂ. ೪೪೮, ೫೩೧, ೫೨೫,೫೩೦, ೫೩೨, ೪೨೪, ೩೮೭, ೩೫೩, ೫೨೮, ೮೯, ೫೧೬, ೫೧೭, ೩೩೬ ಒಟ್ಟು ೨೧೪ ಎಕರೆಗಳಿಗಿಂ ಮೆಲ್ಪಟ್ಟ ಜಮೀನುಗಳು, ಸರಕಾರಿ ಮುಫತ್ ಗಾಯರಾಣ ದನಗಳ ಚರಾಯಿ ಸಲುವಾಗಿ ಕಾಯ್ದಿರಿಸಿದ ಹಾಗೂ ಕಿರ್ಣ ಸಾರ ಬೀಳು ಮತ್ತು ಅರಣ್ಯ ಇಲಾಖೆಗೆ ಸೇರಿದ ಜಮೀನುಗಳು ಇದ್ದವು. ಇವುಗಳನ್ನು ಸರಕಾರದ ಯಾವ ಆದೇಶದ ಮೇರೆಗೆ ಸಾರ್ವಜನಿಕರಿಗೆ ಹಂಚಲಾಗಿದೆ? ಈ ಜಮೀನುಗಳನ್ನು ಸಾರ್ವಜನಿಕರಿಗೆ ಹಂಚಲು ಸಮರ್ಥ (ಕಾಂಪಿಟೆಂಟ್) ಅಧಿಕಾರಿಗಳು, ಯಾರು?, ಸದರಿ ಜಮೀನುಗಳನ್ನು ಹಂಚಲು ಜಾರಿ ಮಾಡಿದ ಸಮರ್ಥ(ಕಾಂಪಿಟೆಂಟ್) ಅಧಿಕಾರಿಗಳ ಆದೇಶದ ಪ್ರತಿ, ಜಮೀನುಗಳನ್ನು ಪಡೆದ ಎಲ್ಲಾ ಫಲಾನುಭವಿಗಳ ಮೂಲ ಹೆಸರು ಹಾಗೂ ಅವರಿಗೆ ಸಂಬಂಧ ಪಟ್ಟ ದಾಖಲಾತಿಗಳು, ಸನ್- ೧೯೬೪ ರಿಂದ ಇಲ್ಲಿಯವರೆಗೆ ಅವುಗಳನ್ನು ಒಬ್ಬರಿಂದ ಮತ್ತೊಬ್ಬರಿಗೆ ಮಾರಾಟ ಮಾಡಿ ಹಕ್ಕು ಬದಲಾವಣೆ ಮಾಡಿ ಖರೀದಿ ಕೊಟ್ಟವರ ಹೆಸರು & ಖರೀದಿ ತೆಗೆದುಕೊಂಡವರ ಹೆಸರುಗಳು, ಅವರ ಚುನಾವಣಾ ಐ.ಡಿ ಮತ್ತು ಆಧಾರ ಕಾರ್ಡಗಳು, ಎಲ್ಲ ಜಮೀನುಗಳ ಖರೀದಿ ಪತ್ರಗಳ ಸರ್ಟಿಫಾಯಿಡ್ ಝರಾಕ್ಸ್ ಪ್ರತಿಗಳು, ಖರೀದಿ ಪತ್ರಗಳಲ್ಲಿ ಮಾಡಿದ ಸಾಕ್ಷಿದಾರರ ಹೆಸರುಗಳು, ಖರೀದಿ ಮಾಡಿದವರ, ಖರೀದಿ ಕೊಟ್ಟವರ ಹಾಗೂ ಖರೀದಿ ಪತ್ರದಲ್ಲಿಯ ಸಾಕ್ಷಿದಾರರ ಚುನಾವಣಾ ಐ.ಡಿ., ಆಧಾರ ಕಾರ್ಡಗಳ ದಾಖಲೆಗಳನ್ನು ನೀಡಬೇಕು. ಒಂದು ವೇಳೆ ಸದರಿ ಜಮೀನುಗಳನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾಗಿದ್ದರೆ, ಜಿಲ್ಲಾಧಿಕಾರಿಗಳ ಶರ್ತು ಕಡಿಮೆಯಾಗಿರುವ ಬಗ್ಗೆ ಪ್ರತಿ ನೀಡಬೇಕು.
ಈ ಸಂಬಂಧ ನಾವು ಕೆಲವು ಪಹಣಿ ಉತಾರಗಳು ಹಾಗೂ ಫೆಷಲ್ ಪತ್ರಿಕೆ ೧೯೬೪ ರಿಂದ ಕೈಬರಹ ಪಹಣಿ ಪತ್ರಿಕೆಗಳನ್ನು ತೆಗೆಯಿಸಿ ನೋಡಲಾಗಿ ಎಲ್ಲಾ ಜಮೀನುಗಳ ಪಹಣಿ ಒಬ್ಬರ ಹೆಸರಿನಲ್ಲಿ , ಫೆಷಲ್ ಪತ್ರಿಕೆ ಇನ್ನೊಬ್ಬರ ಹೆಸರಿನಲ್ಲಿ ಹಾಗೂ ‘ಡ’ ಮತ್ತೊಬ್ಬರ ಹೆಸರಿನಲ್ಲಿರುವದನ್ನು ಕಂಡು ಬರುತ್ತಿದೆ. ಆದರೆ ನಿಜವಾದ ವಾಸ್ತು ಸ್ಥಿತಿ ಏನೆಂಬುವದನ್ನು ಕಂಡು ಬರುತ್ತಿಲ್ಲಾ. ಆದ್ದರಿಂದ ಮೆ: ತಾವೇ ಖುದ್ದಾಗಿ ಸದರಿ ವಿಷಯವನ್ನು ಪರಿಶೀಲಿಸಿ ಅದರ ವಾಸ್ತು ಸ್ಥಿತಿಯನ್ನು ನಮಗೆ ದೊರಕಿಸಲು ವಿನಂತಿ.
ಒಂದು ವೇಳೆ ಮುಂದಿನ ೬೦ ದಿನಗಳಲ್ಲಿ ಮೇಲೆ ಕೇಳಿದ ಪ್ರಕಾರ ವಿಷಯ ಮತ್ತು ದಸ್ತಾವೇಜುಗಳ ಪ್ರತಿಗಳನ್ನು ನಮಗೆ ಪೂರೈಸದಿದ್ದರೆ, ನಾವು ನಮ್ಮ ಕೆ.ಆರ್.ಎಸ್. ಪಕ್ಷದಿಂದ ಮತ್ತು ಗ್ರಾಮಸ್ಥರ ಪರವಾಗಿ ತಮ್ಮ ಕಾರ್ಯಾಲಯದ ಮುಂದೆ ಬಂದು ಧರಣಿ ಸತ್ಯಾಗ್ರಹ ಹೂಡಲಾಗುವುದೆಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಶೋಕ್ ಜಾಧವ್, ರಾಜ್ಯ ಸಂಘಟನಾ ಕಾರ್ಯದರ್ಶಿ ಗಣಪತಿ ರಾಠೋಡ, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಡಚಣ. ಮಲ್ಲು ಬಿರಾದಾರ, ಸುರೇಶ್ ನಿಂಬೊಣಿ, ದೇಸು ಚವ್ಹಾಣ, ಅಕ್ಬರ್ ನದಾಫ್ ಅಜಿತ್ ಭಾವಿಕಟ್ಟಿ ಇದ್ದರು.