ಉದಯರಶ್ಮಿ ದಿನಪತ್ರಿಕೆ
ಆಲಮೇಲ: ವಿದ್ಯಾರ್ಥಿಗಳಿಗೆ ಸೋಶಿಯಲ್ ಮಿಡಿಯಾ ದುಶ್ಚಟವಾಗಿ ಪರಿಣಮಿಸಿದೆ ಅದರಿಂದ ಮುಕ್ತರಾಗಬೇಕು ಎಂದರೆ ಮಕ್ಕಳನ್ನ ಮೋಬೈಲದಿಂದ ದೂರವಿಟ್ಟು ಸಂಸ್ಕಾರಯುತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಿಎಸ್‌ಐ ಅರವಿಂದ ಅಂಗಡಿ ಹೇಳಿದರು
ಭಾನುವಾರ ಪಟ್ಟಣದ ಎ.ಕೆ. ನಂದಿ ಪದವಿ ಪೂರ್ವ ಕಾಲೇಜಿನ ದ್ವೀತಿಯ ವರ್ಷದ ವಿದ್ಯಾರ್ಥಿಗಳ ಬಿಳ್ಕೋಡಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತ ಹೇಳಿದರು.
ಇದು ಸ್ಪರ್ದಾ ಯುಗವಿದ್ದು ಕ್ಷಣಕ್ಷಣಕ್ಕೂ ಸ್ಪರ್ದೇ ನಡೆಯುತಿದೆ ಸ್ಪರ್ದೇಗೆ ತಯಾರ ಆಗಬೇಕು ಎಂದುರೆ ಶಿಕ್ಷಣದಿಂದ ಮಾತ್ರ ಸಾದ್ಯ. ಶೋಶಿಯಲ ಮಿಡಾಯ ಹೆಚ್ಚು ಬಳಕೆ ಮಾಡಿದಂತೆ ಅಪರಾದ ಕೃತ್ಯಗಳು ಹೆಚ್ಚುತಿದೆ ಅದನ್ನು ತಡೆಗಟ್ಟಬೇಕು ಎಂದರೆ ಅವಶಕತೆ ಇರುವದನ್ನು ಮಾತ್ರ ಬಳಕೆ ಮಾಡಿಕೊಳ್ಳಬೇಕು ಹಾಗೂ ಮಕ್ಕಳಿಗೆ, ವಿದ್ಯಾರ್ಥಿಗಳಿಗೆ ಮೋಬೈಲದಿಂದ ದೂರವಿಟ್ಟು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹೇಳಿದರು
ಉಪನ್ಯಾಸಕ ಎನ್.ಎಸ್. ದೇವರಮನಿ ಮಾತನಾಡಿ ಓರ್ವ ವ್ಯೆಕ್ತಿಯ ಭವಿಷ್ಯ ನಿರ್ಮಾಣವಾಗಬೇಕು ಎಂದರೆ ಅದು ಶಿಕ್ಷಣದಿಂದ ಮಾತ್ರ ಸಾದ್ಯ ಅದಕ್ಕೆ ಎಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂದಿನ ಸ್ಪರ್ದಾ ಯುಗದಲ್ಲಿ ಪೊಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಸಾಕಸ್ಟು ಶ್ರಮ ವಹಿಸುತ್ತಿದ್ದಾರೆ ಅವರ ಶ್ರಮಕ್ಕೆ ಫಲ ಸಿಗಬೇಕು ಎಂದರೆ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣದ ವ್ಯಾಮೋಹಕ್ಕೆ ಒಳಗಾಗಿ ಸಂಸ್ಕಾರ ಮರೆಯಲಾಗುತ್ತಿದೆ ಸಂಸ್ಕಾರವೆ ಇಲ್ಲದಿಂದರೆ ಎಸ್ಟೆ ಶಿಕ್ಷಣವಂತರಾದರು ವ್ಯರ್ಥ ಎಂದು ಹೇಳಿದರು.
ಪ್ರಾಚಾರ್ಯ ಡಿ.ಎಸ್. ಉಟಗಿ, ಎಸ್.ಎಂ. ಉಪ್ಪಾರ ಮಾತನಾಡಿದರು.
ಆಡಳಿತಾಧಿಕಾರಿ ಎನ್.ಎ. ಬಿರಾದಾರ, ಪತ್ರಕರ್ತ ಅವಧೂತ ಬಂಡಗಾರ, ಉಪನ್ಯಾಸಕ ಸಿ.ಬಿ. ಚೌಹಾಣ, ಅಮರ ನಾರಯಣಕರ, ಎಂ.ಡಿ ಉಮರಾಣ , ಸಿ.ಎಸ್. ಬಿರಾದಾರ, ಸಿದ್ದು ಶಿವಗೊಂಡ, ಬಾಬು ನಿವಾಳೋಡಿ, ಕರಿಮ ಸೌದಾಗರ ಉಪಸ್ಥಿತರಿದ್ದರು.