Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀ ಕಂದಗಲ್ ಹನಮಂತರಾಯ ರಂಗ ಮಂದಿರದಲ್ಲಿ ಫೆ.೦೮ ರಂದು ಬೆಳಿಗ್ಗೆ ೧೦.೩೦ ಗಂಟೆಗೆ ಕರ್ನಾಟಕ ಮುಲ್ಲಾ ಅಸೋಸಿಯೇಷನ್(ರಿ) ಬೆಂಗಳೂರು ವತಿಯಿಂದ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಲಹಾ ಸಮಿತಿ ಉಪಾಧ್ಯಕ್ಷ ಎಂ.ಸಿ. ಮುಲ್ಲಾ ಹೇಳಿದ್ದಾರೆ.ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿದ ಅವರು, ಈ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಕಲಬುರಗಿ ಸಜ್ಜಾದೆನಷೀನ ಬಂದೇನವಾಜ ದರ್ಗಾದ ಸೈಯ್ಯದ ಮಹ್ಮದ ಅಲಿ ಅಲ್ – ಹುಸೇನ್ , ಕರ್ನಾಟಕ ಅಹ್ಲೆ ಸುನ್ನತ್ ಜಮಾತ್ ವಿಜಯಪುರ ರಾಜ್ಯ ಅಧ್ಯಕ್ಷರಾದ ಹಜರತ್ ಸೈಯ್ಯದ ಮಹ್ಮದ ತನ್ವೀರ ಪೀರಾ ಹಾಶ್ಮಿ, ಬಾಗಲಕೋಟ ಕಿಬ್ಲಾ ಗುಳೇದಗುಡ್ಡದ ಸರ್ಕಾರ್ ಮುಪ್ತಿ ಮೊಹ್ಮದ ಅಬೂಬಕರ್ ಆಶ್ರಫಿ ಖಾದ್ರಿ ಸಾಹೇಬ್, ತಾಳಿಕೋಟಿಯ ಖಾಸ್ಗತೇಶ್ವರ ಮಠದ ಪರಮ ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು, ಮನಗೂಳಿಯ ಹಜರತ್ ಸೈಯದಶಾ ಹುಶೇನಿ ಫೀರ ಕಾದ್ರಿ ಪೀಠಾಧಿಪತಿಗಳಾದ ಪ. ಪೂ. ಫೈರೋಜ ಹುಸೀನಿ ವಹಿಸಿಕೊಳ್ಳಲಿದ್ದಾರೆ.ಕಾರ್ಯಕ್ರಮವನ್ನು ಸಚಿವಾಲಾಯದ ಮಾನ್ಯ ಸಭಾಧ್ಯಕ್ಷರಾದ ಯು.ಟಿ.…
ವಿಜಯಪುರದಲ್ಲಿ ಕಳ್ಳರ ಹಾವಳಿಗೆ ಬಲಿಯಾದ ಸಂತೋಷ ಕನ್ನಾಳ ಕುಟುಂಬಕ್ಕೆ ೧ ಕೋಟಿ ರೂ. ಪರಿಹಾರ ಹಾಗೂ ಕುಟುಂಬ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಲು ಮನವಿ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದಲ್ಲಿ ಕಳ್ಳರ ಹಾವಳಿಗೆ ಬಲಿಯಾದ ಸಂತೋಷ ಕನ್ನಾಳ ಅವರ ಕುಟುಂಬಕ್ಕೆ ೧ ಕೋಟಿ ರೂ. ಪರಿಹಾರ ಹಾಗೂ ಕುಟುಂಬ ಸದಸ್ಯರಿಗೆ ಸರ್ಕಾರಿ ಕೊಡುವ ಮೂಲಕ ನ್ಯಾಯ ಒದಗಿಸಬೇಕೆಂದು ಅಖಿಲ ಭಾರತೀಯ ವಾಲ್ಮೀಕಿ ಸೇವಾ ಸಂಘ (ರಿ) ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಟಗಿ ಮಾತನಾಡಿ, ನಗರ ಹಾಗೂ ಜಿಲ್ಲೆಯ ಹಲವು ಹಳ್ಳಿಗಳಲ್ಲಿ ದರೋಡೆಕೋರರು ರಾತ್ರಿ ಹೊತ್ತು ಕಳೆದು ಒಂದು ತಿಂಗಳಿನಿಂದ ಅಮಾಯಕ ನಾಗರಿಕರ ಮನೆಗಳಿಗೆ ನುಗ್ಗಿ ನಗ, ನಾಣ್ಯ, ಬಂಗಾರ ಬೆಳ್ಳಿ, ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದು, ಇದರಿಂದ ಸಾರ್ವಜನಿಕರ ನೆಮ್ಮದಿಗೆ ಭಂಗವುಂಟಾಗಿದೆ, ಜೊತೆಗೆ ಜಿಲ್ಲೆಯಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ದರೋಡೆಕೋರರಿಗೆ ಕಾನೂನಿನ ಭಯವಿಲ್ಲದಂತಾಗಿದೆ. ಕಳೆದ ಜನೇವರಿ ೧೬ ರಂದು ನಗರದ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿವಿಧ ನ್ಯಾಯಾಲಯ ಹಾಗೂ ಇತರೆ ಪ್ರಕರಣಗಳಲ್ಲಿ ಕಾನೂನು ಸಲಹೆ ನೀಡಲು ಜಿಲ್ಲಾಧಿಕಾರಿ ಕಛೇರಿ ಕಾನೂನು ಕೋಶಕ್ಕೆ ಒಬ್ಬ ನಿವೃತ್ತ ಸಿವಿಲ್ ನ್ಯಾಯಾಧೀಶ/ಕಂದಾಯ ಇಲಾಖೆ ವಿಶೇಷ ಜಿಲ್ಲಾಧಿಕಾರಿ/ ತಹಶೀಲ್ದಾರ/ ಉಪತಹಶೀಲ್ದಾರ ರನ್ನು ಗುತ್ತಿಗೆ ಆಧಾರದ ಮೇಲೆ ಒಂದು ವರ್ಷಕ್ಕೆ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದ್ದು, ಆಸಕ್ತರು ಫೆ.೨೫ರ ಒಳಗಾಗಿ ತಮ್ಮ ಸ್ವವಿವರ ಹಾಗೂ ದಾಖಲೆಗಳನ್ನು ಜಿಲ್ಲಾಧಿಕಾರಿ ಕಛೇರಿಗೆ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಮೊ.ಸಂ: ೯೪೮೨೯೪೫೧೦೪ ಗೆ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯು ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕರ್ನಾಟಕದ ಸುದ್ದಿ ಛಾಯಾಚಿತ್ರಗ್ರಾಹಕರಿಗಾಗಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ಹಾಗೂ ಪ್ರದರ್ಶನವನ್ನು ಏರ್ಪಡಿಸಿದೆ.ಈ ಸ್ಪರ್ಧೆಯಲ್ಲಿ ಆಯ್ಕೆಯಾಗುವ ಮೊದಲ ಮೂರು ಛಾಯಾಚಿತ್ರಗಳಿಗೆ ಕ್ರಮವಾಗಿ ೩೫,೦೦೦/- ರೂ., ೨೫,೦೦೦/- ರೂ. ಹಾಗೂ ೧೫,೦೦೦/- ರೂ. ನಗದು ಬಹುಮಾನ ನೀಡಲಾಗುವುದು. ಆಯ್ದ ಅತ್ಯುತ್ತಮ ಛಾಯಾಚಿತ್ರಗಳನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಮಾರ್ಚ್ ತಿಂಗಳಲ್ಲಿ ಅಕಾಡೆಮಿ ವತಿಯಿಂದ ಏರ್ಪಡಿಸಲಾಗುವ ಸುದ್ದಿ ಛಾಯಾಗ್ರಹಣ ಕುರಿತ ಕಾರ್ಯಾಗಾರದ ಸಂದರ್ಭದಲ್ಲಿ ಛಾಯಾಚಿತ್ರ ಪ್ರದರ್ಶನದಲ್ಲಿ ಇರಿಸಲಾಗುವುದು.ಸ್ಪರ್ಧೆಯ ಷರತ್ತುಗಳು:• ಈ ಸ್ಪರ್ಧೆಗೆ ಪ್ರವೇಶ ಉಚಿತವಾಗಿದ್ದು, ದಿನಾಂಕ :೦೧-೦೧-.೨೦೨ ೪ ರಿಂದ ೩೧-೦೧-೨೦೨೫ ರ ಅವಧಿಯಲ್ಲಿ ಚಿತ್ರಿಸಿರುವ ಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸ್ವೀಕರಿಸಲಾಗುವುದು. ಪ್ರತಿ ಸುದ್ದಿ ಛಾಯಾಚಿತ್ರ ಗ್ರಾಹಕರು ತಾವೇ ಚಿತ್ರಿಸಿರುವ ಎರಡು ಸುದ್ದಿ ಛಾಯಾಚಿತ್ರಗಳನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.• ಸುದ್ದಿ ಛಾಯಾಚಿತ್ರಗಳನ್ನು ಚಿತ್ರಿಸಿರುವುದಕ್ಕೆ ಯಾವುದೇ ಭೌಗೋಳಿಕ ಪರಿಮಿತಿ ಇರುವುದಿಲ್ಲ.• ಪ್ರತಿ ಸ್ಪರ್ಧಿಯೂ ಅವರು ಸುದ್ದಿ ಛಾಯಾಚಿತ್ರಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿರುವ ಪತ್ರಿಕೆಯ ಸಂಪಾದಕರಿಂದ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೃಢೀಕರಣ ಪತ್ರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಪಿ.ಟಿ. ಗ್ರಾಮದ ರಿಸನಂ. ೫೯// ಕ್ಷೇತ್ರ: ೧೪ಎಕರೆ ೨೫ ಗುಂಟೆ ಪೈಕಿ ೪ ಎಕರೆ ಸರಕಾರಿ ಜಮೀನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪೂರ ಪಿ.ಟಿ.ಶಾಲೆಗೆ ಮಂಜೂರು ಮಾಡಿಸುವ ಕುರಿತು ಗಾಯರಾಣ ಜಮೀನು ಮಂಜೂರಿಸುವ ಕುರಿತು ಅದಿಸೂಚಿಯಲ್ಲಿ ತಿಳಿಸಿರುವಂತೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ರಸ್ತೆ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆಗೆ ರೂ.6.40 ಕೋಟಿ ಅನುದಾನ ಮಂಜೂರು ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಲೋಕೋಪಯೋಗಿ ಇಲಾಖೆಯ ಅಪೇಂಡಿಕ್ಸ್-ಇ ಯೋಜನೆಯಡಿ ನಗರದಲ್ಲಿ ರಸ್ತೆ ಅಭಿವೃದ್ಧಿ, ರಸ್ತೆ ಅಗಲಿಕರಣ ಹಾಗೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಗಾಗಿ ಸಲ್ಲಿಸಲಾಗಿದ್ದ ರೂ.7.70 ಕೋಟಿ ಅನುದಾನದ ಪೈಕಿ, ರೂ.6.40 ಕೋಟಿ ಅನುದಾನ ಮಂಜೂರಿಸಿ, ಟೆಂಡರ್ ಕರೆಯಲಾಗಿದ್ದು, ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಿ ಕಾಮಗಾರಿ ಅನುಷ್ಠಾನಗೊಳಿಸಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರವರು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, 1) ರೂ.1 ಕೋಟಿ ಅನುದಾನದಲ್ಲಿ ನಗರದ ಸಹಸ್ರಫಣಿ 1008 ಪಾರ್ಶ್ವನಾಥ ವೃತ್ತದ ಹತ್ತಿರದ ರಸ್ತೆ ಅಗಲಿಕರಣ ಹಾಗೂ ಚರಂಡಿ ಅಭಿವೃದ್ಧಿ ಪಡಿಸುವುದು, 2) ರೂ.1 ಕೋಟಿ ಅನುದಾನದಲ್ಲಿ ಗೋದಾವರಿ ಹೋಟೆಲ್ ದಿಂದ ಜಿಲ್ಲಾ ಆಸ್ಪತ್ರೆಯ ವರೆಗೆ ಮುಖ್ಯ ರಸ್ತೆಯ ಸಮಾಂತರ ರಸ್ತೆ ಅಭಿವೃದ್ಧಿ, 3) ರೂ.60 ಲಕ್ಷ ಅನುದಾನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಿಂದ ದೇವರಾಜ ಅರಸು ವೃತ್ತದ ಮೂಲಕ ಸರ್ದಾರ ವಲ್ಲಭಬಾಯಿ ಪಟೇಲ್…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕ್ರೀಡೆ ಕೇವಲ ಮನರಂಜನೆಗಾಗಿ ಮಾತ್ರವಲ್ಲ, ಉತ್ತಮ ಆರೋಗ್ಯವನ್ನು ಬೆಳೆಸಿಕೊಳ್ಳಲು ಸಹಾಯಕವಾಗಿದೆ ಎಂದು ಬೆಂಗಳೂರಿನ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಬಾಲಾಜಿ ಪ್ರಭು ಹೇಳಿದರು.ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಅಧ್ಯಯನ ಮತ್ತು ಕ್ರೀಡಾ ವಿಜ್ಞಾನ ವಿಭಾಗ ಮತ್ತು ದೈಹಿಕ ನಿರ್ದೇಶನಾಲಯ ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ವಾಲಿಬಾಲ್ ಕ್ರೀಡೆಯ ಕುರಿತು ಮೂರು ದಿನಗಳ ಕಾರ್ಯಾಗಾರ ಮತ್ತು ನಿರ್ಣಾಯಕರ ಪರೀಕ್ಷೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಜೀವನದಲ್ಲಿ ಸೋಲು-ಗೆಲುವು ಸಹಜ. ಸೋಲು ನಮ್ಮನ್ನು ಹೆಚ್ಚು ದೃಢವಾಗಿ ನಿಲ್ಲಿಸಲಿದೆ, ಗೆಲುವು ನಮ್ಮನ್ನು ಮತ್ತಷ್ಟು ಮುನ್ನಡೆಸಲಿದೆ. ಕ್ರೀಡೆಯ ಒಡನಾಟ ನಮಗೆ ಈ ಸಮತೋಲನ ಕಲಿಸಲು ಸಹಾಯ ಮಾಡುತ್ತದೆ. ಆದ್ದರಿಂದ, ಪ್ರತಿಯೊಬ್ಬರೂ ತಮ್ಮ ದಿನಚರಿಯಲ್ಲಿ ಕೆಲವು ಕ್ರೀಡಾ ಚಟುವಟಿಕೆಗಳಲ್ಲಿ ತೋಡಗಿಸಿಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಮಹಿಳಾ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಂ.ಚಂದ್ರಶೇಖರ ಮಾತನಾಡಿ, ಕ್ರೀಡೆಯು ಕೇವಲ ಸ್ಪರ್ಧೆಯಾಗಿರದೆ, ಇದು ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ ಶ್ರೇಷ್ಠ…
ರಚನೆ- ಡಾ.ಶಶಿಕಾಂತ ಪಟ್ಟಣಪುಣೆ ಉದಯರಶ್ಮಿ ದಿನಪತ್ರಿಕೆ ನಿನ್ನೊಂದಿಗೆ ಹಲವುಕನಸುಗಳನ್ನುಕಟ್ಟಿಕೊಂಡಿರುವೆಮಾತು ಪದಶಬ್ದ ಸಂಭ್ರಮನಿನ್ನೊಂದಿಗೆ ಹೆಜ್ಜೆಹಾಕಬೇಕೆಂದುನನ್ನ ಗಟ್ಟಿ ನಿರ್ಧಾರ.ಕೆಲವು ಹೇಳಬಲ್ಲೆ.ಇನ್ನು ಕೆಲವುಕನಸು ಬಯಕೆತಾವೇ ಕಟ್ಟಿ ಕೊಳ್ಳುತ್ತವೆ.ಕವನ ಕಾವ್ಯದಲ್ಲಿ.ಎದೆಯ ಬಚ್ಚಿಟ್ಟ ಭಾವಇಳೆಯ ಕಳೆ.ಬಾಗಿತು ಭರವಸೆಯಹೊಂಬಾಳೆ.
ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ದಾರಿಯಲ್ಲಿ ಹೋಗುವಾಗ ನಾನು ಬೀಳಿಸಿಕೊಂಡ ಕರ ವಸ್ತ್ರವನ್ನು ಎತ್ತಿಕೊಟ್ಟ ಪುಟ್ಟ ಬಾಲಕನಿಗೆ ಥ್ಯಾಂಕ್ಸ್ ಹೇಳಿ ಮುನ್ನಡೆದ ನನ್ನ ತಲೆಯಲ್ಲಿ ನೂರಾರು ಯೋಚನೆಗಳು.ನಾನು ಅಬಾಕಸ್ ಕಲಿಯುತ್ತಿದ್ದಾಗ ಕೊನೆಯ ಮೂರು ಗ್ರಾಂಡ್ ಮಾಸ್ಟರ್ ಲೆವೆಲ್ ಗಳನ್ನು ಬೆಂಗಳೂರಿನ ನಮ್ಮ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿಯೇ ಮೂರು ನಾಲ್ಕು ದಿನಗಳ ತರಬೇತಿಯನ್ನು ಪಡೆಯಬೇಕಾದ ಸಂದರ್ಭದಲ್ಲಿ ನನ್ನ ಪತಿಯ ದೊಡ್ಡಪ್ಪ ನನಗೆ ಜೊತೆಯಾಗಿ ಬರುತ್ತಿದ್ದರು. ಗದಗ ಜಿಲ್ಲೆಯ ಮುಂಡರಗಿಯಂತಹ ಚಿಕ್ಕ ಪಟ್ಟಣದಿಂದ ಬೆಂಗಳೂರಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದ ನನ್ನ ಮಾವ (ತಮ್ಮ ಮಗನ) ನನ್ನ ಭಾವನ ಮನೆಯಲ್ಲಿ ಮನೆಯಲ್ಲಿ ಇದ್ದುಕೊಂಡು ಈ ತರಬೇತಿಗಳನ್ನು ನಾನು ಪೂರೈಸಿಕೊಂಡಾಗ ತಮ್ಮ ಎಂಬತ್ತರ ಹರೆಯದಲ್ಲಿಯೂ ಕೂಡ ನನ್ನನ್ನು ಮನೆಯಿಂದ ತರಬೇತಿಯ ಸ್ಥಳಕ್ಕೆ ನನ್ನ ಭಾವನವರು ಮುಂಜಾನೆ ಬಿಟ್ಟು ತಮ್ಮ ಕಚೇರಿಗೆ ಹೋಗುವಾಗಲೂ ಕೂಡ ನನ್ನೊಂದಿಗೆ ಕಾರಿನಲ್ಲಿ ಬರುತ್ತಿದ್ದ ನನ್ನ ದೊಡ್ಡ ಮಾವ ಕೇಂದ್ರ ಕಚೇರಿಯ ಎಲ್ಲ ಸಹೋದ್ಯೋಗಿಗಳು ಬರುವವರೆಗೆ ಕುಳಿತು ನಂತರ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಬಾಲ್ಯದಿಂದಲೇ ಸಂಸ್ಕೃತಿ, ಸಂಸ್ಕಾರ, ಜೀವನದ ಮೌಲ್ಯಗಳನ್ನು ಭಿತ್ತಿ, ಅವರ ಜೀವನಕ್ಕೆ ಭದ್ರ ಬುನಾದಿ ಹಾಕುವ ಜತೆಗೆ ಕಲಿಕೆಯಲ್ಲಿ ಆಸಕ್ತಿಯನ್ನು ಮೂಡಿಸಬೇಕು ಎಂದು ಶಿಕ್ಷಕ ಸಾಹಿತಿ ಸಂತೋಷ ಬಂಡೆ ಹೇಳಿದರು.ಮಂಗಳವಾರ ಸಂಜೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ ಲೀಟಲ್ ಪ್ಲಾವರ್ ಪ್ರಾಥಮಿಕಶಾಲೆಯಲ್ಲಿ ಜರುಗಿದ ವಾರ್ಷಿಕ ಸ್ನೇಹ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.ಮನೆಯಲ್ಲಿ ಮಕ್ಕಳಿಗೆ ಉತ್ತಮ ವಾತಾವರಣವನ್ನು ನಿರ್ಮಿಸಿ ಕೊಡುವುದು ಯಶಸ್ಸಿನ ಬೀಜ ಬಿತ್ತಿದಂತೆ.ಕುಟುಂಬವು ಮಕ್ಕಳಿಗೆ ಸಾಂಸ್ಕೃತಿಕ, ನೈತಿಕ, ಧಾರ್ಮಿಕ, ಆಧ್ಯಾತ್ಮಿಕ, ಸಾಮಾಜಿಕ ಮೌಲ್ಯಗಳನ್ನು ನೀಡುತ್ತದೆ.ಮನೆಯ ವಾತಾವರಣವೇ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಬುನಾದಿಯಾಗಿದೆ ಎಂದು ತಿಳಿಸಿದರು.ಚಿನ್ಮಯ ಶಾಲೆಯ ಅಧ್ಯಕ್ಷೆ ಪ್ರತಿಭಾ ಪಾಟೀಲ ಮಾತನಾಡಿ, ಮನೆಯಲ್ಲಿ ಕಲಿಸುವ ಗುಣ,ನಡವಳಿಕೆ,ಸ್ವಭಾವ, ಮಾತಿನ ಶೈಲಿ ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಉತ್ತಮ ಮೌಲ್ಯಗಳಿಂದ ಉತ್ತಮ ನಾಗರಿಕರಾಗುವಂತೆ ಪ್ರೇರಣೆ ನೀಡಬೇಕು ಎಂದು ಹೇಳಿದರು.ಪ್ರೆಸಿಡೆನ್ಸಿ ಶಿಕ್ಷಣ ಕಾಲೇಜಿನ ಪ್ರಾಚಾರ್ಯೆ ಡಾ ಸುಮಾ ಬೋಳರೆಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳಿಗೆ ಆಟದೊಂದಿಗೆ ಪಾಠ ಕಲಿಸುವ ಪ್ರವೃತ್ತಿ ರೂಢಿಸಿಕೊಂಡು,ಪಾಲಕರು ಮಗುವಿನ ಸರ್ವಾಂಗೀಣ…
