ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸಿದ್ದಾಪೂರ ಪಿ.ಟಿ. ಗ್ರಾಮದ ರಿಸನಂ. ೫೯// ಕ್ಷೇತ್ರ: ೧೪ಎಕರೆ ೨೫ ಗುಂಟೆ ಪೈಕಿ ೪ ಎಕರೆ ಸರಕಾರಿ ಜಮೀನನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಿದ್ದಾಪೂರ ಪಿ.ಟಿ.ಶಾಲೆಗೆ ಮಂಜೂರು ಮಾಡಿಸುವ ಕುರಿತು ಗಾಯರಾಣ ಜಮೀನು ಮಂಜೂರಿಸುವ ಕುರಿತು ಅದಿಸೂಚಿಯಲ್ಲಿ ತಿಳಿಸಿರುವಂತೆ ಸಾರ್ವಜನಿಕರ ಆಕ್ಷೇಪಣೆಗಳಿದ್ದಲ್ಲಿ ಈ ಅಧಿಸೂಚನೆ ಹೊರಡಿಸಿದ ೩೦ ದಿನಗಳೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಲಿಖಿತವಾಗಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
