ರಚನೆ
– ಡಾ.ಶಶಿಕಾಂತ ಪಟ್ಟಣ
ಪುಣೆ
ಉದಯರಶ್ಮಿ ದಿನಪತ್ರಿಕೆ
ನಿನ್ನೊಂದಿಗೆ ಹಲವು
ಕನಸುಗಳನ್ನು
ಕಟ್ಟಿಕೊಂಡಿರುವೆ
ಮಾತು ಪದ
ಶಬ್ದ ಸಂಭ್ರಮ
ನಿನ್ನೊಂದಿಗೆ ಹೆಜ್ಜೆ
ಹಾಕಬೇಕೆಂದು
ನನ್ನ ಗಟ್ಟಿ ನಿರ್ಧಾರ.
ಕೆಲವು ಹೇಳಬಲ್ಲೆ.
ಇನ್ನು ಕೆಲವು
ಕನಸು ಬಯಕೆ
ತಾವೇ ಕಟ್ಟಿ ಕೊಳ್ಳುತ್ತವೆ.
ಕವನ ಕಾವ್ಯದಲ್ಲಿ.
ಎದೆಯ ಬಚ್ಚಿಟ್ಟ ಭಾವ
ಇಳೆಯ ಕಳೆ.
ಬಾಗಿತು ಭರವಸೆಯ
ಹೊಂಬಾಳೆ.