Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳಿಗೆ ನೀಡುವ ಶಿಕ್ಷಣ ಹೃದಯದ ಮೂಲಕ ಮೆದುಳನ್ನು ತಲುಪಿದಾಗ ಮಾತ್ರ ಹೃದಯವಂತ ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಣ ನಮಗೆ ಧೈರ್ಯ ನೀಡಬಹುದೇ ಹೊರತು ತೃಪ್ತಿ ನೀಡುವದಿಲ್ಲ. ನಮ್ಮ ಸಂಸ್ಕೃತಿ ಹಿರಿಯರ ಕಾಲಕೋಶಗಳಿಂದ ದೂರ ಹೋದಂತೆಲ್ಲ ಬದುಕು ಸತ್ವ ಕಳೆದುಕೊಳ್ಳುತ್ತಾ ಹೋಗುತ್ತದೆ. ವ್ಯಕ್ತಿತ್ವದ ನಿರೂಪಣೆಗೆ ಮಾತು ಬಂಡವಾಳವಾಗಿದ್ದು ಆತ್ಮವಿಶ್ವಾಸದ ಮಾತುಗಳು ನಿಮ್ಮದಾಗಿರಲಿ ಎಂದರು.ದೃಡವಾದ ಶ್ರದ್ದೆ ಹೊಂದಿದ ವಿದ್ಯಾಭ್ಯಾಸ ಮುಖ್ಯ. ಒಂಟಿತನ ಎಂಬುದು ಇಂದಿನ ಸಮಾಜ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಕೂಡು ಕುಟುಂಬ ಸಂಸ್ಕೃತಿ ಕಣ್ಮರೆಯಾಗುತ್ತಿರುವದು ಈ ದುಸ್ಥಿತಿಗೆ ಕಾರಣ. ಆಸೆಯ ಬೆನ್ನಿಗಿಂತ ಆಧರ್ಶದ ಬೆನ್ನು ಹತ್ತಿ ಎಂದು ತಿಳಿಸಿದರು..ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಣ್ಣಿ ಗುರುಗಳು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಸುಪ್ತ ಪ್ರತಿಭೆಯನ್ನು ಹೊರಗೆ ತಂದು ಅದನ್ನು ಸಮಾಜಮುಖಿಯಾಗಿ ಬಳಕೆಯಾಗುವಂತೆ ಮಾಡುವದೇ ಶಿಕ್ಷಣದ ಉದ್ದೇಶ. ಶಿಕ್ಷಣ ಪಡೆಯುವಾಗ…
ಶಿಕ್ಷಣದಿಂದ ಹೃದಯವಂತ ವ್ಯಕ್ತಿತ್ವ ನಿರ್ಮಾಣ :ಶಾಸಕ ಯಶವಂತರಾಯಗೌಡ ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳಿಗೆ ನೀಡುವ ಶಿಕ್ಷಣ ಹೃದಯದ ಮೂಲಕ ಮೆದುಳನ್ನು ತಲುಪಿದಾಗ ಮಾತ್ರ ಹೃದಯವಂತ ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಣ ನಮಗೆ ಧೈರ್ಯ ನೀಡಬಹುದೇ ಹೊರತು ತೃಪ್ತಿ ನೀಡುವದಿಲ್ಲ. ನಮ್ಮ ಸಂಸ್ಕೃತಿ ಹಿರಿಯರ ಕಾಲಕೋಶಗಳಿಂದ ದೂರ ಹೋದಂತೆಲ್ಲ ಬದುಕು ಸತ್ವ ಕಳೆದುಕೊಳ್ಳುತ್ತಾ ಹೋಗುತ್ತದೆ. ವ್ಯಕ್ತಿತ್ವದ ನಿರೂಪಣೆಗೆ ಮಾತು ಬಂಡವಾಳವಾಗಿದ್ದು ಆತ್ಮವಿಶ್ವಾಸದ ಮಾತುಗಳು ನಿಮ್ಮದಾಗಿರಲಿ ಎಂದರು.ದೃಡವಾದ ಶ್ರದ್ದೆ ಹೊಂದಿದ ವಿದ್ಯಾಭ್ಯಾಸ ಮುಖ್ಯ. ಒಂಟಿತನ ಎಂಬುದು ಇಂದಿನ ಸಮಾಜ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಕೂಡು ಕುಟುಂಬ ಸಂಸ್ಕೃತಿ ಕಣ್ಮರೆಯಾಗುತ್ತಿರುವದು ಈ ದುಸ್ಥಿತಿಗೆ ಕಾರಣ. ಆಸೆಯ ಬೆನ್ನಿಗಿಂತ ಆಧರ್ಶದ ಬೆನ್ನು ಹತ್ತಿ ಎಂದು ತಿಳಿಸಿದರು..ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಣ್ಣಿ ಗುರುಗಳು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಸುಪ್ತ ಪ್ರತಿಭೆಯನ್ನು ಹೊರಗೆ ತಂದು ಅದನ್ನು ಸಮಾಜಮುಖಿಯಾಗಿ…
ಉದಯರಶ್ಮಿ ದಿನಪತ್ರಿಕೆ ಚಡಚಣ: ೧೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕ ಬ್ಯಾಂಕ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವಲ್ಲಿ ಯಾವಾಗಲೂ ಮುಂದೆ ಇರುತ್ತದೆ ಎಂದು ಕರ್ನಾಟಕ ಬ್ಯಾಂಕ ಎಜಿಎಂ ನಾಗಾರ್ಜುನ ರೆಡ್ಡಿ ಹೇಳಿದರು.ಚಡಚಣದಲ್ಲಿ ಇತ್ತಿಚಗೆ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ಸುಮಾರು ೨೫ ಲಕ್ಷ ವೆಚ್ಚದ ಬಸ್ ಹಸ್ತಾಂತರ ಮಾಡಿ ಅವರು ಮಾತನಾಡಿದರು.ಸಿದ್ದೇಶ್ವರ ಶ್ರೀಗಳು ಅಧ್ಯಯನ ಮಾಡಿದ ಚಡಚಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ಬಸ್ ನೀಡುತ್ತಿರುವದು ಕರ್ನಾಟಕ ಬ್ಯಾಂಕಿಗೂ ಹೆಮ್ಮೆ ಎಂದು ಅವರು ಹೇಳಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎಸ್ ಚೋರಗಿ, ಕರ್ನಾಟಕ ಬ್ಯಾಂಕಿನ ಸಹಾಯವನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಯಾವಾಗಲೂ ಸ್ಮರಿಸಲಿದೆ ಎಂದು ಹೇಳಿದರು.ಇದೆ ಸಂದರ್ಭದಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಕೆಬಿಎಲ್ ಬ್ಯಾಂಕಿನ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಕ್ಲಸ್ಟರ ಹೆಡ್ ಪವನ ಕುಮಾರ, ಕೆಬಿಎಲ್ ಬ್ಯಾಂಕಿನ ಚಡಚಣದ ಮ್ಯಾನೇಜರ ಗೋಪಿಚಂದ, ಸಹಾಯಕ ಮ್ಯಾನೇಜರ ಪುನೀತ, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್.…
ಉದಯರಶ್ಮಿ ದಿನಪತ್ರಿಕೆ ಇಂಡಿ: ಮಕ್ಕಳಿಗೆ ನೀಡುವ ಶಿಕ್ಷಣ ಹೃದಯದ ಮೂಲಕ ಮೆದುಳನ್ನು ತಲುಪಿದಾಗ ಮಾತ್ರ ಹೃದಯವಂತ ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮದಲ್ಲಿ ಮಾತನಾಡಿದರು.ಹಣ ನಮಗೆ ಧೈರ್ಯ ನೀಡಬಹುದೇ ಹೊರತು ತೃಪ್ತಿ ನೀಡುವದಿಲ್ಲ. ನಮ್ಮ ಸಂಸ್ಕೃತಿ ಹಿರಿಯರ ಕಾಲಕೋಶಗಳಿಂದ ದೂರ ಹೋದಂತೆಲ್ಲ ಬದುಕು ಸತ್ವ ಕಳೆದುಕೊಳ್ಳುತ್ತಾ ಹೋಗುತ್ತದೆ. ವ್ಯಕ್ತಿತ್ವದ ನಿರೂಪಣೆಗೆ ಮಾತು ಬಂಡವಾಳವಾಗಿದ್ದು ಆತ್ಮವಿಶ್ವಾಸದ ಮಾತುಗಳು ನಿಮ್ಮದಾಗಿರಲಿ ಎಂದರು.ದೃಡವಾದ ಶ್ರದ್ದೆ ಹೊಂದಿದ ವಿದ್ಯಾಭ್ಯಾಸ ಮುಖ್ಯ. ಒಂಟಿತನ ಎಂಬುದು ಇಂದಿನ ಸಮಾಜ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಕೂಡು ಕುಟುಂಬ ಸಂಸ್ಕೃತಿ ಕಣ್ಮರೆಯಾಗುತ್ತಿರುವದು ಈ ದುಸ್ಥಿತಿಗೆ ಕಾರಣ. ಆಸೆಯ ಬೆನ್ನಿಗಿಂತ ಆಧರ್ಶದ ಬೆನ್ನು ಹತ್ತಿ ಎಂದು ತಿಳಿಸಿದರು..ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಣ್ಣಿ ಗುರುಗಳು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಸುಪ್ತ ಪ್ರತಿಭೆಯನ್ನು ಹೊರಗೆ ತಂದು ಅದನ್ನು ಸಮಾಜಮುಖಿಯಾಗಿ ಬಳಕೆಯಾಗುವಂತೆ ಮಾಡುವದೇ ಶಿಕ್ಷಣದ ಉದ್ದೇಶ. ಶಿಕ್ಷಣ ಪಡೆಯುವಾಗ…
ಗುಂಪುಗಾರಿಕೆಯಲ್ಲಿ ನಂಬಿಕೆ ಇಲ್ಲ | ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ | ಕೇಂದ್ರ ನಾಯಕತ್ವದ ನಿರ್ಧಾರಕ್ಕೆ ಭಿನ್ನಮತಿಯರು ಬದ್ಧರಾಗಿರಬೇಕು | ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅಭಿಮತ ಬೆಂಗಳೂರು: ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟದ ಬಗ್ಗೆ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಪಕ್ಷದಲ್ಲಿನ ಬಣಗಳು ತಾಳ್ಮೆಯಿಂದ ವರ್ತಿಸಿ, ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಚರ್ಚೆಯ ಮೂಲಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಬೇಕು ಎಂದರು.ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ಕರ್ನಾಟಕ ಬಿಜೆಪಿಯಲ್ಲಿನ ಬೆಳವಣಿಗೆಗಳತ್ತ ಗಮನ ಹರಿಸಿ, ಎಲ್ಲ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿ, ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಆಶಾವಾದ ವ್ಯಕ್ತಪಡಿಸಿದರು.’ಕಾಂಗ್ರೆಸ್ ಪಕ್ಷದ ದುರಾಡಳಿತದಿಂದಾಗಿ ರಾಜ್ಯದಲ್ಲಿ ಜನರು, ಅದರಲ್ಲೂ ವಿಶೇಷವಾಗಿ ರೈತರು, ಮಹಿಳೆಯರು ಸಂಕಷ್ಟದಲ್ಲಿದ್ದು, ದಿನನಿತ್ಯ ಹಿಂಸಾಚಾರ ಮತ್ತು ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇದರ ವಿರುದ್ಧ ಸಮರ ಸಾರಬೇಕಿದ್ದ ವಿರೋಧ ಪಕ್ಷ ಬಿಜೆಪಿ ಆಂತರಿಕ ಕಚ್ಚಾಟದಲ್ಲಿ ತೊಡಗಿರುವುದು ದುರದೃಷ್ಟಕರ’ ಎಂದು ಬೊಮ್ಮಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಬಿವೈ…
*ಉದಯರಶ್ಮಿ ದಿನಪತ್ರಿಕೆ* ಕೊಲ್ಹಾರ: ಶಿಕ್ಷಕ ವ್ರತ್ತಿ ಬರಿ ವೇತನ ಪಡೆಯುವ ನಾನೊಬ್ಬ ಶಿಕ್ಷಕ ಎನ್ನುವದಕ್ಕೆ ಸೀಮಿತವಾಗಬಾರದು. ತನ್ನ ಪಾವಿತ್ರ‍್ಯತೆ ಕಾಯ್ದುಕೊಳ್ಳಬೇಕಾದರೆ ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳಾದ ಮಾತ್ರ ಆ ಸ್ಥಾನಕ್ಕೆ ಗೌರವ ಸಿಗುವದು ಎಂದು ಹುಬ್ಬಳ್ಳಿ ದಾರವಾಡ ವಾಣೀಜ್ಯ ಇಲಾಖಾ ಡಿಸಿ ಶಂಕರ ಬೆಳ್ಳುಬ್ಬಿ ಹೇಳಿದರು.ಪಟ್ಟಣದ ವಿಶ್ವಭಾರತಿ ವಿಧ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿ ನಡೆಯುವ ಶಿಕ್ಷಣ ಕೇಂದ್ರಗಳ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಿಕ್ಷಕರು ಬೋಧನಾ ಸಮಯದಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿದ್ಯೆಯನ್ನು ಧಾರೆ ಎರೆಯುವದರ ಜೋತೆಗೆ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಪ್ರಜೆಗಳ ನಿರ್ಮಾಣ ಮಾಡುವ ಗುರುವಾಗಬೇಕು ಎಂದರು.ಆಡಳಿತಾಧಿಕಾರಿ ಬಿ ಎಸ್ ನಿಂಬಾಳ್ಕರ ಮಾತನಾಡಿ, ವಿಶಾಲವಾದ ನಿಸರ್ಗದ ಮಡಿಲಿನ ಯೋಗ ಧ್ಯಾನ ಅಧ್ಯಯನದೊಂದಿಗೆ ಭವಿಷ್ಯದ ದ್ರಷ್ಠಿಕೋನದತ್ತ ಗಮನಹರಿಸಿ ಎಲ್ ಕೆ ಜಿಯಿಂದ ಪಿಯುಸಿ ವಿಜ್ಞಾನ ಕಲಿಕಾ ಕೇಂದ್ರಗಳಲ್ಲಿ ಉತ್ತಮ ಶಿಕ್ಷಕರ ಭೋಧನಾ ತಂಡವು ಕಾರ್ಯನಿರ್ವಹಿಸುತ್ತಿದ್ದು ವಸತಿ ಸೌಕರ್ಯದ ಶಾಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ…
ಉದಯರಶ್ಮಿ ದಿನಪತ್ರಿಕೆ ಕೊಲ್ಹಾರ: ತಾಲೂಕಿನ ಗರಸಂಗಿ-ಬಿಕೆ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ಬಲರಾಮ ಲಮಾಣಿ ಇವರಿಗೆ ರಾಜ್ಯಮಟ್ಟದ ‘ಗ್ರಾಮೀಣ ಶಿಕ್ಷಕ ರತ್ನ’ ಪ್ರಶಸ್ತಿ ಘೋಷಣೆಯಾಗಿದೆ.ಹುಬ್ಬಳ್ಳಿಯ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಬೆಂಗಳೂರು ಗ್ರಾಮಾಂತರ ಜಿಲ್ಲಾಘಟಕ ಮತ್ತು ನೆಲಮಂಗಲ ತಾಲೂಕು ಘಟಕಗಳ ಸಹಯೋಗದಲ್ಲಿ ಫೆ.೮ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರು ನೆಲಮಂಗಲದ ಪವಾಡ ಶ್ರೀಬಸವಣ್ಣ ದೇವರ ಮಠದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಎಸ್.ಮಧುಬಂಗಾರಪ್ಪ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಈ ವೇಳೆ ಸಚಿವ ಕೆ.ಎಚ್.ಮುನಿಯಪ್ಪ, ಸಂಸದ ಡಾ.ಕೆ.ಸುಧಾಕರ, ವಿಪ ಸದಸ್ಯರು, ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳು ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿರುವರೆಂದು ಜಿಲ್ಲಾ ಗ್ರಾಮೀಣ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಣ್ಣ ಉಕ್ಕಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಶ್ರೀಜಗದಾರಾಧ್ಯ ಜಯಶಾಂತಲಿಂಗೇಶ್ವರ ಮತ್ತು ದ್ವಾದಶ ಜ್ಯೋತಿರ್ಲಿಂಗಗಳ ಜಾತ್ರಾ ಮಹೋತ್ಸವ ಇದೇ ದಿ:೧೦.೧೧.೧೨ ರಂದು ಜರುಗಲಿದೆ.ನಗರದ ಉಕ್ಕಲಿ ರಸ್ತೆಯಲ್ಲಿರುವ ಜಯಶಾಂತಲಿಂಗೇಶ್ವರ ಮಹಾಸಂಸ್ಥಾನ ಬೃಹನ್ಮಠ ಮತ್ತು ವಿಶ್ವಶಾಂತಿ ಪೀಠದಲ್ಲಿ ದಿ:೧೦ ರಂದು ವಿದ್ಯಾಮಾನ್ಯ ಶಿವಾಭಿನವ ಜಯಶಾಂತಲಿಂಗೇಶ್ವರ ಶ್ರೀಗಳು ಮಹಾಸಂಸ್ಥಾನ ಬೃಹನ್ಮಠ ಜಾಲಹಳ್ಳಿ , ವಿಜಯಪುರ ಇವರ ಸನ್ನಿಧಾನದಲ್ಲಿ ಸೋಮವಾರ ಬೆಳಿಗ್ಗೆ ದ್ವಾದಶ ಜ್ಯೋತಿರ್ಲಿಂಗ, ನವಗ್ರಹ ಹಾಗೂ ನವದುರ್ಗೆಯರಿಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾಮಂಗಳಾರತಿಯೊಂದಿಗೆ ಜಾತ್ರೆಗೆ ಚಾಲನೆ ನೀಡಲಾಗುವುದು.ಬೆಳಿಗ್ಗೆ ೧೦ ಗಂಟೆಗೆ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರ ನಂತರ ೧೧.೩೦ ಗಂಟೆಗೆ ಶಾಲಾ ಮಕ್ಕಳಿಗಾಗಿ ರಂಗೋಲಿ ಹಾಗೂ ಹಗ್ಗದ ಆಟದ ಸ್ಪರ್ಧೆ ಜರುಗಲಿವೆ. ಸಾಯಂಕಾಲ ೬ ಗಂಟೆಗೆ ಓಂಕಾರ ಧ್ವಜಾರೋಹಣ. ಸಂಜೆ ೭.೩೦ ಗಂಟೆಗೆ ಜೀವನ ಜಾಗೃತಿ ಸಂಗೋಷ್ಠಿ ನಡೆಯಲಿದೆ.ದಿ:೧೧ ರಂದು ಮಂಗಳವಾರ ಬೆಳಿಗ್ಗೆ ೧೦ ಗಂಟೆಗೆ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳು. ಸಾಯಂಕಾಲ ೩ ಗಂಟೆಗೆ ಜಾಗೃತಿ ಕಾಲೋನಿಯಿಂದ ಶ್ರೀಮಠದವರೆಗೆ ಜಯಶಾಂತಲಿಂಗೇಶ್ವರರ ಪಲ್ಲಕ್ಕಿ ಮಹೋತ್ಸವ. ಸಂಜೆ ೭ ಗಂಟೆಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನೀಟ್ ಪಾಸಾಗಿ ಸರಕಾರಿ ಕೋಟಾದಡಿ ಎಂ.ಬಿ.ಬಿ.ಎಸ್. ಸೀಟು ಪಡೆದರೂ ಶುಲ್ಕ ಭರಿಸಲಾಗದೆ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದ ವಿದ್ಯಾರ್ಥಿನಿಗೆ ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷ ಎಂ. ಬಿ. ಪಾಟೀಲ ಅವರು ಸಹಾಯ ಹಸ್ತ ಚಾಚಿದ್ದಾರೆ.ವಿದ್ಯಾರ್ಥಿನಿಯ ಸಮಸ್ಯೆ ಗಮನಕ್ಕೆ ಬಂದ ತಕ್ಷಣ ಸ್ಪಂದಿಸಿದ ಅವರು, ಕೋರ್ಸಿನ ಸಂಪೂರ್ಣ ವೆಚ್ಚವನ್ನು ಭರಿಸಲು ನಿರ್ಧರಿಸಿದ್ದಾರೆ. ಅದರಂತೆ ವಿಜಯಪುರ ನಗರದ ವಿದ್ಯಾರ್ಥಿನಿ ಅಫಿಪಾ ಎಂ. ಮೋಮಿನ್ ಅವರಿಗೆ ಎಂ.ಬಿ.ಬಿ.ಎಸ್. ಕೋರ್ಸಿನ ಮೊದಲ ಕಂತು ರೂ. ರೂ. 1,47,150 ಚೆಕ್ ನ್ನು ಸಂಸ್ಥೆಯ ನಿರ್ದೇಶಕ ಮತ್ತು ವಿಧಾನ ಪರಿಷತ ಶಾಸಕ ಸುನೀಲಗೌಡ ಪಾಟೀಲ ಇಂದು ಗುರುವಾರ ನಗರದಲ್ಲಿ ವಿದ್ಯಾರ್ಥಿನಿಗೆ ವಿತರಿಸಿದರು.ಮೂಲತಃ ತಿಕೋಟಾ ಪಟ್ಟಣದವರಾದ ಮತ್ತು ಈಗ ವಿಜಯಪುರ ನಗರದ ಜಾಡರ ಗಲ್ಲಿಯಲ್ಲಿ ನೆಲೆಸಿರುವ ಫ್ರಿಜ್ ರಿಪೇರಿ ಕೆಲಸ ಮಾಡುವ ಮಹ್ಮದ ರಪೀಕ್ ಮೋಮಿನ್ ಮತ್ತು ಗೃಹಿಣಿ ನಾಹೆದಾ ಮೋಮಿನ್ ಅವರ ಇಬ್ಬರು ಮಕ್ಕಳಲ್ಲಿ ಹಿರಿಯಳಾದ ಅಫಿಫಾ ಎಂ. ಮೋಮಿನ್ ನೀಟ್ ಪರಿಕ್ಷೆಯಲ್ಲಿ 68970(Rank) ಸ್ಥಾನ ಗಳಿಸಿದ್ದಾಳೆ. ಈ…
ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ದೈಹಿಕ ಬೆಳವಣಿಗೆಗೆ ಯುವಕರು ಹೆಚ್ಚು ಹೆಚ್ಚು ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಯುವನಾಯಕ ಬಾಪುಗೌಡ ದರ್ಶನಪುರ ಹೇಳಿದರು.ಪಟ್ಟಣದ ಹಿಲ್ ಟಾಪ್ ನಲ್ಲಿ ಗುರುವಾರ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಆಟೋಟಗಳಲ್ಲಿ ಸೋಲು ಗೆಲುವು ಸಮನಾಗಿ ಸ್ವೀಕರಿಸುವ ಮನೋಭಾವ ಕ್ರೀಡಾಪಟುಗಳು ಮೈಗೂಡಿಸಿಕೊಳ್ಳಬೇಕು ಎಂದವರು, ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಗೆ ನೆರವಾಗುತ್ತದೆ, ಯುವ ಸಬಲೀಕರಣಕ್ಕೆ ಸಂಘ ಸಂಸ್ಥೆಗಳು ಸಹಕಾರದೊಂದಿಗೆ ಕ್ರೀಡಾಕೂಟಗಳನ್ನು ಆಯೋಜಿಸುತ್ತಿರುವುದು ಅಭಿನಂದನೀಯ ಎಂದರು.ಈ ವೇಳೆ ಮುಖಂಡರಾದ ವಾಮನರಾವ್ ದೇಶಪಾಂಡೆ, ಮಹಿಪಾಲರೆಡ್ಡಿ ಡಿಗ್ಗಾವಿ, ರಹೇಮಾನ ಪಟೇಲ್. ಅಲ್ತಾಫ್ ಸಾಸನೂರ, ರಂಗಪ್ಪ ಭೋವಿ, ಶಾಂತು ಪಾಟೀಲ್, ಕ್ರೀಡಾಪಟುಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
