ಉದಯರಶ್ಮಿ ದಿನಪತ್ರಿಕೆ
ಚಡಚಣ: ೧೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಕರ್ನಾಟಕ ಬ್ಯಾಂಕ ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುವಲ್ಲಿ ಯಾವಾಗಲೂ ಮುಂದೆ ಇರುತ್ತದೆ ಎಂದು ಕರ್ನಾಟಕ ಬ್ಯಾಂಕ ಎಜಿಎಂ ನಾಗಾರ್ಜುನ ರೆಡ್ಡಿ ಹೇಳಿದರು.
ಚಡಚಣದಲ್ಲಿ ಇತ್ತಿಚಗೆ ಸಾಮಾಜಿಕ ಹೊಣೆಗಾರಿಕೆ ಯೋಜನೆಯ ಅಡಿಯಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ಸುಮಾರು ೨೫ ಲಕ್ಷ ವೆಚ್ಚದ ಬಸ್ ಹಸ್ತಾಂತರ ಮಾಡಿ ಅವರು ಮಾತನಾಡಿದರು.
ಸಿದ್ದೇಶ್ವರ ಶ್ರೀಗಳು ಅಧ್ಯಯನ ಮಾಡಿದ ಚಡಚಣದ ಸಂಗಮೇಶ್ವರ ಶಿಕ್ಷಣ ಸಂಸ್ಥೆಗೆ ಬಸ್ ನೀಡುತ್ತಿರುವದು ಕರ್ನಾಟಕ ಬ್ಯಾಂಕಿಗೂ ಹೆಮ್ಮೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎಸ್ ಚೋರಗಿ, ಕರ್ನಾಟಕ ಬ್ಯಾಂಕಿನ ಸಹಾಯವನ್ನು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಯಾವಾಗಲೂ ಸ್ಮರಿಸಲಿದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ವತಿಯಿಂದ ಕೆಬಿಎಲ್ ಬ್ಯಾಂಕಿನ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕ್ಲಸ್ಟರ ಹೆಡ್ ಪವನ ಕುಮಾರ, ಕೆಬಿಎಲ್ ಬ್ಯಾಂಕಿನ ಚಡಚಣದ ಮ್ಯಾನೇಜರ ಗೋಪಿಚಂದ, ಸಹಾಯಕ ಮ್ಯಾನೇಜರ ಪುನೀತ, ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿ ವಿ.ಎಸ್. ಗಿಡವೀರ, ಪ್ರಾಚಾರ್ಯ ಮನೋಜ ಕಟಗೇರಿ, ಮುಖ್ಯ ಗುರುಗಳಾದ ಎಚ್.ಆರ್ ಬಗಲಿ, ಪ್ರಕಾಶ ಕಟಗೇರಿ, ಕಲ್ಪನಾ ವಾಘಮೋಡೆ, ಸೇರಿದಂತೆ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

