ಶಿಕ್ಷಣದಿಂದ ಹೃದಯವಂತ ವ್ಯಕ್ತಿತ್ವ ನಿರ್ಮಾಣ :ಶಾಸಕ ಯಶವಂತರಾಯಗೌಡ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಮಕ್ಕಳಿಗೆ ನೀಡುವ ಶಿಕ್ಷಣ ಹೃದಯದ ಮೂಲಕ ಮೆದುಳನ್ನು ತಲುಪಿದಾಗ ಮಾತ್ರ ಹೃದಯವಂತ ಸಮಾಜಮುಖಿ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.
ಪಟ್ಟಣದ ಆಪಲ್ ಇಂಟರ್ ನ್ಯಾಶನಲ್ ಶಾಲೆಯಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೆಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಣ ನಮಗೆ ಧೈರ್ಯ ನೀಡಬಹುದೇ ಹೊರತು ತೃಪ್ತಿ ನೀಡುವದಿಲ್ಲ. ನಮ್ಮ ಸಂಸ್ಕೃತಿ ಹಿರಿಯರ ಕಾಲಕೋಶಗಳಿಂದ ದೂರ ಹೋದಂತೆಲ್ಲ ಬದುಕು ಸತ್ವ ಕಳೆದುಕೊಳ್ಳುತ್ತಾ ಹೋಗುತ್ತದೆ. ವ್ಯಕ್ತಿತ್ವದ ನಿರೂಪಣೆಗೆ ಮಾತು ಬಂಡವಾಳವಾಗಿದ್ದು ಆತ್ಮವಿಶ್ವಾಸದ ಮಾತುಗಳು ನಿಮ್ಮದಾಗಿರಲಿ ಎಂದರು.
ದೃಡವಾದ ಶ್ರದ್ದೆ ಹೊಂದಿದ ವಿದ್ಯಾಭ್ಯಾಸ ಮುಖ್ಯ. ಒಂಟಿತನ ಎಂಬುದು ಇಂದಿನ ಸಮಾಜ ಎದುರಿಸುತ್ತಿರುವ ಬಹುದೊಡ್ಡ ಸಮಸ್ಯೆ. ಕೂಡು ಕುಟುಂಬ ಸಂಸ್ಕೃತಿ ಕಣ್ಮರೆಯಾಗುತ್ತಿರುವದು ಈ ದುಸ್ಥಿತಿಗೆ ಕಾರಣ. ಆಸೆಯ ಬೆನ್ನಿಗಿಂತ ಆಧರ್ಶದ ಬೆನ್ನು ಹತ್ತಿ ಎಂದು ತಿಳಿಸಿದರು..
ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸವರಾಜ ಕಣ್ಣಿ ಗುರುಗಳು ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯ ಸುಪ್ತ ಪ್ರತಿಭೆಯನ್ನು ಹೊರಗೆ ತಂದು ಅದನ್ನು ಸಮಾಜಮುಖಿಯಾಗಿ ಬಳಕೆಯಾಗುವಂತೆ ಮಾಡುವದೇ ಶಿಕ್ಷಣದ ಉದ್ದೇಶ. ಶಿಕ್ಷಣ ಪಡೆಯುವಾಗ ಆಕರ್ಷಣೆಗಳಿಗೆ ಒಳಗಾಗದೆಬದುಕಿನ ಆದ್ಯತೆಗಳ ಸ್ಪಷ್ಟತೆ ನಿಮ್ಮಲ್ಲಿ ಇರಲಿ ಎಂದರು.
ಬಾಗೇಶ ಮುರಡಿ , ಪ್ರಾಚಾರ್ಯ ಸುಕನ್ಯಾ ಬಗಲೂರ ಮಾತನಾಡಿದರು.