*ಉದಯರಶ್ಮಿ ದಿನಪತ್ರಿಕೆ*
ಕೊಲ್ಹಾರ: ಶಿಕ್ಷಕ ವ್ರತ್ತಿ ಬರಿ ವೇತನ ಪಡೆಯುವ ನಾನೊಬ್ಬ ಶಿಕ್ಷಕ ಎನ್ನುವದಕ್ಕೆ ಸೀಮಿತವಾಗಬಾರದು. ತನ್ನ ಪಾವಿತ್ರ‍್ಯತೆ ಕಾಯ್ದುಕೊಳ್ಳಬೇಕಾದರೆ ಮಕ್ಕಳ ಭವಿಷ್ಯ ರೂಪಿಸುವ ಶಿಲ್ಪಿಗಳಾದ ಮಾತ್ರ ಆ ಸ್ಥಾನಕ್ಕೆ ಗೌರವ ಸಿಗುವದು ಎಂದು ಹುಬ್ಬಳ್ಳಿ ದಾರವಾಡ ವಾಣೀಜ್ಯ ಇಲಾಖಾ ಡಿಸಿ ಶಂಕರ ಬೆಳ್ಳುಬ್ಬಿ ಹೇಳಿದರು.
ಪಟ್ಟಣದ ವಿಶ್ವಭಾರತಿ ವಿಧ್ಯಾವರ್ಧಕ ಸಂಸ್ಥೆಯ ಅಡಿಯಲ್ಲಿ ನಡೆಯುವ ಶಿಕ್ಷಣ ಕೇಂದ್ರಗಳ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರು ಬೋಧನಾ ಸಮಯದಲ್ಲಿ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿದ್ಯೆಯನ್ನು ಧಾರೆ ಎರೆಯುವದರ ಜೋತೆಗೆ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಸುಂದರ ಬದುಕು ಕಟ್ಟಿಕೊಳ್ಳುವ ಪ್ರಜೆಗಳ ನಿರ್ಮಾಣ ಮಾಡುವ ಗುರುವಾಗಬೇಕು ಎಂದರು.
ಆಡಳಿತಾಧಿಕಾರಿ ಬಿ ಎಸ್ ನಿಂಬಾಳ್ಕರ ಮಾತನಾಡಿ, ವಿಶಾಲವಾದ ನಿಸರ್ಗದ ಮಡಿಲಿನ ಯೋಗ ಧ್ಯಾನ ಅಧ್ಯಯನದೊಂದಿಗೆ ಭವಿಷ್ಯದ ದ್ರಷ್ಠಿಕೋನದತ್ತ ಗಮನಹರಿಸಿ ಎಲ್ ಕೆ ಜಿಯಿಂದ ಪಿಯುಸಿ ವಿಜ್ಞಾನ ಕಲಿಕಾ ಕೇಂದ್ರಗಳಲ್ಲಿ ಉತ್ತಮ ಶಿಕ್ಷಕರ ಭೋಧನಾ ತಂಡವು ಕಾರ್ಯನಿರ್ವಹಿಸುತ್ತಿದ್ದು ವಸತಿ ಸೌಕರ್ಯದ ಶಾಲೆಯಲ್ಲಿ ಪಾಲಕರು ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ವಹಿಸಿದ್ದರು. ಅತಿಥಿಗಳಾಗಿ ಗುರು ಚಲವಾದಿ, ಸಿದ್ದು ಬಾಲಗೊಂಡ, ಎಸ್ ಎನ್ ಗಿಡ್ಡಪ್ಪಗೋಳ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಸಂಗಪ್ಪ ಹುಚ್ಚಪ್ಪಗೋಳ, ಕಲ್ಲಪ್ಪ ಸೊನ್ನದ ಸೇರಿದಂತೆ ಅನೇಕರಿದ್ದರು.

