Author: editor.udayarashmi@gmail.com

ಅವಳಿ ಜಿಲ್ಲೆಯ ರೈತರಿಗೆ ವಂಚನೆ | ರೈತ ಮುಖಂಡ ಅರವಿಂದ ಕುಲಕರ್ಣಿ ಆಕ್ರೋಶ ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯತ್ತ ಸಾಗುತ್ತಿದ್ದರೂ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಗಳಲ್ಲಿ ಬೆಳೆದ ಮುಂಗಾರು ಬೆಳೆಗಳಿಗೆ ನೀರು ನೀಡದೆ, ನದಿ ಪಾತ್ರದ ಮೂಲಕ ಸಾವಿರಾರು ಕ್ಯೂಸೆಕ್ ನೀರನ್ನು ನಾರಾಯಣಪುರಕ್ಕೆ ಹರಿಸಲಾಗುತ್ತಿದೆ. ನಾರಾಯಣಪುರ ಜಲಾಶಯದಿಂದ ಕಳೆದ ೩-೪ ದಿನಗಳಿಂದ ಪ್ರತಿದಿನ ೪೦ ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರದ ಮೂಲಕ ತೆಲಂಗಾಣ ರಾಜ್ಯಕ್ಕೆ ಹರಿಸಲಾಗುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ರಾಜ್ಯ ಸರ್ಕಾರದ ವಿರುದ್ಧ ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.ಪತ್ರಿಕಾ ಪ್ರಕಟಣೆ ನೀಡಿದ ಅವರು, “ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ನಿರಂತರ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಪ್ರಸ್ತುತ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಒಟ್ಟು ೧೧೪.೮೯೬ ಟಿಎಂಸಿ ನೀರು ಸಂಗ್ರಹವಿದೆ. ಅದರಲ್ಲಿ ಬಳಕೆಗೆ ನಿರ್ಬಂಧದ ೧೭ ಟಿಎಂಸಿ ನೀರು…

Read More

ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ಇಂಡಿ:”ಕೈಗಾರಿಕಾ ವಲಯದಲ್ಲಿ ಭೂಮಿ, ಹಣ, ವಿದ್ಯುತ್ ಹಾಗೂ ಅಧಿಕಾರಿಗಳ ಸಹಕಾರವಿದ್ದರೆ ಮಾತ್ರ ಯಶಸ್ಸು ಸಾಧ್ಯ. ಕೈಗಾರಿಕೆಗಳನ್ನು ಸ್ಥಾಪಿಸಿ ನಡೆಸುವುದು ಅತ್ಯಂತ ಕಷ್ಟದ ಕೆಲಸ. ಇಂತಹ ಬರದ ನಾಡಿನಲ್ಲೂ ಸಾಕಷ್ಟು ಕಷ್ಟಪಟ್ಟು ಸಣ್ಣ ಕೈಗಾರಿಕೆಯನ್ನು ತೆಗೆದು, ಅತ್ಯಂತ ಯಶಸ್ವಿಯಾಗಿ ಇವತ್ತು ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷರಾಗಿರುವುದು ನಿಂಗಣ್ಣ ಬಿರಾದಾರ್ ಅವರ ಮೆಚ್ಚುವಂತಹ ಸಾಧನೆಯಾಗಿದೆ” ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶ್ಲಾಘಿಸಿದರು.ಭಾನುವಾರ ಇಂಡಿ ತಾಲೂಕಿನ ಹೆಮ್ಮೆಯ ಉದ್ಯಮಿ ನಿಂಗಣ್ಣ ಬಿರಾದಾರ್ ಅವರು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಇಂಡಿ ನಗರದ ಶಂಕರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಅದ್ಧೂರಿ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ನಿಂಗಣ್ಣ ಬಿರಾದಾರ್ ಅವರು ರಾಜ್ಯ ಮಟ್ಟದ ಇಂತಹದೊAದು ಪ್ರಮುಖ ಹುದ್ದೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ, ಬರದ ನಾಡಿನಿಂದ ಬೆಂಗಳೂರಿನ ಗದ್ದುಗೆಯವರೆಗೆ ಉದ್ಯಮ…

Read More

ಹಂಚಿನಾಳ ತಾಂಡಾದಲ್ಲಿ ೧.೫೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಹಂಚಿನಾಳ ತಾಂಡಾದಲ್ಲಿ ಸುಸಜ್ಜಿತ ರಸ್ತೆ ನಿರ್ಮಿಸಿ, ಇಲ್ಲಿ ಗುಣಮಟ್ಟದ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಗುಣಮಟ್ಟದ ಕೆಲಸ ಇಲ್ಲಿ ನಡೆಯಬೇಕು ಎಂದು ಬೃಹತ್ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದಡಾ. ಎಂ.ಬಿ. ಪಾಟೀಲ ಅವರು ಸೂಚಿಸಿದರು.ಮಹಾನಗರ ಪಾಲಿಕೆ ವಾರ್ಡ್ ನಂ. ೪ರ ವ್ಯಾಪ್ತಿಯ ಹಂಚಿನಾಳ ತಾಂಡಾದಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ ೨ನೇ ಹಂತದಲ್ಲಿ ೧.೫೦ ಕೋಟಿ ರೂ. ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ಹಂಚಿನಾಳ ತಾಂಡದಲ್ಲಿ ಒಂದು ಕೋಟಿ ಐವತ್ತು ಲಕ್ಷ ರೂ.ಗಳ ವೆಚ್ಚದಲ್ಲಿ ಈ ಕಾಮಗಾರಿಗೆ ಇಂದು ಭೂಮಿ ಪೂಜೆ ನಡೆದಿದೆ. ಆದರೆ ಈ ಕಾಮಗಾರಿಗೆ ಅನುದಾನದ ಕೊರತೆಯಾದರು ಅನುದಾನ ಒದಗಿಸಲಾಗುವುದು. ಆದರೆ ತಾಂಡಾ ಜನತೆಯ ಆಸೆಯಂತೆ ಗುಣಮಟ್ಟದ ಕೆಲಸ ನಿರ್ವಹಿಸಬೇಕು.ಅನೇಕ ವರ್ಷಗಳಿಂದ ಹಂಚಿನಾಳ ತಾಂಡಾ-೧ ಮತ್ತು ೨ರಸ್ತೆ ಅಭಿವೃದ್ಧಿಯಾಗಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣ ಜಯಂತಿ ಆಚರಣೆಯನ್ನು ಜು.೨೯ ರಂದು ಬೆಳಿಗ್ಗೆ ೧೦:೩೦ ಗಂಟೆಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಗ್ಗೆ ೯.೩೦ ಗಂಟೆಗೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ಪ್ರಮುಖ ವೃತ್ತಗಳ ಮೂಲಕ ಸಾಗಿ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಭಾವಚಿತ್ರದ ಮೆರವಣಿಗೆ ನಡೆಯಲಿದೆ.ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರಾದ ಡಾ. ಎಂ.ಬಿ.ಪಾಟೀಲ ಅವರು ಉದ್ಘಾಟಿಸುವರು. ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲೆಯ ಶಾಸಕರು, ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಕಟಣೆ ತಿಳಿಸಿದೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ಪರಿಶೀಲನೆ ಕಾರ್ಯ ಜಾರಿಯಲ್ಲಿದ್ದು, ಜಿಲ್ಲೆಯ ಒಟ್ಟು ೧೯,೮೨,೧೧೪ ಮತದಾರರಿಗೆ ಮತಗಟ್ಟೆ ಅಧಿಕಾರಿಗಳು ಮನೆ ಮನೆಗೆ ತೆರಳಿ ಗಣತಿ ನಮೂನೆ ವಿತರಿಸಿದ್ದು, ಈ ಪೈಕಿ ಭರ್ತಿ ಮಾಡಿದ ೧೭,೩೮,೫೮೭ ಗಣತಿ ನಮೂನೆಗಳನ್ನು ಈಗಾಗಲೇ ಸ್ವೀಕರಿಸಿ ಗಣಕೀಕರಣಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಅವರು ತಿಳಿಸಿದ್ದಾರೆ.ಗೈರು, ವಲಸೆ, ಮರಣ ಮತದಾರರ ವಿವರ: ಮನೆ ಮನೆ ಭೇಟಿ ವೇಳೆ ಕಂಡುಬಂದ ಗೈರುಹಾಜರಿ, ವಲಸೆ, ಮರಣ,ಡುಪ್ಲಿಕೇಟ್ ಹಾಗೂ ಇತರೇ ಸೇರಿದಂತೆ ಒಟ್ಟು ೧,೭೬,೩೫೨ ಮತದಾರರ ವಿವರವಾದ ಪಟ್ಟಿ ಸಿದ್ಧಪಡಿಸಲಾಗಿದೆ.ವಿಧಾನಸಭಾ ಕ್ಷೇತ್ರವಾರು ವಿವರ: ವಿಜಯಪುರ ನಗರ: ೪೯,೬೬೭, ಮುದ್ದೇಬಿಹಾಳ: ೨೬,೪೫೭, ಇಂಡಿ: ೨೦,೮೦೯, ದೇವರ ಹಿಪ್ಪರಗಿ: ೨೦,೨೪೯, ನಾಗಠಾಣ: ೧೮,೧೫೫, ಸಿಂದಗಿ: ೧೭,೭೫೨, ಬಸವನ ಬಾಗೇವಾಡಿ: ೧೨,೫೨೭, ಬಬಲೇಶ್ವರ: ೧೦,೭೩೬ ಸೇರಿದಂತೆ ಒಟ್ಟು ೧,೭೬,೩೫೨ ಮತದಾರರ ವಿವರವಾದ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಆಕ್ಷೇಪಣೆ ಸಲ್ಲಿಸಲು ಅವಕಾಶ: ಕ್ಷೇತ್ರವಾರು ಸಿದ್ಧಪಡಿಸಲಾದ ಮತದಾರರ (ಎಎಸ್‌ಡಿಡಿಒ) ಪಟ್ಟಿಯನ್ನು ಆಯಾ ಮತಗಟ್ಟೆ ಅಧಿಕಾರಿಗಳು,…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಕರ್ನಾಟಕ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಜಾರಿಗೆ ತಂದಿರುವ ರೈಸ್, ಬೇಡ ಬ್ರೋ ಅಭಿಯಾನ ಅತ್ಯಂತ ಶ್ಲಾಘನೀಯವಾಗಿದೆ. ಯುವಶಕ್ತಿಯು ಡ್ರಗ್ಸ್ ಅನ್ನು ತಿರಸ್ಕರಿಸಿ, ಮಾಹಿತಿ ನೀಡಿ ಸಂತ್ರಸ್ತರಿಗೆ ಬೆಂಬಲವಾಗಿ ಮತ್ತು ಸಮಾಜವನ್ನು ಸಬಲೀಕರಿಸುವ ಮೂಲಕ ಈ ಹೋರಾಟದಲ್ಲಿ ಸಕ್ರಿಯವಾಗಿ ಕೈಜೋಡಿಸಬೇಕು ಎಂದು ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.ನಗರದ ಎಚ್.ಜಿ.ಕಾಲೇಜಿನ ಸಭಾಭವನದಲ್ಲಿ ವಿಜಯಪುರ ಜಿಲ್ಲಾ ಪೊಲೀಸ್, ಇಂಡಿ ಉಪವಿಭಾಗ ಹಾಗೂ ಸಿಂದಗಿ ಪೊಲೀಸ್ ಠಾಣೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ರೈಸ್, ಬೇಡ ಬ್ರೋ ಡ್ರಗ್ಸ್ ಮುಕ್ತ ಅಭಿಯಾನದ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಯು ಮಾದಕ ವ್ಯಸನವೆಂಬ ಸಾಮಾಜಿಕ ಪಿಡುಗಿಗೆ ಬಲಿಯಾಗದಂತೆ ತಡೆಯುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿ, ಉತ್ತಮ ಮೌಲ್ಯಗಳನ್ನು ಬೆಳೆಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ. ಯುವಜನರು ಮಾದಕ ವ್ಯಸನದ ದುಷ್ಪರಿಣಾಮಗಳಿಂದ ದೂರವಿದ್ದು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಕ್ರಿಯವಾಗಿ ಕೈಜೋಡಿಸಬೇಕು ಎಂದರು.ಈ ವೇಳೆ ತಹಶೀಲ್ದಾರ ಕರೆಪ್ಪ ಬೆಳ್ಳಿ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮತಕ್ಷೇತ್ರದ ಆಲಮೇಲದ ಜಮೀನಿನಲ್ಲಿ ಬೆಳೆದಿರುವ ಮೆಣಸಿನ ಸಸಿಗಳನ್ನು ಉಳಿಸಿಕೊಳ್ಳಲು ಬ್ಯಾರಲ್‌ನಲ್ಲಿ ನೀರನ್ನು ಸಂಗ್ರಹಿಸಿ ತಂಬಿಗೆಯ ಮೂಲಕ ಒಂದೊಂದೇ ಸಸಿಗೆ ರೈತ ಶಿವಾನಂದ ಅಮರಗೊಂಡ ನೀರುಣಿಸಲಾಗುತ್ತಿದ್ದಾರೆ.ಮಳೆ ಕೈಕೊಟ್ಟ ಪರಿಣಾಮ ಕೃಷಿ ವೆಚ್ಚ ಹೆಚ್ಚಾದ ಕಾರಣ ಸಸಿಗಳು ಒಣಗದಂತೆ ಬದುಕಿಸಲು ಹೀಗೆ ಮಾಡುವುದು ಅನಿವಾರ್ಯವಾಗಿದೆ. ಇನ್ನೇನು ಮಳೆಯಾಗಬಹುದು ಎಂಬ ನಿರೀಕ್ಷೆಯಲ್ಲಿ ಅಲ್ಪಸ್ವಲ್ಪ ಸುರಿದ ಮಳೆಯನ್ನು ನಂಬಿ ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದ ರೈತರಿಗೆ ಇದೀಗ ಮಳೆಯ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಬಿಸಿಲಿನ ತಾಪಕ್ಕೆ ಹೊಲದಲ್ಲಿನ ಸಸಿಗಳು ಬಾಡಲಾರಂಭಿಸಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತಿದ ರೈತರು ಈಗ ಆತಂಕದಲ್ಲಿದ್ದಾರೆ. ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗದೆ ಕಂಗಾಲಾಗಿರುವ ರೈತರ ಪರಿಸ್ಥಿತಿ ದೇವರೇ ಬಲ್ಲ ಎನ್ನುವಂತಾಗಿ ಅನ್ನದಾತನ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವಂತೆ ವರುಣ ದೇವ ಕೃಪೆ ತೋರಿ ರೈತರ ಕಣ್ಣೀರನ್ನು ಒರೆಸಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ.

Read More

ಸಿಂದಗಿಯಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಸಕ ಅಶೋಕ ಮನಗೂಳಿ ಭರವಸೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ತಾಲೂಕು ಪತ್ರಕರ್ತರಿಗೆ ಬಹುಕಾಲದ ಬೇಡಿಕೆಯಾಗಿರುವ ಪತ್ರಕರ್ತರ ಭವನವನ್ನು ಅತೀ ಶೀಘ್ರದಲ್ಲಿಯೇ ನಿರ್ಮಿಸಿಕೊಡಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.ನಗರದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ರಿ), ಸಿಂದಗಿ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮದ ಸ್ವಾತಂತ್ರ‍್ಯ ಹಾಗೂ ಜವಾಬ್ದಾರಿಯನ್ನು ಸ್ಮರಿಸುವ ದಿನವೇ ಪತ್ರಿಕಾ ದಿನಾಚರಣೆ. ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುವ ಪತ್ರಕರ್ತರು ಮತ್ತು ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸುವುದು, ಪತ್ರಿಕೋದ್ಯಮದ ಮೌಲ್ಯಗಳು, ನೈತಿಕತೆ ಹಾಗೂ ಇಂದಿನ ಸವಾಲುಗಳ ಕುರಿತು ಚರ್ಚೆ ನಡೆಸುವುದು ಮತ್ತು ಅಭಿವ್ಯಕ್ತಿ ಸ್ವಾತಂತ್ರ‍್ಯದ ಹಕ್ಕನ್ನು ಎತ್ತಿಹಿಡಿಯುವುದು ಪತ್ರಿಕಾ ದಿನಾಚರಣೆಯ ಉದ್ದೇಶವಾಗಿದೆ. ಅನ್ಯಾಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸುವಲ್ಲಿ ಪತ್ರಕರ್ತರ…

Read More

ಉದಯರಶ್ಮಿ ದಿನಪತ್ರಿಕೆ ಕೆಂಭಾವಿ: ವಿದ್ಯಾರ್ಥಿಗಳು ಬುದ್ಧಿ, ಮನಸ್ಸು, ನಿಗ್ರಹಿಸಿಕೊಂಡು ಸುಸಂಸ್ಕೃತ ವ್ಯಕ್ತಿಯಾಗಿ ಸುಂದರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಎಎಸ್ಐ ಮೌನೇಶ ಬಡಿಗೇರ ಹೇಳಿದರು.ಶ್ರೀಮತಿ ಗಂಗೂಬಾಯಿ ಶಾಂತಗೌಡ ಪೋಲಿಸ್ ಪಾಟೀಲ್ ಮೆಮೋರಿಯಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಯಾದಗಿರಿ ಜಿಲ್ಲಾ ಪೋಲಿಸ್ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಡ್ರಗ್ಸ್ ಮುಕ್ತ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪದವಿ ಪೂರ್ವ ಹಾಗೂ ಪದವಿ ಈ ಐದು ವರ್ಷಗಳ ವಿದ್ಯಾರ್ಥಿಗಳಿಗೆ ಪಂಚವಾರ್ಷಿಕ ಯೋಜನೆ ಇದ್ದಂತೆ ಎಂದವರು. ಸದೃಢ ಆರೋಗ್ಯಕ್ಕಾಗಿ ಯುವ ಜನತೆ ಗುಟ್ಕಾ, ಮಟ್ಕಾ, ಜೂಜಾಟ, ಆಲ್ಕೋಹಾಲ್, ಸಿಗರೇಟು, ಡ್ರಗ್ಸ್, ಗಾಂಜಾ, ವ್ಯಸನಿಗಳಾಗಬೇಡಿ ಎಂದು ಕರೆ ನೀಡಿದರು.ಪೋಲಿಸ್ ಕಾನ್ಸ್ಟೇಬಲ್ ರೇಖಾ ಮಾತನಾಡಿ, ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು ಓದಿನ ಕಡೆ ಗಮನ ಹರಿಸಿ ದೊಡ್ಡ ದೊಡ್ಡ ಹುದ್ದೆಗಳನ್ನು ಪಡೆಯುವಂತೆ ಸಲಹೆ ನೀಡಿದ ಅವರು, ಯುವಕರು ಮಾದಕ ವಸ್ತುಗಳ ಸೇವನೆಯಿಂದ ದೂರವಿದ್ದಾಗ ಸುಶಿಕ್ಷಿತ, ಸಶಕ್ತ, ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯವಿದೆ ಎಂದರು.ಕನ್ನಡ ವಿಭಾಗದ…

Read More

ಆಷಾಢದ ವಿಶೇಷ | ಮಣ್ಣಿನ ಮಹತ್ವ ಸಾರುವ ಉದ್ದೇಶ | ಮಹಿಳೆಯರು & ರೈತ ಕುಟುಂಬಗಳಿಂದ ಗುಳ್ಳವ್ವನ ಪ್ರತಿಷ್ಠಾಪನೆ ಉದಯರಶ್ಮಿ ದಿನಪತ್ರಿಕೆ ವರದಿ: ಸಿದ್ರಾಮ್ ಎಮ್. ಇಟ್ಟಿಬಾಗಲಕೋಟೆ (ಜಮಖಂಡಿ): ಆಷಾಢ ಮಾಸದ ಪ್ರತಿ ಮಂಗಳವಾರ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಆಚರಿಸಲಾಗುವ ಗುಳ್ಳವ್ವನ ಹಬ್ಬ ಇಂದಿಗೂ ತನ್ನ ಸಂಪ್ರದಾಯ, ಸಂಸ್ಕೃತಿ ಮತ್ತು ಜನಪದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿರುವ ಅಪರೂಪದ ಆಚರಣೆಯಾಗಿದೆ. ಆಧುನಿಕತೆ, ನಗರೀಕರಣ ಮತ್ತು ಜಾಗತೀಕರಣದ ಪ್ರಭಾವದ ನಡುವೆಯೂ ಗ್ರಾಮೀಣ ಬದುಕಿನ ಬೇರುಗಳನ್ನು ಗಟ್ಟಿಗೊಳಿಸಿರುವ ಈ ಹಬ್ಬ ಇದೀಗ ಗ್ರಾಮ-ಪಟ್ಟಣಗಳಲ್ಲೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.ರೈತನ ಬದುಕಿನ ಆಧಾರವಾಗಿರುವ ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಎಂಬ ಹೆಗ್ಗಳಿಕೆಗೆ ಗುಳ್ಳವ್ವನ ಪೂಜೆ ಪಾತ್ರವಾಗಿದೆ. ಮಳೆಗಾಲ ಆರಂಭವಾಗಿ ಭೂಮಿ ಕೃಷಿಗೆ ಸಜ್ಜಾಗುವ ಈ ಸಂದರ್ಭದಲ್ಲಿ ಮಣ್ಣಿನ ಮಹತ್ವವನ್ನು ಸಾರುವ ಉದ್ದೇಶದಿಂದ ಮಹಿಳೆಯರು ಹಾಗೂ ರೈತ ಕುಟುಂಬಗಳು ಗುಳ್ಳವ್ವನನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ.ಜನಪದ ಸಂಪ್ರದಾಯದ ಪ್ರಕಾರ, ವರ್ಷದಲ್ಲಿ ಮಣ್ಣಿಗೆ ಐದು ಬಾರಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಕಾರಹುಣ್ಣಿಮೆಯಂದು ಮಣ್ಣಿನ ಎತ್ತು,…

Read More