Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಚಡಚಣ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸೋಮಶೇಖರ ಪಟ್ಟಣಶೆಟ್ಟಿ ಇವರು ಬಡ ಮಕ್ಕಳ ಆಹಾರ ಮೊಟ್ಟೆ ಕಳ್ಳತನ ಮಾಡಿ ಮಾಡುತ್ತಿರುವ ಕುರಿತು ಕರ್ನಾಟಕ ರಾಷ್ಟ್ರ ಸಮಿತಿ ಕಾರ್ಯಕರ್ತರಿಗೆ ಕೊಲೆ ಬೆದರಿಕೆ ಹಾಕಿದ್ದು ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ವೇತನ ತಡೆಹಿಡಿಯುವಂತೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.ಚಡಚಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗುತ್ತಿ ಬಸವೇಶ್ವರ ಮ್ಯಾನ್ ಪವರ್ ಏಜೆನ್ಸಿ ಮೂಲಕ ಮಕ್ಕಳಿಗೆ ನೀಡುವ ಮೊಟ್ಟೆ ಕಳ್ಳತನ ಮಾಡಿರುತ್ತಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಕೇಳಿದರು ಮಾಹಿತಿ ನೀಡಿರುವುದಿಲ್ಲ. ಉಪ ನಿರ್ದೇಶಕರಿಗೆ ಮೇಲ್ಮನವಿ ಸಲ್ಲಿಸಿದ ನಂತರ ಉಪ ನಿರ್ದೇಶಕರಿಗೆ ೭ ದಿನಗಳಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡುವಂತೆ ಆದೇಶ ಮಾಡಿರುತ್ತಾರೆ. ತಿಂಗಳು ಕಳೆದರೂ ಮಾಹಿತಿ ನೀಡಿದೆ ಇದ್ದ ಕಾರಣ ದಿನಾಂಕ. ೧೮/೦೨/೨೦೨೫ ರಂದು ಕೆ.ಆರ್.ಎಸ್ ಪಕ್ಷದ ಚಡಚಣ ತಾಲೂಕು ಅಧ್ಯಕ್ಷ ಚಂದ್ರಕಾಂತ ನಗರೆ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಚಣಚಣ ಸೇರಿದಂತೆ ೫ ಜನ ಚಡಚಣ…

Read More

ಉದಯರಶ್ಮಿ ದಿನಪತ್ರಿಕೆ ಆಲಮೇಲ: ತಾಲೂಕಿನದೇವರನಾವದಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವರನಾವದಗಿ ಕ್ಲಸ್ಟರ್ ನ ಎಫ್ ಎಲ್ ಎಂ ಕಲಿಕಾ ಹಬ್ಬವನ್ನು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ದಿನಾಂಕ:20/2/2025 ರಂದು ಹೆಚ್ ಪಿಎಸ್ ದೇವರನಾವದಗಿ ಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಯಿತು.ಈ ಕಾರ್ಯಕ್ರಮದಲ್ಲಿ ದೇವರನಾವದಾಗಿ ಕ್ಲಸ್ಟರ್ ಎಲ್ಲ ಸರಕಾರಿ ಶಾಲೆಗಳ ಮಕ್ಕಳು ಓದು ಬರಹ ಗಣಿತ ಹಾಗು ಕಥೆ ಹೇಳುವ ಕಲಿಕಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡರು.ಕಲಿಕಾ ಹಬ್ಬದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಎನ್ ವಿ. ನಿಂಬರಗಿ ಯವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಲಿಕಾ ಹಬ್ಬವು ಮಕ್ಕಳ ಕಲಿಕೆಯನ್ನು ದೃಢೀಕರಿಸುವ ವೇದಿಕೆಯಾಗಿದ್ದು ಗುಣಾತ್ಮಕ ಶಿಕ್ಷಣ ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹೇಳಿದರು.ಕಲಿಕಾ ಹಬ್ಬವನ್ನು ಬಮ್ಮನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಎಸ್ ಗೀತಾ ರವರು ಉದ್ಘಾಟಿಸಿದರು. ಶ್ರೀ ಶ್ರೀಮಂತ ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ದೇವರ ನಾವದಾಗಿ ಕ್ಲಸ್ಟರನ ಎಲ್ಲ ಮುಖ್ಯ ಗುರುಗಳು ನೋಡಲ್ ಶಿಕ್ಷಕರು ನಿರ್ಣಾಯಕರು ಹಾಗು…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿರುವ ಪ್ರದೀಪ ಭಿಸೇ ರವರು ಇಂಡಿ ನಗರ ಠಾಣೆಯ ಪೊಲೀಸ್ ನಿರೀಕ್ಷಕರಾಗಿ ವರ್ಗಾವಣೆ ಆಗಿದ್ದಾರೆ.ಈ ಮುಂಚೆ ಗದಗ ಮಹಿಳಾ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಶುಕ್ರವಾರ ಶಹರ ಠಾಣೆಯಲ್ಲಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.ರಾಜ್ಯದಲ್ಲಿ ಯಾವತ್ತೂ ಸದ್ದಿನಲ್ಲಿರುವದೇ ವಿಜಯಪುರ ಜಿಲ್ಲೆಯ ಭೀಮ ತೀರ, ಈ ಭೀಮತೀರಕ್ಕೆ ಖಡಕ್ ಹಾಗೂ ಜನಸ್ನೇಹಿ, ಮತ್ತು ದಕ್ಷ ಅಧಿಕಾರಿ ಬಂದಿರುವದು ಜನರಲ್ಲಿ ಉಲ್ಲಾಸ, ಉತ್ಸಾಹ ಮತ್ತು ಸಂತಸವನ್ನ ಮೂಡಿಸಿದೆ.ಅದೇ ರೀತಿ ಭೀಮಾ ತೀರದ ರೌಡಿಗಳಿಗೂ ಸಹ ನಡುಕ ಶುರುವಾಗಿದೆ. ಈ ಹಿಂದೆ ಇವರು ಕಾರ್ಯ ನಿರ್ವಹಿಸಿದ ಕಡೆಗಳಲ್ಲಿ ದಕ್ಷ, ಪ್ರಾಮಾಣಿಕತೆ, ಜನರ ಜೊತೆ ಜನ ಸ್ನೇಹಿಯಾಗಿ ಗುರುತಿಸಿ ಕೊಂಡಿದ್ದಾರೆ, ಮತ್ತು ರೌಡಿಗಳಿಗೆ ಸಿಂಹ ಸ್ವಪ್ನವಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಒಟ್ಟಾರೆ ಇಂತಹ ದಕ್ಷ ಅಧಿಕಾರಿ ಇಂಡಿ ಠಾಣೆಗೆ ಬಂದಿರೋದು ಉತ್ತವಾಗಿದೆ ಎಂದು ಜನರು ಸಂತಸ ವ್ಯಕ್ತ ಪಡಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ಜೀವನದಲ್ಲಿ ಮನುಷ್ಯನಾದವನು ಶೈಕ್ಷಣಿಕವಾಗಿ ಯಶಸ್ಸಿಯಾಗಿ ಸಾಧಕನಾಗಬೇಕಾದರೆ ಮನುಷ್ಯನಿಗೆ ಆಸಕ್ತಿ,ಏಕಾಗ್ರತೆ,ಮನಃಶಾಂತಿ ಬಹಳಷ್ಟು ಮುಖ್ಯ ಎಂದುಸಾಹಿತಿ ಶಿಕ್ಷಕ ದಶರಥ ಕೋರಿ ತಿಳಿಸಿದರು.ಇಂಡಿ ನಗರದ ಶಾಂತಿನಿಕೇತನ ಪ್ರಾಥಮಿಕ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿರುವ ಎಸ್ ಎಸ್ ಎಲ್ ಸಿ ವಿದ್ಯಾರ್ಥಿನಿಯರ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದ ಅವರು, ದಕ್ಷಿಣ ಭಾರತದ ರಾಮೇಶ್ವರದ ಕಡಲ ತೀರದಲ್ಲಿ ಹಾರುವ ಹಕ್ಕಿಗಳನ್ನು ಆಕಾಶ ಮಾರ್ಗದಲ್ಲಿ ಸಾಗುವ ವಿಮಾನವನ್ನು ನೋಡಿ ಕನಸುಗಳನ್ನು ಕಟ್ಟಿಕೊಂಡ ಪುಟ್ಟ ಬಾಲಕ ಆಸಕ್ತಿಯಿಂದಲೇ ಭಾರತದ ಪರಮಾಣು ಸಿಡಿತೆಲೆ ಹೊತ್ತುಯ್ಯುವ ರಾಕೆಟ್ ಗಳನ್ನ ತನ್ನ ಅವಿಷ್ಕಾರದಿಂದ ಕಂಡು ಹಿಡಿದು ಹೊಸ ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪಿಸಿದ, ಅವರು ಬೇರಾರು ಅಲ್ಲ ನಮ್ಮ ದೇಶದ ಖ್ಯಾತ ವಿಜ್ಞಾನಿ ಭಾರತ ರತ್ನ ಡಾ. ಎ.ಪಿ.ಜಿ ಅಬ್ದುಕಲಾಮ್ ಎಂದರು.ಈ ಸಂದರ್ಭದಲ್ಲಿ ಶಾಲೆಯ ಆಡಳಿತ ಮಂಡಳಿ ನಿರ್ದೇಶಕರಾದ ಯಮುನಾಜಿ ಸಾಳುಂಕೆಯವರು ಶಾಲಾ ಮಕ್ಕಳಿಗೆ ರಾಷ್ಟ್ರಾಭಿಮಾನ ನಾಡು-ನುಡಿ ಸಂಸ್ಕೃತಿಯನ್ನು ವೀರ ಪುರುಷರ ಯಶೋಗಾಥೆಯನ್ನು ಮೈಮನಗಳಲ್ಲಿ ಅಳವಡಿಸಿಕೊಂಡು ತಾಯಿ…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಸುಪ್ರೀಂ ಕೋರ್ಟ್ ಆದೇಶಾನುಸಾರ ಚಿಂಚೋಳಿಯ ಸಿದ್ದಸಿರಿ ಎಥೆನಾಲ್ ಹಾಗೂ ಕಾರ್ಖಾನೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಕಾರ್ಖಾನೆ ಅಧ್ಯಕ್ಷರು ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ರವರು ಶುಕ್ರವಾರ ನಾಡದೇವತೆ ಮೈಸೂರು ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ಚಿಂಚೋಳಿ ತಾಲ್ಲೂಕಿನಲ್ಲಿರುವ ನಮ್ಮ ಸಿದ್ದಸಿರಿ ಕಾರ್ಖಾನೆ ಆರಂಭವಾಗುವುದರಿಂದ ನೂರಾರು ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಹಾಗು ರೈತರ ಏಳಿಗೆಗೆ ನಾಂದಿಯಾಗುತ್ತದೆ. ಕಾರ್ಖಾನೆ ಸ್ತಗಿತದಿಂದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಬ್ಬು ಬೆಳೆಯುವ ರೈತರು 100 ಕಿ.ಮೀ ಹೆಚ್ಚು ದೂರದ ಕಾರ್ಖಾನೆಗೆ ಕಬ್ಬು ತೆಗೆದುಕೊಂಡು ಹೋಗುವಂತಾಗಿತ್ತು. ಇದರಿಂದ ಗಾಡಿ ಬಾಡಿಗೆ ಹೊರೆ ಆಗುವ ಜೊತೆಗೆ ಸರಿಯಾದ ಸಮಯಕ್ಕೆ ಕಟಾವು ಮಾಡದೆ ಕಬ್ಬು ಒಣಗಿ ಹೋಗುವ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಹಲವು ರೈತರು ಕಟಾವು ವಿಳಂಬದಿಂದ ಬೇಸತ್ತು ಕಬ್ಬಿಗೆ ಸುಟ್ಟು ಹಾಕಿರುವ ಪ್ರಕರಣಗಳು ನಡೆದಿರುವುದು ಬೇಸರ ಸಂಗತಿಯಾಗಿತ್ತು.ಅಲ್ಲದೆ, ನಮ್ಮ ಸಿದ್ದಸಿರಿ ಎಥೆನಾಲ್ ಮತ್ತು ಪವರ್ ಘಟಕದಿಂದ ರೈತರಿಗೆ ಅತೀ ಹೆಚ್ಚು…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದಲ್ಲಿ ಮೃತರಾದವರ ಸಾಗಾಟಕ್ಕೆ ವಾಹನ ವ್ಯವಸ್ಥೆಯಿಲ್ಲದ ಕಾರಣ ಪುರಸಭೆ ಅಧ್ಯಕ್ಷರಾದ ಶಾಂತವೀರ ಬಿರಾದಾರ ಅವರು ತಮ್ಮ ಅಣ್ಣನಾದ ದಿ.ರವಿಕುಮಾರ ಬಿರಾದಾರ ಅವರ ದ್ವಿತೀಯ ಪುಣ್ಯಸ್ಮರಣೆಯ ನಿಮಿತ್ಯ ಸಿಂದಗಿ ಪುರಸಭೆಗೆ ವೈಯಕ್ತಿಕ ವೆಚ್ಚದಲ್ಲಿ ಮುಕ್ತಿ ವಾಹನ ಕೊಡುಗೆಯಾಗಿ ನೀಡುತ್ತಿದ್ದು, ಈ ವಾಹನವನ್ನು ಫೆ.೨೨ರಂದು ಬೆಳಿಗ್ಗೆ ೧೧ಗಂಟೆಗೆ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಜರುಗುವ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪುರಸಭೆಗೆ ಹಸ್ತಾಂತರಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ವತಿಯಿಂದ ಹಮ್ಮಿಕೊಂಡ ೫ನೆಯ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ತಬ್‌ಸುಮ್ ಮೂಲಕ ಸಚಿವರಿಗೆ ಮನವಿ ಸಲ್ಲಿಕೆ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿ ಇಸ್ಲಾಂ ಸಮುದಾಯದ ಸಲುವಾಗಿ ೧೯೩೯ರಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿ ಜಮೀನನ್ನು ಖರೀದಿಸಿ ಆ ಜಮೀನ ಖಬರಸ್ಥಾನ ಸಲುವಾಗಿ ಉಪಯೋಗಿಸಲು ಮೀಸಲಿಟ್ಟಿದ್ದು, ಆ ಜಮೀನನ್ನು ಇದೀಗ ವಕ್ಫ್ನ ರಾಜ್ಯ ಮಾಜಿ ಅಧ್ಯಕ್ಷರು, ವಿಜಯಪುರ ಜಿಲ್ಲೆಯಿಂದ ರಾಜ್ಯ ವಕ್ಫ್ ಸಮೀತಿಗೆ ಆಯ್ಕೆಯಾದ ಸದಸ್ಯರು ಹಾಗೂ ವಿಜಯಪುರ ಜಿಲ್ಲಾ ವಕ್ಫ್ ಅಧಿಕಾರಿಗಳು ಸೇರಿಕೊಂಡು ಈ ಜಮೀನನ್ನು ವಾಣಿಜ್ಯ ಮಳಿಗೆಗಳು ಮಾಡಬೇಕೆಂಬ ದೊಡ್ಡ ಹುನ್ನಾರ ನಡೆಸಿದ್ದಾರೆ ಎಂದು ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಆರೋಪಿಸಿದರು.ಸಿಂದಗಿ ಪಟ್ಟಣದ ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ವತಿಯಿಂದ ಹಮ್ಮಿಕೊಂಡು ೫ನೆಯ ದಿನಕ್ಕೆ ಕಾಳಿಟ್ಟ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಅವರ ಮೂಲಕ ವಕ್ಫ್, ವಸತಿ, ಹಾಗೂ…

Read More

ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಪಟ್ಟಣದಲ್ಲಿ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಎಸ್‌ಎಫ್‌ಸಿ ವಿಶೇಷ ಅನುದಾನದಲ್ಲಿ ೫ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.ಸಿಂದಗಿ ನಗರದ ಜನತೆಯ ಬಹು ದಿನಗಳ ಬೇಡಿಕೆಯಾಗಿದ್ದ ಈ ಕಾರ್ಯವನ್ನು ಸಕ್ರಿಯವಾಗಿ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿರುವೆ. ೫ ಕೋಟಿ ರೂ. ವೆಚ್ಚದಲ್ಲಿ ಈ ಮೆಗಾ ಮಾರುಕಟ್ಟೆ ನಿರ್ಮಾಣ ಕಾರ್ಯ ಆರಂಭಗೊಳ್ಳಲಿದ್ದು, ಮುಂಬರುವ ದಿನಮಾನಗಳಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಾರ್ಯವನ್ನು ಮಾಡುತ್ತೇನೆ. ಸಿಂದಗಿ ತಾಲೂಕಿನ ಜನತೆಗೆ ವ್ಯಾಪಾರ ವಹಿವಾಟಿಗೆ ವಾಣಿಜ್ಯ ಸಂಕೀರ್ಣ ಅನುಕೂಲವಾಗಲಿದೆ. ಈ ಯೋಜನೆಗೆ ಕಾರಣರಾದ ಸಂಬಂಧಿಸಿದ ಸಚಿವರಿಗೆ ಮತ್ತು ರಾಜ್ಯ ಸರಕಾರಕ್ಕೆ ಹಾಗೂ ಜನತೆಗೆ ಶಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಅಮೃತ್ ೨.೦ ಯೋಜನೆಯ ಜಿಲ್ಲಾ ಮಟ್ಟದ ಸಲಹಾ ಮತ್ತು ನಿರ್ವಹಣಾ ಸಮಿತಿ ಸಭೆ ನಡೆಯಿತು.ಈ ಸಭೆಯಲ್ಲಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಟ್ರೆಂಚ್ -೧ರಲ್ಲಿ ಆರಂಭಗೊಂಡ ಕಾಮಗಾರಿಗಳನ್ನು ಮಾರ್ಚ್ ೨೦೨೫ರ ಅಂತ್ಯಕ್ಕೆ ಪೂರ್ಣಗೊಳಿಸಬೇಕು ಎಂದು ಸಭೆಯಲ್ಲಿ ಹಾಜರಿದ್ದ ಗುತ್ತಿಗೆದಾರರಿಗೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.ಪ್ರಸಕ್ತ ಸಾಲಿನ ಬೇಸಿಗೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು ಸಮಸ್ಯೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಪಾಲಿಕೆ ಆಯುಕ್ತರಿಗೆ ಹಾಗೂ ಪುರಸಭೆ ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಕುಡಿಯುವ ನೀರು ಪೂರೈಕೆಗಾಗಿ ಉಪಯೋಗಿಸುತ್ತಿರುವ ಯಂತ್ರಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ದುರಸ್ಥಿ ಇದ್ದರೆ ಆದ್ಯತೆ ಮೇರೆಗೆ ಕ್ರಮ ವಹಿಸಬೇಕು. ನೀರು ಪೋಲಾಗದಂತೆ ನಿಗಾ ವಹಿಸಬೇಕು. ನಿಯಮಿತವಾಗಿ ಕುಡಿಯುವ ನೀರು ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಭೆಯಲ್ಲಿ ಮಹಾನಗರ ಪಾಲಿಕೆಯ ಆಯುಕ್ತರಾದ ವಿಜಯಕುಮಾರ್ ಮೆಕ್ಕಳಕಿ,…

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಿಂದ ೨೦೨೪-೨೫ ನೇ ಸಾಲಿನ ಜನವರಿ ಆವೃತ್ತಿಯ ಬಿ.ಎ, ಬಿ.ಕಾಂ., ಬಿ.ಎಸ್ಸಿ, ಬಿ.ಬಿ.ಎ., ಬಿಎಸ್ ಡಬ್ಲ್ಯೂ,ಬಿಎಲ್ ಐಎಸ್ಸಿ, ಎಂಎಸ್ಸಿ, ಎಂಸಿಎ,ಎಂಎಸ್ ಡಬ್ಲ್ಯೂ ಪಿಜಿ ಸರ್ಟಿಫಿಕೇಟ್ ಪ್ರೊಗ್ರಾಮ್ಸ್, ಡಿಪ್ಲೋಮಾ ಪ್ರೊಗ್ರಾಮ್ಸ್ ಮತ್ತು ಸರ್ಟಿಫಿಕೇಟ್ ಪ್ರೊಗ್ರಾಮ್ಸ್ ಕೋರ್ಸ್ ಗಳಿಗೆ ಪ್ರವೇಶಾತಿ ಬಯಸುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ಅಭ್ಯರ್ಥಿಗಳು www.ksoumysuru.ac.inವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೪೮೩೬೨೮೨೬೭, ೯೪೮೩೯೨೦೦೬೫, ೭೮೯೨೫೫೦೦೫೩ ಮತ್ತು ೯೧೧೦೨೫೬೭೩೮ ಸಂಪರ್ಕಿಸಬಹುದು ಎಂದು ವಿಜಯಪುರದ ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More