Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ

ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ ಉಗ್ರ ಹೋರಾಟದ ಎಚ್ಚರಿಕೆ
(ರಾಜ್ಯ ) ಜಿಲ್ಲೆ

ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ ಉಗ್ರ ಹೋರಾಟದ ಎಚ್ಚರಿಕೆ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ವತಿಯಿಂದ ಹಮ್ಮಿಕೊಂಡ ೫ನೆಯ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ತಬ್‌ಸುಮ್ ಮೂಲಕ ಸಚಿವರಿಗೆ ಮನವಿ ಸಲ್ಲಿಕೆ

ಉದಯರಶ್ಮಿ ದಿನಪತ್ರಿಕೆ

ಸಿಂದಗಿ: ಪಟ್ಟಣದಲ್ಲಿ ಇಸ್ಲಾಂ ಸಮುದಾಯದ ಸಲುವಾಗಿ ೧೯೩೯ರಲ್ಲಿ ಅಂಜುಮನ್ ಎ ಇಸ್ಲಾಂ ಕಮೀಟಿ ಜಮೀನನ್ನು ಖರೀದಿಸಿ ಆ ಜಮೀನ ಖಬರಸ್ಥಾನ ಸಲುವಾಗಿ ಉಪಯೋಗಿಸಲು ಮೀಸಲಿಟ್ಟಿದ್ದು, ಆ ಜಮೀನನ್ನು ಇದೀಗ ವಕ್ಫ್ನ ರಾಜ್ಯ ಮಾಜಿ ಅಧ್ಯಕ್ಷರು, ವಿಜಯಪುರ ಜಿಲ್ಲೆಯಿಂದ ರಾಜ್ಯ ವಕ್ಫ್ ಸಮೀತಿಗೆ ಆಯ್ಕೆಯಾದ ಸದಸ್ಯರು ಹಾಗೂ ವಿಜಯಪುರ ಜಿಲ್ಲಾ ವಕ್ಫ್ ಅಧಿಕಾರಿಗಳು ಸೇರಿಕೊಂಡು ಈ ಜಮೀನನ್ನು ವಾಣಿಜ್ಯ ಮಳಿಗೆಗಳು ಮಾಡಬೇಕೆಂಬ ದೊಡ್ಡ ಹುನ್ನಾರ ನಡೆಸಿದ್ದಾರೆ ಎಂದು ಟಿಪ್ಪು ಕ್ರಾಂತಿ ಸೇನೆ ರಾಜ್ಯ ಪ್ರದಾನ ಕಾರ್ಯದರ್ಶಿ ಡಾ.ದಸ್ತಗೀರ ಮುಲ್ಲಾ ಆರೋಪಿಸಿದರು.
ಸಿಂದಗಿ ಪಟ್ಟಣದ ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ವತಿಯಿಂದ ಹಮ್ಮಿಕೊಂಡು ೫ನೆಯ ದಿನಕ್ಕೆ ಕಾಳಿಟ್ಟ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ಹಾಗೂ ತಾಲೂಕು ದಂಡಾಧಿಕಾರಿ ಅವರ ಮೂಲಕ ವಕ್ಫ್, ವಸತಿ, ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸುವ ಮೊದಲು ಅವರು ಮಾತನಾಡಿದರು.
ಸಿಂದಗಿ ಪಟ್ಟಣದಲ್ಲಿ ಇಸ್ಲಾಂ ಜನಸಂಖ್ಯೆ ೧೫-೨೦ ಸಾವಿರವಿದೆ. ದುರಂತ ಏನೆಂದರೆ ಸಿಂದಗಿ ಪಟ್ಟಣದ ಸರ್ವೇ ನಂ.೧೦೨೯ರಲ್ಲಿರುವ ೫ಎ ೧೯ಗುಂಟೆ ಮಾತ್ರ ಖಬರಸ್ಥಾನ ಜಮೀನು ಖಾಲಿಯಿದ್ದು, ಈ ಜಮೀನಿನ ಮೇಲೆ ಖದೀಮರು ಕಣ್ಣು ಹಾಕಿದ್ದಾರೆ. ಈ ೧೦೨೯ ಸರ್ವೆನಂಬರ್‌ಗೆ ಸಂಬಂದ ಇಲ್ಲದ ಒಂದು ಅನಧಿಕೃತ ಸಮೀತಿಯ ಸದಸ್ಯರಿಂದ ೩೮೦ ಅಂಗಡಿಗಳ ಒಂದು ನೀಲಿ ನಕ್ಷೆಯನ್ನು ತಯಾರಿಸಿ ಒಂದು ಅಂಗಡಿಗೆ ೧ ಲಕ್ಷ ರೂ.ಯಂತೆ ಮುಂಗಡ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಮುದಾಯದಲ್ಲಿ ಗುಲ್ಲೆದ್ದಿದೆ. ೩ಕೋಟಿ ೮೦ಲಕ್ಷ ರೂಪಾಯಿಗಳು ಕೃಡೀಕರಣ ಮಾಡುತ್ತಿರುವುದು ಸಮುದಾಯದ ಮುಗ್ದ ಜನರಿಗೆ ದಿಕ್ಕುತೋಚದಂತಾಗಿದೆ. ಇಲ್ಲಿ ಬೇರೆ ಯಾವುದೇ ರೀತಿಯ ಚಟವಟಿಕೆಗಳು ನಡೆಯಬಾರದು. ಒಂದು ವೇಳೆ ಈ ಜಮೀನಿನಲ್ಲಿ ವಾಣಿಜ್ಯ ಮಳಿಗೆಗಳು ನಿರ್ಮಿಸಿದರೇ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಜಮೀನು ಖಬರಸ್ಥಾನಗೆ ಮಾತ್ರ ಉಪಯೋಗಿಸಬೇಕು. ಅನಧಿಕೃತ ವಾಣಿಜ್ಯ ಮಳಿಗೆ ನಿರ್ಮಿಸಲು ನೀಲಿನಕ್ಷೆ ತಯಾರಿಸಿದವರ ಮೇಲೆ ಮತ್ತು ಅನಧಿಕೃತವಾಗಿ ಶೇಡ್ ನಿರ್ಮಾಣ ಮಾಡುವವರ ಮೇಲೆ ಪೊಲೀಸ್ ಪ್ರಕರಣ ದಾಖಲಿಸಬೇಕು. ವಕ್ಫ್ ಆಸ್ತಿ ಕ್ರಮ ಸಂಖ್ಯೆ ೯೬ರ ಸರ್ವೇ ನಂ.೮೩೪ಗೆ ಸಂಬಂದಿಸಿ ಸಮೀತಿಯನ್ನು ರದ್ದು ಮಾಡಬೇಕು. ಹಾಗೇ ಆ ಸಮಿತಿ ರಚಿಸಲು ಅನುಮತಿ ನೀಡಿದ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಧರಣಿ ಸತ್ಯಾಗ್ರಹಕ್ಕೆ ಆಗಮಿಸಿದ ವಕ್ಫ್ ಜಿಲ್ಲಾಧಿಕಾರಿ ತಬ್‌ಸುಮ್ ಹಾಗೂ ತಾಲೂಕು ದಂಡಾಧಿಕಾರಿ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ವಕ್ಫ್, ವಸತಿ, ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಸಚಿವರಿಗೆ ಮನವಿ ವಕ್ಫ್ ಆಸ್ತಿ ಸಂರಕ್ಷಣಾ ಸಮೀತಿ ಸಲ್ಲಿಸಿತು.
ಈ ಹೋರಾಟದಲ್ಲಿ ಅಹಿಂದ್ ಸಂಘಟನೆ ಮುಖಂಡ ಶಿವಾಜಿ ಮೇಟಗಾರ, ದಸಂಸ ಜಿಲ್ಲಾ ಸಂಚಾಲಕ ವಾಯ್.ಸಿ.ಮಯೂರ್, ಯಾಕೂಬ್ ನಾಟೀಕಾರ, ಇರ್ಫಾನ್ ಶೇಖ, ಮಹಿಬೂಬ ಸಿಂದಗಿಕರ ವಕ್ಫ್ ಇಲಾಖೆಯ ಅವ್ಯವಸ್ಥೆ ಬಗ್ಗೆ ಮಾತನಾಡಿದರು.
ಇದೇ ಸಂಧರ್ಭದಲ್ಲಿ ರಹೀಮ್ ದುದ್ದನಿ, ಲತೀಫ್ ಇನಾಮದಾರ್, ರಜಾಕ್ ನಾಟೀಕಾರ, ಬಸೀರ ಮರ್ತೂರ್, ಬಬಲು ಗುಂದಗಿ, ಅಲ್ತಾಫ್, ಎಂ.ಎ.ಖತೀಬ, ತಾಲಿಬ್ ಗುಂದಗಿ, ಫಿರೋಜ್ ನಿಂಬರಗಿ, ರಜಾಕ್ ಮುಲ್ಲಾ, ರಜಾಕ್ ಸಿಂದಗಿಕರ, ಸೈಪನ್ ನಾಟೀಕಾರ, ಮೋಷನ್ ಬೀಳಗಿ ಸೇರಿದಂತೆ ಮಾಜಿ ಸೈನಿಕರು, ಎಂಎಂಡಿಸಿ ಸಂಘಟನೆಯ ಮುಖಂಡರು ಇದ್ದರು.

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!

ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ

ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ

ಸಮಾಪನೆಗೊಂಡ ೮ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆಗೆ ಆಹ್ವಾನ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಇಂಡಿ-ಚಡಚಣ ಕೈಬಿಟ್ಟಿರುವುದು ರೈತರಿಗೆ ಮಾಡಿದ ದ್ರೋಹ!
    In (ರಾಜ್ಯ ) ಜಿಲ್ಲೆ
  • ಗಣೇಶ ವಿಸರ್ಜನೆಗೆ ಶಾಶ್ವತ ಹೊಂಡ ನಿರ್ಮಾಣಕ್ಕೆ ನಿರ್ಧಾರ
    In (ರಾಜ್ಯ ) ಜಿಲ್ಲೆ
  • ಎಸ್‌ಐಆರ್: ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಸೆ.೨೩ ಕೊನೆಯ ದಿನ
    In (ರಾಜ್ಯ ) ಜಿಲ್ಲೆ
  • ಸಮಾಪನೆಗೊಂಡ ೮ ಸಹಕಾರ ಸಂಘಗಳ ನೋಂದಣಿ ರದ್ದತಿಗೆ ಆಕ್ಷೇಪಣೆಗೆ ಆಹ್ವಾನ
    In (ರಾಜ್ಯ ) ಜಿಲ್ಲೆ
  • ನಿಷ್ಕ್ರಿಯ ಸಹಕಾರ ಸಂಘಗಳ ನೋಂದಣಿ ರದ್ದತಿ ಪ್ರಕ್ರಿಯೆ ಆರಂಭ
    In (ರಾಜ್ಯ ) ಜಿಲ್ಲೆ
  • ಕರಡು ಮತದಾರರ ಪಟ್ಟಿ ಪರಿಶೀಲಿಸಿಕೊಳ್ಳಿ :ಡಿಸಿ
    In (ರಾಜ್ಯ ) ಜಿಲ್ಲೆ
  • ಗರ್ಭಿಣಿಯರ ಆರೋಗ್ಯ ತಪಾಸಣೆ, ನೋಂದಣಿ ಕಡ್ಡಾಯ
    In (ರಾಜ್ಯ ) ಜಿಲ್ಲೆ
  • ಇಂಡಿ: ಬಿಜೆಪಿಯಿಂದ ಮುಂದುವರೆದ ಧರಣಿ ಸತ್ಯಾಗ್ರಹ
    In (ರಾಜ್ಯ ) ಜಿಲ್ಲೆ
  • ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಜಲ ಸಂಪನ್ಮೂಲ ಸಚಿವರು ಬೇಕು
    In (ರಾಜ್ಯ ) ಜಿಲ್ಲೆ
  • ಪ್ರತಿ ಶನಿವಾರ & ರವಿವಾರ ಓಟಗಾರರಿಗೆ ಉಚಿತ ತರಬೇತಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.